»   » ಸ್ಪರ್ಧಿಗಳ ಪ್ರಕಾರ ಚಂದನ್ ಶೆಟ್ಟಿ 'ಬಿಗ್ ಬಾಸ್ ಕನ್ನಡ-5' ವಿಜೇತ.!

ಸ್ಪರ್ಧಿಗಳ ಪ್ರಕಾರ ಚಂದನ್ ಶೆಟ್ಟಿ 'ಬಿಗ್ ಬಾಸ್ ಕನ್ನಡ-5' ವಿಜೇತ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆದಾಗಿನಿಂದಲೂ ಕರುನಾಡ ಮನೆ-ಮನಗಳಿಗೆ ಬಹಳ ಹತ್ತಿರವಾಗಿರುವ ಹೆಸರು ಚಂದನ್ ಶೆಟ್ಟಿ. ತಮ್ಮ ಹಾಡುಗಳ ಮೂಲಕ ಎಲ್ಲರ ಮನ ಗೆಲ್ಲುತ್ತಿರುವ ಚಂದನ್ ಶೆಟ್ಟಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮವನ್ನೂ ಗೆಲ್ಲುತ್ತಾರಂತೆ.!

ಹಾಗಂತ ನಾವು ಹೇಳ್ತಿಲ್ಲ ಸ್ವಾಮಿ, 'ಬಿಗ್ ಬಾಸ್' ಮನೆಯೊಳಗೆ ಬಂಧಿಯಾಗಿರುವ ಸ್ಪರ್ಧಿಗಳೇ ನುಡಿದಿರುವ ಭವಿಷ್ಯ ಇದು.

ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಚಂದನ್ ಶೆಟ್ಟಿ ಹಾಗೂ ಜಯರಾಂ ಕಾರ್ತಿಕ್ ಬರುವುದು ಪಕ್ಕಾ. ಚಂದನ್ ಶೆಟ್ಟಿ ವಿನ್ನರ್ ಆಗುವುದರಲ್ಲಿ ಡೌಟ್ ಬೇಡ ಎಂದು ಸ್ಪರ್ಧಿಗಳೇ ಕಿಚ್ಚ ಸುದೀಪ್ ಮುಂದೆ ಹೇಳಿದ್ದಾರೆ. ಮುಂದೆ ಓದಿರಿ...

ಆಗಲೇ ಲೆಕ್ಕಾಚಾರ ಶುರು ಆಗಿದೆ

ಈ ವಾರ ಯಾರು ಔಟ್ ಆಗುತ್ತಾರೆ.? ಟಾಪ್ 5 ಸ್ಥಾನಕ್ಕೆ ಯಾರೆಲ್ಲ ಲಗ್ಗೆ ಇಡುತ್ತಾರೆ.? ಯಾರು ಗೆಲ್ಲುತ್ತಾರೆ.? ಎಂಬುದರ ಬಗ್ಗೆ ಅದಾಗಲೇ 'ಬಿಗ್ ಬಾಸ್' ಮನೆಯೊಳಗೆ ಲೆಕ್ಕಾಚಾರ ಆರಂಭವಾಗಿದೆ.

'ಬಿಗ್ ಬಾಸ್': ಎಲ್ಲ ಗೊಂದಲಗಳಿಗೆ ಕ್ಲಾರಿಟಿ ಕೊಟ್ಟ ಕಿಚ್ಚ ಸುದೀಪ್

ಎಲ್ಲರ ತಲೆಯೊಳಗೆ ಇರುವ ಹೆಸರು

ಟಾಪ್ 2 ಹಂತಕ್ಕೆ ಜೆಕೆ ಹಾಗೂ ಚಂದನ್ ಶೆಟ್ಟಿ ಬಂದೇ ಬರುತ್ತಾರೆ. ಚಂದನ್ ಶೆಟ್ಟಿ ವಿನ್ನರ್ ಆಗುತ್ತಾರೆ ಎಂದು ಅನುಪಮಾ ಗೌಡ, ಸಮೀರಾಚಾರ್ಯ, ದಿವಾಕರ್, ಕೃಷಿ ಹಾಗೂ ನಿವೇದಿತಾ ಭವಿಷ್ಯ ನುಡಿದಿದ್ದಾರೆ.

ಚಂದನ್ ಶೆಟ್ಟಿಗೆ ಪರ್ಫೆಕ್ಟ್ ಹುಡುಗಿ ಯಾರು ಗೊತ್ತಾ.?

ಶ್ರುತಿ ಪ್ರಕಾರ ಯಾರು ಗೆಲ್ಲುತ್ತಾರೆ.?

ಶ್ರುತಿ ಪ್ರಕಾಶ್ ಪ್ರಕಾರ ಜೆಕೆ ಹಾಗೂ ಚಂದನ್ ಶೆಟ್ಟಿ ಟಾಪ್ 2 ಹಂತಕ್ಕೆ ಬರುತ್ತಾರಂತೆ. ಹಾಗೇ, ಜಯರಾಂ ಕಾರ್ತಿಕ್ 'ಬಿಗ್ ಬಾಸ್ ಕನ್ನಡ-5' ವಿನ್ನರ್ ಆಗ್ತಾರಂತೆ.

'ಬಿಗ್ ಬಾಸ್' ಏನೇ ಮಾಡಿದರೂ, ಚಂದನ್ ಶೆಟ್ಟಿ ಲೆಕ್ಕ ಮಾತ್ರ ಪಕ್ಕಾ.!

ತುಂಬಾ ಬದಲಾಗುತ್ತೆ.!

ಸ್ಪರ್ಧಿಗಳ ಲೆಕ್ಕಾಚಾರ ಕೇಳಿಸಿಕೊಂಡ ಮೇಲೆ ''ಕಳೆದ ಮೂರು ವಾರದಲ್ಲಿ ತುಂಬಾ ಬದಲಾಗಿದೆ. ಇನ್ನು 22 ದಿನಗಳಲ್ಲಿ ಬಹಳ ಬದಲಾವಣೆಗಳಿರುತ್ತವೆ'' ಎಂದರು ಸುದೀಪ್.

English summary
Bigg Boss Kannada 5: Week 12: According to Bigg Boss housemates estimation, Chandan Shetty might win the show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X