For Quick Alerts
  ALLOW NOTIFICATIONS  
  For Daily Alerts

  ರಾಕೇಶ್ ಎಷ್ಟೇ ಬ್ರೇನ್ ವಾಶ್ ಮಾಡಿದರೂ ಅಕ್ಷತಾ ಬಗ್ಗಲಿಲ್ಲ.!

  |
  Bigg Boss Kannada Season 6: ಬಿಗ್ ಬಾಸ್ ಮನೆಯಲ್ಲಿ ಏಳು ಜನ ನಾಮಿನೇಟ್ ಆದ್ರು | FILMIBEAT KANNADA

  ಕ್ಲೋಸ್ ಫ್ರೆಂಡ್ ಆಗಿರುವ ಆಂಡ್ರ್ಯೂನೇ ರಾಕೇಶ್ ಮತ್ತು ಅಕ್ಷತಾಗೆ 'ಗಂಡ-ಹೆಂಡತಿ' ಅಂತ ಕಾಮೆಂಟ್ ಮಾಡಿದರು. ಇನ್ನೂ ರಾಕೇಶ್-ಅಕ್ಷತಾ ನಡುವಿನ ಸಂಬಂಧದ ಬಗ್ಗೆ ಕಾಲ್ ಸೆಂಟರ್ ಟಾಸ್ಕ್ ನಲ್ಲಿ ಸ್ಪರ್ಧಿಗಳು ಹಿಗ್ಗಾಮುಗ್ಗಾ ಬೆಂಡೆತ್ತಿದರೂ, ವಿವಾದದ ಸೂಕ್ಷ್ಮತೆ ರಾಕೇಶ್ ಗೆ ಅರ್ಥ ಆಗಲಿಲ್ಲ.

  ''ಅಕ್ಷತಾ ಜೊತೆಗಿನ ಗೆಳೆತನ ಬಿಟ್ಟರೆ ರಾಕೇಶ್ ಫೈನಲ್ ಗೆ ಹೋಗುತ್ತಾರೆ'' ಎಂಬ ಅನಿಸಿಕೆ ಅಕ್ಷತಾ ಮನಸ್ಸಿನಲ್ಲಿ ಇರುವ ಕಾರಣ, ''ಅನಿಸಿಕೆಗೆ ತಕ್ಕ ಹಾಗೆ ನಡೆದುಕೊಳ್ಳಿ.. ಒಂದು ವಾರ ರಾಕೇಶ್ ಜೊತೆಗೆ ಮಾತನಾಡಬೇಡಿ'' ಎಂದು ಸುದೀಪ್ ಸಲಹೆ ಕೊಟ್ಟಿದ್ದರು.

  ಯಾರಿಗೂ ಕೆಟ್ಟ ಹೆಸರು ಬರಬಾರದು ಎಂದು ಸೂಕ್ಷ್ಮವಾಗಿ ವಿವಾದವನ್ನು ಪರಿಹರಿಸಲು ಸುದೀಪ್ ಮುಂದಾದರೆ, ಅದನ್ನ ಕೇಳುವ ವ್ಯವಧಾನ ರಾಕೇಶ್ ಗೆ ಇರಲಿಲ್ಲ. ''ಒಂದು ವಾರ ಮಾತನಾಡದೇ ಇರಲು ನಾನು ಒಪ್ಪಲ್ಲ'' ಅಂತ ಸುದೀಪ್ ಮುಂದೆಯೇ ರಾಕೇಶ್ ಹೇಳಿಬಿಟ್ಟರು. ಇನ್ನೂ ಅಕ್ಷತಾ ಕೂಡ ನಿಮಿಷಕ್ಕೊಂದು ಹೇಳಿಕೆ ಬದಲಿಸುತ್ತಿದ್ದರು.

  ಕಡೆಗೆ ಒಲ್ಲದ ಮನಸ್ಸಿನಿಂದಲೇ ರಾಕೇಶ್ ಜೊತೆಗೆ ಒಂದು ವಾರ ಮಾತನಾಡದಿರಲು ಅಕ್ಷತಾ ಮನಸ್ಸು ಮಾಡಿದರು. ಅಕ್ಷತಾ ನಿರ್ಧಾರಕ್ಕೆ ಬೆಲೆ ಕೊಡದ ರಾಕೇಶ್ ಪದೇ ಪದೇ ಬ್ರೇನ್ ವಾಶ್ ಮಾಡಲು ಮುಂದಾದರು. ಸುದೀಪ್ ಹೇಳಿದ್ದು ಹಾಗಲ್ಲ.. ಹೀಗೆ ಅಂತ ತಮ್ಮದೇ ವಿವರಣೆ ನೀಡುತ್ತಿದ್ದರು ರಾಕೇಶ್. ''ಬಿಟ್ಟಿರಲು ಆಗಲ್ಲ'' ಅಂತ ಕಣ್ಣೀರು ಕೂಡ ಸುರಿಸಿದರು. ಇಷ್ಟೆಲ್ಲಾ ಆದರೂ, ರಾಕೇಶ್ ರಿಂದ ಒಂದು ವಾರ ದೂರ ಇರಲು ಅಕ್ಷತಾ ನಿರ್ಧರಿಸಿದ್ದಾರೆ. ಮುಂದೆ ಓದಿರಿ...

  ಗೆಳೆತನಕ್ಕೆ ಮಾತ್ರ ಫೋಕಸ್

  ಗೆಳೆತನಕ್ಕೆ ಮಾತ್ರ ಫೋಕಸ್

  ''ನಮ್ಮ ಗೆಳೆತನ ಮಾತ್ರ ಫೋಕಸ್ ಆಗಿದೆ. ಗೆಳೆತನ ಅಂತ ಕ್ಲಿಯರ್ ಆಗಿ ಹೇಳಿದ್ದಾರೆ. ಆದ್ರೆ, ನೀವು ಪೆದ್ದರ ತರಹ ಒಂದು ವಾರ ಮಾತನಾಡಲ್ಲ ಅಂತ ಹೇಳಿದ್ರಿ. ದಡ್ಡರ ತರಹ ಆಡುತ್ತಿದ್ದೇವೆ ಅಂತ ಕೇಳಿಸಿಕೊಳ್ಳಬೇಕು'' ಅಂತ ಅಕ್ಷತಾ ಮೇಲೆ ರಾಕೇಶ್ ಕೊಂಚ ಗರಂ ಆಗಿದ್ದರು.

  ಸೂಕ್ಷ್ಮತೆ ಅರ್ಥೈಸಿಕೊಳ್ಳದ, ಹೇಳಿದ್ದನ್ನ ಒಪ್ಪಿಕೊಳ್ಳದ ರಾಕೇಶ್-ಅಕ್ಷತಾಗೆ ಏನ್ನನ್ನಬೇಕು.?

  ಬಿಟ್ಬಿಡೋಣ ಇಲ್ಲಿಗೆ...

  ಬಿಟ್ಬಿಡೋಣ ಇಲ್ಲಿಗೆ...

  ''ಬಿಟ್ಬಿಡೋಣ ಇಲ್ಲಿಗೆ..'' ಅಂತ ಅಕ್ಷತಾ ಹೇಳಿದರೆ, ''ಬಿಟ್ಟು ಬಿಡೋದೇ ಬರೋದು ನಿಮಗೆ.. ಇದೇ ನಿಮಗೆ ಪರಿಹಾರ. ಇಷ್ಟೆಲ್ಲಾ ಕಷ್ಟ ಪಟ್ಟ ನಾನು ದಡ್ಡ'' ಎನ್ನುತ್ತಾರೆ ರಾಕೇಶ್.

  'ದಡ್ಡರ ತರಹ ಆಡುತ್ತಿದ್ದೀರಾ': ರಾಕೇಶ್-ಅಕ್ಷತಾ ವಿರುದ್ಧ ಗುಡುಗಿದ ಸುದೀಪ್

  ಜಯಶ್ರೀ ಮುಂದೆ ಕಣ್ಣೀರು ಹಾಕಿದ ರಾಕೇಶ್

  ಜಯಶ್ರೀ ಮುಂದೆ ಕಣ್ಣೀರು ಹಾಕಿದ ರಾಕೇಶ್

  ಅಕ್ಷತಾ ಮಾತನಾಡದೇ ಇದ್ದಾಗ, ಜಯಶ್ರೀ ಬಳಿ ರಾಕೇಶ್ ಕಣ್ಣೀರು ಸುರಿಸಿದರು. ''ನಾವಿಬ್ಬರು ಗುಡ್ ಫ್ರೆಂಡ್ಸ್'' ಅಂತ ಕಣ್ಣೀರಿಟ್ಟರು.

  ಇಷ್ಟು ದಿನ ಕಳೆದ ಮೇಲೆ ಈಗ ಅಕ್ಷತಾ ಮನದಲ್ಲಿ ಮೂಡಿದೆ 'ಭಯ'.! ಯಾಕೆ.?

  ಆಪಲ್ ತಳ್ಳಿದ ಅಕ್ಷತಾ

  ಆಪಲ್ ತಳ್ಳಿದ ಅಕ್ಷತಾ

  ಬೆಳಗ್ಗೆ ಯೋಗ ಮಾಡುವಾಗ, ಬೇಕು ಅಂತ ಅಕ್ಷತಾ ಬಳಿ ರಾಕೇಶ್ ಆಪಲ್ ಇಟ್ಟರು. ಆದ್ರೆ, ಆ ಆಪಲ್ ನ ಅಕ್ಷತಾ ತಳ್ಳಿ ಬಿಟ್ಟರು.

  ಅರೇ.. ರಾಕೇಶ್ ಬಗ್ಗೆ ಅಕ್ಷತಾ ಹೀಗೆ ಹೇಳಿದ್ದು ಯಾಕೆ.?

  ಹೋಗಿ ಬಂದು ಕಣ್ಣೀರು ಹಾಕುವ ರಾಕೇಶ್

  ಹೋಗಿ ಬಂದು ಕಣ್ಣೀರು ಹಾಕುವ ರಾಕೇಶ್

  ''ನಾನು ಮನೆಯಿಂದ ಆಚೆ ಹೋಗಿದಿದ್ರೆ, ಇಷ್ಟು ನೋವಾಗುತ್ತಿರಲಿಲ್ಲ. ಅದಕ್ಕಿಂತ ಡಬಲ್ ಆಗುತ್ತಿದೆ'' ಅಂತ ಪದೇ ಪದೇ ಅಕ್ಷತಾಗೆ ರಾಕೇಶ್ ಹೇಳುತ್ತಿದ್ದರು.

  'ನನ್ನ ಜೀವನವನ್ನು ಹಾಳು ಮಾಡಿಕೊಂಡೆ' ಎಂದು ಕಣ್ಣೀರು ಸುರಿಸಿದ ಅಕ್ಷತಾ.!

  ತಾಕತ್ತು ಇಲ್ವಾ.?

  ತಾಕತ್ತು ಇಲ್ವಾ.?

  ''ಅಕ್ಷತಾ ಪಾಂಡವಪುರ.. ಸೋಲೋ ಪರ್ಫಾರ್ಮರ್.. ಥಿಯೇಟರ್ ಆರ್ಟಿಸ್ಟ್... Individual ಟ್ರಾವೆಲ್ಲರ್... Individual ಲೈಫ್ ಲೀಡ್ ಮಾಡುತ್ತಿದ್ದೇನೆ. ಅದು ಹೊರಗೆ ಚಪ್ಪಾಳೆ ತಟ್ಟುವಂತಹ ವಿಷಯ. ಆದರೆ ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರವೂ ಅಕ್ಷತಾ ಜೊತೆಗೆ ರಾಕೇಶ್ ಹೆಸರು ಕೇಳಿ ಬರುತ್ತಿದೆ. ನನಗೆ ತಾಕತ್ತು ಇಲ್ವಾ.? ನನಗೆ ಒಬ್ಬಳೇ ಇರಲು ತಾಕತ್ತು ಇಲ್ವಾ.? ಇದೆ.. genuine ಆಗಿ ನಾನು ನಿನ್ನ ಪ್ರೀತಿಸಿದೆ. ಈಗ ಬಿಡು.. ಸುದೀಪ್ ಏನಾದರೂ ಹೇಳಿದರೆ, ನಾನು ಕೇಳಬೇಕಾಗುತ್ತದೆ. ಆ ಕ್ಷಣಕ್ಕೆ ಅರ್ಥ ಅಗಲಿಲ್ಲ ಅಂದರೂ ಆಮೇಲಾದರೂ ಅರಿವಿಗೆ ಬರುತ್ತದೆ'' ಅಂತ ರಾಕೇಶ್ ಗೆ ಅಕ್ಷತಾ ಹೇಳಿದರು

  ಅಕ್ಷತಾ ಕಣ್ಣೀರು ಹಾಕಿದರೂ, ರಾಕೇಶ್ ಬಿಡುವ ಹಾಗೆ ಕಾಣುತ್ತಿಲ್ಲ.!

  ಬ್ರೇನ್ ವಾಶ್ ಮಾಡಿದ ರಾಕೇಶ್

  ಬ್ರೇನ್ ವಾಶ್ ಮಾಡಿದ ರಾಕೇಶ್

  ''ಪ್ರಶ್ನೆಗಳು ಬಂದಾಗ ಕ್ಲಾರಿಟಿ ಕೊಟ್ಟಿದ್ದೇನೆ. ಪ್ರಶ್ನೆಗಳು ಬರುವುದು ಡೌಟ್ ಇದ್ದಾಗ, ಕ್ಲಾರಿಟಿ ಬೇಕಾದಾಗ.. ಇಷ್ಟು ದಿನ ಬೆಳೆದಿರುವ ಫ್ರೆಂಡ್ ಶಿಪ್, ಸಪೋರ್ಟ್, ಸಂಬಂಧ ಅದನ್ನೆಲ್ಲ ಒಂದೇ ಕ್ಷಣಕ್ಕೆ ಫಿನಿಶ್ ಮಾಡ್ತೀರಾ.? ಯಾಕೆ ನನ್ನನ್ನ ಯಾವಾಗಲೂ ನೆಗೆಟಿವ್ ಆಗಿ ನೋಡ್ತೀರಾ.? ನಂಬಿಕೆ ಇಡಿ... ದಯವಿಟ್ಟು ಅರ್ಥ ಮಾಡಿಕೋ.. ಪುಟ್ಟ.. ನಿಮ್ಮ ಮನಸ್ಸಿನಲ್ಲಿ ರಾಕೇಶ್ ಇಂದ ಇಮೇಜ್ ಡ್ಯಾಮೇಜ್ ಆಗುತ್ತಿದೆ ಅಂತ ಇದ್ದರೆ, ಓಪನ್ ಆಗಿ ಹೇಳಿ...'' ಅಂತೆಲ್ಲಾ ಹೇಳಿ ಬ್ರೇನ್ ವಾಶ್ ಮಾಡಲು ರಾಕೇಶ್ ಮುಂದಾದರು.

  ಕ್ಷುಲ್ಲಕ ಕಾರಣಕ್ಕೆ ಸುದೀಪ್ ಮೇಲೆ 'ಪಕ್ಷಪಾತ'ದ ಆರೋಪ ಮಾಡಿದ ಅಕ್ಷತಾ.!

  ಈ ವಾರ...

  ಈ ವಾರ...

  ''ನಿನ್ನ ಜೊತೆ ಬಾಂಡಿಂಗ್ ಇಲ್ಲ ಅಂತ ಹೇಳ್ತಿಲ್ಲ. ಫೀಲಿಂಗ್ಸ್ ಇದೆ. ಆದ್ರೆ, ಎಲ್ಲರ ಜೊತೆಗೆ ಮಾತಾಡೋಣ. ಈ ವಾರ.. ಪ್ಲೀಸ್.. ನಾನು ಕೆಟ್ಟವಳಲ್ಲ...'' ಅಂತ ಅಕ್ಷತಾ ಹೇಳಿದ್ದಾರೆ.

  ಬ್ಯಾಟಿಂಗ್ ಅಂದ್ರೇನು.?

  ಬ್ಯಾಟಿಂಗ್ ಅಂದ್ರೇನು.?

  ಈ ನಡುವೆ ಬ್ಯಾಟ್, ಇನ್ನಿಂಗ್ಸ್, ಪರ್ಸನಲ್ ಎಂಬ ಮಾತುಗಳು ಕೂಡ ಬಂದಿವೆ. ಅದರ ಅರ್ಥ ಅವರಿಬ್ಬರಿಗೇ ಗೊತ್ತಿರಬೇಕು. 'ಬ್ಯಾಟಿಂಗ್ ಆಡೋಣ' ಅಂತ ಪದೇ ಪದೇ ರಾಕೇಶ್ ಕೇಳುತ್ತಿದ್ದರು. ಅದಕ್ಕೆ ಅಕ್ಷತಾ ಕಡೆಯಿಂದ ಬರುತ್ತಿದ್ದ ಉತ್ತರ 'ಸುಸ್ತಾಗಿದ್ದೀನಿ'. ಇದರ ಅರ್ಥವೇನು.?

  ಗಟ್ಟಿ ಮನಸ್ಸು ಮಾಡಿದ ರಾಕೇಶ್

  ಗಟ್ಟಿ ಮನಸ್ಸು ಮಾಡಿದ ರಾಕೇಶ್

  ''ನಿಮಗೋಸ್ಕರ ಗಟ್ಟಿ ಮನಸ್ಸು ಮಾಡಿಕೊಂಡು ಒಂದು ವಾರ ಬಿಡ್ತೀನಿ. ನೀವು ಸುದೀಪ್ ಗೆ ಕೊಟ್ಟಿರುವ ಮಾತಿಗೆ ಸಿದ್ಧರಾಗಿ, ನಾನು ನಿಮಗೆ ಕೊಟ್ಟಿರುವ ಮಾತಿನ ಮೇಲೆ ಸಿದ್ಧರಾಗುತ್ತೇನೆ. ಒಂದು ವಾರ ಮ್ಯಾನೇಜ್ ಮಾಡ್ತೀನಿ. ಮುಂದಿನ ವಾರ ಸಿಗೋಣ...'' ಅಂತ ಕೊನೆಗೆ ರಾಕೇಶ್ ಹೇಳಿದರು. ಅದಕ್ಕೆ ಅಕ್ಷತಾ ಕಡೆಯಿಂದ ಬಂದ ಉತ್ತರ - ''ಮುಂದಿನ ವಾರ ಇದ್ದರೆ ನೋಡೋಣ''

  ಹೆಚ್ಚು ಕ್ಲೋಸ್ ಆಗುತ್ತಿರುವೆ

  ಹೆಚ್ಚು ಕ್ಲೋಸ್ ಆಗುತ್ತಿರುವೆ

  ''ನಾನು ರಾಕೇಶ್ ರಿಂದ ದೂರ ಇರಲು ಪ್ರಯತ್ನ ಪಡುತ್ತಿದ್ದರೂ, ಮನಸ್ಸಿನಿಂದ ಹೆಚ್ಚು ಹತ್ತಿರ ಆಗುತ್ತಿರುವೆ. ನಾನು ಈ ವಾರ ಔಟ್ ಆಗಲು ಇಷ್ಟ ಪಡಲ್ಲ'' ಎಂದು ಕ್ಯಾಮರಾ ಬಳಿ ಅಕ್ಷತಾ ಮಾತನಾಡಿಕೊಂಡಿದ್ದಾರೆ.

  English summary
  Bigg Boss Kannada 6: Day 43: Akshata decides to not to talk to Rakesh for one week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X