»   » ಅದೃಷ್ಟ ಅಂದ್ರೆ ಇದು.! ಏನ್ ಗುರು ಚಂದನ್ ಶೆಟ್ಟಿ ಲಕ್ಕು.!

ಅದೃಷ್ಟ ಅಂದ್ರೆ ಇದು.! ಏನ್ ಗುರು ಚಂದನ್ ಶೆಟ್ಟಿ ಲಕ್ಕು.!

Posted By:
Subscribe to Filmibeat Kannada
Bigg Boss Kannada Season 5 : 6 ವಾರಗಳಿಂದ ಸೇಫ್ ಆಗಿ ಆಡ್ತಿದ್ದಾರೆ ಚಂದನ್ ಶೆಟ್ಟಿ | FIlmibeat Kannada

'ಬಿಗ್ ಬಾಸ್' ಮನೆಯಲ್ಲಿ ನಾಮಿನೇಟ್ ಆಗದೆ... ಯಾರ ಕೆಂಗಣ್ಣಿಗೂ ಗುರಿಯಾಗದೆ... ಟಾರ್ಗೆಟ್ ಆಗದೆ... ಇರುವುದು ತುಂಬಾ ಕಷ್ಟ. ಅಂಥದ್ರಲ್ಲಿ ನಮ್ಮ ಚಂದನ್ ಶೆಟ್ಟಿ ಸತತವಾಗಿ ಐದು ವಾರಗಳ ಕಾಲ ನಾಮಿನೇಟ್ ಆಗದೆ ಇದ್ದರು.

ಆರನೇ ವಾರ ಚಂದನ್ ಶೆಟ್ಟಿ ನಾಮಿನೇಟ್ ಆಗಿದ್ದರೂ, ಲೆಕ್ಕಕ್ಕೆ ಇಲ್ಲ. ಯಾಕಂದ್ರೆ, ಈ ವಾರ ಎಲಿಮಿನೇಷನ್ ಇಲ್ಲ. ಹೀಗಾಗಿ ಚಂದನ್ ಶೆಟ್ಟಿಗೆ ಸತತ ಆರನೇ ವಾರವೂ ತಲೆ ನೋವಿಲ್ಲ. ಅದೃಷ್ಟ ಅಂದ್ರೆ ಹೀಗೆ ಇರಬೇಕು ನೋಡಿ..!

ಅದ್ಯಾವ ಘಳಿಗೆಯಲ್ಲಿ 'ಬಿಗ್ ಬಾಸ್' ಮನೆಯೊಳಗೆ ಚಂದನ್ ಶೆಟ್ಟಿ ಕಾಲಿಟ್ರೋ, ಆರು ವಾರಗಳ ಕಾಲ ಫುಲ್ ಸೇಫ್ ಆಗಿದ್ದಾರೆ. ಈ ತರಹ ಅದೃಷ್ಟ 'ಬಿಗ್ ಬಾಸ್' ಮನೆಯಲ್ಲಿ ಇತರೆ ಯಾವ ಸ್ಪರ್ಧಿಗೂ ಸಿಕ್ಕಿಲ್ಲ.! ಮುಂದೆ ಓದಿರಿ...

ನಾಲ್ಕು ಪ್ಲಸ್ ಎರಡು.!

'ಬಿಗ್ ಬಾಸ್' ಮನೆಯಲ್ಲಿ ನಾಲ್ಕು ವಾರಗಳ ಕಾಲ ಸತತವಾಗಿ ನಾಮಿನೇಟ್ ಆಗದ ಚಂದನ್ ಶೆಟ್ಟಿ, ಐದನೇ ವಾರ ಕ್ಯಾಪ್ಟನ್ ಆಗಿ ಸೇಫ್ ಆದರು. ಆರನೇ ವಾರ ನಾಮಿನೇಟ್ ಆಗಿದ್ದರೂ, ಎಲಿಮಿನೇಷನ್ ಇಲ್ಲದ ಕಾರಣ... ಈ ವಾರವೂ ಚಂದನ್ ಶೆಟ್ಟಿ ಫುಲ್ ಸೇಫ್ ಆಗಿದ್ದಾರೆ.

ಅದೃಷ್ಟವಶಾತ್ ಕ್ಯಾಪ್ಟನ್ ಆದ ಚಂದನ್ ಶೆಟ್ಟಿ: ಈ ವಾರ ಕೂಡ ಸೇಫ್.!

ಏಕೈಕ ಸ್ಪರ್ಧಿ

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸತತವಾಗಿ ಆರು ವಾರಗಳು ಸೇಫ್ ಝೋನ್ ನಲ್ಲಿರುವ ಏಕೈಕ ಸ್ಪರ್ಧಿ ಅಂದ್ರೆ ಅದು ಚಂದನ್ ಶೆಟ್ಟಿ.!

ಚಂದನ್ ಶೆಟ್ಟಿ ಲೆಕ್ಕಾಚಾರ ಮಾಡಿ ಆಡ್ತಿದ್ದಾರಾ? ಸುದೀಪ್ ಆಡಿದ ಮಾತಿನ ಅರ್ಥವೇನು?

ನಾಲ್ಕು ಜನ ನಾಮಿನೇಟ್ ಮಾಡಿದ್ದರು.!

ಆರು ವಾರಗಳಲ್ಲಿ ಇದೇ ಮೊದಲ ಬಾರಿಗೆ ಚಂದನ್ ಶೆಟ್ಟಿ ನಾಮಿನೇಟ್ ಆಗಿದ್ದರು. ಸಿಹಿ ಕಹಿ ಚಂದ್ರು, ಅನುಪಮಾ ಗೌಡ, ಜಗನ್ನಾಥ್ ಹಾಗೂ ಶ್ರುತಿ ಪ್ರಕಾಶ್... ಚಂದನ್ ಶೆಟ್ಟಿ ವಿರುದ್ಧ ಮತ ಚಲಾಯಿಸಿದ್ದರು. ಆದ್ರೆ, ಈ ವಾರ ಎಲಿಮಿನೇಷನ್ ಇಲ್ಲದ ಕಾರಣ ಚಂದನ್ ಶೆಟ್ಟಿ ಸೇಫ್ ಆಗಿದ್ದಾರೆ.


ಅಷ್ಟರಲ್ಲೇ ಜಸ್ಟ್ ಮಿಸ್ ಆದ ಚಂದನ್: ಈ ವಾರವೂ ಶೆಟ್ರಿಗೆ ತಲೆನೋವಿಲ್ಲ.!

ನಿಮ್ಮ ಅಭಿಪ್ರಾಯ ತಿಳಿಸಿ...

ಚಂದನ್ ಶೆಟ್ಟಿ ಆಟದ ವೈಖರಿ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ... ನಿಮ್ಮ 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪೇಜ್ ಲೈಕ್ ಮಾಡಿ, ಕಾಮೆಂಟ್ ಮಾಡಿ....

English summary
Bigg Boss Kannada 5: Week 6: Chandan Shetty plays safe for 6 weeks

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada