»   » ಇಂದು 'ಬಿಗ್ ಬಾಸ್' ಕಾರ್ಯಕ್ರಮದಿಂದ ಹೊರಬೀಳೋರು ಯಾರು.?

ಇಂದು 'ಬಿಗ್ ಬಾಸ್' ಕಾರ್ಯಕ್ರಮದಿಂದ ಹೊರಬೀಳೋರು ಯಾರು.?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಹನ್ನೊಂದನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಇಂದು ನಡೆಯಲಿದೆ. ವಾರದ ಇಡೀ ಕಥೆಯನ್ನ ಇಟ್ಟುಕೊಂಡು ಪಂಚಾಯತಿ ನಡೆಸಿದ ಬಳಿಕ ಒಬ್ಬರನ್ನ 'ಬಿಗ್ ಬಾಸ್' ಮನೆಯಿಂದ ಹೊರಗೆ ಕರೆಯಲಿದ್ದಾರೆ ಕಿಚ್ಚ ಸುದೀಪ್.

ಅಂದ್ಹಾಗೆ, ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿರುವವರು ಜಯಶ್ರೀನಿವಾಸನ್, ಸಮೀರಾಚಾರ್ಯ, ನಿವೇದಿತಾ ಗೌಡ, ದಿವಾಕರ್ ಹಾಗೂ ಕೃಷಿ ತಾಪಂಡ. ಈ ಐದು ಜನರ ಪೈಕಿ ಒಬ್ಬರಿಗೆ ಇಂದು ಗೇಟ್ ಪಾಸ್ ಸಿಗಲಿದೆ.

Bigg Boss Kannada 5: Week 11: who will get evicted today.?

ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆಯೊಳಗೆ ಇರುವವರ ಕಣ್ಣಿಗೆ ಸಮೀರಾಚಾರ್ಯ ಔಟ್ ಆಗಿದ್ದಾರೆ. ಹಾಗೂ ಜಯಶ್ರೀನಿವಾಸನ್ ನಾಪತ್ತೆ ಆಗಿದ್ದಾರೆ. ಆದ್ರೆ, ಇವರಿಬ್ಬರೂ ಇನ್ನೂ ಸೀಕ್ರೆಟ್ ರೂಮ್ ನಲ್ಲಿ ಇರುವ ಮೂಲಕ ಆಟದಲ್ಲಿ ಸಕ್ರಿಯವಾಗಿದ್ದಾರೆ.

ಈ ಐವರಲ್ಲಿ ಒಬ್ಬರಿಗೆ ಈ ವಾರ 'ಬಿಗ್ ಬಾಸ್' ಆಟ ಅಂತ್ಯ.!

'ಪ್ರಜಾರಾಜ್ಯ' ಟಾಸ್ಕ್ ನಲ್ಲಿ ಸಮೀರಾಚಾರ್ಯ ಹಾಗೂ ಜಯಶ್ರೀನಿವಾಸನ್ ಕಿಂಗ್ ಮೇಕರ್ಸ್ ಆಗಿ ಇಡೀ ಚಟುವಟಿಕೆಯ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದರು.

ಇನ್ನೂ ಸೀಕ್ರೆಟ್ ರೂಮ್ ಒಳಗೆ ಇರುವ ಸಮೀರಾಚಾರ್ಯ ಹಾಗೂ ಜಯಶ್ರೀನಿವಾಸನ್ 'ಬಿಗ್ ಬಾಸ್' ಮನೆಯೊಳಗೆ ಯಾವಾಗ ಪ್ರತ್ಯಕ್ಷ ಆಗ್ತಾರೆ.? ಇಂದು ಯಾರಿಗೆ ಗೇಟ್ ಪಾಸ್ ಸಿಗುತ್ತೆ ಅಂತ ತಿಳಿದುಕೊಳ್ಳಲು ರಾತ್ರಿ 8 ಗಂಟೆ ವರೆಗೂ ನೀವು ಕಾಯಲೇಬೇಕು.

English summary
Bigg Boss Kannada 5: Week 11: Diwakar, Sameeracharya, Jayasreenivasan, Niveditha Gowda and Krishi Thapanda are nominated for this week's elimination. Who will get evicted today.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X