For Quick Alerts
  ALLOW NOTIFICATIONS  
  For Daily Alerts

  ಸೋನು ಪಾಟೀಲ್ ದೊಡ್ಡ ಡವ್ ರಾಣಿ, ಆಕೆಯದ್ದು ಚೀಪ್ ಗೇಮ್ ಎಂದ ವೀಕ್ಷಕರು.!

  |

  'ಕಿತ್ತೂರು ರಾಣಿ ಚೆನ್ನಮ್ಮ', 'ಒನಕೆ ಓಬವ್ವ', 'ಆಟಂ ಬಾಂಬು' ಅಂತೆಲ್ಲಾ ಹೇಳಿಕೊಂಡು 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಸೋನು ಪಾಟೀಲ್ ಸೈಡ್ ನಲ್ಲಿ ಒಂದು ಲವ್ ಸ್ಟೋರಿಯನ್ನೂ ಆರಂಭಿಸಿದ್ದಾರೆ.

  ಜಾಕೆಟ್ ಕೊಟ್ಟ ಗಾಯಕ ನವೀನ್ ಸಜ್ಜುಗೆ 'ಐ ಲವ್ ಯು' ಎಂದು ಸೋನು ಪಾಟೀಲ್ ಹೇಳಿದ್ದರು. ಬಳಿಕ ''ಸ್ನೇಹಿತನಾಗಿ ನವೀನ್ ಕಂಡ್ರೆ ಇಷ್ಟ. ಪ್ರೀತಿಯೆಲ್ಲಾ ಏನೂ ಇಲ್ಲ'' ಅಂತ ಸ್ಪಷ್ಟನೆ ಕೊಟ್ಟಿದ್ದರು. ಆದರೂ ನವೀನ್ ಅಕ್ಕ-ಪಕ್ಕದಲ್ಲೇ ಸೋನು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ನಿನ್ನೆಯಂತೂ 'ಬಿಗ್ ಬಾಸ್' ಕೊಟ್ಟ ಟಾಸ್ಕ್ ನಿಂದಾಗಿ ನವೀನ್ ಕೆನ್ನೆಗೆ ಸೋನು ಮುತ್ತಿಟ್ಟರು. ಇದನ್ನೆಲ್ಲ ನೋಡಿದ ವೀಕ್ಷಕರು ಸೋನು ಪಾಟೀಲ್ ಮೇಲೆ ಮುನಿಸಿಕೊಂಡಿದ್ದಾರೆ. ''ಸೋನು ಪಾಟೀಲ್ ದೊಡ್ಡ ಡವ್ ರಾಣಿ... ಆಕೆ ಚೀಪ್ ಗೇಮ್ ಅಡ್ತಿದ್ದಾರೆ'' ಅಂತೆಲ್ಲಾ ಕಲರ್ಸ್ ಸೂಪರ್ ವಾಹಿನಿಯ ಫೇಸ್ ಬುಕ್ ಪುಟದಲ್ಲೇ ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಬೇಕಾದ್ರೆ, ನೀವೇ ಕೆಲ ಕಾಮೆಂಟ್ ಗಳನ್ನ ನೋಡಿ...

  ಚೀಪ್ ಗೇಮ್

  ಚೀಪ್ ಗೇಮ್

  ''ನವೀನ್ ನನಗೆ ಇಷ್ಟ ಇಲ್ಲ ಅಂದರೂ, ಸೋನು ಪಾಟೀಲ್ ಯಾಕೆ ಅವನ ಮೇಲೆ ಬಿದ್ದು ಹೋಗ್ತಾಳೆ. ಕೇವಲ ಬಿಗ್ ಬಾಸ್ ಮನೆಯಲ್ಲಿ ಉಳಿಯಲು ತುಂಬಾ ಚೀಪ್ ಗೇಮ್ ಆಡ್ತಾ ಇದ್ದಾಳೆ'' ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

  ಯಾರೀ ಜವಾರಿ ಹುಡುಗಿ ಸೋನು ಪಾಟೀಲ್.? ಆಕೆಯ ನಿಜ ನಾಮ ನಿಮ್ಗೆ ಗೊತ್ತೇನು.?

  ಮೈಂಡ್ ಗೇಮ್ ಆಡ್ತಿದ್ದಾರಾ ಸೋನು.?

  ಮೈಂಡ್ ಗೇಮ್ ಆಡ್ತಿದ್ದಾರಾ ಸೋನು.?

  ''ನವೀನ್ ನಂಗೆ ಈ ಪ್ರೀತಿ ಇವೆಲ್ಲ ಇಷ್ಟ ಆಗಲ್ಲ ಅಂತ ಹೇಳಿದರೂ, ಸೋನು ನವೀನ್ ನ ಕ್ಯಾಚ್ ಹಾಕೊಂಡು ಮೈಂಡ್ ಗೇಮ್ ಆಡ್ತಿದ್ದಾಳೆ'' ಅನ್ನೋದು ವೀಕ್ಷಕರ ಅಭಿಪ್ರಾಯ.

  ಅಯ್ಯೋ... ನವೀನ್ ಗೆ ಮಾತ್ರ ಅಲ್ಲ, ಮನೆಯವರಿಗೆಲ್ಲಾ ಮುತ್ತು ಕೊಟ್ಟ ಸೋನು.!

  ದೊಡ್ಡ ಡವ್ ರಾಣಿ

  ದೊಡ್ಡ ಡವ್ ರಾಣಿ

  ''ಸೋನು ಪಾಟೀಲ್ ದೊಡ್ಡ ಡವ್ ರಾಣಿ. ನವೀನ್ ಮತ್ತು ಶಶಿ ಫೈನಲ್ ಗೆ ಬರಬೇಕು. ಸೋನು ಪಾಟೀಲ್ ಗೆ ಹೊರಗೆ ಹಾಕಿ'' ಅಂತಾವ್ರೆ ವೀಕ್ಷಕರು.

  ನವೀನ್ ಗೆ ಕಿಸ್ ಕೊಟ್ಟ ಸೋನು: 'ದೊಡ್ಮನೆ'ಯಲ್ಲಿ ಶುರುವಾಯ್ತು 'ಮುತ್ತಿನ' ಕಥೆ

  ನವೀನ್ ನ ಬಿಟ್ಬಿಡಮ್ಮ...

  ನವೀನ್ ನ ಬಿಟ್ಬಿಡಮ್ಮ...

  ''ಸೋನು ನವೀನ್ ನ ಬಿಟ್ಬಿಡಮ್ಮ...'' ಎಂದು ವೀಕ್ಷಕರು ಪರಿ ಪರಿಯಾಗಿ ಕೇಳಿಕೊಳ್ಳುತ್ತಿದ್ದಾರೆ.

  ನವೀನ್ ಸಜ್ಜುಗೆ 'ಐ ಲವ್ ಯು' ಎಂದ ಸೋನು ಪಾಟೀಲ್.!

  ನವೀನ್ ಗೆ ಮುಜುಗರ ಆಗುತ್ತಿದೆ

  ನವೀನ್ ಗೆ ಮುಜುಗರ ಆಗುತ್ತಿದೆ

  ''ಸೋನು ಪಾಟೀಲ್ ಆಡುತ್ತಿರುವ ಆಟದಿಂದ ನವೀನ್ ಗೆ ಮುಜುಗರ ಆಗುತ್ತಿದೆ. 'ಬಿಗ್ ಬಾಸ್' ಮನೆಯಲ್ಲಿ ಲವ್ ಸ್ಟೋರಿಗಳು ಹೆಚ್ಚಿದರೆ, ಚಾನೆಲ್ ನವರಿಗೆ ಟಿ.ಆರ್.ಪಿ ಹೆಚ್ಚುತ್ತದೆ'' ಎಂಬ ಕಾಮೆಂಟ್ ಗಳೇ ಹೆಚ್ಚಾಗಿವೆ.

  ನವೀನ್ ಗೆ ಲೈಂಗಿಕ ಕಿರುಕುಳ

  ನವೀನ್ ಗೆ ಲೈಂಗಿಕ ಕಿರುಕುಳ

  ''ನವೀನ್ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತಿದೆ. ಇದನ್ನು ಖಂಡಿಸಿ ಎಲ್ಲಾ ಪುರುಷ ಸಂಘಟನೆಗಳು ಸೋನು ವಿರುದ್ಧ ಪ್ರತಿಭಟನೆ ಮಾಡಬೇಕು. ಬಿಗ್ ಬಾಸ್ ನಲ್ಲಿ ಪುರುಷರಿಗೆ ರಕ್ಷಣೆ ಒದಗಿಸಬೇಕು. ಇದಕ್ಕಾಗಿ ವಿಶೇಷ ಕಾನೂನು ರಚಿಸಿ'' ಎಂದು ಕೆಲವರು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ.

  English summary
  Bigg Boss Kannada 6: Viewers are annoyed with Sonu Patil.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X