ಹೊಡೆಯಿತು ಬಂಪರ್: ಎರಡು ಲಕ್ಷ ರೂಪಾಯಿ ಬಹುಮಾನ ಪಡೆದ ಜೆಕೆ.!

By Harshitha

Recommended Video

Bigg Boss Kannada Season 5 : 2 ಲಕ್ಷ ರೂಪಾಯಿ ಗೆದ್ದ ಜೆಕೆ | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಜೆಕೆ (ಜಯರಾಂ ಕಾರ್ತಿಕ್) ಗೆ ಬಂಪರ್ ಹೊಡೆದಿದೆ. 'ಬಿಗ್ ಬಾಸ್' ಮನೆಯಲ್ಲಿ ಎರಡು ಲಕ್ಷ ರೂಪಾಯಿಯನ್ನ ಬಹುಮಾನವಾಗಿ ಗೆದ್ದಿದ್ದಾರೆ ಜೆಕೆ.

ಅದ್ಹೇಗೆ ಅಂದ್ರೆ, ಅಂತಾರಾಷ್ಟ್ರೀಯ ಪುರುಷ ದಿನದ ಪ್ರಯುಕ್ತ, ಮನೆಯಲ್ಲಿ ಇರುವ ಎಲ್ಲ ಪುರುಷ ಸದಸ್ಯರಿಗೆ 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದ್ದರು. ಅದರಲ್ಲಿ ಜೆಕೆ ವಿಜೇತರಾದ ಕಾರಣ, ಅವರಿಗೆ ಬಹುಮಾನದ ರೂಪದಲ್ಲಿ ಬರೋಬ್ಬರಿ ಎರಡು ಲಕ್ಷ ರೂಪಾಯಿ ನೀಡಲಾಗಿದೆ. ಮುಂದೆ ಓದಿರಿ....

ಪುರುಷ ದಿನದ ಪ್ರಯುಕ್ತ ವಿಶೇಷ ಟಾಸ್ಕ್

ಪುರುಷ ದಿನದ ಪ್ರಯುಕ್ತ ವಿಶೇಷ ಟಾಸ್ಕ್

ಅಂತಾರಾಷ್ಟ್ರೀಯ ಪುರುಷ ದಿನದ ಪ್ರಯುಕ್ತ, ಮನೆಯ ಎಲ್ಲ ಪುರುಷ ಸದಸ್ಯರು ಫೇರ್ ಅಂಡ್ ಹ್ಯಾಂಡ್ಸಮ್ ಲೇಸರ್ 12 ಬಳಸಿ, ಫೇರ್ ಅಂಡ್ ಹ್ಯಾಂಡ್ಸಮ್ ಬ್ಲೇಝರ್ ಗಳನ್ನು ಧರಿಸಿ, ಗಾರ್ಡನ್ ಏರಿಯಾದಲ್ಲಿ ನಿರ್ಮಿಸಲಾಗಿರುವ ವೇದಿಕೆ ಮೇಲೆ Ramp ವಾಕ್ ಮಾಡಿ, ತಮ್ಮ ಪ್ರತಿಭೆಯನ್ನ ಪ್ರದರ್ಶಿಸಬೇಕಿತ್ತು.

ಮಹಿಳೆಯರೇ ನಿರ್ಣಾಯಕರು

ಮಹಿಳೆಯರೇ ನಿರ್ಣಾಯಕರು

ಪುರುಷರು ನೀಡುವ ಪ್ರದರ್ಶನಕ್ಕೆ ಮಹಿಳಾ ಸದಸ್ಯರು ನಿರ್ಣಾಯಕರಾಗಿದ್ದರು. ಪ್ರತಿ ಪುರುಷರಿಗೂ ಅಂಕಗಳನ್ನು ನೀಡಿ 'ಫೇರ್ ಅಂಡ್ ಹ್ಯಾಂಡ್ಸಮ್ ಲೇಸರ್ 12 ಮ್ಯಾನ್' ಯಾರು ಎಂದು ಮಹಿಳಾ ಸ್ಪರ್ಧಿಗಳು ತೀರ್ಮಾನಿಸಬೇಕಿತ್ತು.

ಮಾನದಂಡಗಳೇನು.?

ಮಾನದಂಡಗಳೇನು.?

ಪುರುಷರು ನೀಡುವ ಪ್ರದರ್ಶನಕ್ಕೆ ಅಂಕ ನೀಡುವಾಗ ಕಾಂತಿಯುಕ್ತ ಮುಖ, ತ್ವಚೆ, ಕಲೆ ರಹಿತ ಮುಖ, ನಗು, ಕೇಶರಾಶಿ, ಸ್ಟೈಲ್ ಸೇರಿದಂತೆ ಒಟ್ಟು ಹನ್ನೆರಡು ಅಂಶಗಳನ್ನ ಪರಿಗಣಿಸಬೇಕಿತ್ತು.

ಸ್ಟೈಲಿಶ್ ಜೆಕೆ

ಸ್ಟೈಲಿಶ್ ಜೆಕೆ

ವೇದಿಕೆ ಮೇಲೆ ಸ್ಟೈಲಿಶ್ ಆಗಿ ವಾಕ್ ಮಾಡಿ, ತಮ್ಮ 'ಅಶ್ವಿನಿ ನಕ್ಷತ್ರ' ಧಾರಾವಾಹಿಯ ಫೇಮಸ್ ಡೈಲಾಗ್ ಹೇಳಿ, 'ಜಸ್ಟ್ ಮಾತ್ ಮಾತಲ್ಲಿ...' ಹಾಡನ್ನ ಜೆಕೆ ಗುನುಗಿದರು.

ಜೆಕೆ ದೊರೆತ ಅಂಕಗಳು ಎಷ್ಟು.?

ಜೆಕೆ ದೊರೆತ ಅಂಕಗಳು ಎಷ್ಟು.?

ಜಯರಾಂ ಕಾರ್ತಿಕ್ ಅವರಿಗೆ ಒಟ್ಟು 46 ಅಂಕಗಳನ್ನು ಲಭಿಸಿದವು. ಇತರರಿಗಿಂತ ಜೆಕೆಗೆ ಹೆಚ್ಚು ಅಂಕಗಳು ಲಭಿಸಿದ ಕಾರಣ 'ಫೇರ್ ಅಂಡ್ ಹ್ಯಾಂಡ್ಸಮ್ ಲೇಸರ್ 12 ಮ್ಯಾನ್' ಆಗಿ ಜೆಕೆ ಆಯ್ಕೆ ಆದರು. ಜೊತೆಗೆ 'ಫೇರ್ ಅಂಡ್ ಹ್ಯಾಂಡ್ಸಮ್' ಕಂಪನಿ ವತಿಯಿಂದ ಎರಡು ಲಕ್ಷ ರೂಪಾಯಿಯನ್ನು ಬಹುಮಾನವಾಗಿ ಪಡೆದರು.

More from Filmibeat

English summary
Bigg Boss Kannada 5: Week 6: Karthik Jayaram wins Rs.2 lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X