For Quick Alerts
  ALLOW NOTIFICATIONS  
  For Daily Alerts

  ರಾಕೇಶ್-ಅಕ್ಷತಾ ಬಗ್ಗೆ ಒಬ್ಬೊಬ್ಬರಿಗೆ ಒಂದೊಂದು ಡೌಟು.!

  |

  ಫಿಲ್ಟರ್ ಇಲ್ಲದೆ ಬಡಬಡ ಅಂತ ಬಾಯಿಗೆ ಬಂದ ಹಾಗೆ ಮಾತನಾಡುವ ಆಂಡ್ರ್ಯೂ, ಮೊನ್ನೆಯಷ್ಟೇ 'ಬಿಗ್ ಬಾಸ್' ಮನೆಯಲ್ಲಿ ಒಂದು ಹೇಳಿಕೆ ನೀಡಿ ದೊಡ್ಡ ವಿವಾದಕ್ಕೆ ನಾಂದಿ ಹಾಡಿದ್ದರು.

  ಶಾವಿಗೆ ಪಾಯಸಕ್ಕೆ ಖಾರದ ಪುಡಿ ಹಾಕಿದ ವಿಷಯಕ್ಕೆ ಆಂಡ್ರ್ಯೂ ವಿರುದ್ಧ ಅಕ್ಷತಾ ಕೋಪಿಸಿಕೊಂಡಿದ್ದರು. ಅಕ್ಷತಾ ಪರವಾಗಿ ರಾಕೇಶ್ ಮಾತನಾಡಲು ಮುಂದಾದಾಗ, ಮಾತಿಗೆ ಮಾತು ಬೆಳೆದು ''ಮಾತಾಡ್ರೋ ಗಂಡ-ಹೆಂಡತಿ ಮಾತನಾಡಿಕೊಳ್ಳಿ...'' ಎಂದು ರಾಕೇಶ್-ಅಕ್ಷತಾ ಬಗ್ಗೆ ಆಂಡ್ರ್ಯೂ ಹೇಳಿಬಿಟ್ಟರು. ಇದರಿಂದ ರಾಕೇಶ್ ರೊಚ್ಚಿಗೆದ್ದರು. ಅಕ್ಷತಾ ಕೂಡ ಬೇಸರ ಮಾಡಿಕೊಂಡರು.

  ರಾಕೇಶ್-ಅಕ್ಷತಾಗೆ ಗಂಡ-ಹೆಂಡತಿ ಎಂದುಬಿಟ್ಟ ಆಂಡ್ರ್ಯೂ.!

  ''ನಾವಿಬ್ಬರು ಸ್ನೇಹಿತರು'' ಅಂತ ಎಲ್ಲರ ಮುಂದೆ ರಾಕೇಶ್ ಸ್ಪಷ್ಟ ಪಡಿಸಿದ್ದರು. ಹೀಗಿದ್ದರೂ, ಒಂದೆರಡು ಬಾರಿ ''ಐ ಲವ್ ಯು ರಾಕಿ'' ಅಂತ ಅಕ್ಷತಾ ಹೇಳಿದ್ದಾರೆ. ಇದು 'ಬಿಗ್ ಬಾಸ್' ಮನೆಯಲ್ಲಿ ಇರುವ ಇತರೆ ಸ್ಪರ್ಧಿಗಳ ತಲೆಯಲ್ಲಿ ಹುಳ ಬಿಟ್ಟಂಗಾಗಿದೆ.

  ಪರಸ್ಪರ ಹಾರ ಹಾಕಿಕೊಂಡ ರಾಕೇಶ್-ಕವಿತಾ: ಮುನಿಸಿಕೊಂಡ ಅಕ್ಷತಾ.!

  ಹಾಗ್ನೋಡಿದ್ರೆ, ರಾಕೇಶ್ ಮತ್ತು ಅಕ್ಷತಾ ಬಗ್ಗೆ ಮೊದಲು ಗಾಸಿಪ್ ಮಾಡಿದ್ದು ಕವಿತಾ. ದಿನಗಳು ಉರುಳಿದಂತೆ ರಾಕೇಶ್-ಅಕ್ಷತಾ ನಡುವಿನ ಆತ್ಮೀಯತೆ ನೋಡಿ, ''ಅವರಿಬ್ಬರು ನಿಜವಾಗಿಯೂ ಪ್ರೀತಿಯಲ್ಲಿ ಬಿದ್ದಿದ್ದಾರಾ ಅಂತ ನನಗೆ ಅನಿಸುತ್ತೆ'' ಎಂದಿದ್ದರು ನವೀನ್ ಸಜ್ಜು.

  ಪದೇ ಪದೇ ''ಐ ಲವ್ ಯು ರಾಕಿ'' ಅಂತ ಅಕ್ಷತಾ ಹೇಳುವುದರಿಂದ ''ಅವರಿಬ್ಬರ ಕಥೆ ಏನು ಅನ್ನೋದೇ ಅರ್ಥ ಆಗುತ್ತಿಲ್ಲ'' ಅನ್ನೋದು ಧನರಾಜ್ ಕನ್ ಫ್ಯೂಶನ್.

  ಅಕ್ಷತಾ-ರಾಕೇಶ್ ನ ಮೊದಲು ಹೊರಗೆ ಹಾಕಿ: ಇದು ವೀಕ್ಷಕರ ಕೋರಿಕೆ.!

  ಇನ್ನೂ ಮನೆಯ ಕ್ಯಾಪ್ಟನ್ ಆಗಿ ಅಕ್ಷತಾ ಆಯ್ಕೆ ಆದಾಗ, ''ಈಗ ನಮಗೆ ಇಬ್ಬಿಬ್ಬರು ನಾಯಕರು... ಒಬ್ಬರಲ್ಲ... ಹೆಸರಿಗೆ ಹೆಂಡತಿ.. ಇನ್ಚಾರ್ಜ್ ಎಲ್ಲ ಗಂಡನದ್ದು'' ಅಂತ ಅಕ್ಷತಾ-ರಾಕೇಶ್ ಬಗ್ಗೆ ಮುರಳಿ ಮತ್ತು ಧನರಾಜ್ ಕಾಮೆಂಟ್ ಮಾಡಿದ್ದರು.

  ಅಕ್ಷತಾ-ರಾಕೇಶ್ ನಡುವೆ ಏನಿದ್ಯೋ, ಅದು ಅವರ ವೈಯುಕ್ತಿಕ ವಿಚಾರ. ಆದ್ರೆ, ರಿಯಾಲಿಟಿ ಶೋನಲ್ಲಿ ಹೀಗೆಲ್ಲಾ ಆಗುತ್ತಿರುವುದರಿಂದ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿದೆ. ಅಕ್ಷತಾ-ರಾಕೇಶ್ ನ ಹೊರಗೆ ಹಾಕಿ ಅಂತ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯ ಮಾಡುತ್ತಿದ್ದಾರೆ.

  ಈ ವಾರ ಮನೆಯಿಂದ ಹೊರ ಹೋಗಲು ರಾಕೇಶ್ ನಾಮಿನೇಟ್ ಆಗಿದ್ದಾರೆ. ರಾಕೇಶ್ ಗೆ ನೀವು ಮತ ಹಾಕ್ತೀರಾ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

  English summary
  Bigg Boss Kannada 6: Housemates have their own doubts on Rakesh and Akshata

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X