»   » ಈ ಮೂವರ ಮುಖ ನೋಡಲು ಆಗ್ತಿಲ್ಲ ಎಂದ ಜಯಶ್ರೀನಿವಾಸನ್

ಈ ಮೂವರ ಮುಖ ನೋಡಲು ಆಗ್ತಿಲ್ಲ ಎಂದ ಜಯಶ್ರೀನಿವಾಸನ್

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಾಗ ದಿವಾಕರ್, ಸಮೀರಾಚಾರ್ಯ ಹಾಗೂ ಚಂದನ್ ಶೆಟ್ಟಿ ಜೊತೆಗೆ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಹೆಚ್ಚು ಕಾಲ ಕಳೆಯುತ್ತಿದ್ದರು. ಸದಾ ಕಾಲ ಒಟ್ಟೊಟ್ಟಿಗೆ ಇರುತ್ತಿದ್ದ ಈ ಮೂವರ ಮಧ್ಯೆ ಈಗ ಮನಸ್ತಾಪ ಮೂಡಿದೆ, ಭಿನ್ನಾಭಿಪ್ರಾಯ ಭುಗಿಲೆದ್ದಿದೆ.

ದಿವಾಕರ್, ಸಮೀರಾಚಾರ್ಯ ಹಾಗೂ ಚಂದನ್ ಶೆಟ್ಟಿ ಕಂಡ್ರೆ ಜಯಶ್ರೀನಿವಾಸನ್ ಗೆ ಆಗ್ಬರುತ್ತಿಲ್ಲ. ಈ ಮೂವರ ಮುಖವನ್ನ ನೋಡಬಾರದು ಅಂತ ಜಯಶ್ರೀನಿವಾಸನ್ ನಿರ್ಧಾರ ಮಾಡಿದ್ದಾರೆ.

ದಿವಾಕರ್, ಸಮೀರಾಚಾರ್ಯ ಹಾಗೂ ಚಂದನ್ ಶೆಟ್ಟಿ ರನ್ನ ನೋಡಲಾರದೆ, 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗಬೇಕು ಎಂದೆನಿಸಿದೆ ಜಯಶ್ರೀನಿವಾಸನ್ ಅವರಿಗೆ. ಇದನ್ನೇ ಸುದೀಪ್ ಮುಂದೆ ಹೇಳಿಕೊಂಡರು ಜಯಶ್ರೀನಿವಾಸನ್.

Jayasreenivasan

ನಂಬರ್ ಗೇಮ್: ಇದು ಮನುಷ್ಯನಿಗೆ ಕೊಡುವ ಮರ್ಯಾದೆನಾ.?

''ದಿವಾಕರ್ ನನ್ನ ಬಗ್ಗೆ ''420'' ಅಂತೆಲ್ಲ ಹೇಳಿದ್ದರು. ಅದನ್ನ ದೇವ್ರಾಣೆ ನನ್ನ ಕೈಯಲ್ಲಿ ಅರಗಿಸಿಕೊಳ್ಳಲು ಆಗುತ್ತಿಲ್ಲ. ಮನಸ್ಸಿನಲ್ಲಿಯೇ ಕೊರಗುತ್ತಿದ್ದೇನೆ. ''ನನಗೆ ಹೊಟ್ಟೆಕಿಚ್ಚು ಇದೆ, ತುಳಿದು ಮೇಲೆ ಬಂದಿದ್ದೇನೆ'' ಅಂತ ಸಮೀರಾಚಾರ್ಯ ಹೇಳಿದ್ದಾರೆ. ಈ ಮುಖಗಳನ್ನ ನಾನು ನೋಡಬಾರದು''

''ನಾನು ಕೂಡ ತಪ್ಪು ಮಾಡಿದ್ದೇನೆ. ಅದಕ್ಕೆ ಕ್ಷಮೆ ಕೂಡ ಕೇಳುತ್ತೇನೆ. ಆದ್ರೆ, ಈ ಎರಡು ಮಾತುಗಳನ್ನ ಅರಗಿಸಿಕೊಳ್ಳಲು ನನಗೆ ಸಾಧ್ಯ ಆಗುತ್ತಿಲ್ಲ. ಇಲ್ಲಿ ಊಟ ಸಿಗದ ಕಾರಣ ನನ್ನ ತೂಕ ಇಳಿಯುತ್ತಿಲ್ಲ. ಇವರ ಮಾತುಗಳ ಕೊರಗಿನಿಂದ ನಾನು ನನ್ನ ತೂಕ ಕಳೆದುಕೊಳ್ಳುತ್ತಿದ್ದೇನೆ''

'ಬಿಗ್ ಬಾಸ್' ಮನೆಯೊಳಗೆ ಜಯಶ್ರೀನಿವಾಸನ್ ಗೆ ಜ್ಞಾನೋದಯ ಆಗಿದೆ.!

''ನಾನು ಹಾಡುತ್ತಿದ್ದರೆ, 'ಓಡಿಸ್ರೋ ಅವರನ್ನ' ಅಂತ ಚಂದನ್ ಶೆಟ್ಟಿ ಹೇಳ್ತಾರೆ. ಈ ಜನರನ್ನ ಫೇಸ್ ಮಾಡಲು ನನಗೆ ಆಗುತ್ತಿಲ್ಲ. ಹೀಗಾಗಿ ನಾನು ಔಟ್ ಆಗಬೇಕು ಎನಿಸುತ್ತಿದೆ'' ಎಂದು ಸುದೀಪ್ ಮುಂದೆ ಜಯಶ್ರೀನಿವಾಸನ್ ಹೇಳಿಕೊಂಡರು.

ಆದ್ರೆ, ಜಯಶ್ರೀನಿವಾಸನ್ ಅವರಿಗೆ ವೀಕ್ಷಕರ ಬೆಂಬಲ ಇರುವ ಕಾರಣ ಅವರು ಕಳೆದ ವಾರ ಸೇಫ್ ಆದರು.

'ಬಿಗ್ ಬಾಸ್' ಮನೆಯೊಳಗೆ ಯಾರು ಯಾವಾಗ ಸ್ನೇಹಿತರಾಗುತ್ತಾರೋ, ಶತ್ರುಗಳಾಗುತ್ತಾರೋ ಅಂತ ಹೇಳುವುದು ಕಷ್ಟ. ಇಂದು ಸಮೀರಾಚಾರ್ಯ, ಚಂದನ್ ಶೆಟ್ಟಿ ಹಾಗೂ ದಿವಾಕರ್ ರನ್ನ ದ್ವೇಷಿಸುತ್ತಿರುವ ಜಯಶ್ರೀನಿವಾಸನ್ ನಾಳೆ ಸ್ನೇಹಕ್ಕೆ ಸೈ ಎಂದರೆ ಅಚ್ಚರಿ ಪಡಬೇಕಿಲ್ಲ.

English summary
Bigg Boss Kannada 5: Week 10: Jayasreenivasan wants to quit the show

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X