»   » ದಿವಾಕರ್ ಗೆ ಸುದೀಪ್ ಮೊದಲ ಗುರು.! ಇನ್ಮುಂದೆ ಬದಲಾದ ದಿವಾಕರ್ ನ ನೋಡಬಹುದು.!

ದಿವಾಕರ್ ಗೆ ಸುದೀಪ್ ಮೊದಲ ಗುರು.! ಇನ್ಮುಂದೆ ಬದಲಾದ ದಿವಾಕರ್ ನ ನೋಡಬಹುದು.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ದಿವಾಕರ್ ಕಾಲಿಟ್ಟಾಗ, ಇತರೆ ಸ್ಪರ್ಧಿಗಳಿಗೆ ಅನಿಸಿದ್ದು ಆತ ಸ್ವಲ್ಪ ಒರಟು ಅಂತ. ಕೇಳಿಸಿಕೊಳ್ಳುವ ತಾಳ್ಮೆ ಇಲ್ಲದೇ ಕೂಗಾಡುವ ದಿವಾಕರ್, ಅನೇಕ ಜಗಳಗಳಿಗೆ ಸಾಕ್ಷಿ ಆಗಿದ್ದರು.

ಇದನ್ನೆಲ್ಲ ನೋಡಿದ್ಮೇಲೆ, ಜಗಳದ ಮಧ್ಯೆ 'ಎಕ್ಸ್ ಟ್ರಾ ಮೆಣಸಿನಕಾಯಿ ಹಾಕಬೇಡಿ' ಎಂದು ಸುದೀಪ್ ಬುದ್ಧಿವಾದ ಹೇಳಿದ್ದರು. ಅದಾದ್ಮೇಲೆ, ತಮ್ಮ ನಡವಳಿಕೆಯಲ್ಲಿ ಸ್ವಲ್ಪ ಬದಲಾಯಿಸಿಕೊಂಡ ದಿವಾಕರ್, ಕಳೆದ ವಾರ ಸುದೀಪ್ ಎದುರಿಗೆ ಜಯಶ್ರೀನಿವಾಸನ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದರು. ಆಗ ಸುದೀಪ್ ಕೂಡ ತಿರುಗೇಟು ನೀಡಿದ್ದರು.

'ಜಯಶ್ರೀನಿವಾಸನ್ 420' ಎಂದ ದಿವಾಕರ್ ಗೆ ಸುದೀಪ್ ಗದಾ ಪ್ರಹಾರ.!

ಇದೀಗ ದಿವಾಕರ್ ಗೆ ತಮ್ಮ ತಪ್ಪಿನ ಅರಿವಾಗಿದೆ. ಹೀಗಾಗಿ, ಇನ್ಮುಂದೆ ತಾಳ್ಮೆ ರೂಢಿಸಿಕೊಂಡು, ಮಾತನಾಡುವ ಮುನ್ನ ದಿವಾಕರ್ ಯೋಚಿಸುತ್ತಾರಂತೆ. ಹಾಗಂತ ಸುದೀಪ್ ಮುಂದೆ ದಿವಾಕರ್ ಹೇಳಿದ್ದಾರೆ. ಮುಂದೆ ಓದಿರಿ...

ದಿವಾಕರ್ ಗೆ ಸುದೀಪ್ ಕೇಳಿದ ಪ್ರಶ್ನೆ ಏನು.?

''ಐವತ್ತು ದಿನಗಳ ವರೆಗೂ ಬಂದಾಗಿದೆ. ಇಷ್ಟು ದಿನ ಒಂದು ತರಹ ಇದ್ರಿ. ಇಲ್ಲಿಂದ ಎಷ್ಟು ದಿನಗಳ ಕಾಲ ಇರ್ತೀರೋ.. ನಿಮ್ಮ ಲೆಕ್ಕಾಚಾರ, ಅನಿಸಿಕೆ ಪ್ರಕಾರ ಹೇಗಿರಬೇಕು ಅಂತ ಅಂದುಕೊಂಡಿದ್ದೀರಾ'' ಎಂದು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ದಿವಾಕರ್ ಗೆ ಸುದೀಪ್ ಪ್ರಶ್ನಿಸಿದರು.

ದಿವಾಕರ್ ಬದಲಾಗಿದ್ದಾರಾ.? ರಿಯಾಝ್ ಗೆ ಅಷ್ಟು ಬೇಸರ ಯಾಕೆ.?

ತಾಳ್ಮೆ ಇರಬೇಕು

''ಏನೂ ತಿಳಿಯದೆ ಮಾತನಾಡಬಾರದು ಅಂತ ನನಗೆ ಗೊತ್ತಾಗಿದೆ. ಮಾತನಾಡುವ ಮೊದಲು ಯೋಚನೆ ಮಾಡುತ್ತೇನೆ. ತಾಳ್ಮೆ ಇರಬೇಕು, ವೀಕ್ಷಕರಿಗೆ ನೋವು ಮಾಡಬಾರದು, ಒಂದಿನ ಇದ್ದರೂ ಒಳ್ಳೆಯವನಾಗಿ ಇದ್ದು ಹೋಗಬೇಕು. ಕೆಟ್ಟವನಾಗಿ ಇಲ್ಲಿರುವುದು ಬೇಡ ಎಂದುಕೊಂಡಿದ್ದೇನೆ'' ಎಂದು ದಿವಾಕರ್ ಉತ್ತರಿಸಿದರು.

ಪ್ರಥಮ್ ನ ಫಾಲೋ ಮಾಡುತ್ತಾ ನಾಟಕ ಆಡ್ತಿದ್ದಾರಾ ದಿವಾಕರ್.?

ದಿವಾಕರ್ ಗೆ ಸುದೀಪ್ ಗುರು

''ನೀವೇ ನನ್ನ ಮೊದಲ ಗುರು ಅಂತ ಒಪ್ಪಿಕೊಳ್ಳಲು ಇಷ್ಟ ಪಡುತ್ತೇನೆ'' ಎಂದು ಇದೇ ಸಮಯದಲ್ಲಿ ದಿವಾಕರ್ ನುಡಿದರು.

ಹೇರ್ ಸ್ಟೈಲ್ ಜೊತೆಗೆ ದಿವಾಕರ್ ಬುದ್ಧಿ ಕೂಡ ಬದಲಾಗಿದೆ.!

ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿರಲಿ...

''ನಾಲಿಗೆ ಆಡುವುದು ಮಾತು. ಕೆಲಸ ಮಾಡುವುದು ಕೈ. ಅವರೆಡನ್ನೂ ಹಿಡಿತದಲ್ಲಿ ಇಟ್ಟುಕೊಳ್ಳುವುದು ಬುದ್ಧಿ. ಆ ಬುದ್ಧಿ ಇರುವುದು ನಿಮ್ಮ ಕೈಯಲ್ಲಿ'' ಎಂದು ಸುದೀಪ್ ಬುದ್ಧಿವಾದ ಹೇಳಿದರು.

English summary
Bigg Boss Kannada 5: Week 7: Sudeep is my first Guru says Diwakar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada