Just In
Don't Miss!
- Automobiles
ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಡುಕಾಟಿ ಮಾನ್ಸ್ಟರ್ ಬೈಕ್ ಉತ್ಪಾದನೆ ಆರಂಭ
- News
ನಂದಿಬೆಟ್ಟಕ್ಕೆ ರೋಪ್ ವೇ; ದಶಕಗಳ ಕನಸಿನ ಯೋಜನೆ ಹೇಗಿರಲಿದೆ?
- Sports
ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ, ಸಂಪೂರ್ಣ ಮಾಹಿತಿ
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
1 ವಾರದಲ್ಲಿ 27 ಬಿಲಿಯನ್ ಡಾಲರ್ ಕಳೆದುಕೊಂಡ ಎಲೋನ್ ಮಸ್ಕ್
- Lifestyle
ಈ ವಿಚಾರ ಕೇಳಿದ್ರೆ ಮುಂದೆಂದೂ ನೀವು ಪಪ್ಪಾಯ ಬೀಜವನ್ನು ಬಿಸಾಡಲಾರರಿ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವೋಟ್ ಗಳೆಲ್ಲವೂ ಒಂದೇ, ಆದ್ರೆ ಎಲಿಮೇಷನ್ ಮಾತ್ರ ಬೇರೆ ಬೇರೆ ದಿನ.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಹದಿನಾಲ್ಕನೇ ವಾರದ ಅಂತ್ಯಕ್ಕೆ ನೂತನ ತಿರುವು ನೀಡಲಾಗಿದೆ. 14ನೇ ವಾರ ವೀಕ್ಷಕರು ನೀಡಿದ್ದ ಮತಗಳ ಅನುಸಾರದ ಮೇಲೆ ಎರಡೆರಡು ಬಾರಿ ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆ.
ಈಗಾಗಲೇ, ವೀಕ್ಷಕರು ನೀಡಿದ ಮತಗಳ ಆಧಾರದ ಮೇಲೆ ಅತಿ ಕಡಿಮೆ ವೋಟ್ ಪಡೆದಿದ್ದ ಅನುಪಮಾ ಗೌಡ ಈಗಾಗಲೇ 'ಬಿಗ್ ಬಾಸ್' ಮನೆಯಿಂದ ಹೊರಬಂದಿದ್ದಾಗಿದೆ.
ಇದೀಗ ಅನುಪಮಾ ಗೌಡ ರವರಿಗಿಂತ ಕೊಂಚ ಹೆಚ್ಚಿಗೆ ಮತಗಳನ್ನು ಪಡೆದಿರುವವರು ಇಂದು 'ಬಿಗ್ ಬಾಸ್' ಮನೆಯಿಂದ ಔಟ್ ಆಗಲಿದ್ದಾರೆ. ವೋಟ್ ಗಳೆಲ್ಲವೂ ಒಂದೇ. ಆದರೂ ಬೇರೆ ಬೇರೆ ದಿನ ಎಲಿಮಿನೇಷನ್ ಮಾಡಿ ವೀಕ್ಷಕರಿಗೆ ಕುತೂಹಲ ಹೆಚ್ಚಿಸುತ್ತಿದ್ದಾರೆ 'ಬಿಗ್ ಬಾಸ್'.! ಮುಂದೆ ಓದಿರಿ...

ನೂರನೇ ದಿನಕ್ಕೆ ಮುಂಚೆ ಒಂದು, ನೂರನೇ ದಿನ ಆದ್ಮೇಲೆ ಇನ್ನೊಂದು.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ 99ನೇ ದಿನ ಒಂದು ಎಲಿಮಿನೇಷನ್ ಹಾಗೂ 101ನೇ ದಿನ ಇನ್ನೊಂದು ಎಲಿಮಿನೇಷನ್ ನಡೆಯಲಿದೆ.

'ಬಾಟಂ 2'ನಲ್ಲಿ ಇದ್ದೋರು ಮನೆಗೆ.!
ಕಳೆದ ವಾರ ಇದ್ದ ಏಳು ಮನೆ ಮಂದಿ ಪೈಕಿ ಯಾವ ಇಬ್ಬರು ಸ್ಪರ್ಧಿಗಳಿಗೆ ಅತಿ ಕಡಿಮೆ ವೋಟ್ ಬಂದಿದೆಯೋ, ಆ ಇಬ್ಬರಿಗೆ ಗೇಟ್ ಪಾಸ್ ಖಚಿತ. ಅದರಲ್ಲಿ ಈಗಾಗಲೇ ಅನುಪಮಾ ಗೌಡ ಎಲಿಮಿನೇಟ್ ಆಗಿದ್ದಾಗಿದೆ. ಅನುಪಮಾಗಿಂತ ಕೊಂಚ ಹೆಚ್ಚಿಗೆ ವೋಟ್ ಪಡೆದುಕೊಂಡಿರುವವರು, ಇತರರಿಗಿಂತ ಕಡಿಮೆ ವೋಟ್ ಗಿಟ್ಟಿಸಿಕೊಂಡಿರುವವರು ಇಂದು ಔಟ್ ಆಗಲಿದ್ದಾರೆ.

'ಬಾಟಂ 2'ನಲ್ಲಿ ಇದ್ದೋರು ಯಾರು.?
'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಸೇವ್ ಮಾಡಿಕೊಂಡು ಬಂದ ಸ್ಪರ್ಧಿಗಳ ಆರ್ಡರ್ ಆಧಾರದ ಮೇಲೆ ಅನುಪಮಾ ಹಾಗೂ ಶ್ರುತಿ ಪ್ರಕಾಶ್ ಬಾಟಂ 2 ನಲ್ಲಿ ಇದ್ದರು.

ಆರ್ಡರ್ ನಲ್ಲಿ ಅರ್ಥ ಇಲ್ಲ ಎಂದಿದ್ದ ಸುದೀಪ್.!
''ಇವತ್ತು ಯಾರನ್ನ ಯಾವ ಆರ್ಡರ್ ನಲ್ಲಿ ಸೇವ್ ಮಾಡಿಕೊಂಡು ಬಂದ್ನೋ ಅದಕ್ಕೆ ಅರ್ಥ ಇಲ್ಲ. Randam ಆಗಿ ಮಾಡಿದ್ದು, ತಾವು ಹಾಕಿದ್ದ ವೋಟ್ ಮುಗಿದು ಹೋಗಿದೆ. ಬಾಟಂ ಸೆಕೆಂಡ್ ನಲ್ಲಿ ಇರೋರು, ಅಂದ್ರೆ ಅನುಪಮಾಗಿಂತ ಸ್ವಲ್ಪ ಜಾಸ್ತಿ ವೋಟ್ ತೆಗೆದುಕೊಂಡಿರೋರು ಈ ಮನೆಯಿಂದ ಹೊರಗೆ ಬರ್ತಾರೆ'' ಎಂದು ಸುದೀಪ್ ಸ್ಪಷ್ಟಪಡಿಸಿದರು.

ಇಂದು ಔಟ್ ಆಗೋರು ಯಾರು.?
ಸದ್ಯ 'ಬಿಗ್ ಬಾಸ್' ಮನೆಯೊಳಗೆ ಚಂದನ್ ಶೆಟ್ಟಿ, ದಿವಾಕರ್, ನಿವೇದಿತಾ ಗೌಡ, ಜೆಕೆ, ಸಮೀರಾಚಾರ್ಯ ಹಾಗೂ ಶ್ರುತಿ ಪ್ರಕಾಶ್ ಇದ್ದಾರೆ. ಈ ಆರು ಜನರ ಪೈಕಿ ಇಂದು ಗೇಟ್ ಪಾಸ್ ಯಾರಿಗೆ.? ಎಂಬ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ.