'ಬಿಗ್ ಬಾಸ್' ಮನೆಯ 'ಈ' ವಸ್ತು ಚಂದನ್ ಶೆಟ್ಟಿಗೆ ಅಚ್ಚುಮೆಚ್ಚು.!
'ಬಿಗ್ ಬಾಸ್' ಮನೆಯೊಳಗೆ 106 ದಿನಗಳ ಕಾಲ ಇದ್ದ ಚಂದನ್ ಶೆಟ್ಟಿ ಅದ್ಯಾರ ಜೊತೆ ಅಷ್ಟೊಂದು ಟೈಮ್ ಪಾಸ್ ಮಾಡಿದ್ದಾರೋ, ಇಲ್ವೋ... ಆದ್ರೆ, ಬಿಗ್ ಬಾಸ್' ಮನೆಯೊಳಗೆ ಇದ್ದ ಮರದ ಪೀಠೋಪಕರಣದೊಂದಿಗೆ ಮಾತ್ರ ಚಂದನ್ ಶೆಟ್ಟಿಯ ಒಡನಾಟ ತುಸು ಹೆಚ್ಚಾಗಿತ್ತು.
ಹೇಳಿ ಕೇಳಿ ಚಂದನ್ ಶೆಟ್ಟಿ ಕನ್ನಡ Rapper. ಕ್ಷಣಾರ್ಧದಲ್ಲೇ ಹಾಡುಗಳ ಸಾಹಿತ್ಯ ರೆಡಿ ಮಾಡುವ ಚಂದನ್ ಶೆಟ್ಟಿ, ಮರದ ಪೀಠೋಪಕರಣವೊಂದನ್ನು ಬಳಸಿಕೊಂಡು ಟ್ಯೂನ್ ಸಂಯೋಜಿಸುತ್ತಿದ್ದರು.
ಸಾಹಿತ್ಯಕ್ಕೆ ತಕ್ಕಂತೆ ಮರದ ಪೀಠೋಪಕರಣದಿಂದಲೇ ಟ್ಯೂನ್ ಮಾಡುತ್ತಿದ್ದ ಚಂದನ್ ಶೆಟ್ಟಿ ಪ್ರತಿಭೆ ನಿಜಕ್ಕೂ ಮೆಚ್ಚುವಂಥದ್ದು. 'ಗೊಂಬೆ ಗೊಂಬೆ...', 'ಅನು.. ಹೇಳು ಏನು ಬೇಕು ನಿಂಗೆ...', 'ಟೆಲ್ ಮಿ ಹೂ ಆರ್ ಯು ಟು ಮಿ...' ಸೇರಿದಂತೆ ಹಲವು ಹಾಡುಗಳನ್ನು ಚಂದನ್ ಶೆಟ್ಟಿ ಸಂಯೋಜಿಸಿರುವುದು ಅದೇ ಮರದ ಪೀಠೋಪಕರಣ ದಿಂದಲೇ.! ಮುಂದೆ ಓದಿರಿ...

ಮರದ ಆ ಪೀಠೋಪಕರಣ ಕಂಡ್ರೆ ಚಂದನ್ ಗೆ ಅಚ್ಚುಮೆಚ್ಚು
ತಮ್ಮ ಹಾಡುಗಳಿಗೆ ಟ್ಯೂನ್ ಮಾಡಲು ಸಹಕಾರಿ ಆದ ಮರದ ಆ ಪೀಠೋಪಕರಣ ಕಂಡ್ರೆ ಚಂದನ್ ಶೆಟ್ಟಿಗೆ ಅಚ್ಚುಮೆಚ್ಚು. ಹೀಗಾಗಿ, ಅದನ್ನ 'ಬಿಗ್ ಬಾಸ್' ಮನೆಯಿಂದ ತಮ್ಮ ಮನೆಗೆ ತೆಗೆದುಕೊಂಡು ಹೋಗಲು ಚಂದನ್ ಶೆಟ್ಟಿ ಮನಸ್ಸು ಮಾಡಿದರು.

ಒಪ್ಪಿಕೊಂಡ 'ಬಿಗ್ ಬಾಸ್'
ಮರದ ಆ ಪೀಠೋಪಕರಣವನ್ನು ತೆಗೆದುಕೊಂಡು ಹೋಗಲು 'ಬಿಗ್ ಬಾಸ್' ಕೂಡ ಒಪ್ಪಿಗೆ ಸೂಚಿಸಿದರು. ಹೀಗಾಗಿ, 'ಬಿಗ್ ಬಾಸ್' ಮನೆಯಿಂದ ಹೊರಗೆ ಕಾಲಿಡುವಾಗ, ಮರದ ಪೀಠೋಪಕರಣದೊಂದಿಗೆ ಚಂದನ್ ಆಚೆ ಕಾಲಿಟ್ಟರು.

ಚಿಕ್ಕವಯಸ್ಸಿಂದಲೂ ಚಂದನ್ ಶೆಟ್ಟಿ ಹೀಗೆ...
ಚಂದನ್ ಶೆಟ್ಟಿ ಅವರ ತಂದೆ ಡಾ.ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ. ಚಂದನ್ ಶೆಟ್ಟಿ ತಂದೆ ಹಾಡು ಹಾಡುವಾಗ, ಅದಕ್ಕೆ ತಕ್ಕಂತೆ ಚಂದನ್ ಶೆಟ್ಟಿ ಬೀಟ್ಸ್ ಕೊಡಬೇಕಿತ್ತಂತೆ. ಆಗ ಪೆಟ್ಟಿಗೆ, ಮರದ ಡಬ್ಬ, ಬಕೆಟ್... ಹೀಗೆ ಕೈಗೆ ಸಿಕ್ಕ ವಸ್ತುಗಳನ್ನು ಉಪಯೋಗಿಸಿಕೊಂಡು ಚಿಕ್ಕವಯಸ್ಸಿನಿಂದಲೇ ಬೀಟ್ಸ್ ಕೊಡುವ ಹವ್ಯಾಸ ಚಂದನ್ ಶೆಟ್ಟಿಗೆ ಇದೆ.

ತಬಲಾ ಕ್ಲಾಸ್ ಗೆ ಸೇರಿಕೊಂಡ ಚಂದನ್
ಟ್ಯೂನ್ ಮಾಡುವುದರಲ್ಲಿ ಚಂದನ್ ಶೆಟ್ಟಿಗೆ ಇರುವ ಆಸಕ್ತಿಯನ್ನು ಗಮನಿಸಿದ ಪೋಷಕರು ತಬಲ ಕ್ಲಾಸ್ ಗೆ ಸೇರಿಸಿದರಂತೆ. ಅಲ್ಲಿಂದ ಶುರು ಆದ ಚಂದನ್ ಶೆಟ್ಟಿ ಸಂಗೀತ ಪಯಣ ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ.


Click it and Unblock the Notifications











