Don't Miss!
- News
ಫೆಬ್ರವರಿ 2023ರ ಮಾಸಭವಿಷ್ಯ: ಸಂಕ್ರಮಣದ ನಂತರದ ಫೆಬ್ರವರಿ ತಿಂಗಳಿನಲ್ಲಿ ಯಾವೆಲ್ಲ ರಾಶಿಗಳಿಗೆ ಶುಭವಾಗಲಿದೆ?
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜಗನ್ ಇನ್ನೂ ಸ್ವಲ್ಪ ದಿನ ಇರಬೇಕಿತ್ತು: ಇದು ಸುದೀಪ್ ಬಾಯಿಂದ ಬಂದ ಮಾತು.!
'ಬಿಗ್ ಬಾಸ್ ಕನ್ನಡ-5' ಶುರು ಆದಾಗಿನಿಂದಲೂ ಒಂದಲ್ಲ ಒಂದು ರಾದ್ಧಾಂತಗಳಿಂದಲೇ ಜಗನ್ 'ಕು'ಖ್ಯಾತಿ ಗಳಿಸಿದರು. 'ಜಗಳಗಂಟ' ಜಗನ್ ರನ್ನ 'ಬಿಗ್ ಬಾಸ್' ಮನೆಯಿಂದ ಹೊರ ಹಾಕಬೇಕು ಎಂದು ವೀಕ್ಷಕರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪಟ್ಟು ಹಿಡಿದ್ದಿದ್ದರು.
ಒಂಬತ್ತು ವಾರ 'ಬಿಗ್ ಬಾಸ್' ಮನೆಯಲ್ಲಿ ಇದ್ದ ಜಗನ್ ಗೆ ಈಗ ಗೇಟ್ ಪಾಸ್ ಸಿಕ್ಕಿದೆ. ಜಗನ್ ಔಟ್ ಆಗಿರುವುದು ಕೆಲ ವೀಕ್ಷಕರಿಗೆ ಖುಷಿ ಆಗಿರಬಹುದು. ಆದ್ರೆ, ಕಿಚ್ಚ ಸುದೀಪ್ ಗೆ ಮಾತ್ರ ಬೇಸರ ಆದಂತಿದೆ.
''ಇನ್ನೂ ಕೆಲವು ವಾರಗಳು ಖಂಡಿತ ಇರುವ ಸ್ಪರ್ಧಿ ನೀವು'' ಎಂದು ತಮ್ಮ ವೈಯುಕ್ತಿಕ ಅಭಿಪ್ರಾಯವನ್ನ 'ಬಿಗ್ ಬಾಸ್' ವೇದಿಕೆ ಮೇಲೆ ಸುದೀಪ್ ವ್ಯಕ್ತ ಪಡಿಸಿದ್ದಾರೆ.
ಹಾಗ್ನೋಡಿದ್ರೆ, 'ಬಿಗ್ ಬಾಸ್' ವೇದಿಕೆ ಮೇಲೆ ನಿರೂಪಕ ಸುದೀಪ್ ತಮ್ಮ ವೈಯುಕ್ತಿಕ ಅಭಿಪ್ರಾಯವನ್ನ ವ್ಯಕ್ತಪಡಿಸುವ ಹಾಗಿಲ್ಲ. ಅದ್ರೂ, ತಮಗೆ ಅನಿಸಿದ್ದನ್ನ ಸುದೀಪ್ ನೇರವಾಗಿ ಹೇಳಿದ್ದಾರೆ.
ವಾರದ ಪಂಚಾಯತಿ ಮುಗಿದು, ಜಗನ್ ಔಟ್ ಆಗಿದ್ದಾರೆ ಅಂತ ಘೋಷಿಸಿದ್ಮೇಲೆ ಸುದೀಪ್ ಆಡಿದ ಮಾತುಗಳು ಇಲ್ಲಿದೆ. ಓದಿರಿ...

ಓಪನ್ ಆಗಿ ಹೇಳಿದ ಸುದೀಪ್
''ನನ್ನ ಭಾವನೆಗಳ ಬಗ್ಗೆ ನಾನೀಗ ಸ್ವಲ್ಪ ಓಪನ್ ಆಗಿರಬೇಕು ಅನ್ಸುತ್ತೆ. ನನ್ನ ಮನಸ್ಸಿನಿಂದ ಹೇಳಬೇಕು ಅಂದ್ರೆ ನೀವು ತುಂಬಾ ಚೆನ್ನಾಗಿ ಆಡಿದ್ರಿ'' ಎಂದು ಜಗನ್ ಬಗ್ಗೆ ಸುದೀಪ್ ಕಾಮೆಂಟ್ ಮಾಡಿದರು.
ಧಿಮಾಕು
ದೌಲತ್ತಿನ
ಜಗನ್
'ಬಿಗ್
ಬಾಸ್'
ಇತಿಹಾಸದಲ್ಲಿಯೇ
'ಕಳಪೆ'
ಸ್ಪರ್ಧಿ.!

ಜಗನ್ ತ್ಯಾಗ ಮಾಡಿದ್ದಾರೆ
''ಜೋಡಿ ಅಲ್ಲದೇ ಬೇರೆ ರೀತಿ ನಾಮಿನೇಷನ್ ಆಗಿದ್ರೆ, ಬಹುಶಃ ನೀವು ಆ ಸ್ಥಾನದಲ್ಲಿ ಇರ್ತಿರ್ಲಿಲ್ಲ. ನೀವು ಮಿಕ್ಕಿದ ಸ್ಪರ್ಧಿಗಳಿಗೆ ಒಂದು ಪಾಠ ಆಗಿ ಹೊರಗೆ ಬರ್ತಿದ್ದೀರಾ. ನೀವು ತುಂಬಾ ದೊಡ್ಡ ತ್ಯಾಗ ಮಾಡಿದ್ದೀರಾ'' - ಸುದೀಪ್
ಸುದೀಪ್
ನಿರೂಪಣೆ
ಸರಿ
ಇರ್ಲಿಲ್ಲ,
ಜಗನ್
ಔಟ್
ಆಗಲಿಲ್ಲ,
ಜನ
ಬೈಯ್ಯುವುದನ್ನ
ನಿಲ್ಲಿಸುತ್ತಿಲ್ಲ.!

ವೈಯುಕ್ತಿಕ ಅಭಿಪ್ರಾಯ ತಿಳಿಸಿದ ಸುದೀಪ್
''ಇನ್ನೂ ಕೆಲವು ವಾರಗಳು ಖಂಡಿತ ಇರುವ ಸ್ಪರ್ಧಿ ನೀವು. ಇದು ನನ್ನ ವೈಯುಕ್ತಿಕ ಅಭಿಪ್ರಾಯ. ಈ ವೇದಿಕೆಯಲ್ಲಿ ನಾನು ಯಾವತ್ತೂ ನನ್ನ ವೈಯುಕ್ತಿಕ ಅಭಿಪ್ರಾಯ ತಿಳಿಸಿಲ್ಲ. ಅದಕ್ಕೆ ಅವಕಾಶ ಕೂಡ ಇಲ್ಲ. ಆದ್ರೆ, ಇರಬೇಕಾದಂತಹ ಸ್ಪರ್ಧಿ ನೀವು'' ಎಂದು ಜಗನ್ ಗೆ ಸುದೀಪ್ ಹೇಳಿದರು.
ಜಗನ್
ಗೆ
'ಹುಷಾರು'
ಎಂದು
ಎಚ್ಚರಿಸಿ,
ಬುದ್ಧಿಮಾತು
ಹೇಳಿದ
ಕಿಚ್ಚ
ಸುದೀಪ್.!

ಯಾರು ಬೇಕಾದರೂ ಹೋಗಬಹುದು
''ಯಾರು ಬೇಕಾದರೂ ಹೋಗಬಹುದು ಇಲ್ಲಿ. ಯಾವ ವಾರ ಬೇಕಾದರೂ ಹೋಗಬಹುದು ಇಲ್ಲಿ. ಎಲ್ಲವೂ ನಾಮಿನೇಷನ್ ಹಾಗೂ ನಿಮ್ಮ ಪ್ರತಿಕ್ರಿಯೆ ಮೇಲೆ ನಿಂತಿರುತ್ತೆ. ಹುಷಾರಾಗಿರಿ'' ಎಂದು ಎಲ್ಲ ಸ್ಪರ್ಧಿಗಳಿಗೂ ಸುದೀಪ್ ಎಚ್ಚರಿಸಿದರು.
ಜಗನ್
ಔಟ್
ಆದರು,
ಜೆಕೆ
ಕಣ್ಣೀರಿಟ್ಟರು,
ಅನುಪಮಾ
ಮುತ್ತಿಟ್ಟರು.!

ಸೀರಿಯಸ್ ಆಗಿ ಸುದೀಪ್ ಆಡಿದ ಮಾತು
''ನಾಮಿನೇಷನ್ ನ ತುಂಬಾ ಲೈಟ್ ಆಗಿ ತೆಗೆದುಕೊಳ್ಳಬೇಡಿ. ಇದು ನಾನು ಸೀರಿಯಸ್ ಆಗಿ ಹೇಳುತ್ತಿರುವ ಮಾತು. ಜಗನ್ ಮಾಡಿದ ತ್ಯಾಗ ತುಂಬಾ ಭಾರ ಆಯ್ತು'' ಎಂದು ಸುದೀಪ್ ಹೇಳಿದಾಗ, ''ವೈಯುಕ್ತಿಕವಾಗಿ ನೀವು ಹೇಳಿದ ಮಾತು ನನಗೆ ತುಂಬಾ ಖುಷಿ ಆಯ್ತು'' ಎಂದರು ಜಗನ್.