»   » ಚಂದನ್ ಶೆಟ್ಟಿ ತಾಳ್ಮೆಗೆ ಹ್ಯಾಟ್ಸ್ ಆಫ್ ಎಂದ ಸುದೀಪ್.!

ಚಂದನ್ ಶೆಟ್ಟಿ ತಾಳ್ಮೆಗೆ ಹ್ಯಾಟ್ಸ್ ಆಫ್ ಎಂದ ಸುದೀಪ್.!

Posted By:
Subscribe to Filmibeat Kannada
ಚಂದನ್ ಶೆಟ್ಟಿ ತಾಳ್ಮೆಗೆ ಹ್ಯಾಟ್ಸ್ ಆಫ್ ಎಂದ ಸುದೀಪ್ | FIlmibeat Kannada

ಕಳೆದ ವಾರ 'ಬಿಗ್ ಬಾಸ್' ಮನೆಯಲ್ಲಿ ದೊಡ್ಡ ಅವಾಂತರ ನಡೆಯಿತು. ಕುಚಿಕು ಗೆಳೆಯರಂತೆ ಇದ್ದ ಚಂದನ್ ಶೆಟ್ಟಿ ಹಾಗೂ ದಿವಾಕರ್ ಮಧ್ಯೆ ಘೋರ ಗಲಾಟೆ ನಡೆಯಿತು. 'ಬಲೂನ್' ಟಾಸ್ಕ್ ನಲ್ಲಿ ಕಿತ್ತಾಡಿಕೊಂಡ ಚಂದನ್ ಶೆಟ್ಟಿ ಟಿ-ಶರ್ಟ್ ನ ದಿವಾಕರ್ ಹರಿದು ಹಾಕಿದರು.

ತಮ್ಮ ಟಿ-ಶರ್ಟ್ ನ ರೋಷಾವೇಷದಿಂದ ದಿವಾಕರ್ ಹರಿಯುತ್ತಿದ್ದರೂ, ಚಂದನ್ ಶೆಟ್ಟಿ ಯಾವುದೇ ರಿಯಾಕ್ಷನ್ ಕೊಡಲಿಲ್ಲ. ಬಳಿಕ ದಿವಾಕರ್ ಕ್ಷಮೆ ಕೇಳಿದರು. ಚಂದನ್ ಶೆಟ್ಟಿ ಕೂಡ ಕ್ಷಮಿಸಿದರು.

ಆಟದಲ್ಲಿ ಕಿತ್ತಾಡಿಕೊಂಡು ಟೀ-ಶರ್ಟ್ ಹರಿದುಕೊಂಡ ಆತ್ಮೀಯ ಗೆಳೆಯರು.!

ಚಂದನ್ ಶೆಟ್ಟಿ ಆಗಿದ್ದಕ್ಕೆ ಈ ಗಲಾಟೆ ದೊಡ್ಡ ಮಟ್ಟಕ್ಕೆ ಹೋಗದೆ ತಣ್ಣಗಾಯ್ತು. ಆದ್ರೆ, ಚಂದನ್ ಶೆಟ್ಟಿ ಜಾಗದಲ್ಲಿ ಬೇರೆ ಯಾರೇ ಇದ್ದಿದ್ರೂ, ದಿವಾಕರ್ ಗೆ ಗ್ಯಾರೆಂಟಿ ಗೇಟ್ ಪಾಸ್ ಸಿಕ್ತಿತ್ತು ಎಂದಿದ್ದಾರೆ ಕಿಚ್ಚ ಸುದೀಪ್. ಮುಂದೆ ಓದಿರಿ...

ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ರೆ.?

''ಆ ಜಾಗದಲ್ಲಿ ಚಂದನ್ ಶೆಟ್ಟಿ ಇರುವುದಕ್ಕೆ ನೀವು ಬಚಾವ್ ಆದ್ರಿ. ಬೇರೆ ಯಾರಾದರೂ ಆಗಿದಿದ್ರೆ, ಖಂಡಿತ ತೊಂದರೆ ಆಗುತ್ತಿತ್ತು. ದೈಹಿಕ ಹಲ್ಲೆ ನಡೆಸಿದ ಪರಿಣಾಮ ನೀವು ಎಲಿಮಿನೇಟ್ ಆಗುತ್ತಿದ್ರಿ. ಅದು ಕಪ್ಪು ಚುಕ್ಕೆ'' ಎಂದು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ದಿವಾಕರ್ ಗೆ ಸುದೀಪ್ ಹೇಳಿದರು.

ದಿವಾಕರ್ ಜಾಗದಲ್ಲಿ ರಿಯಾಝ್ ಇದ್ದಿದ್ರೆ.?

''ಚಂದನ್ ಶೆಟ್ಟಿ ತಾಳ್ಮೆಗೆ ನಾನು ಹ್ಯಾಟ್ಸ್ ಆಫ್ ಹೇಳುತ್ತೇನೆ. ಆದ್ರೆ, ದಿವಾಕರ್ ಜಾಗದಲ್ಲಿ ರಿಯಾಝ್ ಇದ್ದಿದ್ರೆ, ನಿಮ್ಮ ಪ್ರತಿಕ್ರಿಯೆ ಹೀಗೇ ಇರುತ್ತಿತ್ತಾ.?'' ಎಂದು ಚಂದನ್ ಶೆಟ್ಟಿಗೆ ಸುದೀಪ್ ಪ್ರಶ್ನಿಸಿದರು.

ಚಂದನ್ ಶೆಟ್ಟಿ ಕೊಟ್ಟ ಉತ್ತರ ಏನು.?

''ಯಾರೇ ಇದ್ದಿದ್ರೂ, ಹಾಗೇ ಇರ್ತಿತ್ತು. ನಾನು ಬಿಡಿಸಿಕೊಳ್ಳುವಾಗ, ದಿವಾಕರ್ ಬೆರಳಿಗೆ ನೋವಾಯ್ತು. ಬೆರಳು ನೋವಾಗಿದಕ್ಕೆ ಶರ್ಟ್ ಹರಿದು ಹಾಕಿದ್ರೇನೋ ಅಂತ ಅಂದುಕೊಂಡು ಸುಮ್ಮನಾದೆ. ಕಾರಣ ಇಲ್ಲದೇ ನನ್ನ ಟಿ-ಶರ್ಟ್ ಹರಿದು ಹಾಕಿದಿದ್ರೆ, ನನ್ನ ಪ್ರತಿಕ್ರಿಯೆ ಹೇಗಿರ್ತಿತ್ತೋ, ಗೊತ್ತಿಲ್ಲ. ಆದ್ರೆ, ದಿವಾಕರ್ ಬಟ್ಟೆ ಹರಿಯುವಾಗ, ನನ್ನ ಮೈಂಡ್ ಕಂಟ್ರೋಲ್ ನಲ್ಲಿ ಇತ್ತು'' ಎಂದು ಉತ್ತರಿಸಿದರು ಚಂದನ್ ಶೆಟ್ಟಿ.

ಎಲಿಮಿನೇಷನ್ ಗೆ ಇನ್ನೊಂದೇ ಹೆಜ್ಜೆ

''ನೀವು ಇನ್ನೊಂದು ಹೆಜ್ಜೆ ಮುಂದೆ ಇಟ್ಟಿದ್ರೂ, ನೀವು ಔಟ್ ಆಗ್ತಿದ್ರಿ. ನಾಮಿನೇಟ್ ಆಗಿ ಔಟ್ ಆಗುವುದಕ್ಕೂ, ಗಲಾಟೆ ಮಾಡಿ ಔಟ್ ಆಗುವುದಕ್ಕೂ ವ್ಯತ್ಯಾಸ ಇದೆ'' ಎಂದು ದಿವಾಕರ್ ಗೆ ಸುದೀಪ್ ಬಿಸಿ ಮುಟ್ಟಿಸಿದರು.

English summary
Bigg Boss Kannada 5: Week 7: Diwakar was supposed to get eliminated for Physical Violence
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada