»   » ಹೀಗೆ ಮಾಡಿದ್ರೆ ಮೋಸ ಆಗಲ್ವಾ 'ಬಿಗ್ ಬಾಸ್'.? ಸ್ಪಷ್ಟನೆ ಕೊಡಿ.!

ಹೀಗೆ ಮಾಡಿದ್ರೆ ಮೋಸ ಆಗಲ್ವಾ 'ಬಿಗ್ ಬಾಸ್'.? ಸ್ಪಷ್ಟನೆ ಕೊಡಿ.!

Posted By:
Subscribe to Filmibeat Kannada

''ಬಿಗ್ ಬಾಸ್' ಮನೆಯೊಳಗೆ ಹೋಗ್ತಾಯಿದ್ದೀನಿ. ಆದ್ರೆ, ಒಂದು ಸೀಕ್ರೆಟ್ ಇದೆ. ನಾನು ಸ್ಪರ್ಧಿ ಆಗಿ ಹೋಗುತ್ತಿಲ್ಲ. ನಾನು ಸೆಲೆಬ್ರಿಟಿ ಆಗೇ ಹೋಗುತ್ತಿದ್ದೇನೆ. ಬರೀ ಸ್ವಲ್ಪ ದಿನಕ್ಕೆ ಮಾತ್ರ ಹೋಗುತ್ತಿದ್ದೇನೆ. ಮನೆಯೊಳಗೆ ಇರುವವರಿಗೆ ನಾನು ವೈಲ್ಡ್ ಕಾರ್ಡ್ ಸ್ಪರ್ಧಿ ಆಗಿ ಹೋಗುತ್ತಿದ್ದೇನೆ'' ಎಂದು 'ಬಿಗ್ ಬಾಸ್' ಗೃಹ ಪ್ರವೇಶ ಮಾಡುವ ಮುನ್ನ ನಟಿ ಸಂಯುಕ್ತ ಹೆಗ್ಡೆ ಸ್ಪಷ್ಟವಾಗಿ ಹೇಳಿದ್ದರು.

'ಬಿಗ್ ಬಾಸ್' ಮನೆಯೊಳಗೆ ನಟಿ ಸಂಯುಕ್ತ ಕಾಲಿಟ್ಟು ಒಂದು ವಾರ ಆಗಿದೆ. ಒಂದು ವಾರದಲ್ಲಿ 'ವೈಲ್ಡ್ ಕಾರ್ಡ್ ಎಂಟ್ರಿ' ವೇಷದಲ್ಲಿ ನಟಿ ಸಂಯುಕ್ತ ಮಾಡಿರುವ 'ಕಿರಿಕ್'ಗಳು ಒಂದೊಂದಲ್ಲ.

ಸಂಯುಕ್ತ ಹೆಗ್ಡೆ ಅವರ ನೇರ ನುಡಿ ಕೆಲ ಸ್ಪರ್ಧಿಗಳಿಗೆ ಕಿರಿಕಿರಿ ತಂದಿದೆ. ಹೀಗಾಗಿ, ಸ್ಪರ್ಧಿಗಳು ಸಂಯುಕ್ತ ರನ್ನ ಆಚೆ ಹಾಕಲು ನಾಮಿನೇಟ್ ಮಾಡಿದ್ದಾರೆ. ಆದ್ರೆ, ಆಕೆ ಸ್ಪರ್ಧಿ ಅಲ್ಲದ ಕಾರಣ ನಾಮಿನೇಟ್ ಮಾಡಿದರೂ ಒಂದೇ ಬಿಟ್ಟರೂ ಒಂದೇ.!

ಆಟಕ್ಕುಂಟು ಲೆಕ್ಕಕ್ಕಿಲ್ಲದ ಸಂಯುಕ್ತ ರವರ ನಾಮಿನೇಷನ್ ನ 'ಬಿಗ್ ಬಾಸ್' ಪರಿಗಣಿಸಿಲ್ಲ. ಆದ್ರೆ, ಸಂಯುಕ್ತ ವಿರುದ್ಧ ಚಲಾವಣೆ ಆದ ಮತಗಳನ್ನ ಮಾತ್ರ 'ಬಿಗ್ ಬಾಸ್' ಪರಿಗಣಿಸಿದ್ದಾರೆ. ಅಷ್ಟಕ್ಕೂ, ಸ್ಪರ್ಧಿಯಾಗಿ ಕಣಕ್ಕೆ ಇಳಿಯದ ಸಂಯುಕ್ತ 'ಬಿಗ್ ಬಾಸ್' ಆದೇಶದಂತೆ ಯಾವಾಗ ಬೇಕಾದರೂ ಹೊರಗೆ ಹೋಗಬಹುದು. ಆಕೆಗೆ ವೀಕ್ಷಕರ ಬೆಂಬಲದ ಅವಶ್ಯಕತೆ ಇಲ್ಲ. ಹೀಗಿರುವಾಗ, ಸಂಯುಕ್ತ ವಿರುದ್ಧ ಚಲಾವಣೆ ಆದ ಮತಗಳು ನಿರುಪಯುಕ್ತ ತಾನೆ.? ಇದು ಮೋಸ ತಾನೆ.? 'ಬಿಗ್ ಬಾಸ್' ಇದಕ್ಕೆ ಕ್ಲಾರಿಟಿ ಕೊಡಿ...

ನಾಮಿನೇಷನ್ ನಲ್ಲಿ ಟ್ವಿಸ್ಟ್ ಕೊಟ್ಟ 'ಬಿಗ್ ಬಾಸ್'

'ಈ ವಾರ ಕ್ಯಾಪ್ಟನ್ ಇಲ್ಲ' ಎಂದು ಘೋಷಿಸಿದ 'ಬಿಗ್ ಬಾಸ್' ನಾಮಿನೇಷನ್ ಪ್ರಕ್ರಿಯೆಗೆ ಚಾಲನೆ ನೀಡಿದರು. ಮಹಿಳಾ ಸ್ಪರ್ಧಿಗಳು ಇಬ್ಬರು ಪುರುಷ ಸದಸ್ಯರನ್ನ ನಾಮಿನೇಟ್ ಮಾಡಬೇಕಾಗಿದ್ದರೆ, ಪುರುಷ ಸದಸ್ಯರು ಇಬ್ಬರು ಮಹಿಳಾ ಸದಸ್ಯರನ್ನು ನಾಮಿನೇಟ್ ಮಾಡಬೇಕಾಗಿತ್ತು.

ಈ ವಾರ 'ಬಿಗ್ ಬಾಸ್' ಮನೆಯಿಂದ ಮನೆ ಕಡೆ ಹೆಜ್ಜೆ ಹಾಕುವವರು ಯಾರು.?

ಆರು - ಆರು

'ವಿಶೇಷ ಅತಿಥಿ'ಯಾಗಿ ಬಂದಿರುವ ಸಂಯುಕ್ತ ರವರನ್ನೂ ಸೇರಿಸಿದರೆ 'ಬಿಗ್ ಬಾಸ್' ಮನೆಯೊಳಗೆ ಇರುವವರ ಸಂಖ್ಯೆ 12. ಹನ್ನೆರಡು ಜನರ ಪೈಕಿ ಆರು ಮಂದಿ ಪುರುಷರು, ಆರು ಮಂದಿ ಮಹಿಳೆಯರು.

ಸುದೀಪ್ ಕೊಟ್ಟ ಒಂದೇ ಚಮಕ್ ಗೆ ಗೊಳೋ ಎಂದು ಕಣ್ಣೀರಿಟ್ಟ ನಟಿ ಸಂಯುಕ್ತ.!

ಸಂಯುಕ್ತ ವಿರುದ್ಧ ಮೂರು ಮತಗಳು

ಸಂಯುಕ್ತ ಹೆಗ್ಡೆ ಸ್ಪರ್ಧಿ ಅಲ್ಲ, ಕೇವಲ 'ವಿಶೇಷ ಅತಿಥಿ' ಎಂಬ ಗುಟ್ಟು ಇನ್ನೂ ರಟ್ಟಾಗದ ಕಾರಣ ಚಂದನ್ ಶೆಟ್ಟಿ, ಸಮೀರಾಚಾರ್ಯ ಮತ್ತು ಜೆಕೆ ಸಂಯುಕ್ತ ವಿರುದ್ಧ ವೋಟ್ ಮಾಡಿದರು.

'ಬಿಗ್ ಬಾಸ್' ಕೊಟ್ಟಿರುವ ಸೀಕ್ರೆಟ್ ಟ್ವಿಸ್ಟು ಪಾಪ ಸ್ಪರ್ಧಿಗಳಿಗೆ ಗೊತ್ತೇ ಇಲ್ಲ.!

ಸಂಯುಕ್ತ ನಾಮಿನೇಟ್ ಆದರೆ ಎಷ್ಟು ಬಿಟ್ಟರೆ ಎಷ್ಟು.?

'ಬಿಗ್ ಬಾಸ್' ಮನೆಯ ಇತರೆ ಸ್ಪರ್ಧಿಗಳ ಪಾಲಿಗೆ ಮಾತ್ರ ಸಂಯುಕ್ತ 'ವೈಲ್ಡ್ ಕಾರ್ಡ್ ಸ್ಪರ್ಧಿ'. ಆದ್ರೆ, ಸಂಯುಕ್ತ 'ವಿಶೇಷ ಅತಿಥಿ' ಎಂಬ ಸಂಗತಿ ವೀಕ್ಷಕರಿಗೆ ಗೊತ್ತಿದೆ. ಹೀಗಾಗಿ, ಆಟಕ್ಕುಂಟು ಲೆಕ್ಕಕ್ಕಿಲ್ಲದ ಸಂಯುಕ್ತ ನಾಮಿನೇಟ್ ಆದರೆ ಲಾಭ ಇಲ್ಲ. ಆಕೆಯ ವಿರುದ್ಧ ಮತ ಹಾಕಿದವರಿಗೆ ಮಾತ್ರ ನಷ್ಟ.

ಮತಗಳು ಮಾತ್ರ ಲಾಸ್.!

ಹೇಳಿ ಕೇಳಿ, ಸಂಯುಕ್ತ ವಿಶೇಷ ಅತಿಥಿ. ಹೀಗಾಗಿ, 'ಬಿಗ್ ಬಾಸ್' ಇಚ್ಛೆಯಂತೆ ಆಕೆ ಯಾವ ಸಮಯದಲ್ಲಿ ಬೇಕಾದರೂ ಹೊರಗೆ ಹೋಗಬಹುದು. ಅಂದ್ಮೇಲೆ, ಸಂಯುಕ್ತ ವಿರುದ್ಧ ಚಲಾವಣೆ ಆದ ಮತಗಳು ವೇಸ್ಟ್ ಆದ್ಹಂಗೆ ತಾನೆ ಲೆಕ್ಕ.!?

ಬೇರೆಯವರ ಹೆಸರುಗಳನ್ನು ತೆಗೆದುಕೊಳ್ಳಬಹುದಿತ್ತು.!

ಸಂಯುಕ್ತ ಹೆಸರನ್ನ ಮೂರು ಮಂದಿ ತೆಗೆದುಕೊಂಡರು. ಒಂದ್ವೇಳೆ ಸಂಯುಕ್ತ 'ವಿಶೇಷ ಅತಿಥಿ' ಎಂಬ ಗುಟ್ಟು ರಟ್ಟಾಗಿದಿದ್ರೆ, ಆ ಮೂರು ಮಂದಿ ಬೇರೆ ಮಹಿಳೆಯರ ವಿರುದ್ಧ ಮತ ಹಾಕುತ್ತಿದ್ದರು.

ಒಂದು ವೋಟ್ ನಲ್ಲಿ ಮಿಸ್ ಆದವರು.!

ನಟಿ ಶ್ರುತಿ ಪ್ರಕಾಶ್ ಹಾಗೂ ಕೃಷಿ ತಾಪಂಡ ವಿರುದ್ಧ ಒಂದು ವೋಟ್ ಬಿದ್ದ ಕಾರಣ ನಾಮಿನೇಷನ್ ನಿಂದ ಬಚಾವ್ ಆದರು. ಸಂಯುಕ್ತ 'ಆಟಕ್ಕುಂಟು ಲೆಕ್ಕಕ್ಕಿಲ್ಲ' ಎಂಬ ಸಂಗತಿ ಬಯಲಾಗಿದ್ರೆ, ಶ್ರುತಿ ಹಾಗೂ ಕೃಷಿ ವಿರುದ್ಧ ಮತಗಳು ಬೀಳ್ತಿದ್ವೇನೋ.!

ಎರಡು ವೋಟ್ ತೆಗೆದುಕೊಂಡವರು ನಾಮಿನೇಟ್ ಆಗಿದ್ದಾರೆ.!

ಕೇವಲ ಎರಡು ವೋಟ್ ಬಿದ್ದಿದ್ರಿಂದಾಗಿ, ಅನುಪಮಾ ನಾಮಿನೇಟ್ ಆಗಿದ್ದಾರೆ.

ಸಂಯುಕ್ತ ಇಂದ ಇಬ್ಬರು ಸೇಫ್.!

ಸಂಯುಕ್ತ ವಿರುದ್ಧ ಮೂರು ಮತ ಚಲಾವಣೆ ಆಗಿದ್ರಿಂದಾಗಿ, ಶ್ರುತಿ ಹಾಗೂ ಕೃಷಿ ಪರೋಕ್ಷವಾಗಿ ಸೇಫ್ ಆಗಿದ್ದಾರೆ. ಒಂದ್ವೇಳೆ ಸಂಯುಕ್ತ ಇಲ್ಲದೆ ಹೋಗಿದ್ದರೆ, ಮನೆಯ ಲೆಕ್ಕಾಚಾರ ಬೇರೆ ಆಗಿರುತ್ತಿತ್ತೇನೋ..!?

ಇದು ಮೋಸ ಅಲ್ಲದೇ ಬೇರೆ ಏನು.?

ಲೆಕ್ಕಕ್ಕೆ ಇಲ್ಲದ ಸಂಯುಕ್ತ ಅವರ ನಾಮಿನೇಷನ್ ನ 'ಬಿಗ್ ಬಾಸ್' ಪರಿಗಣಿಸಿಲ್ಲ. ಹಾಗೇ, ಸಂಯುಕ್ತ ವಿರುದ್ಧ ಚಲಾವಣೆ ಆದ ಮತಗಳನ್ನೂ 'ಬಿಗ್ ಬಾಸ್' ಪರಿಗಣಿಸಬಾರದಿತ್ತು. ಅಸಲಿಗೆ, ನಾಮಿನೇಷನ್ ಪ್ರಕ್ರಿಯೆಯಿಂದ ಸಂಯುಕ್ತ ಹೊರಗೆ ಇರಬೇಕಿತ್ತು. ಆದ್ರೆ, ಹೀಗೆ ನಡೆಯಲಿಲ್ಲ. ಸಂಯುಕ್ತ ವಿರುದ್ಧ ಬಿದ್ದ ಮೂರು ಮತಗಳು ವೇಸ್ಟ್ ಆಗಿದೆ. ಪರೋಕ್ಷವಾಗಿ ಇಬ್ಬರು (ಕೃಷಿ, ಶ್ರುತಿ) ಸೇಫ್ ಆಗಿ, ಮಿಕ್ಕವರು ನಾಮಿನೇಟ್ ಆಗಿರುವುದು ನ್ಯಾಯಸಮ್ಮತವಾದ ಆಟ ಅಲ್ಲ. ಸಂಯುಕ್ತ ಜೊತೆಗೆ ನಾಮಿನೇಟ್ ಆಗಿರುವವರಿಗೆ ಮೋಸ ಆದಂತೆಯೇ ಲೆಕ್ಕ. ಇದಕ್ಕೆ 'ಬಿಗ್ ಬಾಸ್' ಕ್ಲಾರಿಟಿ ಕೊಡಬೇಕು ಅಲ್ಲವೇ.?

ಇದು ನ್ಯಾಯವೇ.?

ಸಮೀರಾಚಾರ್ಯ, ನಿವೇದಿತಾ, ದಿವಾಕರ್, ಜಯಶ್ರೀನಿವಾಸನ್, ಅನುಪಮಾ ಮತ್ತು ಲಾಸ್ಯ.... ಸದ್ಯ ನಾಮಿನೇಟ್ ಆಗಿ ವೀಕ್ಷಕರ ಬೆಂಬಲಕ್ಕಾಗಿ ಎದುರು ನೋಡುತ್ತಿದ್ದಾರೆ. ಒಂದ್ವೇಳೆ ಸಂಯುಕ್ತ ಜಾಗದಲ್ಲಿ ಬೇರೆಯವರು ಇದ್ದಿದ್ರೆ, ಆಟದ ದಿಕ್ಕು ಬದಲಾಗುತ್ತಿತ್ತೇನೋ.! ಮೂರು ಮತಗಳು ವೇಸ್ಟ್ ಆದ ಕಾರಣ ಈ ಆರು ಮಂದಿ ಪೈಕಿ ಒಬ್ಬರು ಮನೆಗೆ ಹೋಗಬೇಕು. ಇದು ನ್ಯಾಯವೇ.? 'ಬಿಗ್ ಬಾಸ್' ಉತ್ತರಿಸಿ....

English summary
Bigg Boss Kannada 5: Week 10: Bigg Boss, please clarify over Samyuktha's participation in nomination process and wastage of votes.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X