twitter
    For Quick Alerts
    ALLOW NOTIFICATIONS  
    For Daily Alerts

    'ಬಿಗ್ ಬಾಸ್' ಕಾರ್ಯಕ್ರಮದ TRP ಕೆಳಗೆ ಬೀಳಲು ಇದೇ ಕಾರಣ!

    By Naveen
    |

    Recommended Video

    ಬಿಗ್ ಬಾಸ್ ಕನ್ನಡ ಸೀಸನ್ 5 ಟಿ ಆರ್ ಪಿ ಮಕಾಡೆ ಮಲಗಿದೆ | ಬಯಲಾದ ಕಾರಣ | Filmibeat Kannada

    'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮ ಕಿರುತೆರೆಯಲ್ಲಿ ಪ್ರಸಾರ ಆಗುವ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದು. 'ಬಿಗ್ ಬಾಸ್' ಸೀಸನ್ ಶುರು ಆಗುತ್ತಿದೆ ಅಂದರೆ ಸಾಕು ಅನೇಕರು ಆ ಕಾರ್ಯಕ್ರಮಕ್ಕಾಗಿ ಕಾಯುತ್ತಿರುತ್ತಾರೆ. ಆದರೆ ಇಂತಹ ದೊಡ್ಡ ಕಾರ್ಯಕ್ರಮ ಈಗ ತನ್ನ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ.

    ಟಿ.ಆರ್.ಪಿ ಪಟ್ಟಿಯಲ್ಲಿ ನೋಡಿದರೆ 'ಬಿಗ್ ಬಾಸ್' ಕಾರ್ಯಕ್ರಮ ತೀರ ಕೆಳಗೆ ಇದೆ. 'ಕಲರ್ಸ್ ಕನ್ನಡ' ವಾಹಿನಿಯ ಧಾರಾವಾಹಿಗಳೆ 'ಬಿಗ್ ಬಾಸ್' ಕಾರ್ಯಕ್ರಮವನ್ನು ಹಿಂದಿಕ್ಕಿದೆ. ಹಳೆಯ 'ಬಿಗ್ ಬಾಸ್' ಸೀಸನ್ ಗಳಿಗೆ ಹೋಲಿಸಿದರೆ ಈ ಬಾರಿ ಅದೇಕೋ ಅನೇಕರಿಗೆ ಪ್ರತಿದಿನ ಕಾರ್ಯಕ್ರಮದ ನೋಡಬೇಕು ಎನಿಸುತ್ತಿಲ್ಲ. ಆದರೆ ಅದಕ್ಕೆ ಕಾರಣ ಈಗ ಸಿಕ್ಕಿದೆ.

    'ಬಿಗ್ ಬಾಸ್' ಕಾರ್ಯಕ್ರಮದ ಟಿ.ಆರ್.ಪಿ ಕಡಿಮೆ ಆಗಲು ಕಾರಣ ಏನು? ಎಂದು ನಿಮ್ಮ 'ಫಿಲ್ಮಿಬೀಟ್ ಕನ್ನಡ' ಪೋಲ್ ಏರ್ಪಡಿಸಿತ್ತು. ಇದರಲ್ಲಿ ಸಾಕಷ್ಟು ವೀಕ್ಷಕರು ಕಾರ್ಯಕ್ರಮದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

    ಅತಿ ಹೆಚ್ಚು ಜನರ ಅಭಿಪ್ರಾಯ

    ಅತಿ ಹೆಚ್ಚು ಜನರ ಅಭಿಪ್ರಾಯ

    'ಬಿಗ್ ಬಾಸ್' ಟಿ.ಆರ್.ಪಿ ಕಡಿಮೆ ಆಗಲು ಕಾರಣ ಏನು ಎಂದು 'ಫಿಲ್ಮಿಬೀಟ್ ಕನ್ನಡ' ಪೋಲ್ ಏರ್ಪಡಿಸಿತ್ತು. ಇದರಲ್ಲಿ ಪ್ರಮುಖವಾಗಿ 'ಸ್ಪರ್ಧಿಗಳ ಆಯ್ಕೆ ಸರಿ ಇಲ್ಲ', 'ಮನರಂಜನೆ ಕೊರತೆ', 'ಚಾನೆಲ್ ಬದಲಾವಣೆ' ಮತ್ತು 'ನಾವು ಬಿಗ್ ಬಾಸ್ ನೋಡುವುದಿಲ್ಲ' ಎಂಬ ನಾಲ್ಕು ಆಯ್ಕೆಗಳನ್ನು ನೀಡಿತ್ತು.

    ಸ್ಪರ್ಧಿಗಳ ಆಯ್ಕೆ ಸರಿ ಇಲ್ಲ

    ಸ್ಪರ್ಧಿಗಳ ಆಯ್ಕೆ ಸರಿ ಇಲ್ಲ

    ನಾಲ್ಕು ಆಯ್ಕೆಗಳಲ್ಲಿ ಅತಿ ಹೆಚ್ಚು ಜನ 'ಸ್ಪರ್ಥಿಗಳ ಆಯ್ಕೆ ಸರಿ ಇಲ್ಲ' ಎಂದು ಅಭಿಪ್ರಾಯ ಪಟ್ಟಿದ್ದಾರೆ. ಶೇಕಡ 43% ವೀಕ್ಷಕರಿಗೆ 'ಬಿಗ್ ಬಾಸ್' ಸ್ಪರ್ಥಿಗಳ ಆಯ್ಕೆ ಬಗ್ಗೆ ಬೇಸರ ಇದೆ.

    ಉಳಿದ ಕಾರಣಗಳು

    ಉಳಿದ ಕಾರಣಗಳು


    ಇನ್ನು ಉಳಿದಂತೆ 'ಬಿಗ್ ಬಾಸ್' ನಲ್ಲಿ 'ಮನರಂಜನೆ ಕೊರತೆ' ಇದೆ ಎಂದು 28% ಜನ ಹೇಳಿದರೆ, 'ಚಾನೆಲ್ ಬದಲಾವಣೆ ಮಾಡಿರುವುದಕ್ಕೆ' ಟಿ.ಆರ್.ಪಿ ಕುಸಿದಿದೆ ಎಂದು 16% ಜನ ಅಭಿಪ್ರಾಯ ಪಟ್ಟಿದ್ದಾರೆ. ಆದರೆ 13% ಜನ 'ಬಿಗ್ ಬಾಸ್' ಕಾರ್ಯಕ್ರಮವನ್ನು ನೋಡುವುದಿಲ್ಲವಂತೆ.

    'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ನಲ್ಲಿ

    'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ನಲ್ಲಿ

    'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪೇಜ್ ನಲ್ಲಿ ಸುಮಾರು 800ಕ್ಕೂ ಅಧಿಕ ವೀಕ್ಷಕರು ತಮ್ಮ ಕಮೆಂಟ್ ಮೂಲಕ ಕಾರ್ಯಕ್ರಮದ ಟಿ.ಆರ್.ಪಿ ಕಡಿಮೆಯ ಕಾರಣವನ್ನು ಹಂಚಿಕೊಂಡಿದ್ದಾರೆ. ಇಲ್ಲಿಯೂ ಬಹುಪಾಲು ಜನ ಆಯ್ಕೆ 'A' ಎಂದು ಅಂದರೆ 'ಸ್ಪರ್ಥಿಗಳ ಆಯ್ಕೆ ಸರಿ ಇಲ್ಲ' ಎಂದು ಕಮೆಂಟ್ ಮಾಡಿದ್ದಾರೆ.

    ಬೋರ್ ಹೊಡೆಯುತ್ತಿದೆ

    ಬೋರ್ ಹೊಡೆಯುತ್ತಿದೆ

    ಅನೇಕ ವೀಕ್ಷಕರು ಈ ಬಾರಿಯ ''ಬಿಗ್ ಬಾಸ್ ಸಿಕ್ಕಾಪಟ್ಟೆ ಬೋರ್ ಹೊಡೆಯುತ್ತಿದೆ'' ಎನ್ನುತ್ತಾರೆ.

    ಮನರಂಜನೆ ಇಲ್ಲ

    ಮನರಂಜನೆ ಇಲ್ಲ

    ಕಾರ್ಯಕ್ರಮದ ''ಸ್ಪರ್ಧಿಗಳು ಸರಿಯಾಗಿ ಆಟ ಆಡುತ್ತಿಲ್ಲ. ಅದಕ್ಕೆ ನೋಡುಗರಿಗೆ ಮನರಂಜನೆ ಇಲ್ಲ'' ಎನ್ನುವುದು ವೀಕ್ಷಕರ ಮಾತು.

    ಚಾನೆಲ್ ಬದಲಾವಣೆ

    ಚಾನೆಲ್ ಬದಲಾವಣೆ

    ''ಕಲರ್ಸ್ ಸೂಪರ್' ಚಾನೆಲ್ ಅಷ್ಟು ರೀಚ್ ಆಗುವುದಿಲ್ಲ. ಅದಕ್ಕೆ ಟಿ.ಆರ್.ಪಿ ಕಡಿಮೆ ಆಗಿದೆ'' ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

    ತುಂಬ ನಿರೀಕ್ಷೆ ಇತ್ತು

    ತುಂಬ ನಿರೀಕ್ಷೆ ಇತ್ತು

    ''ಈ ಬಾರಿಯ ಬಿಗ್ ಬಾಸ್ ಬಗ್ಗೆ ತುಂಬ ನಿರೀಕ್ಷೆ ಇತ್ತು. ಆದರೆ ಇದು ಹಳೆಯ ಸೀಸನ್ ಗಿಂತ ಚೆನ್ನಾಗಿಲ್ಲ'' ಎಂಬುವುದು ನೋಡುಗರ ಅಭಿಪ್ರಾಯ.

    ಪ್ರಥಮ್ ಮತ್ತು ಹುಚ್ಚ ವೆಂಕಟ್

    ಪ್ರಥಮ್ ಮತ್ತು ಹುಚ್ಚ ವೆಂಕಟ್

    ''ಈ ಬಾರಿಯೂ ಪ್ರಥಮ್ ಮತ್ತು ಹುಚ್ಚ ವೆಂಕಟ್ ಇರಬೇಕಿತ್ತು ಆಗ ಟಿ.ಆರ್.ಪಿ ಬರುತ್ತಿತ್ತು.'' ಅಂತ್ತಾರೆ ಸ್ವಲ್ಪ ಜನರು.

    ವೇಸ್ಟ್ ಪ್ರೋಗ್ರಾಂ

    ವೇಸ್ಟ್ ಪ್ರೋಗ್ರಾಂ

    ''ಬಿಗ್ ಬಾಸ್ ವೇಸ್ಟ್ ಪ್ರೋಗ್ರಾಂ ಅದನ್ನು ನಾವು ನೋಡುವುದಿಲ್ಲ'' ಎಂದು ನೇರವಾಗಿ ಕೆಲವರು ಹೇಳಿಬಿಟ್ಟಿದ್ದಾರೆ.

    English summary
    Viewers shared their opinion on whats the reason behind the fall of 'Big Boss Kannada' program TRP in 'Filmibeat Kannada' poll.
    Wednesday, December 13, 2017, 14:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X