»   » 'ದೊಡ್ಮನೆ'ಯಿಂದ ಜಗನ್ ಔಟ್: ವೀಕ್ಷಕರ ಖುಷಿಗೆ ಪಾರವೇ ಇಲ್ಲ.!

'ದೊಡ್ಮನೆ'ಯಿಂದ ಜಗನ್ ಔಟ್: ವೀಕ್ಷಕರ ಖುಷಿಗೆ ಪಾರವೇ ಇಲ್ಲ.!

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಯಲ್ಲಿ ಅದ್ಯಾವಾಗ ದೊಡ್ಡದಾಗಿ ಕಣ್ಣು ಬಿಟ್ಟು 'ನಾನು ಬೇರೆ ತರಹ ಮಾತನಾಡುತ್ತೇನೆ'' ಅಂತ ಜೋರು ಮಾಡಲು ನಟ ಜಗನ್ನಾಥ್ ಚಂದ್ರಶೇಖರ್ ಶುರು ಮಾಡಿದ್ರೋ, ಅಂದಿನಿಂದಲೇ ವೀಕ್ಷಕರು ''ಜಗನ್ ಔಟ್ ಆಗಲೇಬೇಕು'' ಅಂತ ಪಟ್ಟು ಹಿಡಿದು ಕೂತರು.

ನಟ ಜಗನ್, ಆಶಿತಾ, ಅನುಪಮಾ ಗೌಡ ಕಂಡ್ರೆ ವೀಕ್ಷಕರು ಉರಿದು ಬೀಳಲು ಆರಂಭಿಸಿದರು. ಈಗಾಗಲೇ ಆಶಿತಾ ಔಟ್ ಆಗಿದ್ದು ಆಗಿದೆ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಒಂಬತ್ತನೇ ವಾರ ನಟ ಜಗನ್ನಾಥ್ ಔಟ್ ಆಗಿದ್ದಾರೆ. 'ಬಿಗ್ ಬಾಸ್' ಮನೆಯಿಂದ ಹೊರ ಬಂದಿರುವ ಜಗನ್, ತಮ್ಮ ಮನೆ ಕಡೆ ಮುಖ ಮಾಡಿದ್ದಾರೆ. ಇದು ವೀಕ್ಷಕರಲ್ಲಿ ಸದ್ಯ ಸಂತಸ ತಂದಿದೆ.

''ಬಿಗ್ ಬಾಸ್' ಒಂದು ಫೇಕ್ ಶೋ, ಅಲ್ಲಿ ರಿಯಾಲಿಟಿ ಇಲ್ಲ. ವೀಕ್ಷಕರ ಮತಕ್ಕೆ ಬೆಲೆ ಇಲ್ಲ'' ಅಂತೆಲ್ಲ ಗೊಣಗುತ್ತಿದ್ದ ವೀಕ್ಷಕರು... ಇದೀಗ ಜಗನ್ ಔಟ್ ಆದ್ಮೇಲೆ 'ಬಿಗ್ ಬಾಸ್' ರನ್ನ ಹಾಡಿ ಹೊಗಳಲು ಶುರು ಮಾಡಿದ್ದಾರೆ.

ಜನಾಭಿಪ್ರಾಯಕ್ಕೆ ಮಣಿದು 'ಬಿಗ್ ಬಾಸ್' ಮನೆಯಿಂದ ಹೊರಬಂದ 'ಜಗಳಗಂಟ' ಜಗನ್.

ಜಗನ್ ಎಲಿಮಿನೇಟ್ ಆಗಿರುವುದಕ್ಕೆ ಖುಷಿ ಪಟ್ಟ ವೀಕ್ಷಕರು ಕಲರ್ಸ್ ಸೂಪರ್ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲಿಯೇ ಮಾಡಿರುವ ಕೆಲ ಆಯ್ದ ಕಾಮೆಂಟ್ ಗಳು ಇಲ್ಲಿವೆ. ನೋಡಿ...

ಸುಮ್ನೆ ಹೊರಗೆ ಹಾಕಿದ್ದು ತಪ್ಪು

''ಸುಮ್ನೆ ಹೊರಗೆ ಹಾಕಿದ್ದು ತಪ್ಪು, ನಾಲ್ಕು ಒದ್ದು ಹೊರಗೆ ಹಾಕಬೇಕಿತ್ತು. ಸೀಕ್ರೆಟ್ ರೂಮ್ ಗೆ ಹಾಕಿದರೂ ಲಾಭ ಇಲ್ಲ'' ಅಂತೆಲ್ಲ ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.

ರಿಯಾಝ್ ಆಡಿದ ಒಂದೇ ಒಂದು ಮಾತಿಗೆ ಕೆರಳಿದ 'ಹುಲಿ' ಜಗನ್.!

ಒಳ್ಳೆಯದು ಆಯ್ತು

''ಜಗನ್ ಔಟ್ ಆಗಿದ್ದು ಒಳ್ಳೆಯದು ಆಯ್ತು'' ಎಂಬ ಕಾಮೆಂಟ್ ಗಳೇ ಕಲರ್ಸ್ ಸೂಪರ್ ಫೇಸ್ ಬುಕ್ ಪುಟದಲ್ಲಿ ಹೆಚ್ಚಾಗಿವೆ.

ಜಗನ್ ಗೆ 'ಹುಷಾರು' ಎಂದು ಎಚ್ಚರಿಸಿ, ಬುದ್ಧಿಮಾತು ಹೇಳಿದ ಕಿಚ್ಚ ಸುದೀಪ್.!

ಎಂಥಾ ಹಾಡು.!

ಔಟ್ ಆಗಿರುವ ಜಗನ್ ಗೆ ವೀಕ್ಷಕರೊಬ್ಬರು ಅರ್ಪಿಸಿರುವ ಹಾಡು ಇದು - ''ಎಲ್ಲಿಗೆ ಪಯಣ... ಯಾವುದೋ ದಾರಿ... ಏಕಾಂಗಿ ಸಂಚಾರಿ...''

ಕೇಳಿಸಿಕೊಳ್ಳುವ ವ್ಯವಧಾನ ಇಲ್ಲದ ಜಗನ್ ಗೆ ಕೂಗಾಡೋದು ಬಿಟ್ಟು ಬೇರೇನೂ ಬರಲ್ಲ.!

ಮೂರು ವಾರ ಮುನ್ನವೇ ಮಾಡಬೇಕಿತ್ತು.!

''ಮೂರು ವಾರ ಮುನ್ನವೇ ಜಗನ್ ರನ್ನ ಎಲಿಮಿನೇಟ್ ಮಾಡಬೇಕಿತ್ತು. ಮುಂದೆ ಕೃಷಿ, ಅನುಪಮಾ ಮತ್ತು ಜೆಕೆ ಹೊರ ಹೋಗಬೇಕು. ಆಗ ಶೋಗೆ ಹೊಸ ಜೀವ ಬರುತ್ತದೆ'' ಎಂಬುದು ವೀಕ್ಷಕರೊಬ್ಬರ ಅಭಿಪ್ರಾಯ.

ಧಿಮಾಕು ದೌಲತ್ತಿನ ಜಗನ್ 'ಬಿಗ್ ಬಾಸ್' ಇತಿಹಾಸದಲ್ಲಿಯೇ 'ಕಳಪೆ' ಸ್ಪರ್ಧಿ.!

ಲವ್ ಯು ಬಿಗ್ ಬಾಸ್

''ಜಗನ್ ಹೊರ ಹೋಗಿರುವುದಕ್ಕೆ, 'ಬಿಗ್ ಬಾಸ್' ಗೆ ಲವ್ ಯು'' ಎನ್ನುತ್ತಿದ್ದಾರೆ ವೀಕ್ಷಕರು. ಜೊತೆಗೆ ಮುಂದಿನ ಟಾರ್ಗೆಟ್ ಡ್ರಾಮಾ ಕ್ವೀನ್ ಅನುಪಮಾ ಗೌಡ ಅಂತಲೂ ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.

ಜಗಳಗಂಟ ಜಗನ್ ಗೆ ಮಾತಲ್ಲೇ ಗುಂಡ್ ಪಿನ್ ಚುಚ್ಚಿದ ಸಂಯುಕ್ತ ಹೆಗ್ಡೆ.!

ಬೇರೆ ಏನು ಮಾಡಿದ್ದಾರೆ.?

''ಜಗನ್ ಯಾವಾಗಲೋ ಹೊರ ಹೋಗಬೇಕಿತ್ತು. ಆತ ಹುಡುಗಿಯರ ಜೊತೆ ಫ್ಲರ್ಟ್ ಮಾಡಿದ್ದು, ಕೂಗಾಡಿದ್ದು, ಜಗಳ ಮಾಡಿದ್ದು ಬಿಟ್ಟರೆ ಬೇರೆ ಏನು ಮಾಡಿದ್ದಾರೆ.?'' ಎಂಬುದು ವೀಕ್ಷಕರ ಪ್ರಶ್ನೆ.

ಸದಾ ಕೆಂಡಕಾರುವ ಜಗನ್ನಾಥ್ ಗೆ ಸರಿಯಾಗಿ ಬೆಂಡೆತ್ತಿದ ಮೈಸೂರಿನ ಕಾಲರ್.!

ಓವರ್ ಆಕ್ಟಿಂಗ್ ಅನು

''ಜಗನ್ ಎಲಿಮಿನೇಟ್ ಆದಾಗ ಕಣ್ಣೀರಿಟ್ಟ ಅನುಪಮಾ ಗೌಡ ಓವರ್ ಆಕ್ಟಿಂಗ್ ಮಾಡ್ತಾರೆ'' ಎಂದು ಅನುಪಮಾ ವಿರುದ್ಧ ಕಾಮೆಂಟ್ ಗಳೂ ಹೆಚ್ಚಾಗಿವೆ.

ಸುದೀಪ್ ನಿರೂಪಣೆ ಸರಿ ಇರ್ಲಿಲ್ಲ, ಜಗನ್ ಔಟ್ ಆಗಲಿಲ್ಲ, ಜನ ಬೈಯ್ಯುವುದನ್ನ ನಿಲ್ಲಿಸುತ್ತಿಲ್ಲ.!

ಸಂಯುಕ್ತ ರನ್ನ ಹೊರಗೆ ಹಾಕಬೇಕಿತ್ತು.!

''ಜಗನ್ ಬದಲು ಸಂಯುಕ್ತ ಔಟ್ ಆಗಬೇಕಿತ್ತು. ಆಕೆಯನ್ನ ಸಹಿಸಲು ಸಾಧ್ಯ ಆಗುತ್ತಿಲ್ಲ'' ಎಂಬುದು ವೀಕ್ಷಕರ ಅಭಿಪ್ರಾಯ.

ಜಗನ್ ಘರ್ಜನೆಗೆ 'ಮಾಸ್ಟರ್' ಅಕುಲ್ ಕೂಡ ಹೊರತಾಗಲಿಲ್ಲ.!

ಜಗನ್ ಪರ ಅಭಿಮಾನಿಗಳು ಬ್ಯಾಟಿಂಗ್

''ಕೆಲವರಿಗೆ ಹೋಲಿಸಿದರೆ ಜಗನ್ ಉತ್ತಮ ಸ್ಪರ್ಧಿ. ಅವರು ಸ್ಪರ್ಧಿಗಳ ಭಾವನೆ ಜೊತೆ ಆಟ ಆಡಲಿಲ್ಲ'' ಎಂದು ಜಗನ್ ಪರ ಮಾತನಾಡುವವರೂ ಇದ್ದಾರೆ.

ಎಲ್ಲರ ತಾಳ್ಮೆ ಪರೀಕ್ಷೆ ಮಾಡುತ್ತಿರುವ ಜಗನ್: ಪಿತ್ತ ನೆತ್ತಿಗೇರಿಸಿಕೊಂಡ ಚಂದನ್.!

ನಿಮ್ಮ ಅಭಿಪ್ರಾಯ ಏನು.?

ಜಗನ್ ಔಟ್ ಆಗಿರುವುದಕ್ಕೆ ನಿಮ್ಮ ಅಭಿಪ್ರಾಯ ಏನು ಅಂತ ನಮಗೆ ತಿಳಿಸಿ... 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ...

English summary
Bigg Boss Kannada 5: Week 9: Viewers have taken Colors Super Official Facebook page to express their happiness about Jaganath Chandrashekar's elimination.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X