»   » ಎಲ್ಲರಿಗೂ ಒಂದೇ ನ್ಯಾಯ, ಒಂದೊಂದು ಗುಂಪಿಗೆ ಒಂದೊಂದು ನ್ಯಾಯ ಇಲ್ಲ.!

ಎಲ್ಲರಿಗೂ ಒಂದೇ ನ್ಯಾಯ, ಒಂದೊಂದು ಗುಂಪಿಗೆ ಒಂದೊಂದು ನ್ಯಾಯ ಇಲ್ಲ.!

Posted By:
Subscribe to Filmibeat Kannada
Bigg Boss Kannada Season 5 : ಸಿಹಿ ಕಹಿ ಚಂದ್ರು ಅವರನ್ನ ಪ್ರಶ್ನೆ ಮಾಡಿದ ಸುದೀಪ್ | Filmibeat Kannada

ರಿಯಾಝ್, 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿದ್ದಾಗ... ಅಡುಗೆ ಮನೆಯ ಜವಾಬ್ದಾರಿಯನ್ನ ಸಮೀರಾಚಾರ್ಯ ಹಾಗೂ ಚಂದನ್ ಶೆಟ್ಟಿಗೆ ವಹಿಸಿದ್ದರು. ಆಗ, ''ಅಡುಗೆ ಮನೆಯಲ್ಲಿ ಸ್ವಚ್ಛತೆ ಕಾಪಾಡುತ್ತಿಲ್ಲ. ಅವತ್ತಿನ ದಿನದ ಪಾತ್ರೆಗಳನ್ನ ಅವತ್ತಿನ ದಿನವೇ ತೊಳೆಯುತ್ತಿಲ್ಲ'' ಎಂದು ಸೆಲೆಬ್ರಿಟಿ ಸ್ಪರ್ಧಿಗಳು ದೂರಿದ್ದರು.

ನಂತರ ಚಂದನ್ ಶೆಟ್ಟಿ ಕ್ಯಾಪ್ಟನ್ ಆದ್ಮೇಲೆ, ಅಡುಗೆ ಮನೆಯ ಸುಪರ್ದಿಯನ್ನ ಸಿಹಿ ಕಹಿ ಚಂದ್ರುಗೆ ವಹಿಸಿದರು. ಆಗಲೂ, ಅವತ್ತಿನ ದಿನದ ಪಾತ್ರೆಗಳನ್ನ ಅವತ್ತೇ ತೊಳಿಯುತ್ತಿರಲಿಲ್ಲ.

''ಸ್ವಚ್ಛತೆ ಬಗ್ಗೆ ಬೆಟ್ಟು ಮಾಡಿ ತೋರಿಸಿದವರು ಮಾಡುತ್ತಿರುವುದು ಸರಿಯೇ.?'' ಎಂಬುದನ್ನು ಚಂದನ್ ಶೆಟ್ಟಿ ಹಾಗೂ ದಿವಾಕರ್ ಕ್ಯಾಮರಾ ಮುಂದೆ ಕೇಳಿದರು. ಈ ಟಾಪಿಕ್ ನ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ತೆಗೆದರು. ಮುಂದೆ ಓದಿರಿ....

ಸಿಹಿ ಕಹಿ ಚಂದ್ರುಗೆ ಸುದೀಪ್ ಪ್ರಶ್ನೆ

''ಅಡುಗೆ ಮನೆಯ ಸ್ವಚ್ಛತೆ ಬಗ್ಗೆ ಮಾತನಾಡಿದ್ರಿ. ಅವತ್ತಿನ ದಿನದ ಪಾತ್ರೆಯನ್ನ ಅವತ್ತಿನ ದಿನವೇ ತೊಳೆದು ಇಟ್ಟರೆ ಚೆನ್ನಾಗಿರುತ್ತದೆ ಅಂತ ನೀವೇ ಹೇಳಿದ್ರಿ. ಆದರೆ, ಒಂದು ದಿನ ರಾತ್ರಿ ಚಂದನ್, ಸಮೀರಾಚಾರ್ಯ ಹಾಗೂ ದಿವಾಕರ್ ಕ್ಯಾಮರಾ ಮುಂದೆ ಬಂದು ಅಡುಗೆ ಮನೆಯಲ್ಲಿ ಬಿದ್ದಿದ್ದ ಪಾತ್ರೆಗಳನ್ನ ತೋರಿಸುತ್ತಾರೆ'' ಎಂದು ಸಿಹಿ ಕಹಿ ಚಂದ್ರುಗೆ ಸುದೀಪ್ ಪ್ರಶ್ನಿಸಿದರು.

ಸಿಹಿ ಕಹಿ ಚಂದ್ರು ಮರೆತ ಗುಟ್ಟು, ಕಿಚ್ಚ ಸುದೀಪ್ ಮುಂದೆ ರಟ್ಟು.!

ಸಿಹಿ ಕಹಿ ಚಂದ್ರು ಕೊಟ್ಟ ಸಬೂಬು ಏನು.?

''ಅವತ್ತಿನ ದಿನ ಟಾಸ್ಕ್ ಇತ್ತು ಸಿಕ್ಕಾಪಟ್ಟೆ ಸುಸ್ತಾಗಿತ್ತು. ಊಟ ಲೇಟ್ ಆಗಿತ್ತು. ಹೀಗಾಗಿ, ಮಾರನೇ ದಿನ ಬೆಳಗ್ಗೆ ತೊಳೆಯುವ ಬಗ್ಗೆ ಡಿಸೈಡ್ ಮಾಡಿದ್ವಿ'' ಎಂದು ಉತ್ತರಿಸಿದರು ಸಿಹಿ ಕಹಿ ಚಂದ್ರು.

ಸಿಹಿ ಕಹಿ ಚಂದ್ರು ಅಸಲಿಯತ್ತು ಬಟಾಬಯಲು ಮಾಡಿದ ಕೃಷಿ ತಾಪಂಡ.!

ಸುಸ್ತು ಎಲ್ಲರಿಗೂ ಒಂದೇ.!

''ಸುಸ್ತು ಅಂತ ಬಂದಾಗ, ಕಳೆದ ವಾರ ಕೂಡ ಕಷ್ಟವಾದ ಟಾಸ್ಕ್ ಇತ್ತು. ಸುಸ್ತು... ಎಲ್ಲರಿಗೂ ಸುಸ್ತೇ ತಾನೇ. ಅವರೂ ಕೂಡ ಹಾಗೇ ಯೋಚಿಸಿ, ಬೆಳಗ್ಗೆ ತೊಳೆಯುವ ಬಗ್ಗೆ ಯೋಚಿಸಿರಬಹುದಲ್ವಾ.?'' ಎಂದರು ಸುದೀಪ್.

ಒಂದೊಂದು ಗುಂಪಿಗೆ ಒಂದೊಂದು ನ್ಯಾಯ ಇಲ್ಲ!

''ಒಂದು ನ್ಯಾಯಕ್ಕೆ ಬದ್ಧರಾಗಬೇಕು. ಒಬ್ಬೊಬ್ಬರಿಗೆ ಒಂದೊಂದು ನ್ಯಾಯ. ಒಂದೊಂದು ಗುಂಪಿಗೆ ಒಂದೊಂದು ನ್ಯಾಯ ಅಂತ ಬರಲ್ವಾ.?'' ಎಂದು ಕಡ್ಡಿ ತುಂಡು ಮಾಡಿದ ಹಾಗೆ ಸುದೀಪ್ ಹೇಳಿದರು.

English summary
Bigg Boss Kannada 5: Week 5: Sudeep questions Sihi Kahi Chandru

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada