'ಬಿಗ್ ಬಾಸ್ ಕನ್ನಡ-5': ಈ ಆರು ಮಂದಿ ಪೈಕಿ ನಿಮ್ಮ ಮತ ಯಾರಿಗೆ.?
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಹನ್ನೊಂದನೇ ವಾರ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟಿದ್ದರು 'ಬಿಗ್ ಬಾಸ್'. ಆದ್ರೆ, ಹನ್ನೆರಡನೇ ವಾರ ಯಾವುದೇ ಟ್ವಿಸ್ಟ್ ಇಲ್ಲದೇ, ಸೀದಾ ಸಾದಾ ನಾಮಿನೇಷನ್ ಪ್ರಕ್ರಿಯೆ ನಡೆಯಿತು.
ಪ್ರತಿ ಬಾರಿಯಂತೆ ಈ ಬಾರಿಯೂ ಕನ್ಫೆಶನ್ ರೂಮ್ ಒಳಗೆ ತೆರಳಿ, 'ಬಿಗ್ ಬಾಸ್' ಮನೆಯಿಂದ ಹೊರ ಹಾಕಲು ತಾವು ಇಚ್ಛೆ ಪಡುವ ಇಬ್ಬರು ಸದಸ್ಯರ ಹೆಸರನ್ನು ಎಲ್ಲ ಸ್ಪರ್ಧಿಗಳು ಹೇಳಬೇಕಿತ್ತು.
ಹಾಗಾದ್ರೆ, ಹನ್ನೆರಡನೇ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಅಂತ ನೋಡೋಣ ಬನ್ನಿ...

ಸಮೀರಾಚಾರ್ಯ ಸೇಫ್
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಹನ್ನೆರಡನೇ ವಾರದ ಕ್ಯಾಪ್ಟನ್ ಆಗಿ ಸಮೀರಾಚಾರ್ಯ ಆಯ್ಕೆ ಆಗಿದ್ದರು. ಹೀಗಾಗಿ, ನಾಮಿನೇಷನ್ ಪ್ರಕ್ರಿಯೆಯಲ್ಲಿ ಸಮೀರಾಚಾರ್ಯ ಸೇಫ್ ಆದರು.

ರಿಯಾಝ್ ವಿರುದ್ಧ ಅತಿ ಹೆಚ್ಚು ಮತಗಳು
ಕಳೆದ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿದ್ದ ರಿಯಾಝ್ ವಿರುದ್ಧ ಅತಿ ಹೆಚ್ಚು ಮತಗಳು ಚಲಾವಣೆ ಆದವು. ಜೆಕೆ, ಕೃಷಿ, ಶ್ರುತಿ ಹಾಗೂ ಅನುಪಮಾ ಗೌಡ ವೋಟ್ ಮಾಡಿದ್ರಿಂದಾಗಿ ರಿಯಾಝ್ ನಾಮಿನೇಟ್ ಆದರು.

ಡೇಂಜರ್ ಝೋನ್ ನಲ್ಲಿ ನಿವೇದಿತಾ ಗೌಡ
ನಿವೇದಿತಾ ಗೌಡ ಕಂಡ್ರೆ ಶ್ರುತಿ, ಅನುಪಮಾ ಹಾಗೂ ಕೃಷಿಗೆ ಅಷ್ಟಕಷ್ಟೆ. ಈ ಮೂವರು ಮತ ಹಾಕಿದ್ರಿಂದಾಗಿ ಈ ವಾರವೂ ನಿವೇದಿತಾ ಗೌಡ ಡೇಂಜರ್ ಝೋನ್ ನಲ್ಲಿ ಇದ್ದಾರೆ.

ಶ್ರುತಿ ಪ್ರಕಾಶ್ ಮಿಸ್ ಆಗಿಲ್ಲ
ರಿಯಾಝ್, ಚಂದನ್ ಹಾಗೂ ನಿವೇದಿತಾ... ಶ್ರುತಿ ಪ್ರಕಾಶ್ ರವರನ್ನ ನಾಮಿನೇಟ್ ಮಾಡಿದರು.

ನಾಮಿನೇಟ್ ಆದ ಜಯರಾಂ ಕಾರ್ತಿಕ್
ಚಂದನ್ ಶೆಟ್ಟಿ ಹಾಗೂ ರಿಯಾಝ್ ಜೆಕೆ ವಿರುದ್ಧ ಮತ ಹಾಕಿದರು. ಹೀಗಾಗಿ ಈ ವಾರ ಜೆಕೆಗೂ ಅಗ್ನಿಪರೀಕ್ಷೆ.

ಈ ಬಾರಿ ಸೇಫ್ ಆಗ್ತಾರಾ ಕೃಷಿ ತಾಪಂಡ.?
ಅದಾಗಲೇ ಒಮ್ಮೆ ಎಲಿಮಿನೇಟ್ ಆಗಿ, ಸೆಕೆಂಡ್ ಚಾನ್ಸ್ ಪಡೆದುಕೊಂಡು, 'ಬಿಗ್ ಬಾಸ್' ಮನೆಯೊಳಗೆ ರೀ ಎಂಟ್ರಿ ಕೊಟ್ಟಿರುವ ಕೃಷಿ ತಾಪಂಡ ಈ ವಾರ ನಾಮಿನೇಟ್ ಆಗಿದ್ದಾರೆ. ಕೃಷಿ ತಾಪಂಡಗೆ ಈ ವಾರವೂ ವೀಕ್ಷಕರು ಬೆಂಬಲ ನೀಡುತ್ತಾರಾ.?

ನೇರವಾಗಿ ನಾಮಿನೇಟ್ ಆದ ಅನುಪಮಾ
ಕ್ಯಾಪ್ಟನ್ ಆಗಿರುವ ಸಮೀರಾಚಾರ್ಯ, ಅನುಪಮಾ ಗೌಡ ಅವರನ್ನ ನೇರವಾಗಿ ನಾಮಿನೇಟ್ ಮಾಡಿದರು. ಹೀಗಾಗಿ, ಅನುಪಮಾಗೂ ಈ ವಾರ ಎಲಿಮಿನೇಷನ್ ತಲೆಬಿಸಿ ತಪ್ಪಿದ್ದಲ್ಲ.

ಈ ಆರು ಜನರ ಪೈಕಿ ನಿಮ್ಮ ಮತ ಯಾರಿಗೆ.?
ಅನುಪಮಾ ಗೌಡ, ಕೃಷಿ ತಾಪಂಡ, ಜಯರಾಂ ಕಾರ್ತಿಕ್, ಶ್ರುತಿ ಪ್ರಕಾಶ್, ನಿವೇದಿತಾ ಗೌಡ ಹಾಗೂ ರಿಯಾಝ್... ಈ ಆರು ಮಂದಿ ಪೈಕಿ ನಿಮ್ಮ ಮತ ಯಾರಿಗೆ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ... 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ...
Kirik Party
Kirik Party (2016) Kannada DVDRip Movie Part 2 - Video Dailymotion


Click it and Unblock the Notifications











