For Quick Alerts
  ALLOW NOTIFICATIONS  
  For Daily Alerts

  ರಿಯಾಝ್ ಮಾಡಿದ್ದು ತಪ್ಪು.! ಆದ್ರೆ, ಅನುಪಮಾ ಮಾಡಿದ್ದು ಸರಿಯೇ.? ನೀವೇ ಹೇಳಿ...

  By Harshitha
  |
  BBK5 : ರಿಯಾಝ್ ಮಾಡಿದ್ದು ತಪ್ಪು.! ಆದ್ರೆ, ಅನುಪಮಾ ಮಾಡಿದ್ದು ಸರಿಯೇ.? ನೀವೇ ಹೇಳಿ | Filmibeat Kannada

  ಮೂರು ವಾರಗಳ ಕಾಲ ಸಿಹಿ ಕಹಿ ಚಂದ್ರು ಕೈಯಲ್ಲಿ ಇದ್ದ ಅಡುಗೆ ಮನೆ, ನಾಲ್ಕನೇ ವಾರ ಕೈತಪ್ಪಿದಾಗ ನಟಿ ಅನುಪಮಾ ಗೌಡ, ಕೃಷಿ ತಾಪಂಡ, ಆಶಿತಾ ಸಹಿಸಿಕೊಳ್ಳಲಿಲ್ಲ.

  ಮೂರು ವಾರಗಳಿಂದ ಅಡುಗೆ ಮನೆ ಡಿಪಾರ್ಟ್ಮೆಂಟ್ ನಲ್ಲಿದ್ದ ಕೃಷಿ, ಆಶಿತಾ, ಸಿಹಿ ಕಹಿ ಚಂದ್ರು ರವರನ್ನ ಬೇರೆ ಡಿಪಾರ್ಟ್ಮೆಂಟ್ ಗೆ ವರ್ಗಾಯಿಸಿ, ನಾಲ್ಕನೇ ವಾರ ಅಡುಗೆ ಮನೆಯ ಸುಪರ್ದಿಯನ್ನ ಚಂದನ್ ಶೆಟ್ಟಿ ಹಾಗೂ ಸಮೀರಾಚಾರ್ಯಗೆ ಕ್ಯಾಪ್ಟನ್ ರಿಯಾಝ್ ವಹಿಸಿದ್ದರು.

  ರಿಯಾಝ್ ರವರ ಈ ನಡೆ ಅನುಪಮಾ ಅಂಡ್ ಗ್ಯಾಂಗ್ ಗೆ ಇಷ್ಟ ಆಗಲಿಲ್ಲ. ಇದೇ ಕಾರಣಕ್ಕೆ, ಆಗಾಗ ಸಮೀರಾಚಾರ್ಯ, ಚಂದನ್ ಶೆಟ್ಟಿ ಬಗ್ಗೆ ಅನುಪಮಾ ಗೌಡ ಕಂಪ್ಲೇಂಟ್ ಮಾಡುತ್ತಲೇ ಇದ್ದರು. ''ಅಡುಗೆ ಚೆನ್ನಾಗಿ ಮಾಡುತ್ತಿಲ್ಲ, ಗಲೀಜು ಬೇರೆ'' ಅಂತ ದೂರುತ್ತಿದ್ದ ಅನುಪಮಾ ಗೌಡ, ರಿಯಾಝ್ ಸ್ಟಾಕ್ ಚೆಕ್ಕಿಂಗ್ ಮಾಡಿದ್ದಕ್ಕೂ ಮುನಿಸಿಕೊಂಡರು. ಮುಂದೆ ಓದಿರಿ....

  ರಿಯಾಝ್ ಹಣ್ಣು ಹಂಚಿದಾಗ....

  ರಿಯಾಝ್ ಹಣ್ಣು ಹಂಚಿದಾಗ....

  ರಿಯಾಝ್ ಕ್ಯಾಪ್ಟನ್ ಆದ ಕೂಡಲೆ, ಹಣ್ಣುಗಳನ್ನ ಎಲ್ಲರಿಗೂ ಸಮನಾಗಿ ಹಂಚಿದರು. ಇದೂ ಕೂಡ ಅನುಪಮಾ ಗೌಡ, ಆಶಿತಾ, ಕೃಷಿಗೆ ಸಿಟ್ಟು ತರಿಸಿತು.

  ಅಡುಗೆ ಸಾಮಾನು ಮೇಲೆ ನಿಗಾ ಇಟ್ರೆ ಅನುಪಮಾಗೆ ಹಿಂಸೆ, ಹೊಟ್ಟೆ ಉರಿ.!

  ಅಷ್ಟಕ್ಕೂ, ರಿಯಾಝ್ ಹಣ್ಣನ್ನ ಹಂಚಿದ್ದು ಯಾಕೆ.?

  ಅಷ್ಟಕ್ಕೂ, ರಿಯಾಝ್ ಹಣ್ಣನ್ನ ಹಂಚಿದ್ದು ಯಾಕೆ.?

  ಹಿಂದಿನ ವಾರ ಸಮೀರಾಚಾರ್ಯ ಕ್ಯಾಪ್ಟನ್ ಆಗಿದ್ದಾಗ, ಅವರಿಗೆ ಅಡುಗೆ ಮಾಡಿಕೊಳ್ಳಲು ಸರಿಯಾಗಿ ಸಮಯ ಸಿಗದ ಕಾರಣ ಸಮೀರಾಚಾರ್ಯ ಹೆಚ್ಚು ಹಣ್ಣುಗಳನ್ನು ಸೇವಿಸಿದ್ದರು. ಇದರ ಬಗ್ಗೆ ಅದೇ ಸೆಲೆಬ್ರಿಟಿ ಸ್ಪರ್ಧಿಗಳು ಪ್ರಶ್ನೆ ಮಾಡಿದ್ದಕ್ಕೆ, ಹಣ್ಣುಗಳನ್ನ ಹಂಚಿಬಿಡುವುದೇ ವಾಸಿ ಅಂತ ರಿಯಾಝ್ ಸಮನಾಗಿ ಹಂಚಿಕೆ ಮಾಡಿದರು.

  ಹೊಟ್ಟೆ ಉರ್ಕೊಳ್ಳುವ 'ಡವ್ ರಾಣಿ' ಅನುಪಮಾಗೆ ಬೆಂಡೆತ್ತಿದ ನೆಟ್ಟಿಗರು.!

  ಈಗ ಆಗಿದ್ದೇನು.?

  ಈಗ ಆಗಿದ್ದೇನು.?

  ಮನೆಯ ಸದಸ್ಯರಿಗೆಲ್ಲ 'ಬಿಗ್ ಬಾಸ್' ಬಿಸ್ಕತ್ತು ಹಾಗೂ ಕೇಕ್ ಕಳುಹಿಸಿದ್ದರು. ಬಿಸ್ಕತ್ತು ಹಾಗು ಕೇಕ್ ಬಂದ ಕೂಡಲೆ ಎಷ್ಟು ಪ್ಯಾಕೆಟ್ ಗಳಿವೆ ಅಂತ ಸಿಹಿ ಕಹಿ ಚಂದ್ರು ಎಣಿಸಿದರು.

  'ಬಿಗ್ ಬಾಸ್' ಮನೆಯಲ್ಲಿದ್ದಾರೆ ಹಾಲು ಕಳ್ಳರು: ಛೀಮಾರಿ ಹಾಕಿದ ವೀಕ್ಷಕರು.!

  ಈಗ ಅನುಪಮಾ ಮಾಡಿದ್ದೇನು.?

  ಈಗ ಅನುಪಮಾ ಮಾಡಿದ್ದೇನು.?

  ಬಿಸ್ಕತ್ತು ಪ್ಯಾಕೆಟ್ ಹಾಗೂ ಕೇಕ್ ಪ್ಯಾಕೆಟ್ ಸಿಕ್ಕ ತಕ್ಷಣ ಲೆಕ್ಕ ಮಾಡಿ, ''ಎಲ್ಲರಿಗೂ ಒಂದೊಂದು ಬರುತ್ತೆ'' ಅಂತ ಹೇಳ್ತಾ, ''ಇದು ನನಗೆ, ಇದು ಜಗನ್ ಗೆ, ಇದು ಕೃಷಿಗೆ, ಇದು ಆಶಿತಾಗೆ'' ಎನ್ನುತ್ತಾ ಅಷ್ಟೂ ಜನರ ಪಾಲನ್ನ ಅನುಪಮಾ ಗೌಡ ಎತ್ಕೊಂಡ್ ಬಿಟ್ಟರು.

  ಅವರು ಮಾಡಿದರೆ ತಪ್ಪು, ಇವರು ಮಾಡಿದರೆ ಸರಿಯೇ.?

  ಅವರು ಮಾಡಿದರೆ ತಪ್ಪು, ಇವರು ಮಾಡಿದರೆ ಸರಿಯೇ.?

  ''ಸ್ಟಾಕ್ ಚೆಕ್ಕಿಂಗ್ ಮಾಡಿದರೆ ನನಗೆ ಉರಿಯುತ್ತೆ'' ಅಂತ ಒಂದು ವಾರದ ಹಿಂದಯಷ್ಟೇ ಹೇಳಿದ್ದ ಅನುಪಮಾ ಗೌಡ ಈಗ ಮಾಡಿದ್ದೇನು.? ಹಣ್ಣು ಹಂಚಿದಾಗ ಕೇವಲವಾಗಿ ನೋಡಿದ್ದ ಸೆಲೆಬ್ರಿಟಿ ಸ್ಪರ್ಧಿಗಳು ಈಗ ನಡೆದುಕೊಂಡ ರೀತಿ ಹೇಗಿತ್ತು.?

  ಈ ಬಗ್ಗೆ ಸುದೀಪ್ ಮಾತನಾಡಲೇಬೇಕು.!

  ಈ ಬಗ್ಗೆ ಸುದೀಪ್ ಮಾತನಾಡಲೇಬೇಕು.!

  ''ಕ್ಯಾಪ್ಟನ್ ಆಗಿದ್ದ ರಿಯಾಝ್, ಹಣ್ಣುಗಳನ್ನು ಹಂಚಿಕೆ ಮಾಡಿದ್ದು ಇಷ್ಟ ಆಗಲಿಲ್ಲ' ಎಂದು ಹೇಳಿದ್ದ ಅನುಪಮಾ ಬಿಸ್ಕತ್ತು, ಕೇಕ್ ಬಂದಾಗ ಅದನ್ನ ಭಾಗ ಮಾಡುತ್ತಿದ್ದರು. ಈ ಟಾಪಿಕ್ ಬಗ್ಗೆ ಶನಿವಾರ ಸುದೀಪ್ ಮಾತನಾಡಲೇಬೇಕು'' ಅಂತ ಕಲರ್ಸ್ ಸೂಪರ್ ವಾಹಿನಿಯ ಫೇಸ್ ಬುಕ್ ಪುಟದಲ್ಲಿಯೇ ವೀಕ್ಷಕರು ಒತ್ತಾಯಿಸಿದ್ದಾರೆ.

  ನಿಮ್ಮ ಅಭಿಪ್ರಾಯ ಏನು.?

  ನಿಮ್ಮ ಅಭಿಪ್ರಾಯ ಏನು.?

  ಎಲ್ಲರಿಗೂ ಸಮನಾಗಿ ಹಣ್ಣುಗಳನ್ನ ರಿಯಾಝ್ ಹಂಚಿದರೆ ತಪ್ಪು, ಆದರೆ ಅದೇ ಅನುಪಮಾ ಗೌಡ ಬಿಸ್ಕತ್ತು, ಕೇಕ್ ಪ್ಯಾಕ್ ಲೆಕ್ಕ ಮಾಡಿ ತಮಗೆ ಬೇಕಾದವರೆಲ್ಲರ ಭಾಗವನ್ನ ಎತ್ತಿಕೊಂಡಿದ್ದು ಸರಿಯೇ.? ಇದಕ್ಕೆ ವೀಕ್ಷಕರಾದ ನೀವೇ ಉತ್ತರ ಕೊಡಬೇಕು. ನಿಮ್ಮ ಅಭಿಪ್ರಾಯವನ್ನ ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ ನಮಗೆ ತಿಳಿಸಿ....

  English summary
  Bigg Boss Kannada 5: Week 5: Do you think what Anupama did was right.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X