»   » ಕ್ಷಣಾರ್ಧದಲ್ಲಿ ಸೇಫ್ ಆಗ್ಹೋದ ರಿಯಾಝ್: ಬೆಂಕಿಗಾಹುತಿ ಮಾಡಿದವರಿಗೆ ಮುಖಭಂಗ.!

ಕ್ಷಣಾರ್ಧದಲ್ಲಿ ಸೇಫ್ ಆಗ್ಹೋದ ರಿಯಾಝ್: ಬೆಂಕಿಗಾಹುತಿ ಮಾಡಿದವರಿಗೆ ಮುಖಭಂಗ.!

Posted By:
Subscribe to Filmibeat Kannada
Bigg Boss Kannada Season 5 : ಚಂದನ್ ಶೆಟ್ಟಿ ಗೆ ಥ್ಯಾಂಕ್ಸ್ ಹೇಳಿದ ರಿಯಾಜ್ ಭಾಷಾ | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ನಾಲ್ಕನೇ ವಾರ ಲಕ್ ಮೇಲೆ ಕ್ಯಾಪ್ಟನ್ ಆದ ರಿಯಾಝ್ ಯಾರಿಗೂ ಭೇದಭಾವ ಮಾಡಬಾರದು ಎಂಬ ಕಾರಣಕ್ಕೆ ಕಾರ್ಪರೇಟ್ ಸ್ಟೈಲ್ ನಲ್ಲಿ ಮನೆ ನಡೆಸಿದರು. ಹಾಲು ಮುಚ್ಚಿಟ್ಟು ದೊಡ್ಡ ರಾದ್ಧಾಂತ ಆದ ಕಾರಣ, ಸ್ಟಾಕ್ ಚೆಕ್ಕಿಂಗ್ ಮಾಡಿದರು.

ಆದರೆ, ಇದೆಲ್ಲ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಹಿಡಿಸಲಿಲ್ಲ. ರಿಯಾಝ್ ರವರ ನಡೆ, ತೆಗೆದುಕೊಂಡ ನಿರ್ಧಾರಗಳು ಕೆಲವರಿಗೆ ಇಷ್ಟ ಆಗಲಿಲ್ಲ. ಹೀಗಾಗಿ, ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ರಿಯಾಝ್ ಟಾರ್ಗೆಟ್ ಆಗಿದ್ದರು.

'ಬಿಗ್ ಬಾಸ್' ಮನೆಯಲ್ಲಿ ಬೆಂಕಿಗೆ ಬಿದ್ದ ಅತಿ ಹೆಚ್ಚು ಮುಖಗಳಿವು.!

ನಿರೀಕ್ಷೆಯಂತೆ, ನಾಮಿನೇಷನ್ ಪ್ರಕ್ರಿಯೆಯಲ್ಲಿ ರಿಯಾಝ್ ವಿರುದ್ಧ ಅತಿ ಹೆಚ್ಚು ಮತಗಳು ಲಭ್ಯವಾದವು. ಆದ್ರೆ, ಚಂದನ್ ಶೆಟ್ಟಿ ಕೃಪೆಯಿಂದ ಕ್ಷಣಾರ್ಧದಲ್ಲಿ ರಿಯಾಝ್ ಸೇಫ್ ಆಗ್ಹೋದರು. ರಿಯಾಝ್ ಭಾವಚಿತ್ರದ ಬ್ಲಾಕ್ ಗಳನ್ನು ಬೆಂಕಿಗಾಹುತಿ ಮಾಡಿದವರಿಗೆ ಮುಖಭಂಗವಾದಂತೆ ಆಯಿತು. ಮುಂದೆ ಓದಿರಿ....

ಇದೇ ಮೊದಲ ಬಾರಿಗೆ.!

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಐದನೇ ವಾರ ಓಪನ್ ನಾಮಿನೇಷನ್ ಪ್ರಕ್ರಿಯೆ ನಡೆಯಿತು. ಪ್ರತಿಯೊಬ್ಬ ಸ್ಪರ್ಧಿ ಕೂಡ ತಾವು ನಾಮಿನೇಟ್ ಮಾಡಲು ಇಚ್ಛಿಸುವ ಇಬ್ಬರು ಸದಸ್ಯರ ಭಾವಚಿತ್ರಗಳಿಂದ ನಾಲ್ಕು ಬ್ಲಾಕ್ ಗಳನ್ನು ತೆಗೆದುಕೊಂಡು ಬೆಂಕಿಗೆ ಹಾಕಬೇಕಿತ್ತು.

ಸರಿ-ತಪ್ಪು ನೋಡದೆ ರಿಯಾಝ್ ಮೇಲೆ ಉಗ್ರ ಪ್ರತಾಪ ತೋರಿದ ಜಗನ್, ಚಂದ್ರು.!

ರಿಯಾಝ್ ವಿರುದ್ಧ ಅತಿ ಹೆಚ್ಚು ಮತಗಳು

ಐದನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ರಿಯಾಝ್ ವಿರುದ್ಧ ಅತಿ ಹೆಚ್ಚು ಮತಗಳು ಬಿದ್ದವು. ಅನುಪಮಾ ಗೌಡ, ಜಗನ್ನಾಥ್, ಆಶಿತಾ, ಕೃಷಿ, ಶ್ರುತಿ ಪ್ರಕಾಶ್ ಹಾಗೂ ಜೆಕೆ.... ರಿಯಾಝ್ ಭಾವಚಿತ್ರದಿಂದ ಬ್ಲಾಕ್ ಗಳನ್ನು ತೆಗೆದು ಬೆಂಕಿಗೆ ಹಾಕಿದರು.

ಎಲ್ಲರ ಕಾರಣ ಒಂದೇ..!

ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಳ್ಳಲಿಲ್ಲ.... ಸ್ಟಾಕ್ ಚೆಕ್ಕಿಂಗ್ ಮಾಡಿದ್ದು ಇಷ್ಟ ಆಗಲಿಲ್ಲ.... ಕಾರ್ಪರೇಟ್ ಸ್ಟೈಲ್ ನಲ್ಲಿ ಮನೆ ನಡೆಸಿದ್ದು ಸರಿಯಲ್ಲ.... ಎಂಬ ಕಾರಣಗಳನ್ನೇ ಎಲ್ಲರೂ ನೀಡಿದರು.

ಚಂದನ್ ಶೆಟ್ಟಿಗೆ ಸಿಕ್ತು ವಿಶೇಷ ಅಧಿಕಾರ

'ಬಿಗ್ ಬಾಸ್' ಮನೆಯ ಐದನೇ ವಾರದ ಕ್ಯಾಪ್ಟನ್ ಆಗಿ ಚಂದನ್ ಶೆಟ್ಟಿ ಆಯ್ಕೆ ಆಗಿದ್ದರು. ಕ್ಯಾಪ್ಟನ್ ಚಂದನ್ ಶೆಟ್ಟಿಗೆ 'ಬಿಗ್ ಬಾಸ್' ಒಂದು ವಿಶೇಷ ಅಧಿಕಾರ ನೀಡಿದ್ದರು. ಅದೇನಪ್ಪಾ ಅಂದ್ರೆ, ಈಗಾಗಲೇ ನಾಮಿನೇಟ್ ಆಗಿರುವವರ ಪೈಕಿ ಒಬ್ಬರನ್ನ ನಾಮಿನೇಷನ್ ನಿಂದ ಮುಕ್ತ ಮಾಡುವ ಅಧಿಕಾರ ಚಂದನ್ ಶೆಟ್ಟಿಗೆ ಲಭಿಸಿತು.

ಚಂದನ್ ಹಿಂದು ಮುಂದು ಯೋಚಿಸಲೇ ಇಲ್ಲ.!

ವಿಶೇಷ ಅಧಿಕಾರ ಸಿಕ್ಕ ಕೂಡಲೆ, ಹಿಂದು ಮುಂದು ಯೋಚಿಸದ ಚಂದನ್ ಶೆಟ್ಟಿ, ರಿಯಾಝ್ ರವರನ್ನ ಸೇಫ್ ಮಾಡಿದರು. ಹೀಗಾಗಿ, ಅತಿ ಹೆಚ್ಚು ಮತ ಪಡೆದು ನಾಮಿನೇಟ್ ಆಗಿದ್ದ ರಿಯಾಝ್ ಕ್ಷಣಾರ್ಧಲ್ಲಿ ಸೇಫ್ ಆಗ್ಬಿಟ್ಟರು. ಚಂದನ್ ಗೆ ರಿಯಾಝ್ ಧನ್ಯವಾದ ಅರ್ಪಿಸಿದರು.

ನಾಮಿನೇಟ್ ಮಾಡಿದವರಿಗೆ ಮುಖಭಂಗ

ಚಂದನ್ ಶೆಟ್ಟಿ ರವರ ನಡೆಯಿಂದ ನಾನಾ ಕಾರಣಗಳನ್ನು ನೀಡಿ ರಿಯಾಝ್ ರನ್ನ ನಾಮಿನೇಟ್ ಮಾಡಿದವರಿಗೆ ಮುಖಭಂಗವಾದಂತೆ ಆಯ್ತು.

English summary
Bigg Boss Kannada 5: Week 5: Riyaz becomes safe from Nominations, Thanks to Captain Chandan Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada