»   » ಜಯಶ್ರೀನಿವಾಸನ್ ಎಂಟ್ರಿ ವಿಚಿತ್ರ: ಔಟ್ ಆಗಿದ್ದೂ ವಿಚಿತ್ರವೇ.!

ಜಯಶ್ರೀನಿವಾಸನ್ ಎಂಟ್ರಿ ವಿಚಿತ್ರ: ಔಟ್ ಆಗಿದ್ದೂ ವಿಚಿತ್ರವೇ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿಯೇ ಈ ತರಹ ಯಾರೂ ಎಲಿಮಿನೇಟ್ ಆಗಿರಲಿಲ್ಲ. 'ಬಿಗ್ ಬಾಸ್' ಮನೆಯಿಂದ ನಾಪತ್ತೆ ಆಗಿ, ಒಂದು ವಾರ ಸೀಕ್ರೆಟ್ ರೂಮ್ ನಲ್ಲಿದ್ದು, ಸೀಕ್ರೆಟ್ ರೂಮ್ ನಿಂದಲೇ ಔಟ್ ಆಗಿರುವ ಮೊದಲ ಹಾಗೂ ಏಕೈಕ ಸ್ಪರ್ಧಿ ಜಯಶ್ರೀನಿವಾಸನ್.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಜಯಶ್ರೀನಿವಾಸನ್ ಎಂಟ್ರಿ ಎಷ್ಟು ವಿಚಿತ್ರವಾಗಿತ್ತೋ, ಅವರ ಎಲಿಮಿನೇಷನ್ ಕೂಡ ಅಷ್ಟೇ ವಿಚಿತ್ರವಾಗಿದೆ.

ನಿಗೂಢವಾಗಿ 'ಬಿಗ್ ಬಾಸ್' ಮನೆಯೊಳಗೆ ಬಂದ ಜಯಶ್ರೀನಿವಾಸನ್, ಅಷ್ಟೇ ನಿಗೂಢವಾಗಿ ಹೊರಗೆ ತೆರಳಿದ್ದಾರೆ. ಜಯಶ್ರೀನಿವಾಸನ್ ಅವರ ಎಂಟ್ರಿ ಹಾಗೂ ಎಕ್ಸಿಟ್ ಹಿಂದಿನ ಮರ್ಮ ಯಾರಿಗೂ ಅರ್ಥ ಆಗಿಲ್ಲ. ಅಚ್ಚರಿ ಅಂದ್ರೆ, ಜಯಶ್ರೀನಿವಾಸನ್ ಅವರ ಎಂಟ್ರಿ ಹಾಗೂ ಎಕ್ಸಿಟ್... ಎರಡೂ ಆಗಿದ್ದು ಕನ್ಫೆಶನ್ ರೂಮ್ ನಿಂದಲೇ.! ಮುಂದೆ ಓದಿರಿ...

ಎಲ್ಲದರಲ್ಲೂ ನಂಬರ್ ಒನ್.!

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಎಂಟ್ರಿಕೊಟ್ಟ ಮೊದಲ ಸ್ಪರ್ಧಿ ಜಯಶ್ರೀನಿವಾಸನ್. 'ಬಿಗ್ ಬಾಸ್' ಮನೆಯೊಳಗೆ ಜಯಶ್ರೀನಿವಾಸನ್ ಪ್ರವೇಶ ಮಾಡಿದ್ಮೇಲೆ, ಅವರು ನೇರವಾಗಿ ತೆರಳಿದ್ದು ಕನ್ಫೆಶನ್ ರೂಮ್ ಒಳಗೆ. ಸತತವಾಗಿ 11-12 ಗಂಟೆಗಳ ಕಾಲ ಕನ್ಫೆಶನ್ ರೂಮ್ ಒಳಗೆ ಕೂತು ಮಿಕ್ಕ ಎಲ್ಲ ಸ್ಪರ್ಧಿಗಳ ಎಂಟ್ರಿಯನ್ನ ಅಲ್ಲಿಂದಲೇ ವೀಕ್ಷಿಸುತ್ತಿದ್ದರು ಜಯಶ್ರೀನಿವಾಸನ್.

ಸೀಕ್ರೆಟ್ ರೂಮ್ ಒಳಗೆ ಹೋದ ಮೊದಲಿಗ

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸೀಕ್ರೆಟ್ ರೂಮ್ ಒಳಗೆ ಹೋದ ಮೊದಲ ಸ್ಪರ್ಧಿಯೂ ಜಯಶ್ರೀನಿವಾಸನ್.

ಸೀಕ್ರೆಟ್ ರೂಮ್ ಒಳಗೆ ಹೋದ ಜಯಶ್ರೀನಿವಾಸನ್: ಏನು ಪ್ರಯೋಜನ.?

ಕನ್ಫೆಶನ್ ರೂಮ್.!

'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಓಪನ್ನಿಂಗ್ ದಿನ, ಮೊದಲಿಗೆ ಎಂಟ್ರಿಕೊಟ್ಟಿದ್ದರೂ, ಇತರೆ ಎಲ್ಲ ಸ್ಪರ್ಧಿಗಳ ಆಗಮನ ಆದ್ಮೇಲೆ ಕನ್ಫೆಶನ್ ರೂಮ್ ನಿಂದ ಹೊರಬಂದು ಎಲ್ಲರ ಮುಂದೆ ಜಯಶ್ರೀನಿವಾಸನ್ ಪ್ರತ್ಯಕ್ಷವಾದರು. ಇನ್ನೂ ಅದೇ ಕನ್ಫೆಶನ್ ರೂಮ್ ಒಳಗೆ ಹೋದ್ಮೇಲೆ, ಜಯಶ್ರೀನಿವಾಸನ್ 'ಬಿಗ್ ಬಾಸ್' ಮೇನ್ ಹೌಸ್ ನಿಂದ ನಾಪತ್ತೆ ಆದರು. ಜಯಶ್ರೀನಿವಾಸನ್ ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ಸುಳಿವು ಸದ್ಯ ಯಾರಿಗೂ ಸಿಕ್ಕಿಲ್ಲ.

ಅಚ್ಚರಿ ಬೆಳವಣಿಗೆ: ದಿವಾಕರ್ ಸೀಕ್ರೆಟ್ ರೂಮ್ ಗೆ, ಜಯಶ್ರೀನಿವಾಸನ್ ಮನೆಗೆ.!

ಎರಡನೇ ನಂಬರ್ ಆಗ್ಬರಲ್ಲ.!

ಜಯಶ್ರೀನಿವಾಸನ್ ಅವರಿಗೆ ಎರಡನೇ ನಂಬರ್ ಆಗ್ಬರಲ್ಲ. ಇನ್ನೂ ಕನ್ಫೆಶನ್ ರೂಮ್ ಕೂಡ ಎರಡನೇ ನಂಬರ್ ಅಂತೆ. ಕಾಕತಾಳೀಯ ಎಂಬಂತೆ 'ಬಿಗ್ ಬಾಸ್' ಮನೆಯೊಳಗೆ ಜಯಶ್ರೀನಿವಾಸನ್ ಅವರ ಎಂಟ್ರಿ ಹಾಗೂ ಎಕ್ಸಿಟ್.. ಎರಡೂ ಆಗಿದ್ದು ಕನ್ಫೆಶನ್ ರೂಮ್ ನಿಂದಲೇ.!

ಬರೆದು ಇಟ್ಕೊಂಡ್ರೂ, ಜಯಶ್ರೀನಿವಾಸನ್ ಹೇಳಿದ್ದು ಸುಳ್ಳಾಯ್ತು.!

ಸೀಕ್ರೆಟ್ ರೂಮ್ ನಿಂದ ಔಟ್

'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿ ಸೀಕ್ರೆಟ್ ರೂಮ್ ನಿಂದ ಔಟ್ ಆದ ಮೊದಲ ಹಾಗೂ ಏಕೈಕ ಸ್ಪರ್ಧಿ ಜಯಶ್ರೀನಿವಾಸನ್. ಇದ್ದಕ್ಕಿದ್ದಂತೆ ನಾಪತ್ತೆ ಆದ ಜಯಶ್ರೀನಿವಾಸನ್ ಎಲಿಮಿನೇಟ್ ಆಗಿದ್ದಾರೆ ಎಂಬ ಸತ್ಯ ಸ್ಪರ್ಧಿಗಳಿಗೆ ಗೊತ್ತಿಲ್ಲ.

ಯಾರನ್ನೂ ಮಾತನಾಡಿಸಲಿಲ್ಲ.!

ಇತರೆ ಸ್ಪರ್ಧಿಗಳು ಎಲಿಮಿನೇಟ್ ಆದಾಗ, ಎಲ್ಲರನ್ನೂ ಮಾತನಾಡಿಸಿ ಹೊರಬರುತ್ತಾರೆ. ಆದ್ರೆ ಆ ಭಾಗ್ಯ ಜಯಶ್ರೀನಿವಾಸನ್ ಗೆ ಸಿಗಲಿಲ್ಲ. ತಮಗೆ ಬೇಕಾದವರಿಗೆ ಸೂಪರ್ ಅಧಿಕಾರ ನೀಡುವ ಪವರ್ ಕೂಡ ಜಯಶ್ರೀನಿವಾಸನ್ ಗೆ ಸಿಗಲಿಲ್ಲ.

English summary
Bigg Boss Kannada 5: Week 12: Jayasreenivasan's weird entry and exit.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X