For Quick Alerts
  ALLOW NOTIFICATIONS  
  For Daily Alerts

  'ಬೊಂಬೆ' ನಿವೇದಿತಾ ಗೌಡಗೆ ಕೈಮುಗಿದ ಕಿಚ್ಚ ಸುದೀಪ್.!

  By Harshitha
  |

  ನಿವೇದಿತಾ ಗೌಡಗೆ ಕಿಚ್ಚ ಸುದೀಪ್ ಕೈ ಮುಗಿದಿದ್ದಾರೆ.! ಹೌದು, ಕಳೆದ ವಾರದ ಟಾಸ್ಕ್ ನಲ್ಲಿ ನಿವೇದಿತಾ ತೋರಿದ ಅತ್ಯುತ್ತಮ ಪ್ರದರ್ಶನವನ್ನು ಕಂಡು ನಲ್ಲ ಸುದೀಪ್ ನಿಬ್ಬೆರಗಾಗಿದ್ದಾರೆ.

  'ಬಿಗ್ ಬಾಸ್' ಮನೆಗೆ ಕಳೆದ ವಾರ ಸ್ಪರ್ಧಿಗಳ ಕುಟುಂಬದವರು ಭೇಟಿ ಕೊಡುತ್ತಿದ್ದರು. ಒಬ್ಬ ಸ್ಪರ್ಧಿಯು ತನ್ನ ಕುಟುಂಬದೊಂದಿಗೆ ಎಷ್ಟು ಹೊತ್ತು ಕಾಲ ಕಳೆಯಬಹುದು ಎಂಬುದಕ್ಕೆ 'ಬಿಗ್ ಬಾಸ್' ಸಮಯ ನಿಗದಿ ಮಾಡಿರಲಿಲ್ಲ.

  ಬದಲಾಗಿ, ಇನ್ನೊಬ್ಬ ಸ್ಪರ್ಧಿಗೆ ಮಡಿಕೆ ಬ್ಯಾಲೆನ್ಸ್ ಮಾಡುವ ಚಟುವಟಿಕೆ ನೀಡಿದ್ದರು. ಆ ಸ್ಪರ್ಧಿ ಎಷ್ಟು ಹೊತ್ತು ಮಡಿಕೆಯನ್ನ ಬ್ಯಾಲೆನ್ಸ್ ಮಾಡುತ್ತಾರೋ, ಅಷ್ಟು ಹೊತ್ತು ಕುಟುಂಬದವರ ಜೊತೆಗೆ ಇತರೆ ಸ್ಪರ್ಧಿಗಳು ಕಾಲ ಕಳೆಯಬಹುದಿತ್ತು. ಈ ಚಟುವಟಿಕೆಯಲ್ಲಿ ಅತ್ಯುನ್ನತ ಪ್ರದರ್ಶನ ನೀಡಿದವರು ನಿವೇದಿತಾ. ಅರ್ಧ ಗಂಟೆ ಆದರೂ ಮಡಿಕೆಯನ್ನ ನಿವೇದಿತಾ ಬೀಳಿಸಲಿಲ್ಲ. ಹೀಗಾಗಿ, ಅರ್ಧ ಗಂಟೆ ಪೂರ್ತಿ ದಿವಾಕರ್ ಪತ್ನಿ ಮಮತಾ ಅವರಿಗೆ 'ಬಿಗ್ ಬಾಸ್' ಮನೆಯೊಳಗೆ ಇರುವ ಅದೃಷ್ಟ ಲಭಿಸಿತು. ಮುಂದೆ ಓದಿರಿ...

  ದಿವಾಕರ್ ಸಂತಸಕ್ಕೆ ನಿವೇದಿತಾ ಕಾರಣ

  ದಿವಾಕರ್ ಸಂತಸಕ್ಕೆ ನಿವೇದಿತಾ ಕಾರಣ

  ಹಾಗ್ನೋಡಿದ್ರೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ... 'ಬಿಗ್ ಬಾಸ್' ಮನೆಯೊಳಗೆ ಕುಟುಂಬದವರ ಜೊತೆ ಹೆಚ್ಚು ಸಮಯ ಕಳೆದಿದ್ದು ಒನ್ ಅಂಡ್ ಒನ್ಲಿ ದಿವಾಕರ್. ಅದಕ್ಕೆ ಕಾರಣವಾಗಿದ್ದು ಒನ್ ಅಂಡ್ ಒನ್ಲಿ ನಿವೇದಿತಾ ಗೌಡ.

  'ಎಕ್ಸ್ ಟ್ರಾ ಮೆಣಸಿನಕಾಯಿ' ಹಾಕುವ ದಿವಾಕರ್ ಗೆ ಇದೆಲ್ಲ ಯಾಕೆ ಬೇಕು.?

  ನಿವೇದಿತಾಗೆ ಹೆಚ್ಚು ಸಮಯ ಸಿಗಲಿಲ್ಲ.!

  ನಿವೇದಿತಾಗೆ ಹೆಚ್ಚು ಸಮಯ ಸಿಗಲಿಲ್ಲ.!

  ಅಷ್ಟಕ್ಕೂ, ನಿವೇದಿತಾ ತಾಯಿ 'ಬಿಗ್ ಬಾಸ್' ಮನೆಯೊಳಗೆ ಬಂದಾಗ ಮಡಿಕೆ ಬ್ಯಾಲೆನ್ಸ್ ಮಾಡುವ ಜವಾಬ್ದಾರಿ ದಿವಾಕರ್ ಹೆಗಲ ಮೇಲಿತ್ತು. ಕಣ್ಮುಚ್ಚಿ ಕಣ್ತೆರೆಯುವುದರಲ್ಲಿ, ಮಡಿಕೆಯನ್ನ ದಿವಾಕರ್ ಬೀಳಿಸಿಬಿಟ್ಟರು. ಹೀಗಾಗಿ, ತಮ್ಮ ತಾಯಿ ಜೊತೆಗೆ ಹೆಚ್ಚು ಸಮಯ ಕಳೆಯಲು ನಿವೇದಿತಾಗೆ ಚಾನ್ಸ್ ಸಿಗಲಿಲ್ಲ.

  'ಗೊಂಬೆ' ನಿವೇದಿತಾ ಪಾಲಾಯ್ತು 'ಕಳಪೆ' ಬೋರ್ಡ್.!

  ಕೋಪ ಮನಸ್ಸಿನಲ್ಲಿ ಇಟ್ಟುಕೊಳ್ಳಲಿಲ್ಲ.!

  ಕೋಪ ಮನಸ್ಸಿನಲ್ಲಿ ಇಟ್ಟುಕೊಳ್ಳಲಿಲ್ಲ.!

  ಹೀಗಿದ್ದರೂ, ದಿವಾಕರ್ ಪತ್ನಿ ಬಂದಾಗ ಯಾವುದೇ ಬೇಸರ ಇಲ್ಲದೆ ನಿವೇದಿತಾ ಮಡಿಕೆಯನ್ನ ಬ್ಯಾಲೆನ್ಸ್ ಮಾಡಿದರು. ಅರ್ಧ ಗಂಟೆ ಆದರೂ ಮಡಿಕೆಯನ್ನ ಬೀಳಿಸದ ಕಾರಣ ದಿವಾಕರ್ ಪತ್ನಿಯನ್ನ 'ಬಿಗ್ ಬಾಸ್' ಹೊರಗೆ ಕರೆದರು.

  ನಿವೇದಿತಾಗೆ ಭೇಷ್ ಎಂದ ಸುದೀಪ್

  ನಿವೇದಿತಾಗೆ ಭೇಷ್ ಎಂದ ಸುದೀಪ್

  ನಿವೇದಿತಾ ಅವರ ಈ ಪರ್ಫಾಮೆನ್ಸ್ ಹಾಗೂ ಕಮ್ಮಿಟ್ ಮೆಂಟ್ ಗೆ ಸುದೀಪ್ ಭೇಷ್ ಎಂದರು. ''ನಿಮಗೆ ಕೈ ಮುಗಿಯುತ್ತೇವೆ. ನಿಮಗೆ ಓವರ್ congratulations ಹೇಳಬೇಕು. ಎಂಥಾ ಎಫರ್ಟ್ ಹಾಕಿದ್ರಿ ನೀವು... ಯಾರಾದರೂ ಮನೆಯವರು ಬಂದಾಗ, ನೀವು (ನಿವೇದಿತಾ) ಮಡಿಕೆಯನ್ನ ಬ್ಯಾಲೆನ್ಸ್ ಮಾಡಬೇಕು ಅಂತ ಹೇಳಿದ್ರೆ, ಇವರೇ (ನಿವೇದಿತಾ) ಸಿಗಬೇಕಾ ನಮಗೆ ಅಂತ ಎಲ್ಲರ ತಲೆಯಲ್ಲೂ ಡೌಟ್ ಬರುತ್ತೆ. ಯಾಕಂದ್ರೆ, ಅಷ್ಟು ಹೊತ್ತು ನೀವು ಬ್ಯಾಲನ್ಸ್ ಮಾಡಬಹುದು ಅಂತ ಯಾರೂ ಊಹಿಸಲು ಅಸಾಧ್ಯ. ಟೈಮ್ ಮೀರಿದರೂ ನೀವು ಮಡಿಕೆಯನ್ನ ಒಡೆಯಲಿಲ್ಲ. ವೆಲ್ ಡನ್. ಗುಡ್ ನಿವೇದಿತಾ'' ಎಂದರು ಸುದೀಪ್

  English summary
  Bigg Boss Kannada 5: Week 13: Sudeep appreciates Niveditha Gowda for her Best Performance in Task.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X