»   » ಸೀಕ್ರೆಟ್ ರೂಮ್ ಒಳಗೆ ಹೋದ ಜಯಶ್ರೀನಿವಾಸನ್: ಏನು ಪ್ರಯೋಜನ.?

ಸೀಕ್ರೆಟ್ ರೂಮ್ ಒಳಗೆ ಹೋದ ಜಯಶ್ರೀನಿವಾಸನ್: ಏನು ಪ್ರಯೋಜನ.?

Posted By:
Subscribe to Filmibeat Kannada
ಸೀಕ್ರೆಟ್ ರೂಮ್ ಗೆ ಹೋದ ಜೈ ಶ್ರೀನಿನಿವಾಸನ್ | ಮುಂದೇನು? | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆಗಿ ಹತ್ತು ವಾರಗಳು ಕಳೆದಿವೆ. ಇಷ್ಟು ದಿನಗಳು ಉರುಳಿದ್ದರೂ, ಇಲ್ಲಿಯವರೆಗೂ 'ಸೀಕ್ರೆಟ್ ರೂಮ್' ಬಾಗಿಲನ್ನ ಯಾವೊಬ್ಬ ಸ್ಪರ್ಧಿಗೂ 'ಬಿಗ್ ಬಾಸ್' ತೆಗೆದಿರಲಿಲ್ಲ.

ಎಲಿಮಿನೇಟ್ ಆದ ಯಾರಿಗೂ 'ಸೀಕ್ರೆಟ್ ರೂಮ್' ಒಳಗೆ ಹೋಗುವ ಅವಕಾಶವನ್ನ 'ಬಿಗ್ ಬಾಸ್' ನೀಡಿರಲಿಲ್ಲ. ಆದ್ರೆ ಇದೀಗ ದಿಢೀರ್ ಅಂತ 'ಬಿಗ್ ಬಾಸ್' ಮನೆಯ ಸೀಕ್ರೆಟ್ ರೂಮ್ ಬಾಗಿಲು ಓಪನ್ ಆಗಿದೆ. ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಅವರು ಸೀಕ್ರೆಟ್ ರೂಮ್ ಒಳಗೆ ಪದಾರ್ಪಣೆ ಮಾಡಿದ್ದಾರೆ.

ಇದ್ದಕ್ಕಿದ್ದಂತೆ 'ಬಿಗ್ ಬಾಸ್' ಮನೆಯಿಂದ ಹೊರಬಂದ ಜಯಶ್ರೀನಿವಾಸನ್ ನೇರವಾಗಿ ಸೀಕ್ರೆಟ್ ರೂಮ್ ಗೆ ತೆರಳಿದ್ದಾರೆ. ಮನೆಯಲ್ಲಿ ಏನೆಲ್ಲ ನಡೆಯುತ್ತಿದೆ ಅಂತ ಸೀಕ್ರೆಟ್ ರೂಮ್ ಒಳಗೆ ಕೂತು ಎಲ್ಲವನ್ನೂ ವೀಕ್ಷಿಸುತ್ತಿದ್ದಾರೆ. ಮುಂದೆ ಓದಿರಿ...

ಎಲ್ಲದರಲ್ಲೂ ನಂಬರ್ ಒನ್

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಎಂಟ್ರಿಕೊಟ್ಟ ಮೊದಲ ಸ್ಪರ್ಧಿ ಜಯಶ್ರೀನಿವಾಸನ್. 'ಬಿಗ್ ಬಾಸ್' ಮನೆಯೊಳಗೆ ಜಯಶ್ರೀನಿವಾಸನ್ ಗೃಹಪ್ರವೇಶ ಮಾಡಿದ್ಮೇಲೆ, ಅವರು ನೇರವಾಗಿ ತೆರಳಿದ್ದು ಕನ್ಫೆಶನ್ ರೂಮ್ ಒಳಗೆ. ಸತತವಾಗಿ 11-12 ಗಂಟೆಗಳ ಕಾಲ ಕನ್ಫೆಶನ್ ರೂಮ್ ಒಳಗೆ ಕೂತು ಮಿಕ್ಕ ಎಲ್ಲ ಸ್ಪರ್ಧಿಗಳ ಎಂಟ್ರಿಯನ್ನ ಅಲ್ಲಿಂದಲೇ ವೀಕ್ಷಿಸುತ್ತಿದ್ದರು ಜಯಶ್ರೀನಿವಾಸನ್.

ಸ್ಯಾಂಡಲ್ ವುಡ್ ಗೆ ಹೊಸ ವಿಲನ್ ಎಂಟ್ರಿ: ಯಾರದು ಗೊತ್ತೇ.?

ಸೀಕ್ರೆಟ್ ರೂಮ್ ಒಳಗೆ ಹೋದ ಮೊದಲಿಗ

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸೀಕ್ರೆಟ್ ರೂಮ್ ಒಳಗೆ ಹೋದ ಮೊದಲ ಸ್ಪರ್ಧಿಯೂ ಜಯಶ್ರೀನಿವಾಸನ್.

ಈ ಮೂವರ ಮುಖ ನೋಡಲು ಆಗ್ತಿಲ್ಲ ಎಂದ ಜಯಶ್ರೀನಿವಾಸನ್

ದಿಢೀರ್ ಟ್ವಿಸ್ಟ್

ಈ ಬಾರಿ 'ಬಿಗ್ ಬಾಸ್' ಸ್ಪರ್ಧಿಗಳ ಆಟದ ವೈಖರಿ ನೋಡಿದ್ಮೇಲೆ, ಸೀಕ್ರೆಟ್ ರೂಮ್ ಇರಲ್ಲ ಅಂತ ವೀಕ್ಷಕರು ಅಂದಾಜಿಸಿದ್ದರು. ಆದ್ರೆ, ದಿಢೀರ್ ಅಂತ ಟ್ವಿಸ್ಟ್ ಕೊಟ್ಟ 'ಬಿಗ್ ಬಾಸ್' ನಿನ್ನೆ ಸೀಕ್ರೆಟ್ ರೂಮ್ ಬಾಗಿಲು ತೆಗೆದು, ಜಯಶ್ರೀನಿವಾಸನ್ ರನ್ನ ಒಳಗೆ ಬಿಟ್ಟಿದ್ದಾರೆ.

ನಂಬರ್ ಗೇಮ್: ಇದು ಮನುಷ್ಯನಿಗೆ ಕೊಡುವ ಮರ್ಯಾದೆನಾ.?

ಮಿಕ್ಕವರಿಗೆ ಕ್ಲಾರಿಟಿ ಇಲ್ಲ.!

ಜಯಶ್ರೀನಿವಾಸನ್ ರವರನ್ನ ಸೀಕ್ರೆಟ್ ರೂಮ್ ಒಳಗೆ ಕಳುಹಿಸುವ ಮುನ್ನ, ಚಂದನ್ ಶೆಟ್ಟಿ ರವರನ್ನ 'ಬಿಗ್ ಬಾಸ್' ಕನ್ಫೆಶನ್ ರೂಮ್ ಒಳಗೆ ಕರೆದರು. ಚಂದನ್ ಶೆಟ್ಟಿ ಬಳಿಕ ಜಯಶ್ರೀನಿವಾಸನ್ ಸರದಿ ಬಂತು. ಕನ್ಫೆಶನ್ ರೂಮ್ ಒಳಗೆ ಹೋದ ಜಯಶ್ರೀನಿವಾಸನ್, ಅಲ್ಲಿಂದ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಸೀಕ್ರೆಟ್ ರೂಮ್ ಕಡೆ ಹೆಜ್ಜೆ ಇಟ್ಟರು.

'ಬಿಗ್ ಬಾಸ್' ಮನೆಯೊಳಗೆ ಜಯಶ್ರೀನಿವಾಸನ್ ಗೆ ಜ್ಞಾನೋದಯ ಆಗಿದೆ.!

ಕೃಷಿ ಒಳಗೆ ಹೋದಾಗ ನಾಪತ್ತೆ

ಜಯಶ್ರೀನಿವಾಸನ್ ನಂತರ ಕನ್ಫೆಶನ್ ರೂಮ್ ಒಳಗೆ ಹೋಗುವ ಸರದಿ ಕೃಷಿ ತಾಪಂಡದ್ದಾಗಿತ್ತು. ಕನ್ಫೆಶನ್ ರೂಮ್ ಒಳಗೆ ಕೃಷಿ ಹೋದಾಗ, ಅಲ್ಲಿ ಜಯಶ್ರೀನಿವಾಸನ್ ಇರಲಿಲ್ಲ.

ಜಯಶ್ರೀನಿವಾಸನ್ ಅಂದುಕೊಂಡಂತೆ ಆಯ್ತು: ಹೊಸ ಸ್ಪರ್ಧಿ ಬಂದ್ರು.!

ಎಲ್ಲಿ ಹೋದರು.?

ಜಯಶ್ರೀನಿವಾಸನ್ ಎಲ್ಲಿಗೆ ಹೋದರು ಎಂಬ ಪ್ರಶ್ನೆ ಸದ್ಯ ಉಳಿದ ಸ್ಪರ್ಧಿಗಳಲ್ಲಿ ಕಾಡುತ್ತಿದೆ. ಸೀಕ್ರೆಟ್ ಟಾಸ್ಕ್ ಕೊಟ್ಟರಬೇಕು ಎಂಬುದು ಕೆಲವರ ಲೆಕ್ಕಾಚಾರ.

ಏನು ಪ್ರಯೋಜನ.!

ಇದ್ದಕ್ಕಿದ್ದಂತೆ ಜಯಶ್ರೀನಿವಾಸನ್ ಹೊರ ಹೋದ ಕಾರಣ, ಅವರ ಬಗ್ಗೆ ಯಾರೂ ಏನೂ ಮಾತನಾಡುತ್ತಿಲ್ಲ. ಮಿಕ್ಕ ಸ್ಪರ್ಧಿಗಳ ಗುಟ್ಟು, ಸೀಕ್ರೆಟ್ ರೂಮ್ ಒಳಗೆ ಜಯಶ್ರೀನಿವಾಸನ್ ಮುಂದೆ ರಟ್ಟಾಗುವ ಹಾಗೆ ಕಾಣುತ್ತಿಲ್ಲ. ಹಾಗ್ನೋಡಿದ್ರೆ, ಸೀಕ್ರೆಟ್ ರೂಮ್ ಒಳಗೆ ಬರುವ ಮುನ್ನ ಚಂದನ್ ಶೆಟ್ಟಿ, ದಿವಾಕರ್ ಹಾಗೂ ಸಮೀರಾಚಾರ್ಯ ಜೊತೆಗಿನ ಜಗಳಕ್ಕೆ ಜಯಶ್ರೀನಿವಾಸನ್ ಫುಲ್ ಸ್ಟಾಪ್ ಇಟ್ಟಿದ್ದರು. ಹೀಗಾಗಿ, ಜಯಶ್ರೀನಿವಾಸನ್ ಸೀಕ್ರೆಟ್ ರೂಮ್ ನಿಂದ ಹೊರಬಂದ ಮೇಲೆ ಮನೆಯಲ್ಲಿ ದೊಡ್ಡ ಕೋಲಾಹಲ ನಡೆಯುವ ಸಾಧ್ಯತೆ ಕಮ್ಮಿ.

English summary
Bigg Boss Kannada 5: Week 11: Jayasreenivasan is sent to Secret Room.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X