For Quick Alerts
  ALLOW NOTIFICATIONS  
  For Daily Alerts

  ಧನರಾಜ್ ಮಾನ ಮರ್ಯಾದೆ ಮೂರು ಕಾಸಿಗೆ ಹರಾಜು: ಬೇಕಿತ್ತಾ ಇದು.?

  |
  Bigg Boss Kannada Season 6:ಧನರಾಜ್ ಮಾನ ಮರ್ಯಾದೆ ಮೂರು ಕಾಸಿಗೆ ಹರಾಜು: ಬೇಕಿತ್ತಾ ಇದು.? | FILMIBEAT KANNADA

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಚಟುವಟಿಕೆ ಅಂತ ಬಂದ್ರೆ ಉತ್ತಮ ಪ್ರದರ್ಶನ ನೀಡುವವರ ಪೈಕಿ ಧನರಾಜ್ ಕೂಡ ಒಬ್ಬರು. ಇಲ್ಲಿಯವರೆಗೂ ಟಾಸ್ಕ್ ಗಳಲ್ಲಿ ಚೆನ್ನಾಗಿ ಆಟ ಆಡುತ್ತಾ ಬಂದಿರುವ ಧನರಾಜ್ 'ಬಿಗ್ ಬಾಸ್ ನಗರ' ಟಾಸ್ಕ್ ನಲ್ಲಿ 'ಕಳ್ಳತನ' ಮಾಡಲು ಹೋಗಿ ಮುಜುಗರಕ್ಕೀಡಾದರು.

  ಇವತ್ತಿನವರೆಗೂ ಯಾವುದೇ ಚಟುವಟಿಕೆಯಲ್ಲಿ ಧನರಾಜ್ ಕಳ್ಳತನ ಮಾಡಿರಲಿಲ್ಲ. ಆದ್ರೆ, 'ಬಿಗ್ ಬಾಸ್ ನಗರ' ಟಾಸ್ಕ್ ನಲ್ಲಿ ಹಾಗೆ ಮಾಡಬೇಕು ಅಂತ ಅವರಿಗೆ ಯಾಕಾದ್ರು ಅನಿಸ್ತೋ.. ಹೋಗಿ ಹೋಗಿ ರಶ್ಮಿ ಜೇಬಿಗೆ ಕೈಹಾಕಿಬಿಟ್ಟರು.

  ರಶ್ಮಿ ಬಾಯಿ ಮೊದಲೇ ಬೊಂಬಾಯಿ. ಕದ್ದವರ ಬಗ್ಗೆ ಹಿಗ್ಗಾಮುಗ್ಗಾ ಜಾಡಿಸುತ್ತಿದ್ದ ರಶ್ಮಿ, ಕಳ್ಳ ಧನರಾಜ್ ಅಂತ ಪಕ್ಕಾ ಆದ್ಮೇಲೆ ಸುಮ್ನೆ ಬಿಡ್ತಾರಾ.? ಧನರಾಜ್ ಮಾನ ಮರ್ಯಾದೆಯನ್ನ ಮೂರು ಕಾಸಿಗೆ ಹರಾಜು ಹಾಕಿದರು.! ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  'ಬಿಗ್ ಬಾಸ್ ನಗರ' ಚಟುವಟಿಕೆ

  'ಬಿಗ್ ಬಾಸ್ ನಗರ' ಚಟುವಟಿಕೆ

  ಈ ವಾರದ ಲಕ್ಷುರಿ ಬಜೆಟ್ ಗಾಗಿ 'ಬಿಗ್ ಬಾಸ್ ನಗರ' ಎಂಬ ಚಟುವಟಿಕೆ ನೀಡಲಾಗಿತ್ತು. ಇದರ ಅನುಸಾರ, ನಾಗರೀಕರ ಕೈಯಲ್ಲಿ ಹಣ ನೀಡಲಾಗಿತ್ತು. ಚಟುವಟಿಕೆ ಮುಗಿಯುವ ಹೊತ್ತಿಗೆ ಯಾವ ಅಧಿಕಾರಿ ಮತ್ತು ಆಟೋ ಚಾಲಕರ ಬಳಿ ಹೆಚ್ಚು ಹಣ ಇರುತ್ತದೋ, ಅವರು ಕ್ಯಾಪ್ಟನ್ ಆಗಲು ಅರ್ಹತೆ ಪಡೆಯುತ್ತಿದ್ದರು.

  ಆಂಡ್ರ್ಯೂ-ಧನರಾಜ್ ಕಿತ್ತಾಟ: ವೀಕ್ಷಕರ ಸಪೋರ್ಟ್ ಯಾರಿಗೆ.?

  ರಶ್ಮಿ ಹಣ ಎಗರಿಸಿದ ಧನರಾಜ್

  ರಶ್ಮಿ ಹಣ ಎಗರಿಸಿದ ಧನರಾಜ್

  'ಬಿಗ್ ಬಾಸ್ ನಗರ' ಟಾಸ್ಕ್ ನಲ್ಲಿ ಧನರಾಜ್ ಮತ್ತು ರಶ್ಮಿ 'ನಾಗರೀಕ'ರಾಗಿದ್ದರು. ಹೆಚ್ಚು ಹಣವನ್ನು ಕಲೆ ಹಾಕುವ ಕಾರಣಕ್ಕೋ ಏನೋ, ರಶ್ಮಿ ಬಳಿ ಇದ್ದ ಹಣವನ್ನು ಧನರಾಜ್ ಕದ್ದು ಬಿಟ್ಟರು.

  ಉಲ್ಟಾ ಪಲ್ಟಾ ಮಾತನಾಡಿದ ಆಂಡ್ರ್ಯೂ: ಪಿತ್ತ ನೆತ್ತಿಗೇರಿಸಿಕೊಂಡ ಧನರಾಜ್.!

  ಅಕ್ಷತಾ ಮೇಲೆ ರಶ್ಮಿಗೆ ಅನುಮಾನ

  ಅಕ್ಷತಾ ಮೇಲೆ ರಶ್ಮಿಗೆ ಅನುಮಾನ

  ಧನರಾಜ್ ಕದ್ದಿದ್ದು ರಶ್ಮಿಗೆ ಗೊತ್ತಿರಲಿಲ್ಲ. ಹೀಗಾಗಿ, ಆಟೋ ಚಾಲಕಿ ಅಕ್ಷತಾ ಮೇಲೆ ರಶ್ಮಿ ಅನುಮಾನ ಪಟ್ಟಿದ್ದರು. ಕದ್ದವರಿಗೆ ಆಗಾಗ ಬಾಯಿಗೆ ಬಂದ ಹಾಗೆ ಬೈಯುತ್ತಿದ್ದರು ರಶ್ಮಿ.

  ಅದೃಷ್ಟ ಪರೀಕ್ಷೆಗಾಗಿ 'ಬಿಗ್ ಬಾಸ್' ಮನೆಗೆ ಬಂದಿರುವ ಧನರಾಜ್ ಯಾರು.?

  ಸಿನಿಮಾ ನೋಡಲು ಹೋದ ಧನರಾಜ್

  ಸಿನಿಮಾ ನೋಡಲು ಹೋದ ಧನರಾಜ್

  ಇನ್ನೂರು ರೂಪಾಯಿ ಕೊಟ್ಟು ಸಿನಿಮಾ ನೋಡಲು ಹೋದ ಧನರಾಜ್ ಗೆ 'ಬಿಗ್ ಬಾಸ್' ಕಳ್ಳತನದ ವಿಡಿಯೋ ತೋರಿಸಿದರು. ಅದೇ ಸಮಯಕ್ಕೆ ಇಡೀ ಮನೆಯ ಸದಸ್ಯರಿಗೂ 'ಬಿಗ್ ಬಾಸ್' 'ಕಳ್ಳ' ಧನರಾಜ್ ಪರಿಚಯ ಮಾಡಿಸಿದರು.

  ಲೇವಡಿ ಮಾಡಲು ಶುರು ಮಾಡಿದ ರಶ್ಮಿ...

  ಲೇವಡಿ ಮಾಡಲು ಶುರು ಮಾಡಿದ ರಶ್ಮಿ...

  'ಅಡಿಕೆಯಲ್ಲಿ ಹೋದ ಮಾನ, ಆನೆ ಕೊಟ್ಟರೂ ಬರಲ್ಲ... ಕಳ್ಳ...'' ಅಂತೆಲ್ಲಾ ಹೇಳುತ್ತಾ ಧನರಾಜ್ ಬಗ್ಗೆ ರಶ್ಮಿ ಲೇವಡಿ ಮಾಡಲು ಶುರು ಮಾಡಿದರು. ಯಾಕಾದ್ರೂ ಕಳ್ಳತನ ಮಾಡಿದ್ನೋ ಎಂಬ ಜಿಗುಪ್ಸೆ ಧನರಾಜ್ ಗೆ ಕಾಡಲು ಆರಂಭವಾಯ್ತು.

  ಇದೆಲ್ಲ ಬೇಕಿತ್ತಾ.?

  ಇದೆಲ್ಲ ಬೇಕಿತ್ತಾ.?

  ''ಈ ತರಹ ಮರ್ಯಾದೆ ತೆಗೀತಾರೆ ಅಂತ ಗೊತ್ತಿರಲಿಲ್ಲ. ಅವಳು ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಳು. ನನಗೆ ಕಪಾಳಕ್ಕೆ ಹೊಡೆದ ಹಾಗೆ ಆಗುತ್ತಿತ್ತು. ನಾನು ಯಾಕಾದರೂ ಇವಳ ಹಣವನ್ನ ಕದ್ನೋ.? ಇಷ್ಟು ಟಾಸ್ಕ್ ನಲ್ಲಿ ಕದ್ದಿರಲಿಲ್ಲ. ಈಗ ಇವಳದ್ದು ಕದ್ದು ಇದೆಲ್ಲ ಬೇಕಿತ್ತಾ ನನಗೆ.?'' ಅಂತ ಬೇಸರ ಪಟ್ಟುಕೊಳ್ಳುತ್ತಿದ್ದರು ಧನರಾಜ್.

  English summary
  Bigg Boss Kannada 6: Day 45: Dhanraj caught for stealing Rapid Rashmi's money in Bigg Boss Nagara Task.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X