»   » ಧಿಮಾಕು ದೌಲತ್ತಿನ ಜಗನ್ 'ಬಿಗ್ ಬಾಸ್' ಇತಿಹಾಸದಲ್ಲಿಯೇ 'ಕಳಪೆ' ಸ್ಪರ್ಧಿ.!

ಧಿಮಾಕು ದೌಲತ್ತಿನ ಜಗನ್ 'ಬಿಗ್ ಬಾಸ್' ಇತಿಹಾಸದಲ್ಲಿಯೇ 'ಕಳಪೆ' ಸ್ಪರ್ಧಿ.!

Posted By:
Subscribe to Filmibeat Kannada

''ಧಿಮಾಕು, ದೌಲತ್ತಿನ ಜಗನ್ನಾಥ್ ಚಂದ್ರಶೇಖರ್ 'ಬಿಗ್ ಬಾಸ್' ಇತಿಹಾಸದಲ್ಲಿಯೇ 'ಕಳಪೆ' ಸ್ಪರ್ಧಿ'' - ಹೀಗಂತ ದೇವ್ರಾಣೆಗೂ ನಾವು ಹೇಳಿಲ್ಲ. ಬದಲಾಗಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮವನ್ನ ಪ್ರತಿ ದಿನ ರಾತ್ರಿ 8ಕ್ಕೆ ಕಣ್ಣು ಬಿಟ್ಟುಕೊಂಡು ನೋಡುವ ವೀಕ್ಷಕರು ಮಾಡಿರುವ ಉದ್ಗಾರ ಇದು.!

ಮಾತು ಮಾತಿಗೂ ರೊಚ್ಚಿಗೇಳುವ, ಕೆಂಗಣ್ಣು ಬಿಟ್ಟು ಏರುದನಿಯಲ್ಲಿ ಮಾತನಾಡುವ ಜಗನ್ ನಡವಳಿಕೆ ವೀಕ್ಷಕರಿಗಂತೂ ಇಷ್ಟ ಆಗುತ್ತಲೇ ಇಲ್ಲ. ಇದೇ ಕಾರಣಕ್ಕೆ ನೆಟ್ಟಿಗರಿಂದ ಈ ಬಾರಿ ಅತಿ ಹೆಚ್ಚು ಟ್ರೋಲ್ ಆಗುತ್ತಿರುವ 'ಬಿಗ್ ಬಾಸ್' ಸ್ಪರ್ಧಿ ಅಂದ್ರೆ ಅದು ಜಗನ್ನಾಥ್ ಚಂದ್ರಶೇಖರ್.!

'ಬಿಗ್ ಬಾಸ್' ಕಾರ್ಯಕ್ರಮದಿಂದ ಜಗನ್ ಔಟ್ ಆಗಲೇ ಬೇಕು ಎಂದು ವೀಕ್ಷಕರು ಕಲರ್ಸ್ ಸೂಪರ್ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲಿಯೇ ಒತ್ತಾಯಿಸುತ್ತಿದ್ದಾರೆ. ಮುಂದೆ ಓದಿರಿ....

ಕಳಪೆ ಸ್ಪರ್ಧಿ

''ಬಿಗ್ ಬಾಸ್' ಇತಿಹಾಸದಲ್ಲಿಯೇ ಜಗನ್ನಾಥ್ ಚಂದ್ರಶೇಖರ್ ಅತಿ ಕೆಟ್ಟ/ಕಳಪೆ ಸ್ಪರ್ಧಿ'' ಎಂದು ಟ್ರೋಲ್ ಗಳೇ ಹೆಚ್ಚಾಗಿವೆ.(ಚಿತ್ರಕೃಪೆ: ಟ್ರೋಲ್ ಸ್ಯಾಂಡಲ್ ವುಡ್ ಅಫೀಶಿಯಲ್)

ಸರಿ-ತಪ್ಪು ನೋಡದೆ ರಿಯಾಝ್ ಮೇಲೆ ಉಗ್ರ ಪ್ರತಾಪ ತೋರಿದ ಜಗನ್, ಚಂದ್ರು.!

ಜಗನ್ ಎಲಿಮಿನೇಟೆಡ್

''ಈ ವಾರ ಜಗನ್ನಾಥ್ ಚಂದ್ರಶೇಖರ್ ಔಟ್ ಆಗಲೇಬೇಕು'' ಎಂದು ವೀಕ್ಷಕರು ಒತ್ತಾಯಿಸುತ್ತಿದ್ದಾರೆ.

ಕೇಳಿಸಿಕೊಳ್ಳುವ ವ್ಯವಧಾನ ಇಲ್ಲದ ಜಗನ್ ಗೆ ಕೂಗಾಡೋದು ಬಿಟ್ಟು ಬೇರೇನೂ ಬರಲ್ಲ.!

101 ತೆಂಗಿನಕಾಯಿ ಒಡೆಯುತ್ತೇವೆ

ಬಿಗ್ ಬಾಸ್' ಮನೆಯಿಂದ ಜಗನ್ ಎಲಿಮಿನೇಟ್ ಆದರೆ, ಟ್ರೋಲಿಗರು 101 ತೆಂಗಿನಕಾಯಿ ಒಡೆಯುತ್ತಾರಂತೆ.(ಚಿತ್ರಕೃಪೆ: ಟ್ರೋಲ್ ಅಣ್ತಮ್ಮಾಸ್)

ಸಮೀರಾಚಾರ್ಯ ಶರ್ಟ್ ಹರಿದು, ಏಕವಚನ ಪ್ರಯೋಗ ಮಾಡಿದ ಜಗನ್.!

ಸುದೀಪ್ ಕ್ಲಾಸ್ ತೆಗೆದುಕೊಳ್ಳಬೇಕು

''ದುರಹಂಕಾರಿ ಜಗನ್ ಔಟ್ ಆಗಲೇಬೇಕು. ಸಮೀರಾಚಾರ್ಯ ಅವರ ಶರ್ಟ್ ಹರಿದಿದ್ದು ಸರಿಯಲ್ಲ. ಸುದೀಪ್ ಈ ಬಗ್ಗೆ ಕ್ಲಾಸ್ ತೆಗೆದುಕೊಳ್ಳಲೇಬೇಕು'' ಎಂಬುದು ವೀಕ್ಷಕರ ಒತ್ತಾಯ.

''ಬಿಗ್ ಬಾಸ್'ನಲ್ಲಿ ಜಗನ್ ತೋರಿಸಬೇಡಿ'' ಎಂದ ಯುವತಿ : ಕಾರಣ ಏನು?

'ಬಿಗ್ ಬಾಸ್' ಕಾರ್ಯಕ್ರಮಕ್ಕೆ ನೈತಿಕತೆ ಅನ್ನೋದು ಇದ್ದರೆ....

''ಸಮೀರಾಚಾರ್ಯ ಶರ್ಟ್ ಹರಿದು ಹಾಕಿದ್ದು ಕೂಡ ನಿಯಮ ಉಲ್ಲಂಘನೆಯೇ.! ಹೀಗಾಗಿ, ಜಗನ್ ರನ್ನ ಆಚೆ ಕಳುಹಿಸಬೇಕು. 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ನೈತಿಕತೆ ಅನ್ನೋದು ಇದ್ದರೆ, ಜಗನ್ ರನ್ನ ಔಟ್ ಮಾಡಬೇಕು'' ಎಂಬುದು ವೀಕ್ಷಕರ ಆಗ್ರಹ

ಹಳೇ ಬಾಯ್ ಫ್ರೆಂಡ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಅನುಪಮಾ ಗೌಡ.!

ಮುತ್ತು ಕೊಟ್ಮೇಲೆ ಔಟ್ ಆಗಲೇಬೇಕು.!

ದಯಾಳ್ ಕೆನ್ನೆಗೆ ಆಶಿತಾ ಮುತ್ತು ಕೊಟ್ಟ ಬಳಿಕ ದಯಾಳ್ ಔಟ್ ಆದರಂತೆ. ಈಗ ಜಗನ್ ಕೆನ್ನೆಗೆ ಆಶಿತಾ ಮುತ್ತು ಕೊಟ್ಟಿದ್ದಾರೆ. ಹೀಗಾಗಿ ಜಗನ್ ಔಟ್ ಆಗಲೇಬೇಕಂತೆ.! (ಚಿತ್ರಕೃಪೆ: ಉಳಿದವರು ಕಂಡಂತೆ)

ಜಗನ್ ಗೆ ಕಿರಿಕಿರಿ: ನಿವೇದಿತಾ ಗೌಡ ಕಣ್ಣಲ್ಲಿ ಗಂಗಾ-ಕಾವೇರಿ.!

ಸಿಕ್ಕಿದವರೆಲ್ಲ ಉಗಿಯುತ್ತಾರೆ.!

ಆಶಿತಾಗೆ ಜಗನ್ ಹೇಳಿದ ಒಂದು ಡೈಲಾಗ್ ಇಟ್ಟುಕೊಂಡು ಜನ ಹೇಗೆ ಲೇವಡಿ ಮಾಡುತ್ತಿದ್ದಾರೆ ಅಂತ ನೀವೇ ನೋಡಿ....

ಟ್ರೋಲ್ ಆಗುತ್ತಿರುವ ಜಗನ್

ಕೊರಳಲ್ಲಿ ಸಾಧು ತರಹ ರುದ್ರಾಕ್ಷಿ ಧರಿಸುವ ಜಗನ್ ಅಕ್ಕಪಕ್ಕದಲ್ಲಿ ಬಾಲೆಯರೇ ಇರುತ್ತಾರಂತೆ.!

(ಚಿತ್ರಕೃಪೆ: ಟ್ರೋಲ್ ಮಗ)

ಇವರಿಬ್ಬರ ಕೆಲಸ ಒಂದೇ.!

ಎಲ್ಲದಕ್ಕೂ ಕೂಗಾಡುವ ಜಗನ್ ಮತ್ತು ಆಶಿತಾ ಸ್ವಭಾವ ಒಂದೇ ತರಹ ಅಂತೆ.!

(ಚಿತ್ರಕೃಪೆ: ಟ್ರೋಲ್ ಅಣ್ತಮ್ಮಾಸ್)

ಜಗನ್ ಕಂಡ್ರೆ ವೀಕ್ಷಕರಿಗೆ ಕೋಪ

ಜಗನ್ ಮೇಲೆ ವೀಕ್ಷಕರಿಗೆ ಎಷ್ಟು ಕೋಪ ಇದೆ ಅನ್ನೋದಕ್ಕೆ ಈ ಕಾಮೆಂಟ್ ಸಾಕ್ಷಿ.

ಎಲ್ಲರ ಬಾಯಲ್ಲೂ ಒಂದೇ ಮಾತು

''ಧಿಮಾಕು ಪ್ರದರ್ಶಿಸುವ ಆಶಿತಾ, ಜಗನ್ ರನ್ನ ಹೊರಗೆ ಕಳುಹಿಸಿ'' ಎಂಬುದು ಎಲ್ಲರ ವಾದ.

English summary
Bigg Boss Kannada 5: Week 4: Jaganath gets trolled on Social Media

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X