»   » 'ಬಿಗ್ ಬಾಸ್' ಮನೆಯಿಂದ ಸಂಯುಕ್ತ ಹೆಗ್ಡೆ 'ಕಿಕ್' ಔಟ್ ಆಗಿದ್ಯಾಕೆ.?

'ಬಿಗ್ ಬಾಸ್' ಮನೆಯಿಂದ ಸಂಯುಕ್ತ ಹೆಗ್ಡೆ 'ಕಿಕ್' ಔಟ್ ಆಗಿದ್ಯಾಕೆ.?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಇಂಥ ಒಂದು ಘಟನೆ ನಡೆಯುತ್ತೆ ಅಂತ ಬಹುಶಃ ಯಾರೂ ಕೂಡ ಊಹಿಸಿರಲಿಲ್ಲ. ಈ ಬಾರಿಯ 'ಬಿಗ್ ಬಾಸ್' ಶೋನಲ್ಲಿ ಎಷ್ಟೋ ಗಲಾಟೆಗಳು ನಡೆದು ಹೋಗಿದೆ. ಆದ್ರೆ, ಕೈ ಎತ್ತುವ ಮಟ್ಟಕ್ಕೆ ಯಾವ ಜಗಳ ಕೂಡ ಹೋಗಿರಲಿಲ್ಲ.

'ವೈಲ್ಡ್ ಕಾರ್ಡ್ ಸ್ಪರ್ಧಿ' ವೇಷದಲ್ಲಿ 'ಬಿಗ್ ಬಾಸ್' ಮನೆಯೊಳಗೆ ಸಂಯುಕ್ತ ಕಾಲಿಟ್ಟ ಮೇಲಂತೂ 'ಕಿರಿಕ್'ಗಳು ಸ್ವಲ್ಪ ಜಾಸ್ತಿ ಆಗಿತ್ತು. 'ವಿಶೇಷ ಅತಿಥಿ' ಸಂಯುಕ್ತ ಎಲ್ಲರ ಬಗ್ಗೆ ಕಾಮೆಂಟ್ ಮಾಡುತ್ತಾ ಕಾಲು ಕೆರೆದುಕೊಂಡು ವಾಗ್ವಾದಕ್ಕೆ ನಿಲ್ಲುತ್ತಿದ್ದರು.

''ಮನೆಯಿಂದ ಸಂಯುಕ್ತ ಹೊರಗೆ ಹೋದರೆ ಸಾಕು'' ಅಂತ 'ಬಿಗ್ ಬಾಸ್' ಸ್ಪರ್ಧಿಗಳು ಆಕೆಯನ್ನ ನಾಮಿನೇಟ್ ಕೂಡ ಮಾಡಿದ್ದರು. ಆದ್ರೆ, ತಲೆ ಎತ್ತಿಕೊಂಡು 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗುವ ಬದಲು, ತಪ್ಪು ಮಾಡಿ... ತಲೆ ತಗ್ಗಿಸಿ... ಕಣ್ಣೀರಿಡುತ್ತಾ 'ದೊಡ್ಮನೆ'ಯಿಂದ ಆಚೆ ಬಂದಿದ್ದಾರೆ 'ಕಿರಿಕ್' ಹುಡುಗಿ ಸಂಯುಕ್ತ ಹೆಗ್ಡೆ.

ಅಷ್ಟಕ್ಕೂ, ಆದ ಘಟನೆ ಏನು.? ಸಂಯುಕ್ತ ರನ್ನ 'ಬಿಗ್ ಬಾಸ್' ಹೊರ ಹಾಕಿದ್ದು ಯಾಕೆ.? ಎಂಬ ಸಂಪೂರ್ಣ ವಿವರ ಇಲ್ಲಿದೆ ಓದಿರಿ...

'ಬಿಗ್ ಬಾಸ್' ನೀಡಿದ್ದ ಲಕ್ಷುರಿ ಬಜೆಟ್ ಟಾಸ್ಕ್ ಏನು.?

'ಮೇಲಾ.. ಫೀಮೇಲಾ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ಸದ್ಯ ಚಾಲ್ತಿಯಲ್ಲಿದೆ. ಈ ಟಾಸ್ಕ್ ಅನುಸಾರ ಮನೆಯಲ್ಲಿ ಎರಡು ಶಕ್ತಿ ಕೇಂದ್ರ ನಿರ್ಮಿಸಲಾಗಿತ್ತು. ಒಂದು ಕೇಂದ್ರ ಪುರುಷರದ್ದಾಗಿದ್ದರೆ, ಮತ್ತೊಂದು ಕೇಂದ್ರ ಮಹಿಳೆಯರದ್ದು. ಕಾಲ ಕಾಲಕ್ಕೆ ನೀಡುವ ಸವಾಲುಗಳಲ್ಲಿ ಸೋಲುವ ತಂಡ, ಶಕ್ತಿ ಕೇಂದ್ರಗಳಲ್ಲಿ ಬ್ಯಾಟರಿಯ ಮಟ್ಟವನ್ನು ಕಳೆದುಕೊಳ್ಳಲಿದೆ. ಟಾಸ್ಕ್ ಅಂತ್ಯದಲ್ಲಿ ಯಾರ ಶಕ್ತಿ ಕೇಂದ್ರದಲ್ಲಿ ಅತಿ ಹೆಚ್ಚು ಬ್ಯಾಟರಿ ಮಟ್ಟವನ್ನು ಹೊಂದುತ್ತದೆಯೋ, ಆ ತಂಡ ವಿಜೇತರಾಗುತ್ತಾರೆ.

ಸಮೀರಾಚಾರ್ಯ ಮೇಲೆ ಸಂಯುಕ್ತಾ ಹಲ್ಲೆ: ಪತ್ನಿ ಶ್ರಾವಣಿ ಆಕ್ರೋಶ

ಶಕ್ತಿ ಗೋಪುರ ಕಾಪಾಡಿಕೊಳ್ಳಬೇಕು

'ಶಕ್ತಿ ಗೋಪುರ'ವನ್ನ ಹೊಂದಿರುವ ತಂಡ ಅಡೆ ತಡೆ ಇಲ್ಲದೆ ಮನೆಯ ಎಲ್ಲೆಡೆ ಓಡಾಡಬಹುದಿತ್ತು. ಈ ಗೋಪುರವನ್ನು ಎದುರಾಳಿ ತಂಡ ನಾಶ ಮಾಡಿದರೆ (ಎಲ್ಲ ಹಗ್ಗಗಳನ್ನು ಕಟ್ ಮಾಡಿದರೆ) ಮನೆಯಲ್ಲಿ ಮುಕ್ತವಾಗಿ ಸಂಚರಿಸುವ ಅವಕಾಶವನ್ನು ಕಳೆದುಕೊಳ್ಳುತ್ತದೆ ಎಂಬುದು ಆಟದ ನಿಯಮ.

'ಸರಿಯಾಗಿ ವಾಂಚುತ್ತೇನೆ' ಎಂದು ಮೊದಲೇ ವಾರ್ನಿಂಗ್ ಕೊಟ್ಟಿದ್ದ ಸಂಯುಕ್ತ.!

ಕತ್ತರಿಗಾಗಿ ಕಿತ್ತಾಟ

ಮಹಿಳೆಯರ 'ಶಕ್ತಿ ಗೋಪುರ'ವನ್ನು ನಾಶ ಮಾಡಲು ಚಂದನ್ ಶೆಟ್ಟಿ ಕತ್ತರಿ ಹಿಡಿದುಕೊಂಡಿದ್ದರು. ಚಂದನ್ ಶೆಟ್ಟಿಯನ್ನ ತಡೆಯಲು ಸಂಯುಕ್ತ ಮುಂದಾದರು. ಆಗ ಸಮೀರಾಚಾರ್ಯ ಸೈಲೆಂಟ್ ಆಗಿ ಸೈಡ್ ನಲ್ಲಿ ಕೂತಿದ್ದರು.

'ಬಿಗ್' ಮನೆಯೊಳಗೆ 'ಕಿರಿಕ್' ಹುಡುಗಿ ಸಂಯುಕ್ತ ಮಾಡಿದ 'ಕಿರಿಕ್'ಗಳು ಒಂದೆರಡಲ್ಲ.!

ಚಂದನ್ ಶೆಟ್ಟಿ ಮೇಲೆ ಸಂಯುಕ್ತ ಸವಾರಿ

ಚಂದನ್ ಶೆಟ್ಟಿ ಅಲ್ಲಾಡದ ಹಾಗೆ ಅವರ ಮೇಲೆ ಸಂಯುಕ್ತ ಹೆಗ್ಡೆ ಕೂತರು. ''ಹೀಗೆ ಕೂರುವ ಹಾಗಿಲ್ಲ'' ಅಂತ ಚಂದನ್ ಶೆಟ್ಟಿ ಹೇಳಿದಾಗ ''ಯಾಕೆ.? ಆ ತರಹ ನಿಯಮ ಏನಿಲ್ಲ'' ಎಂದರು ಸಂಯುಕ್ತ.

ಸಮೀರಾಚಾರ್ಯ ಮೇಲೆ ಹಲ್ಲೆ ಮಾಡಿದ ಸಂಯುಕ್ತ: ಹೊರಹಾಕಿದ 'ಬಿಗ್ ಬಾಸ್'.!

ಕಿತ್ತಾಟ ಶುರು

''ಚಂದನ್ ಶೆಟ್ಟಿ ಜೇಬಿನಲ್ಲಿ ಕತ್ತರಿ ಇದೆ ತಗೋ..'' ಎಂದು ಶ್ರುತಿಗೆ ಸಂಯುಕ್ತ ಹೇಳುತ್ತಿದ್ದಂತೆಯೇ, ಶ್ರುತಿ ಜೊತೆಗೆ ಜೆಕೆ ಹಾಗೂ ಸಮೀರಾಚಾರ್ಯ ಕೂಡ ಓಡಿ ಬಂದರು.

ಹೀಗೆ ಮಾಡಿದ್ರೆ ಮೋಸ ಆಗಲ್ವಾ 'ಬಿಗ್ ಬಾಸ್'.? ಸ್ಪಷ್ಟನೆ ಕೊಡಿ.!

ಮುಟ್ಟಿದ್ದು ಯಾರು.?

ಶ್ರುತಿ, ಜೆಕೆ ಹಾಗೂ ಸಮೀರಾಚಾರ್ಯ ಓಡಿ ಬಂದಾಗ, ''ನನ್ನ ಮುಟ್ಟ ಬೇಡಿ... ನನ್ನ ಯಾಕ್ರೀ ಮುಟ್ಟಿದ್ರಿ...'' ಎಂದು ಏಕ್ ದಂ ಸಮೀರಾಚಾರ್ಯ ಗೆ ಹೊಡೆದುಬಿಟ್ಟರು ನಟಿ ಸಂಯುಕ್ತ ಹೆಗ್ಡೆ.

ಸುದೀಪ್ ಕೊಟ್ಟ ಒಂದೇ ಚಮಕ್ ಗೆ ಗೊಳೋ ಎಂದು ಕಣ್ಣೀರಿಟ್ಟ ನಟಿ ಸಂಯುಕ್ತ.!

ಮುಟ್ಟಲಿಲ್ಲ ಅಂದರೂ ಕೇಳಲಿಲ್ಲ

''ನಾನು ಮುಟ್ಟಲಿಲ್ಲ'' ಅಂತ ಸಮೀರಾಚಾರ್ಯ ಹೇಳುತ್ತಿದ್ದರೂ ಕೇಳದೆ, ''ನೀವೇ ಮುಟ್ಟಿದ್ದು'' ಎನ್ನುತ್ತ ಅವರ ಮೇಲೆ ಕೈ ಮಾಡಿದರು ಸಂಯುಕ್ತ ಹೆಗ್ಡೆ.

ಜೆಕೆ ಮುಟ್ಟಲಿಲ್ವಂತೆ.!

''ಜೆಕೆ ಮುಟ್ಟಿಲ್ಲ. ಆದ್ರೆ ಸಮೀರಾಚಾರ್ಯ ಮುಟ್ಟಿದರು. ಕ್ಯಾಮರಾದಲ್ಲಿ ನೋಡಿಕೊಳ್ಳಿ'' ಅಂತೆಲ್ಲ ಇದೇ ಸಮಯದಲ್ಲಿ ಕೂಗಾಡಿದರು ಸಂಯುಕ್ತ.

ತಪ್ಪು ಮಾಡಿದವರನ್ನು ಹೊರಗೆ ಹಾಕಿ

''ನಾನು ಮುಟ್ಟಿಲ್ಲ. ಆದರೂ ಆಕೆ ಹೊಡೆದಿದ್ದಾಳೆ. ನನ್ನ ತಪ್ಪು ಇದ್ದರೆ ನಾನು ಹೊರಗೆ ಹೋಗುತ್ತೇನೆ. ಅವರ ತಪ್ಪು ಇದ್ದರೆ ಅವರನ್ನ ಹೊರಗೆ ಹಾಕಿ'' ಎಂದು ಪಟ್ಟು ಹಿಡಿದರು ಸಮೀರಾಚಾರ್ಯ.

ಕಾರಣ ಕೊಟ್ಟ ಸಂಯುಕ್ತ

''ಈ ಹಿಂದೆ ಕೂಡ ನಾನು ಕಿರುಕುಳ ಅನುಭವಿಸಿದ್ದೇನೆ. ನನಗೆ ಯಾರೇ ಮುಟ್ಟಿದರೂ ಆಗಲ್ಲ. ನನಗೆ ಅವರು ಮುಟ್ಟಿದರು, ಹೀಗಾಗಿ ನಾನು ಹೊಡೆದೆ'' ಎಂದು ಅಳಲು ಆರಂಭಿಸಿದರು ಸಂಯುಕ್ತ.

ದಿವಾಕರ್ ಮಾಡಿದ ಕಾಮೆಂಟ್ ಏನು.?

''ಎಲ್ಲೆಲ್ಲೋ ಮುಟ್ಟಿದರು ಅಂತ ಇವತ್ತು ಅವರ ಮೇಲೆ ಹೇಳುತ್ತಾರೆ, ನಾಳೆ ಇನ್ನೊಬ್ಬರ ಮೇಲೆ ಹೇಳುತ್ತಾರೆ. ಸುಮ್ ಸುಮ್ನೆ ಯಾಕೆ ಬೇಕು.?'' ಅಂತ ದಿವಾಕರ್ ಹೇಳಿದ ಮಾತು ಸಂಯುಕ್ತಗೆ ಬೇಸರ ಆಯ್ತು. ''ನಾನು ಸುಳ್ಳು ಹೇಳಬೇಕಾಗಿಲ್ಲ'' ಅಂತ ಗೊಳೋ ಎಂದು ಅತ್ತರು ಸಂಯುಕ್ತ.

ಕನ್ಫೆಶನ್ ರೂಮ್ ಒಳಗೆ ಸಂಯುಕ್ತ ಹೇಳಿದ್ದೇನು.?

ಇಡೀ ಘಟನೆಯ ಸಂಪೂರ್ಣ ವಿವರವನ್ನ ತಿಳಿಯಲು ಇಚ್ಛಿಸಿದ 'ಬಿಗ್ ಬಾಸ್', ಸಂಯುಕ್ತರನ್ನ ಕನ್ಫೆಶನ್ ರೂಮ್ ಒಳಗೆ ಕರೆದರು. ಆಗ ಸಂಯುಕ್ತ ಹೇಳಿದಿಷ್ಟು - ''ಚಂದನ್ ಹತ್ತಿರ ಕತ್ತರಿ ಇತ್ತು. ಕಟ್ ಮಾಡಲು ಬಿಡದೆ ಅವರನ್ನ ಲಾಕ್ ಮಾಡಿಕೊಂಡಿದ್ದೆ. ಚಂದನ್ ಬಿದ್ದು ಹೋದಾಗ, ಆಗ ಅವರ ಮೇಲೆ ನಾನು ಕೂತುಕೊಂಡೆ. ಚಂದನ್ ಜೇಬಿನಲ್ಲಿ ಕತ್ತರಿ ಇತ್ತು. ಕತ್ತರಿ ತೆಗೆದುಕೊಳ್ಳಲು ಶ್ರುತಿಗೆ ಹೇಳಿದೆ. ಶ್ರುತಿ ಜೊತೆಗೆ ಜೆಕೆ ಹಾಗೂ ಸಮೀರಾಚಾರ್ಯ ಕೂಡ ಬಂದರು. ಜೆಕೆ ಕತ್ತರಿ ಬಿಡಿಸಿಕೊಂಡರು. ಸಮೀರಾಚಾರ್ಯ ಕಚಗುಳಿ ಕೊಟ್ಟರು ಅಂತ ಕಾಣುತ್ತೆ. ಆದ್ರೆ, ನನಗೆ ಟಚ್ ಆಗಿತ್ತು. ನಿಜ ಹೇಳಬೇಕು ಅಂದ್ರೆ ಅವರ ಉದ್ದೇಶ ತಪ್ಪಾಗಿ ಇರಲಿಲ್ಲ. ನನ್ನನ್ನ ಎಬ್ಬಿಸಬೇಕು ಅಂತ ಹಾಗೆ ಮಾಡಿದ್ದಾರೆ. ಆದ್ರೆ, ನನ್ನ ತಲೆಯಲ್ಲಿ ಹಳೆಯ ಕೆಟ್ಟ ಘಟನೆ ಇದ್ದ ಕಾರಣ ಅವರಿಗೆ ನಾನು ಹೊಡೆದೆ. ಭಾವಾವೇಶದಿಂದ ಹಾಗೆ ನಡೆಯಿತು. ಅದರ ಬಗ್ಗೆ ಕ್ಷಮೆ ಇರಲಿ. ದಿವಾಕರ್ ಕೊಟ್ಟ ಹೇಳಿಕೆ ತುಂಬಾ ಡ್ಯಾಮೇಜಿಂಗ್ ಆಗಿ ಇತ್ತು. ಅದು ನನಗೆ ಬಹಳ ಬೇಜಾರು ಆಯ್ತು''

ಕನ್ಫೆಶನ್ ರೂಮ್ ಒಳಗೆ ಸಮೀರಾಚಾರ್ಯ ಹೇಳಿದ್ದೇನು.?

ಸಂಯುಕ್ತ ಬಳಿಕ ಸಮೀರಾಚಾರ್ಯ ಅವರನ್ನ ಕನ್ಫೆಶನ್ ರೂಮ್ ಒಳಗೆ ಕರೆದರು 'ಬಿಗ್ ಬಾಸ್'. ಆಗ, ''ಚಂದನ್ ಮೇಲೆ ಸಂಯುಕ್ತ ಕೂತಿದ್ದರು. ಚಂದನ್ ಜೇಬಲ್ಲಿ ಕತ್ತರಿ ಇತ್ತು. ಸಂಯುಕ್ತ ರನ್ನ ಬಿಡಿಸಿ ಬಿಡಿಸಿ ಅಂತ ಚಂದನ್ ಹೇಳುತ್ತಿದ್ದರು. ನಾನು ಬಿಡಿಸಲು ಹೋದೆ. ಅಷ್ಟೊತ್ತಿಗೆ ನನ್ನ ಮುಟ್ಟಬೇಡಿ ಅಂತಿದ್ರು. ನಾನು ಕೈ ಕಟ್ಟಿಕೊಂಡು ನಿಂತೆ. ಆಗ ನನಗೆ ಹೊಡೆದರು. ಅವರಿಗೆ ನಾನು ಏನೂ ಮಾಡಿಲ್ಲ. ಅಕಸ್ಮಾತ್ ನನ್ನ ಕಡೆಯಿಂದ ತಪ್ಪಾಗಿದ್ದರೆ, ನನ್ನನ್ನ ಹೊರಗೆ ಕಳುಹಿಸಿ. ಅವರ ಕಡೆಯಿಂದ ತಪ್ಪಾಗಿದ್ದರೆ, ನೀವು ಏನು ನಿರ್ಣಯ ತೆಗೆದುಕೊಳ್ಳುತ್ತೀರೋ, ನಿಮಗೆ ಬಿಟ್ಟಿದ್ದು'' ಎಂದರು ಸಮೀರಾಚಾರ್ಯ.

ಕ್ಷಮೆ ಕೇಳಿದ ಸಂಯುಕ್ತ

ಈ ಘಟನೆ ಇಬ್ಬರ ಜೀವನಕ್ಕೆ ಸಂಬಂಧಿಸಿದ ಗಂಭೀರ ವಿಷಯ ಆಗಿದ್ರಿಂದ, ಪರಸ್ಪರ ಒಬ್ಬರಿಗೆ ಮತ್ತೊಬ್ಬರು ಏನಾದರೂ ಹೇಳಲು ಇಚ್ಛಿಸುತ್ತೀರಾ ಎಂದು 'ಬಿಗ್ ಬಾಸ್' ಕೇಳಿದರು. ಆಗ ಸಮೀರಾಚಾರ್ಯ ಬಳಿ ಸಂಯುಕ್ತ ಕ್ಷಮೆ ಕೇಳಿದರು. ''ನಿಮ್ಮ ಉದ್ದೇಶ ಕೆಟ್ಟದಾಗಿ ಇರಲಿಲ್ಲ. ನನ್ನ ಹಳೆಯ ಘಟನೆಯಿಂದಾಗಿ ನಾನು ಹಾಗೆ ಪ್ರತಿಕ್ರಿಯೆ ನೀಡಿದೆ. ಇದು ನಿಮ್ಮ ತಪ್ಪು ಅಲ್ಲ. ನನ್ನನ್ನ ಕ್ಷಮಿಸಿ'' ಎಂದರು ಸಂಯುಕ್ತ

ಕಠಿಣ ಸಿಟ್ಟು

''ನಿಮ್ಮ ಸಿಟ್ಟು ಬಹಳ ಕಠಿಣ. ನಿಮ್ಮ ವೃತ್ತಿ ಜೀವನಕ್ಕೂ ಅದು ಕೆಟ್ಟದು. ನಿಂತವನಿಗೆ ಬಂದು ಹೊಡೆದ್ರಿ. ನಿಮ್ಮ ಸಿಟ್ಟು ನಿಮಗೆ ಮೈನಸ್'' ಎಂದಷ್ಟೇ ಸಮೀರಾಚಾರ್ಯ ಹೇಳಿದರು.

ಸಂಯುಕ್ತ ರನ್ನ ಹೊರಗೆ ಕಳುಹಿಸಿದ 'ಬಿಗ್ ಬಾಸ್'

''ಸಂಯುಕ್ತ ಸ್ಪರ್ಧಿ ಆಗಿ ಬರದೆ, ವಿಶೇಷ ಅತಿಥಿಯಾಗಿ ಬಂದಿದ್ದರು'' ಎಂದು ಬಿಗ್ ಬಾಸ್ ಘೋಷಿಸಿದರು. ಬಿಗ್ ಬಾಸ್ ಮನೆಯ ಮೂಲ ನಿಯಮಗಳ ಅನುಸಾರ, ಮನೆಯಲ್ಲಿ ಯಾವುದೇ ಕಾರಣಕ್ಕೂ, ಯಾವುದೇ ಸದಸ್ಯರು ದೈಹಿಕ ಹಲ್ಲೆ ಮಾಡುವಂತಿಲ್ಲ. ಆದ್ರೆ, ಸಂಯುಕ್ತ ಭಾವಾವೇಶಕ್ಕೆ ಒಳಗಾಗಿ ಸಮೀರಾಚಾರ್ಯ ಮೇಲೆ ಕೈ ಮಾಡಿದ್ರಿಂದಾಗಿ, 'ಬಿಗ್ ಬಾಸ್' ಆಕೆಯನ್ನ ಹೊರಹಾಕಿದರು.

ತುಂಬಾ ಕೆಟ್ಟ ನಿರ್ಗಮನ

''ಸೋ ಬ್ಯಾಡ್. ಇದು ನನಗೆ ತುಂಬಾ ಕೆಟ್ಟದ್ದು. ನಾನು ಇಲ್ಲಿ ಎಷ್ಟು ಕಳೆದುಕೊಂಡು ಹೋಗುತ್ತಿದ್ದೇನೆ ಗೊತ್ತಾ.?'' ಎನ್ನುತ್ತಲೇ ಹೊರ ಹೋಗಲು ಸಂಯುಕ್ತ ಸಿದ್ದವಾದರು.

ಔಟ್ ಆಗುವ ಮುನ್ನ ಸಂಯುಕ್ತ ಹೇಳಿದ್ದೇನು.?

''ನನ್ನ ಕಡೆಯಿಂದ ಯಾರಿಗೇ ಬೇಸರ ಆಗಿದ್ದರೂ ಕ್ಷಮೆ ಇರಲಿ'' ಎಂದು ಕಣ್ಣೀರಿಡುತ್ತ ಹೊರಟ ಸಂಯುಕ್ತ ಬಳಿ ''ಇನ್ಮೇಲೆ ಯಾರ ಮೇಲೂ ಸಿಟ್ಟಾಗಲ್ಲ ಅಂತ ಪ್ರಾಮಿಸ್ ಮಾಡಿ'' ಎಂದು ಸಮೀರಾಚಾರ್ಯ ಕೇಳಿಕೊಂಡರು. ಆಗ, ''ನನ್ನ ಕೋಪಕ್ಕೆ ಒಂದು ಕಾರಣ ಇತ್ತು, ಅದಕ್ಕೆ ಹಾಗೆ ಆಗಿದ್ದು. ಇದು ನಿಮಗೆ ಅರ್ಥ ಆಗಲ್ಲ. ಪರ್ವಾಗಿಲ್ಲ'' ಎಂದು ಹೊರ ನಡೆದರು ಸಂಯುಕ್ತ.

ನಿಮ್ಮ ಪ್ರತಿಕ್ರಿಯೆ ಏನು.?

ಈ ಇಡೀ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತ ನಮಗೆ ತಿಳಿಸಿ.. ನಿಮ್ಮ 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ...

English summary
Bigg Boss Kannada 5: Week 10: Samyuktha Hegde kicked out from Bigg Boss after hitting Sameer Acharya. Here is the complete report.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X