For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಮನೆಯಿಂದ ಹೊರಬಂದ ಸೆಲೆಬ್ರಿಟಿಗಳ ಮೋಜು-ಮಸ್ತಿ

  By Harshitha
  |

  ನೋಡ ನೋಡುತ್ತಲೇ 'ಬಿಗ್ ಬಾಸ್ ಕನ್ನಡ-5' ಮುಗಿಯುವ ಹಂತಕ್ಕೆ ಬಂದುಬಿಟ್ಟಿದೆ. 'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ಶುರು ಆಗಿದೆ. ಹದಿನೇಳು ಸ್ಪರ್ಧಿಗಳ ಪೈಕಿ ಐವರು ಮಾತ್ರ ಇನ್ನೂ 'ಬಿಗ್ ಬಾಸ್' ಮನೆಯೊಳಗೆ ಇದ್ದಾರೆ. ಆದ್ರೆ, ಹೊರಗೆ ಬಂದವರು ಮಾತ್ರ ಪಾರ್ಟಿ ಮೂಡ್ ನಲ್ಲಿ ಇದ್ದಾರೆ.

  ಹೌದು, 'ಬಿಗ್ ಬಾಸ್' ಮನೆಯಿಂದ ಔಟ್ ಆದ ಸೆಲೆಬ್ರಿಟಿ ಸ್ಪರ್ಧಿಗಳು ಒಂದು ಕಡೆ ಸೇರಿ ಪಾರ್ಟಿ ಮಾಡಿದ್ದಾರೆ. ಸೆಲೆಬ್ರಿಟಿ ಸ್ಪರ್ಧಿಗಳಾದ ಅನುಪಮಾ ಗೌಡ, ಜಗನ್ನಾಥ್ ಚಂದ್ರಶೇಖರ್, ಆಶಿತಾ ಚಂದ್ರಪ್ಪ, ಸಿಹಿ ಕಹಿ ಚಂದ್ರು, ದಯಾಳ್ ಪದ್ಮನಾಭನ್, ಕೃಷಿ ತಾಪಂಡ ಮತ್ತು ತೇಜಸ್ವಿನಿ ಈ ಗೆಟ್ ಟು ಗೆದರ್ ನಲ್ಲಿ ಭಾಗವಹಿಸಿದ್ದಾರೆ.

  ಅಷ್ಟಕ್ಕೂ, ಇವರೆಲ್ಲ ಒಟ್ಟಿಗೆ ಸೇರಿದ್ದು ಎಲ್ಲಿ ಮತ್ತು ಯಾವಾಗ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದ್ರೆ, ಫೋಟೋಗಳು ಮಾತ್ರ ಫೇಸ್ ಬುಕ್ ನಲ್ಲಿ ಹರಿದಾಡುತ್ತಿವೆ.

  ಈ ಗೆಟ್ ಟು ಗೆದರ್ ನಲ್ಲಿ ಸೆಲೆಬ್ರಿಟಿ ಸ್ಪರ್ಧಿಗಳು ಮಾತ್ರ ಇದ್ದು, ಕಾಮನ್ ಮ್ಯಾನ್ ಇಲ್ಲದ ಕಾರಣ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಬಿಗ್ ಬಾಸ್ ಫಿನಾಲೆಯಲ್ಲಿ ಗೆಲ್ಲೋದು ಸೆಲೆಬ್ರಿಟಿನಾ ಅಥವಾ ಸಾಮಾನ್ಯನಾ?

  'ಬಿಗ್ ಬಾಸ್' ಮನೆಯೊಳಗೆ ಜನಸಾಮಾನ್ಯರ ಪ್ರವೇಶ ಆಗಿದ್ದೇ ಈ ಬಾರಿ... ಅಂದ್ರೆ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ. ಈ ಸೀಸನ್ ಶುರು ಆದಾಗಿನಿಂದಲೂ 'ದೊಡ್ಮನೆ'ಯೊಳಗೆ ಕಾಮನ್ ಮ್ಯಾನ್ v/s ಸೆಲೆಬ್ರಿಟಿ ಗುಂಪು, ಬೆಡ್ ರೂಮ್ ಏರಿಯಾ v/s ಗಾರ್ಡನ್ ಏರಿಯಾ ಗುಂಪುಗಾರಿಕೆ ನಡೆಯುತ್ತಲೇ ಇತ್ತು. 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ್ಮೇಲೂ, ಈ ಕಂದಕ ಮುಂದುವರೆದಿದೆ. ಹೀಗಾಗಿ, ಈ ಗೆಟ್ ಟ ಗೆದರ್ ನಲ್ಲಿ ಕಾಮನ್ ಮ್ಯಾನ್ ಸ್ಪರ್ಧಿಗಳಿಗೆ ಆಹ್ವಾನ ನೀಡಿಲ್ಲ ಅಂತ ಜನಸಾಮಾನ್ಯರು ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

  'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದಿರುವ ಮೇಘ, ಜಯಶ್ರೀನಿವಾಸನ್, ರಿಯಾಝ್, ಸುಮಾ ಅವರನ್ನೂ ಈ ಗೆಟ್ ಟು ಗೆದರ್ ಗೆ ಕರೆಯಬೇಕಿತ್ತು ಎಂದು 'ಬಿಗ್ ಬಾಸ್' ಫ್ಯಾನ್ಸ್ ಅಭಿಪ್ರಾಯ ಪಟ್ಟಿದ್ದಾರೆ.

  English summary
  Bigg Boss Kannada 5: Eliminated celebrity contestants gets together for a party. Take a look at the picture.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X