»   » 'ಥೂ' ಎಂದು ಕರೆದ ದಯಾಳ್ ವಿರುದ್ಧ ವೀಕ್ಷಕರು ಕೆಂಡಾಮಂಡಲ.!

'ಥೂ' ಎಂದು ಕರೆದ ದಯಾಳ್ ವಿರುದ್ಧ ವೀಕ್ಷಕರು ಕೆಂಡಾಮಂಡಲ.!

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಯಲ್ಲಿ ನಿನ್ನೆ ದಯಾಳ್ ಪದ್ಮನಾಭನ್ ಸಿಕ್ಕಾಪಟ್ಟೆ ಕೋಪಿಸಿಕೊಂಡಿದ್ದರು. ತಮ್ಮ ಮಾತನ್ನು ಮೀರಿ, ನೈತಿಕತೆ ಇಲ್ಲದೆ ತಮ್ಮ ತಂಡದ ಸದಸ್ಯರು ಟಾಸ್ಕ್ ನಲ್ಲಿ ಆಡಿದ ರೀತಿಗೆ ದಯಾಳ್ ಬೇಸರಗೊಂಡಿದ್ದರು.

ಅದೇ ಸಿಟ್ಟಿನಲ್ಲಿ 'ಕಾಮನ್ ಮ್ಯಾನ್' ರಿಯಾಝ್ ಮೇಲೆ ದಯಾಳ್ ಕೂಗಾಡಿದರು. ಅದಕ್ಕೂ ಮುನ್ನ, 'ಥೂ' ಎನ್ನುತ್ತಾ ಸಮೀರಾಚಾರ್ಯ ರವರನ್ನ ಕರೆದರು. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿರುವ 'ಬಿಗ್ ಬಾಸ್' ವೀಕ್ಷಕರು ಬೇಸರಗೊಂಡಿದ್ದಾರೆ.

ದಬ್ಬಾಳಿಕೆ ಮಾಡುತ್ತಿರುವ ಸೆಲೆಬ್ರಿಟಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.!

ದಯಾಳ್ ವರ್ತನೆ ಬಗ್ಗೆ ಕಲರ್ಸ್ ಸೂಪರ್ ಫೇಸ್ ಬುಕ್ ಪೇಜ್ ನಲ್ಲಿಯೇ ವೀಕ್ಷಕರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಮುಂದೆ ಓದಿರಿ....

ದಯಾಳ್ ರನ್ನ ಎಲಿಮಿನೇಟ್ ಮಾಡಿ

''ಸರಿಯಾಗಿ ಕನ್ನಡ ಬರಲ್ಲ... ಕನ್ನಡದವರಿಗೆ ಥೂ ಎಂದು ಉಗಿಯುವ... ಕ್ಯಾಮರಾ ಮುಂದೆ ರೋಷಾವೇಷದಿಂದ ಆಡುವ ದಯಾಳ್ ರವರನ್ನ ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರಗೆ ಕಳುಹಿಸಿ'' ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಯಾರು ಏನೇ ಹೇಳಿದರೂ, ಜನರ ಬೆಂಬಲ ಮಾತ್ರ ಜನಸಾಮಾನ್ಯರಿಗೆ.!

ದಯಾಳ್ ಮೇಲೆ ವೀಕ್ಷಕರ ಸಿಟ್ಟು

ಸಮೀರಾಚಾರ್ಯ ರವರನ್ನ ಥೂ ಎಂದು ಕರೆದಿದ್ದಕ್ಕೆ ದಯಾಳ್ ವಿರುದ್ಧ ವೀಕ್ಷಕರು ಸಿಟ್ಟಾಗಿದ್ದಾರೆ. ಅದಕ್ಕೆ ಈ ಕಾಮೆಂಟ್ ಗಳೇ ಸಾಕ್ಷಿ.

ರಿಯಾಝ್ ಹೇಳಿದ್ರಲ್ಲಿ ತಪ್ಪೇನಿದೆ.? ಸೆಲೆಬ್ರಿಟಿಗಳು ಮಾತ್ರ ಸರಿಯೇ.?

ಮರ್ಯಾದೆ ಕೊಟ್ಟು ತೆಗೆದುಕೊಳ್ಳಲಿ

''ಮರ್ಯಾದೆ ಕೊಟ್ಟು ಮರ್ಯಾದೆ ತೆಗೆದುಕೊಳ್ಳುವುದನ್ನು ದಯಾಳ್ ಕಲಿಯಬೇಕು'' ಅಂತಾವ್ರೆ ವೀಕ್ಷಕರು.

ದಯಾಳ್ ವರ್ತನೆ ಬಗ್ಗೆ ವೀಕ್ಷಕರ ಕಾಮೆಂಟ್ಸ್

''ದಯಾಳ್ ವರ್ತನೆ ನಿಜಕ್ಕೂ ಸರಿಯಿಲ್ಲ'' ಅಂತ ಕಡ್ಡಿತುಂಡು ಮಾಡಿದ ಹಾಗೆ ಹೇಳ್ತಿದ್ದಾರೆ ವೀಕ್ಷಕರು.

ಹೊರಗೆ ಕಳುಹಿಸಿ, ಗೌರವ ಉಳಿಸಿ

''ಸಮೀರಾಚಾರ್ಯ ಮತ್ತು ರಿಯಾಝ್ ರವರನ್ನ ಮನೆಯ ಕೆಲಸದವರಂತೆ ಕಾಣುತ್ತಿರುವ ದಯಾಳ್ ರವರನ್ನ ಹೊರಗೆ ಕಳುಹಿಸಿ 'ಬಿಗ್ ಬಾಸ್' ಕಾರ್ಯಕ್ರಮದ ಗೌರವ ಉಳಿಸಿ'' ಅಂತಿದ್ದಾರೆ ವೀಕ್ಷಕರು.

ಯೋಚನೆ ಮಾಡಿ ಮಾತನಾಡಬೇಕು

''ನೈತಿಕತೆ ಬಗ್ಗೆ ಮಾತನಾಡುವ ದಯಾಳ್, ಮೊದಲು ಯೋಚನೆ ಮಾಡಿ ಮಾತನಾಡುವುದನ್ನು ಕಲಿಯಬೇಕು'' ಎಂಬುದು 'ಬಿಗ್ ಬಾಸ್' ವೀಕ್ಷಕರ ಅಭಿಪ್ರಾಯ.

ಅರ್ಹ ವ್ಯಕ್ತಿ ಅಲ್ಲ

''ಬಿಗ್ ಬಾಸ್' ಮನೆಯೊಳಗೆ ಇರಲು ದಯಾಳ್ ಅರ್ಹ ವ್ಯಕ್ತಿ ಅಲ್ಲ'' ಅಂತಲೂ ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.

ನೈತಿಕತೆಯ ಅರ್ಥ ಗೊತ್ತಿದ್ಯಾ.?

''ನೈತಿಕತೆ ಅಂದ್ರೆ ಕೇವಲ ಮೋಸ ಮಾಡದೇ ಇರುವುದು ಮಾತ್ರ ಅಲ್ಲ. ಇನ್ನೊಬ್ಬರಿಗೆ ಗೌರವ ಕೊಡುವುದು ಕೂಡ ನೈತಿಕತೆಯೇ. ನೈತಿಕತೆ ಎಂಬ ಪದದ ಅರ್ಥ ಗೊತ್ತಿಲ್ಲದ ದಯಾಳ್ ಇನ್ಮೇಲಾದರೂ ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಲಿ'' ಎಂಬುದು ವೀಕ್ಷಕರೊಬ್ಬರ ಆಶಯ.

ಸುದೀಪ್ ಕ್ಲಾಸ್ ತೆಗೆದುಕೊಳ್ಳಬೇಕು

''ಬಾಯಿಗೆ ಬಂದ ಹಾಗೆ ಮಾತನಾಡುವ ದಯಾಳ್ ರಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳಲೇಬೇಕು'' ಎಂಬುದು ವೀಕ್ಷಕರ ಆಗ್ರಹ

ನಿಮ್ಮ ಅಭಿಪ್ರಾಯ ಏನು.?

ಟ್ರೋಲ್ ಪೇಜ್ ಗಳಿಗೂ ಆಹಾರವಾಗಿರುವ ದಯಾಳ್ ಪದ್ಮನಾಭನ್ ರವರ ವರ್ತನೆ ಬಗ್ಗೆ ನೀವೇನಂತೀರಿ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

English summary
Bigg Boss Kannada 5: Week 2: Viewers are annoyed with Dayal Padmanabhan's behaviour

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X