»   » 'ಅಕ್ಕ' ಅನುಪಮಾ ಮೇಲೆ ರಿಯಾಝ್ ಗೆ ಕೆಂಡದಷ್ಟು ಕೋಪ.! ಯಾಕೆ.?

'ಅಕ್ಕ' ಅನುಪಮಾ ಮೇಲೆ ರಿಯಾಝ್ ಗೆ ಕೆಂಡದಷ್ಟು ಕೋಪ.! ಯಾಕೆ.?

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಅನುಪಮಾ ಗೌಡ ಮೇಲೆ ಕೋಪಗೊಂಡ ರಿಯಾಜ್ ಭಾಷಾ | Filmibeat Kannada

ಯಾರ ಬಳಿಯೂ ವಾದ-ವಾಗ್ವಾದಕ್ಕೆ ಇಳಿಯದೆ, ತಾನಾಯ್ತು, ತಮ್ಮ ಕೆಲಸ ಆಯ್ತು ಅಂತ ಇರುವ 'ಬಿಗ್ ಬಾಸ್ ಕನ್ನಡ-5' ಸ್ಪರ್ಧಿ ರಿಯಾಝ್ ಗೆ ಸದ್ಯ ಕೆಂಡದಷ್ಟು ಕೋಪ ಬಂದಿದೆ. ಅದು ಅನುಪಮಾ ಗೌಡ ಮೇಲೆ.!

ಮನೆಯ ಎಲ್ಲ ಸದಸ್ಯರಿಗೂ ಕ್ಯಾಪ್ಟನ್ ಆಗುವ ಅವಕಾಶ ಸಿಗಲಿ ಎಂಬ ಉದ್ದೇಶದಿಂದ 'ಬಿಗ್ ಬಾಸ್' ನೀಡಿದ್ದ ಟಾಸ್ಕ್ ನಲ್ಲಿ ತಮ್ಮ ಏಕಾಗ್ರತೆಯನ್ನ ಅನುಪಮಾ ಹಾಳು ಮಾಡಿದ್ದಕ್ಕೆ ರಿಯಾಝ್ ಮುನಿಸಿಕೊಂಡಿದ್ದಾರೆ.

ಸಾಲದಕ್ಕೆ, ರಿಯಾಝ್ ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ನಾಮಿನೇಟ್ ಕೂಡ ಆಗಿದ್ದಾರೆ. ಹೀಗಾಗಿ ಕ್ಯಾಪ್ಟನ್ ಆಗುವ ಅವಕಾಶವನ್ನು ಕೆಡಿಸಿದ ಅನುಪಮಾ ವಿರುದ್ಧ ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ ರಿಯಾಝ್. ಮುಂದೆ ಓದಿರಿ....

'ಬಿಗ್ ಬಾಸ್' ಕೊಟ್ಟ ಟಾಸ್ಕ್ ಏನು.?

ಎರಡನೇ ವಾರದ ಕ್ಯಾಪ್ಟನ್ ಆಯ್ಕೆಗಾಗಿ 'ಆಡಿಸಿ ನೋಡು ಬೀಳಿಸಿ ನೋಡು' ಎಂಬ ಟಾಸ್ಕ್ ನ 'ಬಿಗ್ ಬಾಸ್' ನೀಡಿದರು. ಅದರ ಅನುಸಾರ ಕೊಡಲಾಗಿರುವ ಚೆಂಡನ್ನು ಎಲ್ಲರೂ ಬ್ಯಾಲೆನ್ಸ್ ಮಾಡಬೇಕಿತ್ತು.

ಎರಡನೇ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆದ ಶ್ರುತಿ ಪ್ರಕಾಶ್

ರಿಯಾಝ್ ಏಕಾಗ್ರತೆ ತಪ್ಪಿತು

ಚೆಂಡನ್ನು ರಿಯಾಝ್ ಬ್ಯಾಲೆನ್ಸ್ ಮಾಡುತ್ತಿರುವಾಗ, ಟಾಸ್ಕ್ ಉಸ್ತುವಾರಿ ವಹಿಸಿಕೊಂಡಿದ್ದ ಕಳೆದ ವಾರದ ಕ್ಯಾಪ್ಟನ್ ಅನುಪಮಾ, ಇದಕ್ಕಿದ್ದಂತೆ ರಿಯಾಝ್ ಎಂದು ಕೂಗಿ ''ಚೆಂಡು ದೇಹಕ್ಕೆ ಟಚ್ ಆಗಬಾರದು'' ಎಂದರು. ''ಟಚ್ ಆಗುತ್ತಿಲ್ಲ'' ಎಂದು ರಿಯಾಝ್ ಹೇಳುವಷ್ಟರಲ್ಲಿ ಚೆಂಡು ನೆಲ ಮುಟ್ಟಿತ್ತು. ಹೀಗಾಗಿ, ಆಟದಿಂದ ರಿಯಾಝ್ ಔಟ್ ಆದರು.

'ಮಾತಿನ ಮಲ್ಲ' ರಿಯಾಜ್ ಬಾಷಾ ಬಿಗ್ ಬಾಸ್ ಗೆ ಬರೋದಕ್ಕೆ ಮುಂಚೆ ಏನ್ಮಾಡ್ತಿದ್ರು?

ಬೇಸರಗೊಂಡ ರಿಯಾಝ್

ಕ್ಯಾಪ್ಟನ್ ರೇಸ್ ನಿಂದ ಹೊರಬಿದ್ದಿದ್ದಕ್ಕೆ, ''ಇನ್ನೊಬ್ಬರು ಮಾಡಿದ ತಪ್ಪಿನಿಂದ ಇಂದು ನಾನು ನನ್ನ ಚಾನ್ಸ್ ಕಳೆದುಕೊಂಡಿದ್ದೇನೆ. ಅವರಿಗೆ ಅಷ್ಟೊಂದು ಅನುಮಾನ ಇದ್ದಿದ್ರೆ, ಸೈಡಲ್ಲಿ ಬಂದು ಟಚ್ ಆಗುತ್ತಿದ್ಯೋ ಇಲ್ವೋ ಅಂತ ನೋಡಿಕೊಂಡು ಹೋಗಬಹುದಿತ್ತು. ಆದ್ರೆ, ಸಡನ್ ಆಗಿ ನನ್ನ ಹೆಸರನ್ನ ಕರೆದ ಕಾರಣ, ನನ್ನ ಬ್ಯಾಲೆನ್ಸ್ ತಪ್ಪಿ ಚೆಂಡು ಬಿದ್ದು ಹೋಯ್ತು'' ಎಂದು ಸಮೀರಾಚಾರ್ಯ ಬಳಿ ರಿಯಾಝ್ ತಮ್ಮ ಬೇಸರವನ್ನು ಹೊರಹಾಕಿದರು.

'ಬಿಗ್ ಬಾಸ್' ಮನೆಗೆ ತೆರಳಿದ ನಟಿ ಅನುಪಮಾ ಗೌಡ ಕಣ್ಣೀರಿನ ಕಥೆ ಇದು!

ನಾಮಿನೇಟ್ ಆದ ರಿಯಾಝ್

'ಆಡಿಸಿ ನೋಡು ಬೀಳಿಸಿ ನೋಡು' ಟಾಸ್ಕ್ ನಲ್ಲಿ ಗೆದ್ದು ಕ್ಯಾಪ್ಟನ್ ಆಗಿದ್ರೆ, ನಾಮಿನೇಷನ್ ಪ್ರಕ್ರಿಯೆಯಲ್ಲಿ ರಿಯಾಝ್ ಸೇಫ್ ಆಗುತ್ತಿದ್ದರು. ಆದ್ರೆ, ಹಾಗೆ ನಡೆಯಲಿಲ್ಲ. ರಿಯಾಝ್ ದುರಾದೃಷ್ಷವೋ ಏನೋ, ಮೊದಲ ವಾರ ಸೇಫ್ ಆಗಿದ್ದವರು, ಎರಡನೇ ವಾರ ನಾಮಿನೇಟ್ ಆಗಿದ್ದಾರೆ.

ಅನುಪಮಾ ಮೇಲೆ ಕೋಪ

ಒಂದ್ಕಡೆ, ಟಾಸ್ಕ್ ನಲ್ಲಿ ಮಿಸ್ ಆದ ಚಾನ್ಸ್... ಇನ್ನೊಂದ್ಕಡೆ ಡೇಂಜರ್ ಝೋನ್... ಈ ಎರಡರಿಂದ ಅನುಪಮಾ ಮೇಲೆ ರಿಯಾಝ್ ಸಿಕ್ಕಾಪಟ್ಟೆ ಕೋಪಿಸಿಕೊಂಡಿದ್ದಾರೆ. ಮುಂದೇನಾಗುತ್ತೋ, ನೋಡೋಣ.

English summary
Bigg Boss Kannada 5: Riyaz annoyed with Anupama Gowda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X