»   » 'ಬಿಗ್ ಬಾಸ್' ಏನೇ ಮಾಡಿದರೂ, ಚಂದನ್ ಶೆಟ್ಟಿ ಲೆಕ್ಕ ಮಾತ್ರ ಪಕ್ಕಾ.!

'ಬಿಗ್ ಬಾಸ್' ಏನೇ ಮಾಡಿದರೂ, ಚಂದನ್ ಶೆಟ್ಟಿ ಲೆಕ್ಕ ಮಾತ್ರ ಪಕ್ಕಾ.!

Posted By:
Subscribe to Filmibeat Kannada
ಚಂದನ್ ಶೆಟ್ಟಿ ಊಹಿಸಿದಂತೇ ಆಯ್ತು | Oneindia Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಕಳೆದ ವಾರ ಎಲ್ಲ ಸ್ಪರ್ಧಿಗಳ ತಲೆಗೂ 'ಬಿಗ್ ಬಾಸ್' ಬರೀ ಹುಳ ಅಲ್ಲ, ಹೆಬ್ಬಾವನ್ನೇ ಬಿಟ್ಟಿದ್ದರು.

ಕನ್ಫೆಶನ್ ರೂಮ್ ನಿಂದ ಜಯಶ್ರೀನಿವಾಸನ್ ರನ್ನ ಮಾಯ ಮಾಡಿ, ಮಧ್ಯರಾತ್ರಿ ಎಲಿಮಿನೇಷನ್ ಪ್ರಕ್ರಿಯೆ ನಡೆಸಿ, ಕೊನೆಗೆ ದಿವಾಕರ್ ಅವರನ್ನ ಎಲಿಮಿನೇಟ್ ಮಾಡಿ, ಸ್ಪರ್ಧಿಗಳಿಗೆ ಏನಾಗುತ್ತಿದೆ ಎಂಬುದನ್ನೇ ತಿಳಿಯದಂತೆ 'ಬಿಗ್ ಬಾಸ್' ಚಮಕ್ ಮೇಲೆ ಚಮಕ್ ಕೊಟ್ಟಿದ್ದರು.

ಇಷ್ಟೆಲ್ಲ ಆದರೂ, ಚಂದನ್ ಶೆಟ್ಟಿಗೆ ಮಾತ್ರ ಯಾವುದೇ ಗೊಂದಲ ಇಲ್ಲ. ''ಸಮೀರಾಚಾರ್ಯ ಹಾಗೂ ಜಯಶ್ರೀನಿವಾಸನ್ ಒಟ್ಟಿಗೆ ಸೀಕ್ರೆಟ್ ರೂಮ್ ನಲ್ಲಿ ಇದ್ದರು. ಸಮೀರಾಚಾರ್ಯ ಸೇಫ್ ಆಗಿ ಒಳಗೆ ಬಂದರು, ಜಯಶ್ರೀನಿವಾಸನ್ ಅಲ್ಲಿಂದಲೇ ಔಟ್ ಆಗಿದ್ದಾರೆ'' ಎಂದು ಕಣ್ಣಾರೆ ನೋಡಿದ ಹಾಗೆ ಚಂದನ್ ಶೆಟ್ಟಿ ಊಹಿಸಿದ್ದಾರೆ. ಮುಂದೆ ಓದಿರಿ...

ಚಂದನ್ ಶೆಟ್ಟಿ ಊಹೆ ಏನು.?

''ಕಳೆದ ವಾರ ಡಬಲ್ ಎಲಿಮಿನೇಷನ್ ನಡೆದಿತ್ತು. ಸೋಮವಾರ ಜಯಶ್ರೀನಿವಾಸನ್ ಔಟ್ ಆಗಿಲ್ಲ. ಸಮೀರಾಚಾರ್ಯ ಯಾವತ್ತು ವಾಪಸ್ ಬಂದ್ರೋ, ಅವತ್ತೇ ಜಯಶ್ರೀನಿವಾಸನ್ ಔಟ್ ಆದರು. ಅಲ್ಲಿಯವರೆಗೂ ಅವರಿಬ್ಬರೂ ಒಟ್ಟಿಗೆ ಸೀಕ್ರೆಟ್ ರೂಮ್ ನಲ್ಲಿದ್ದರು. ಸಮೀರಾಚಾರ್ಯ ಸೇಫ್ ಆಗಿ ಒಳಗೆ ಬಂದರು. ಜಯಶ್ರೀನಿವಾಸನ್ ಅಲ್ಲಿಂದಲೇ ಎಲಿಮಿನೇಟ್ ಆದರು'' ಎಂಬುದು ಚಂದನ್ ಶೆಟ್ಟಿ ಊಹೆ.

ಎಷ್ಟೇ ತಿರುಗುಮುರುಗು ಮಾಡಿದರೂ ಸ್ಪರ್ಧಿಗಳ ಲೆಕ್ಕಾಚಾರ ಕರೆಕ್ಟ್ ಆಗಿದೆ.!

ಚಂದನ್ ಶೆಟ್ಟಿ ಹೀಗೆ ಊಹಿಸಲು ಕಾರಣ ಏನು.?

'ಬಿಗ್ ಬಾಸ್' ಮನೆಯೊಳಗೆ ಸಮೀರಾಚಾರ್ಯ ವಾಪಸ್ ಬಂದ್ಮೇಲೆ, ಅವರ ಟ್ರೇ ನಲ್ಲಿ ಜಯಶ್ರೀನಿವಾಸನ್ ರವರ ಸ್ವಿಮ್ಮಿಂಗ್ ಗಾಗಲ್ಸ್ ಕೂಡ ಬಂತಂತೆ. ಅದನ್ನ ನೋಡಿ ಚಂದನ್ ಶೆಟ್ಟಿ ಇಷ್ಟೆಲ್ಲ ಲೆಕ್ಕಾಚಾರ ಮಾಡಿದ್ದಾರೆ.

ಸತ್ಯವನ್ನ ಸಮೀರಾಚಾರ್ಯ ಬಾಯ್ಬಿಟ್ರೆ ಶಿಕ್ಷೆ ಗ್ಯಾರೆಂಟಿ.!

ಡಿಸ್ಪ್ಲೇ ಆಗ್ಹೋಯ್ತು.!

''ಜಯಶ್ರೀನಿವಾಸನ್ ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ.?'' ಎಂಬ ಪ್ರಶ್ನೆ ಇಷ್ಟು ದಿನ ಎಲ್ಲ ಸ್ಪರ್ಧಿಗಳಿಗೆ ಕಾಡುತ್ತಿತ್ತು. ಆದ್ರೀಗ, 'ಬಿಗ್ ಬಾಸ್' ಮನೆಯೊಳಗಿನ ಲಿವಿಂಗ್ ಏರಿಯಾದಲ್ಲಿರುವ ಟಿವಿಯಲ್ಲಿ 'ಜಯಶ್ರೀನಿವಾಸನ್ ಎಲಿಮಿನೇಟೆಡ್' ಎಂದು ಡಿಸ್ಪ್ಲೇ ಆಗುತ್ತಿದೆ. ಅದನ್ನ ನೋಡಿದ್ಮೇಲೆ ಚಂದನ್ ಶೆಟ್ಟಿಗೆ ಇಷ್ಟೆಲ್ಲ ತಲೆ ಓಡಿದೆ.

ಜಯಶ್ರೀನಿವಾಸನ್ ಎಂಟ್ರಿ ವಿಚಿತ್ರ: ಔಟ್ ಆಗಿದ್ದೂ ವಿಚಿತ್ರವೇ.!

ಈ ಸತ್ಯ ಗೊತ್ತಿಲ್ಲ.!

ಲಿವಿಂಗ್ ಏರಿಯಾದ ಟಿವಿಯಲ್ಲಿ 'ದಿವಾಕರ್ ಎಲಿಮಿನೇಟೆಡ್' ಅಂತಲೂ ಡಿಸ್ಪ್ಲೇ ಆಗುತ್ತಿದೆ. ಅದನ್ನ ನೋಡಿ ಚಂದನ್ ಶೆಟ್ಟಿ ಭಾವುಕರಾದರು. ಆದ್ರೆ, ದಿವಾಕರ್ ಇನ್ನೂ ಔಟ್ ಆಗಿಲ್ಲ. ಸೀಕ್ರೆಟ್ ರೂಮ್ ನಲ್ಲಿದ್ದಾರೆ ಎಂಬ ಸತ್ಯ ಯಾರಿಗೂ ಗೊತ್ತಿಲ್ಲ.

English summary
Bigg Boss Kannada 5: Week 12: Chandan Shetty's assumption over Jayasreenivasan and Sameer Acharya is true.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X