»   » ಜಸ್ಟ್ ಮಿಸ್ ಆದ ಜಯಶ್ರೀನಿವಾಸನ್: ಕ್ಯಾಪ್ಟನ್ ಆದ ಜಯರಾಂ ಕಾರ್ತಿಕ್.!

ಜಸ್ಟ್ ಮಿಸ್ ಆದ ಜಯಶ್ರೀನಿವಾಸನ್: ಕ್ಯಾಪ್ಟನ್ ಆದ ಜಯರಾಂ ಕಾರ್ತಿಕ್.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಇಲ್ಲಿಯವರೆಗೂ ಯಾವುದೇ ವಿವಾದಗಳಿಗೆ ಸಿಲುಕದೆ, ಯಾರೊಂದಿಗೂ ಕಿರಿಕ್ ಮಾಡಿಕೊಳ್ಳದೇ, ಸದಾ ನಗುನಗುತ್ತಾ, ಹಾಡುಗಳನ್ನು ಗುನುಗುತ್ತಾ ಇರುವ ಜಯರಾಂ ಕಾರ್ತಿಕ್ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.

ಹಾಗ್ನೋಡಿದ್ರೆ, ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಯಲ್ಲಿ ಜಯರಾಂ ಕಾರ್ತಿಕ್ ಹಾಗೂ ಜಯಶ್ರೀನಿವಾಸನ್ ನಡುವೆ 'ಟೈ' ಆಗಿತ್ತು. ಇನ್ನೇನು ಜಯಶ್ರೀನಿವಾಸನ್ ಕ್ಯಾಪ್ಟನ್ ಆಗುತ್ತಾರೆ ಅಂತ ಅಂದುಕೊಳ್ಳುವಾಗಲೇ, ಕ್ಯಾಪ್ಟನ್ ಪಟ್ಟ ಜೆಕೆ ಅಲಿಯಾಸ್ ಜಯರಾಂ ಕಾರ್ತಿಕ್ ಗೆ ಒಲಿಯಿತು. ಮುಂದೆ ಓದಿರಿ....

ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ನಡೆದಿದ್ದು ಹೇಗೆ.?

ಮನೆಯ ಕ್ಯಾಪ್ಟನ್ ಆಗಲು ಯೋಗ್ಯರು ಎಂದು ತಮಗೆ ಎನಿಸುವ ಇಬ್ಬರು ಸ್ಪರ್ಧಿಗಳಿಗೆ ತಲಾ ಒಂದು ಬ್ಯಾಡ್ಜ್ ನ ಒಬ್ಬರು ತೊಡಸಬೇಕಿತ್ತು. ಅತಿ ಹೆಚ್ಚು ಬ್ಯಾಡ್ಜ್ ಪಡೆಯುವ ಸದಸ್ಯರು ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆಗುವ ಚಟುವಟಿಕೆಯನ್ನ 'ಬಿಗ್ ಬಾಸ್' ನೀಡಿದ್ದರು.

ಸುದೀಪ್ ಎದುರಿಗೆ ಅನುಪಮಾ ತಾಯಿ-ಕಿರಿಕ್ ಕೀರ್ತಿ ವಾಗ್ಯುದ್ಧ.!

ಇಬ್ಬರಿಗೂ ಸಮ.!

ಇತರೆ ಸ್ಪರ್ಧಿಗಳಿಗೆ ಹೋಲಿಸಿದರೆ, ಜಯಶ್ರೀನಿವಾಸನ್ ಹಾಗೂ ಜೆಕೆಗೆ ಅತಿ ಹೆಚ್ಚು ಬ್ಯಾಡ್ಜ್ ಲಭಿಸಿದ್ದವು. ಜಯಶ್ರೀನಿವಾಸನ್ ಹಾಗೂ ಜೆಕೆಗೆ ಸಮಾನ ಪ್ರಮಾಣದ ಬ್ಯಾಡ್ಜ್ ಗಳು ಲಭ್ಯವಾದವು.

'ಬಿಗ್ ಬಾಸ್' ಮನೆಯೊಳಗೆ ಹೋಗ್ತಾರಾ ನಟಿ ಶ್ರದ್ಧಾ ಶ್ರೀನಾಥ್.?

ಟೈ ಬ್ರೇಕರ್

ಟೈ ಬ್ರೇಕ್ ಮಾಡಲು 'ಬಿಗ್ ಬಾಸ್' ಮನೆಯ ಸದಸ್ಯರು ಜೆಕೆ ಹಾಗೂ ಜಯಶ್ರೀನಿವಾಸನ್ ನಡುವೆ ಒಬ್ಬರನ್ನ ಹೆಸರನ್ನ ಆಯ್ಕೆ ಮಾಡಬೇಕಿತ್ತು. ಎಲ್ಲ ಸದಸ್ಯರ ಮತಗಳ ಅನುಸಾರದ ಮೇಲೆ ಜೆಕೆ ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆದರು.

ನಿವೇದಿತಾರನ್ನ ಹೊಗಳಿದ ಸುದೀಪ್: ಕಿಚ್ಚ ಕೊಟ್ಟ ಕಾಂಪ್ಲಿಮೆಂಟ್ ಏನು.?

ಜಸ್ಟ್ ಮಿಸ್ ಆದ ಜಯಶ್ರೀನಿವಾಸನ್

ಜಯಶ್ರೀನಿವಾಸನ್ ಗೆ ಐದು ಮತಗಳು ಲಭಿಸಿದವು. ಜೆಕೆಗೆ ಆರು ಮತಗಳು ಲಭಿಸಿದವು. ಒಂದೇ ಒಂದು ಮತದಿಂದಾಗಿ ಜಯಶ್ರೀನಿವಾಸನ್ ಅವರಿಗೆ ಕ್ಯಾಪ್ಟನ್ ಪಟ್ಟ ಮಿಸ್ ಆಯ್ತು.

English summary
Bigg Boss Kannada 5: Week 7: Karthik Jayaram becomes captain

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada