»   » 'ಕಿರಿಕ್' ಸಂಯುಕ್ತ ಮುಖಕ್ಕೆ ಮಹಾ ಮಂಗಳಾರತಿ ಮಾಡಿದ ನೆಟ್ಟಿಗರು.!

'ಕಿರಿಕ್' ಸಂಯುಕ್ತ ಮುಖಕ್ಕೆ ಮಹಾ ಮಂಗಳಾರತಿ ಮಾಡಿದ ನೆಟ್ಟಿಗರು.!

Posted By:
Subscribe to Filmibeat Kannada
ಕಿರಿಕ್ ರಾಣಿ ಸಂಯುಕ್ತ ಹೆಗ್ಡೆ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ | Filmibeat Kannada

ತಮಿಳು ಸಿನಿಮಾ ಆಸೆಗಾಗಿ ನಟಿ ಸಂಯುಕ್ತ ಕನ್ನಡ ಸಿನಿಮಾಗೆ ಕೈ ಎತ್ತಿದಾಗ, ಆಕೆಯ ವಿರುದ್ಧ ಯದ್ವಾತದ್ವಾ ಟ್ರೋಲ್ ಗಳು ಶುರು ಆಯ್ತು. ಅಪ್ಪಟ ಕನ್ನಡಿಗರು ಸಂಯುಕ್ತ ಮೇಲೆ ಕೋಪಿಸಿಕೊಂಡರು. ಇಷ್ಟೆಲ್ಲ ಆದರೂ ಆಗೊಂದು ಈಗೊಂದು ಸಿನಿಮಾ ಮಾಡಿಕೊಂಡಿದ್ದ ಸಂಯುಕ್ತ ವೃತ್ತಿ ಬದುಕಿಗೆ 'ಬಿಗ್ ಬಾಸ್' ಕಾರ್ಯಕ್ರಮದಲ್ಲಾದ ರಾದ್ಧಾಂತ ಒಂದು ಕಪ್ಪು ಚುಕ್ಕೆ ಅಂದರೂ ತಪ್ಪಾಗಲ್ಲ.

ವಿಶೇಷ ಅತಿಥಿಯಾಗಿ 'ಬಿಗ್ ಬಾಸ್' ಮನೆಯೊಳಗೆ ಹೋಗಿದ್ದ ಸಂಯುಕ್ತ, ಅಷ್ಟೇ ಗೌರವದಿಂದ ಹೊರಗೆ ಬರುವ ಬದಲು.. ಸಮೀರಾಚಾರ್ಯ ಮೇಲೆ ಕೈ ಮಾಡಿ 'ಬಿಗ್ ಬಾಸ್' ಮನೆಯಿಂದ 'ಕಿಕ್ ಔಟ್' ಆಗಿದ್ದಾರೆ.

ರಿಯಾಲಿಟಿ ಶೋನಲ್ಲಿ ಸಂಯುಕ್ತ ರವರ ಈ ನಡವಳಿಕೆ ವೀಕ್ಷಕರಿಗೆ ಬೇಸರ ತಂದಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ವೀಕ್ಷಕರು ಸಂಯುಕ್ತ ಮುಖಕ್ಕೆ ಮಂಗಳಾರತಿ ಮಾಡುತ್ತಿದ್ದಾರೆ. ಮುಂದೆ ಓದಿರಿ...

ಗೌರವ ಕಳೆದುಕೊಂಡ ಸಂಯುಕ್ತ

''ಸಂಯುಕ್ತ ಹೆಗ್ಡೆ ನಿಜವಾಗಲೂ 'ಕಿರಿಕ್' ಪಾರ್ಟಿ. ಟಿ.ಆರ್.ಪಿಗಾಗಿ ಈ ತರಹ ವರ್ತನೆ ತೋರಿ ಗೌರವ ಕಳೆದುಕೊಂಡಿದ್ದಾರೆ'' ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಯಾವುದೇ ಶಿಕ್ಷೆ ನೀಡಲಿಲ್ಲ ಯಾಕೆ.?

ಸಂಯುಕ್ತ ವಿರುದ್ಧ ನೆಟ್ಟಿಗರು ಸಿಕ್ಕಾಪಟ್ಟೆ ಆಕ್ರೋಶಗೊಂಡಿದ್ದಾರೆ. ಅದಕ್ಕೆ ಸಾಕ್ಷಿ ಈ ಕಾಮೆಂಟ್.

'ಸರಿಯಾಗಿ ವಾಂಚುತ್ತೇನೆ' ಎಂದು ಮೊದಲೇ ವಾರ್ನಿಂಗ್ ಕೊಟ್ಟಿದ್ದ ಸಂಯುಕ್ತ.!

ಸಮೀರಾಚಾರ್ಯ ಕುಟುಂಬಕ್ಕೆ ಕ್ಷಮೆ ಕೇಳಿ...

''ನಟಿ ಆದ್ಮೇಲೆ ಗೌರವದಿಂದ ನಡೆದುಕೊಳ್ಳಬೇಕು. ಯೋಚಿಸುವ ತಾಳ್ಮೆ ಕೂಡ ಇಲ್ಲ ಅಂದ್ರೆ ಹೇಗೆ.? ಸಮೀರಾಚಾರ್ಯ ಕುಟುಂಬಕ್ಕೆ ಸಂಯುಕ್ತ ಕ್ಷಮೆ ಕೇಳಬೇಕು'' ಎಂಬುದು ವೀಕ್ಷಕರೊಬ್ಬರ ಅಭಿಪ್ರಾಯ.

ಸಮೀರಾಚಾರ್ಯ ಮೇಲೆ ಸಂಯುಕ್ತಾ ಹಲ್ಲೆ: ಪತ್ನಿ ಶ್ರಾವಣಿ ಆಕ್ರೋಶ

ನಾಚಿಕೆ ಆಗಬೇಕು

''ಇಷ್ಟೆಲ್ಲ ಕಾಮೆಂಟ್ ಗಳನ್ನ ನೋಡಿದ್ಮೇಲೆ, ನಿಮಗೆ ನಾಚಿಕೆ ಆಗಬೇಕು. ಉತ್ತಮ ಅವಕಾಶವನ್ನ ನೀವು ಕಳೆದುಕೊಂಡು ಬಿಟ್ರಿ'' ಎಂದು ಸಂಯುಕ್ತಗೆ ಮಂಗಳಾರತಿ ಮಾಡುತ್ತಿದ್ದಾರೆ ನೆಟ್ಟಿಗರು.

'ಕಿರಿಕ್' ಸಂಯುಕ್ತಾಗೆ ಕ್ಲಾಸ್ ತಗೊಂಡ ಪ್ರಥಮ್ ಮತ್ತು ಕೀರ್ತಿ!

ಫೂಲ್ ಮಾಡಬೇಡಿ

''ಸಮೀರಾಚಾರ್ಯ ಅವರು ಒಳ್ಳೆಯ ಹೆಂಡತಿ ಪಡೆದಿದ್ದಾರೆ. ನಿಮ್ಮನ್ನ ಇಡೀ ಕರ್ನಾಟಕ ನೋಡುತ್ತಿದೆ. ಫೂಲ್ ಮಾಡಲು ಪ್ರಯತ್ನ ಪಡಬೇಡಿ'' ಎಂದು ಸಂಯುಕ್ತಗೆ ಬೆಂಡೆತ್ತಿದ್ದಾರೆ ವೀಕ್ಷಕರು.

'ಬಿಗ್ ಬಾಸ್' ಮನೆಯಿಂದ ಸಂಯುಕ್ತ ಹೆಗ್ಡೆ 'ಕಿಕ್' ಔಟ್ ಆಗಿದ್ಯಾಕೆ.?

ಯಾರೂ ಸಮೀರ್ ಗೆ ಸಮಾಧಾನ ಹೇಳಲಿಲ್ಲ

''ಬಿಗ್ ಬಾಸ್' ಮನೆಯೊಳಗೆ ರಾದ್ಧಾಂತ ಆದ್ಮೇಲೆ ಎಲ್ಲರೂ ಸಂಯುಕ್ತ ರನ್ನ ಸಮಾಧಾನ ಮಾಡುತ್ತಿದ್ದರೆ ಹೊರತು ಸಮೀರಾಚಾರ್ಯ ರವರಿಗೆ ಏನೂ ಹೇಳಲಿಲ್ಲ. ತುಂಬಾ ತಾಳ್ಮೆಯಿಂದ ನಡೆದುಕೊಂಡ ಸಮೀರಾಚಾರ್ಯ ಗೆ ಶಹಬ್ಬಾಸ್'' ಎಂದಿದ್ದಾರೆ ವೀಕ್ಷಕರು

''ನಟಿ ಸಂಯುಕ್ತ ಸ್ತ್ರೀ ಕುಲಕ್ಕೆ ಕಳಂಕ'' ಎಂದ ನಟ ಜಗ್ಗೇಶ್

ಇದು ವೀಕ್ಷಕರ ಪ್ರಶ್ನೆ

''ಚಂದನ್ ಶೆಟ್ಟಿ ಮೇಲೆ ಸಂಯುಕ್ತ ಕೂತಿದ್ದು ತಪ್ಪಲ್ಲ. ಆದ್ರೆ, ಸಮೀರಾಚಾರ್ಯ ಮುಟ್ಟಿದ್ದು ಮಾತ್ರ ತಪ್ಪು. ಮಾನ ಮರ್ಯಾದೆ ಇರೋರು ಈ ತರಹ ನಡೆದುಕೊಳ್ಳಬಹುದಾ.?'' ಎಂಬುದು ವೀಕ್ಷಕರ ಪ್ರಶ್ನೆ

ಇಬ್ಬರ ಜೊತೆ ಕಿತ್ತಾಡಿ ಮೂರನೇಯವರಿಗೆ ಹೊಡೆದ 'ಕಿರಿಕ್' ಸಂಯುಕ್ತ.!

ಲೇವಡಿ ಮಾಡುತ್ತಿದ್ದಾರೆ ವೀಕ್ಷಕರು

''ಸಂಯುಕ್ತ ಹೆಗ್ಡೆ ಹುಚ್ಚ ವೆಂಕಟ್ ತಂಗಿ'' ಎಂದು ಲೇವಡಿ ಮಾಡುತ್ತಿದ್ದಾರೆ ವೀಕ್ಷಕರು


ಅಣ್ಣ ತಂಗಿಯರ ಈ ಬಂಧ... ಜನುಮ ಜನುಮಗಳ ಅನುಬಂಧ...

ದೊಡ್ಡ ತಪ್ಪು

''ಹುಚ್ಚ ವೆಂಕಟ್, ಸಂಯುಕ್ತ ರನ್ನ ಒಳಗೆ ಕಳುಹಿಸಿದ್ದೇ ದೊಡ್ಡ ತಪ್ಪು'' ಅಂತಿದ್ದಾರೆ ವೀಕ್ಷಕರು.

ಸುದೀಪ್ ಮುಂದೆ ಸಂಯುಕ್ತ ಏನು ಹೇಳಿದ್ರೋ, ಅದನ್ನೇ ಮಾಡಿ ತೋರಿಸಿದ್ರು.!

ಹುಚ್ಚ ವೆಂಕಟ್ ಅನಾಥ ಅಲ್ಲ

''ದೈಹಿಕ ಹಲ್ಲೆ ಮಾಡಿ ಹೊರಬಂದ ಹುಚ್ಚ ವೆಂಕಟ್ ಅನಾಥ ಅಲ್ಲ, ಹುಚ್ಚ ವೆಂಕಟ್ ಗೆ ಸಹೋದರಿ ಸಿಕ್ಕಿದ್ದಾಳೆ. ಆಕೆಯೇ ಸಂಯುಕ್ತ'' ಎಂಬ ಟ್ರೋಲ್ ಗಳೇ ಹೆಚ್ಚಾಗಿವೆ.

English summary
Bigg Boss Kannada 5: Week 10: Samyuktha Hegde kicked out from Bigg Boss after hitting Sameer Acharya. Viewers are annoyed with Samyuktha's behaviour in Bigg Boss.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X