»   » 'ಬಿಗ್ ಬಾಸ್' ಮನೆಯಲ್ಲಿ ಆದ ಎಡವಟ್ಟಿಗೆ ಕ್ಷಮೆ ಕೇಳಿದ ಸಿಹಿ ಕಹಿ ಚಂದ್ರು

'ಬಿಗ್ ಬಾಸ್' ಮನೆಯಲ್ಲಿ ಆದ ಎಡವಟ್ಟಿಗೆ ಕ್ಷಮೆ ಕೇಳಿದ ಸಿಹಿ ಕಹಿ ಚಂದ್ರು

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಸಿಹಿ ಕಹಿ ಚಂದ್ರು ವಿರುದ್ಧ ಬೋವಿ ಜನಾಂಗದವರ ಸ್ಟ್ರೈಕ್

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸಿಹಿ ಕಹಿ ಚಂದ್ರು ಕ್ಷಮೆ ಕೇಳಿದ್ದಾರೆ. ತಮ್ಮಿಂದ ಆದ ಎಡವಟ್ಟಿಗೆ ಸಿಹಿ ಕಹಿ ಚಂದ್ರು ತಲೆ ಬಾಗಿದ್ದಾರೆ.

ಅಷ್ಟಕ್ಕೂ, ಆಗಿದ್ದೇನು ಅಂದ್ರೆ ಕಳೆದ ವಾರ ಪ್ರಸಾರ ಆದ 'ಬಿಗ್ ಬಾಸ್' ಸಂಚಿಕೆಯಲ್ಲಿ 'ಸೇಲ್ಸ್ ಮ್ಯಾನ್' ದಿವಾಕರ್ ಗೆ 'ವಡ್ಡ' ಎಂದುಬಿಟ್ಟಿದ್ದರು ಸಿಹಿ ಕಹಿ ಚಂದ್ರು.

Bigg Boss Kannada 5: Sihi Kahi Chandru apologizes

ಸಿಹಿ ಕಹಿ ಚಂದ್ರು 'ವಡ್ಡ' ಎಂದು ಬಳಸಿದಕ್ಕೆ 'ಅಖಿಲ ಕರ್ನಾಟಕ (ಭೋವಿ) ವಡ್ಡರ ಯುವ ವೇದಿಕೆ' ಕಾರ್ಯಕರ್ತರು ಕುಪಿತಗೊಂಡಿದ್ದರು. ಜೊತೆಗೆ 'ಬಿಗ್ ಬಾಸ್' ಕಾರ್ಯಕ್ರಮ ನಡೆಯುತ್ತಿರುವ 'ಇನ್ನೋವೇಟಿವ್ ಫಿಲ್ಮ್ ಸಿಟಿ' ಎದುರು ಪ್ರತಿಭಟನೆ ನಡೆಸಿದ್ದರು.

'ಬಿಗ್ ಬಾಸ್- 5' ಸ್ಫರ್ಧಿ ಸಿಹಿ ಕಹಿ ಚಂದ್ರು ವಿರುದ್ದ ಪ್ರತಿಭಟನೆ

ಪ್ರತಿಭಟನೆಯ ಗಂಭೀರತೆ ಅರಿತ 'ಬಿಗ್ ಬಾಸ್' ಆಯೋಜಕರು, 'ದೊಡ್ಮನೆ'ಯೊಳಗಿದ್ದ ಸಿಹಿ ಕಹಿ ಚಂದ್ರುಗೆ ಘಟನೆಯನ್ನ ವಿವರಿಸಿದರು. ಬಳಿಕ ಸಿಹಿ ಕಹಿ ಚಂದ್ರು ಕ್ಷಮೆ ಕೇಳಿದರು.

''ಕಳೆದ ವಾರ ನಾನು ಉದ್ದೇಶ ಇಲ್ಲದೆ ಆಡಿದ ಮಾತು ಒಂದು ಜನಾಂಗಕ್ಕೆ ನೋವುಂಟು ಮಾಡಿದೆ ಅಂತ ತಿಳಿಯಿತು. ಅದರಿಂದ ನನಗೂ ನೋವಾಗಿದೆ. ಹಂಗಿಸುವ ಉದ್ದೇಶದಿಂದ ನಾನು ಆ ಮಾತನ್ನು ಹೇಳಲಿಲ್ಲ. ಆ ಪದ ಬಳಸಿದ್ದು ನನ್ನ ತಪ್ಪು. ಹೀಗಾಗಿ ನಾನು ಕ್ಷಮೆ ಕೇಳುತ್ತೇನೆ'' ಎಂದು ಕೈಮುಗಿದು ಕೇಳಿಕೊಂಡರು ಸಿಹಿ ಕಹಿ ಚಂದ್ರು.

English summary
Bigg Boss Kannada 5: Week 3: Sihi Kahi Chandru apologized for using the word 'Vadda'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X