»   » ಬರೀ ಓಳು ಬಿಟ್ಟು ಚೆನ್ನಾಗಿ ಕಾಗೆ ಹಾರಿಸಿದ ದಿವಾಕರ್.!

ಬರೀ ಓಳು ಬಿಟ್ಟು ಚೆನ್ನಾಗಿ ಕಾಗೆ ಹಾರಿಸಿದ ದಿವಾಕರ್.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಹನ್ನೊಂದನೇ ವಾರ 'ದೊಡ್ಮನೆ'ಯಿಂದ ಹೊರಬಂದ ದಿವಾಕರ್, ನಾಲ್ಕೈದು ದಿನಗಳ ಕಾಲ ಸೀಕ್ರೆಟ್ ರೂಮ್ ನಲ್ಲಿ ಇದ್ದುಕೊಂಡು ಎಲ್ಲರ ಗೇಮ್ ಪ್ಲಾನ್ ನೋಡಿಕೊಂಡರು.

'ಬಿಗ್ ಬಾಸ್' ಮನೆಯೊಳಗೆ ಲಕ್ಷುರಿ ಬಜೆಟ್ ಟಾಸ್ಕ್ ಮುಗಿದ ಮೇಲೆ, ಮಧ್ಯರಾತ್ರಿ 1.20 ರ ಸುಮಾರಿಗೆ ರೀಎಂಟ್ರಿ ಕೊಟ್ಟರು 'ಕಾಮನ್ ಮ್ಯಾನ್' ದಿವಾಕರ್.

ಎಲ್ಲರೂ ಗಾಢ ನಿದ್ದೆಯಲ್ಲಿ ಇದ್ದ ಕಾರಣ, ದಿವಾಕರ್ ವಾಪಸ್ ಬಂದ ವಿಷಯ ರಾತ್ರಿ ಯಾರಿಗೂ ಗೊತ್ತಾಗಲಿಲ್ಲ. ಬೆಳಗ್ಗೆ ಆಗುತ್ತಿದ್ದಂತೆಯೇ, ದಿವಾಕರ್ ದರ್ಶನ ಎಲ್ಲರಿಗೂ ಆಯ್ತು. ಆಗ ದಿವಾಕರ್ ಓಳು ಬಿಡಲು ಆರಂಭಿಸಿದರು. ಇಷ್ಟು ದಿನ ಸೀಕ್ರೆಟ್ ರೂಮ್ ನಲ್ಲಿ ಇದ್ದ ವಿಷಯ ಸೀಕ್ರೆಟ್ ಆಗಿ ಇರಬೇಕಿತ್ತು. ಹೀಗಾಗಿ, ಕಾಗೆ ಹಾರಿಸಲು ದಿವಾಕರ್ ಶುರು ಮಾಡಿದರು. ಮುಂದೆ ಓದಿರಿ...

ಸುಳ್ಳು ಕಥೆ ಹೇಳಿದ ದಿವಾಕರ್

''ನಾನು ನನ್ನ ಹೆಂಡತಿ ಟಿವಿ ನೋಡ್ತಿದ್ವಿ. ಆಗ ಕಲರ್ಸ್ ನವರು ಫೋನ್ ಮಾಡಿದರು. ''ಒಂದು ಗಂಟೆಯೊಳಗೆ ರೆಡಿ ಆಗಬೇಕು, ನಿಮ್ಮನ್ನ ಮತ್ತೆ ಒಳಗೆ ಕಳುಹಿಸ್ತಾಯಿದ್ದೇವೆ. ಎರಡನೇ ಆಫರ್, ಇದು ಯಾರಿಗೂ ಸಿಗಲ್ಲ. ನಿಮಗೆ ಅಷ್ಟು ಬೇಡಿಕೆ ಇದೆ'' ಎಂದರು'' ಅಂತ ಹೇಳ್ತಾ ಎಲ್ಲರನ್ನೂ ಚೆನ್ನಾಗಿ ಫೂಲ್ ಮಾಡಿದರು ದಿವಾಕರ್.

'ಬಿಗ್' ಮನೆಗೆ ಮಧ್ಯರಾತ್ರಿ ರೀಎಂಟ್ರಿಕೊಟ್ಟ ದಿವಾಕರ್

ಕಾಗೆ ಹಾರಿಸಿದ ದಿವಾಕರ್

''ಸಿಕ್ಕಿರುವ ಅವಕಾಶವನ್ನು ಹಾಳು ಮಾಡಿಕೊಳ್ಳಬಾರದು ಅಂತ ಹೆಂಡತಿ ಹೇಳಿದಳು. ಸೂಟ್ ಕೇಸ್ ಹಾಗೇ ಇತ್ತು. ಮಟನ್ ಕುರ್ಮ ತಿಂದು ಹೊರಟು ಬಂದೆ'' ಎಂದು ಹೇಳಿ ಸೀಕ್ರೆಟ್ ರೂಮ್ ಟಾಪಿಕ್ ಬಾರದ ಹಾಗೆ ನೋಡಿಕೊಂಡರು ದಿವಾಕರ್.

ಅಚ್ಚರಿ ಬೆಳವಣಿಗೆ: ದಿವಾಕರ್ ಸೀಕ್ರೆಟ್ ರೂಮ್ ಗೆ, ಜಯಶ್ರೀನಿವಾಸನ್ ಮನೆಗೆ.!

ಏನೆಲ್ಲ ಓಳು ಬಿಟ್ಟರು ಗೊತ್ತಾ.?

''ಕುಟುಂಬದ ಜೊತೆ ಎಲ್ಲಾದರೂ ಹೊರಗಡೆ ಹೋಗಬೇಕು ಅಂತ ಪ್ಲಾನ್ ಮಾಡಿದ್ದೆ. ಆದ್ರೆ, ಔಟ್ ಆಗಿದ್ದ ನಾಲ್ಕು ದಿನಕ್ಕೆ ವಾಪಸ್ ಕರೆದರು'' ಅಂತ ದಿವಾಕರ್ ಹೇಳಿದ ಮಾತನ್ನ ಎಲ್ಲರೂ ನಂಬಿದರು.

ಯಾರಿಗೂ ಅನುಮಾನ ಬಂದಿಲ್ಲ

ದಿವಾಕರ್ ಆಡಿದ ಇಷ್ಟೂ ಮಾತುಗಳನ್ನ ಸ್ಪರ್ಧಿಗಳೆಲ್ಲ ನಂಬಿದ್ದಾರೆ. ದಿವಾಕರ್ ಔಟ್ ಆಗಿ ವಾಪಸ್ ಬಂದಿದ್ದಾರೆ ಅಂತಲೇ ಎಲ್ಲರೂ ಭಾವಿಸಿದ್ದಾರೆ. ದಿವಾಕರ್ ಸೀಕ್ರೆಟ್ ರೂಮ್ ನಲ್ಲಿ ಇದ್ದು ಬಂದಿದ್ದಾರೆ ಎಂಬ ಅನುಮಾನ ಯಾರಿಗೂ ಇಲ್ಲ.

English summary
Bigg Boss Kannada 5: Week 12: Diwakar maintains the secret.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X