For Quick Alerts
  ALLOW NOTIFICATIONS  
  For Daily Alerts

  ಅಕ್ಷತಾಗೆ ವೋಟ್ ಹಾಕಿದ ಪುಣ್ಯಾತ್ಮರು ಯಾರು ಅಂತ ಹೇಳಿ ಬಿಗ್ ಬಾಸ್.?

  |
  Bigg Boss Kannada 6: ಅಕ್ಷತಾಗೆ ವೋಟ್ ಹಾಕಿದ ಪುಣ್ಯಾತ್ಮರು ಯಾರು ಅಂತ ಹೇಳಿ ಬಿಗ್ ಬಾಸ್..?

  ''ಅಕ್ಷತಾಗೆ ವೋಟ್ ಹಾಕಿದ ಪುಣ್ಯಾತ್ಮರು ಯಾರು ಅಂತ ಹೇಳಿ ಬಿಗ್ ಬಾಸ್.?'' - ಹೀಗಂತ ಕೇಳುತ್ತಿರುವವರು ನಾವಲ್ಲ.. ಬದಲಾಗಿ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮವನ್ನು ಪ್ರತಿದಿನ ವೀಕ್ಷಿಸುತ್ತಿರುವ ವೀಕ್ಷಕರು.!

  ''ಅಕ್ಷತಾ-ರಾಕೇಶ್ ನ ಹೊರಗೆ ಹಾಕಿ'' ಅಂತ ಕಳೆದ ಮೂರ್ನಾಲ್ಕು ವಾರಗಳಿಂದಲೂ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಬೊಬ್ಬೆ ಹೊಡೆಯುತ್ತಿದ್ದಾರೆ. ಅಚ್ಚರಿ ಅಂದ್ರೆ, ರಾಕೇಶ್ ಮತ್ತು ಅಕ್ಷತಾ ಸೇಫ್ ಆಗುತ್ತಲೇ ಬರುತ್ತಿದ್ದಾರೆ.

  ವೀಕ್ಷಕರ ಕೆಂಗಣ್ಣಿಗೆ ಅಕ್ಷತಾ ಮತ್ತು ರಾಕೇಶ್ ಗುರಿಯಾಗಿರುವಾಗ, ಅವರಿಗೆ ವೋಟ್ ಹಾಕಿ ಸೇಫ್ ಮಾಡುತ್ತಿರುವವರು ಯಾರು ಅನ್ನೋದು ಕೆಲವರ ಪ್ರಶ್ನೆ.

  ಕಳೆದ ಶನಿವಾರ 'ಬಿಗ್ ಬಾಸ್' ಮನೆಯಿಂದ 'ಉತ್ತರ ಕರ್ನಾಟಕದ ಹುಡುಗಿ' ಸೋನು ಪಾಟೀಲ್ ಔಟ್ ಆದರು. ಸೋನು ಪಾಟೀಲ್ ಔಟ್ ಆಗಿದ್ದಕ್ಕೆ ಬೇಸರ ವ್ಯಕ್ತಪಡಿಸಿರುವ ವೀಕ್ಷಕರು ಸೋನು ಬದಲಿಗೆ ಅಕ್ಷತಾ ಔಟ್ ಆಗಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದು ಕಲರ್ಸ್ ಸೂಪರ್ ವಾಹಿನಿಯ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲೇ..! ಬೇಕಾದ್ರೆ, ಕೆಲ ಕಾಮೆಂಟ್ ಗಳನ್ನು ನೀವೇ ನೋಡಿರಿ...

  ಫೇಕ್ ಶೋ.!

  ಫೇಕ್ ಶೋ.!

  ''ಹೆಚ್ಚು ಕಿರಿಕಿರಿ ಮಾಡದೆ ತಾನಾಯಿತು, ತಮ್ಮ ಕೆಲಸ ಆಯ್ತು ಅಂತ ಇದ್ದ ಆನಂದ್, ಆಡಂ ಪಾಶಾ, ಸೋನು ಪಾಟೀಲ್ ಅಂಥವರನ್ನು ಹೊರಗೆ ಹಾಕಿ. ಆಂಡಿ, ಅಕ್ಷತಾ, ರಾಕೇಶ್ ಅಂಥವರನ್ನು ಯಾಕೆ ಉಳಿಸಿಕೊಳ್ತಿದ್ದೀರಾ ಅನ್ನೋದೇ ಅರ್ಥ ಆಗ್ತಿಲ್ಲ. ಇದನ್ನೆಲ್ಲ ನೋಡ್ತಿದ್ರೆ, 'ಬಿಗ್ ಬಾಸ್' ಶೋನೇ ಫೇಕ್ ಅನಿಸುತ್ತಿದೆ'' ಎಂಬುದು ವೀಕ್ಷಕರೊಬ್ಬರ ಅಭಿಪ್ರಾಯ.

  ಕ್ಷುಲ್ಲಕ ಕಾರಣಕ್ಕೆ ಸುದೀಪ್ ಮೇಲೆ 'ಪಕ್ಷಪಾತ'ದ ಆರೋಪ ಮಾಡಿದ ಅಕ್ಷತಾ.!

  ವೋಟ್ ಹಾಕುವ ಪುಣ್ಯಾತ್ಮರು ಯಾರು.?

  ವೋಟ್ ಹಾಕುವ ಪುಣ್ಯಾತ್ಮರು ಯಾರು.?

  ''ಅಲ್ಲ.. ಅಕ್ಷತಾಗೆ ವೋಟ್ ಹಾಕುವ ಪುಣ್ಯಾತ್ಮರು ಇದ್ದಾರಾ ಅನ್ನೋದು ಬಿಲಿಯನ್ ಡಾಲರ್ ಪ್ರಶ್ನೆ.!?'' - ಈ ಪ್ರಶ್ನೆ ಸದ್ಯ ಪ್ರತಿ ದಿನ ಕಾರ್ಯಕ್ರಮ ವೀಕ್ಷಿಸುವ ವೀಕ್ಷಕರ ತಲೆಯಲ್ಲಿ ಕೊರೆಯುತ್ತಿದೆ.

  ರಾಕೇಶ್-ಅಕ್ಷತಾ ಹೊರಹಾಕುವಂತೆ ಮೈಸೂರಿನಲ್ಲಿ ಬೀದಿಗಿಳಿದು ಪ್ರತಿಭಟನೆ

  ಎಲ್ಲರ ಬಾಯಲ್ಲೂ ಅದೇ ಪ್ರಶ್ನೆ.!

  ಎಲ್ಲರ ಬಾಯಲ್ಲೂ ಅದೇ ಪ್ರಶ್ನೆ.!

  ''ಅಕ್ಷತಾಗೆ ವೋಟ್ ಹಾಕಿ ಸೇಫ್ ಮಾಡಿದವರು ಯಾರು.?'' ಅನ್ನೋದೇ ವೀಕ್ಷಕರಿಗೆ ಕಾಡುತ್ತಿರುವ ಬಹುದೊಡ್ಡ ಪ್ರಶ್ನೆ.

  ಸುದೀಪ್ ಗೆ ಅಗೌರವ ತೋರಿದ ರಾಕೇಶ್-ಅಕ್ಷತಾ ಬಗ್ಗೆ ವೀಕ್ಷಕರು ಕೆಂಡಾಮಂಡಲ.!

  ಅಕ್ಷತಾಗೆ ಯಾಕೆ ಇಷ್ಟೊಂದು ಸಪೋರ್ಟ್.?

  ಅಕ್ಷತಾಗೆ ಯಾಕೆ ಇಷ್ಟೊಂದು ಸಪೋರ್ಟ್.?

  'ಬಿಗ್ ಬಾಸ್' ತಂಡ ಅಕ್ಷತಾಗೆ ಸಪೋರ್ಟ್ ಮಾಡುತ್ತಿದೆ ಎಂಬ ಅನುಮಾನ ವೀಕ್ಷಕರಲ್ಲಿ ಕಾಡುತ್ತಿದೆ. ಯಾಕಂದ್ರೆ, ವೀಕ್ಷಕರು ಅಕ್ಷತಾಗೆ ವೋಟ್ ಹಾಕಿಲ್ಲ. ಆದರೂ, ಟಿ.ಆರ್.ಪಿಗಾಗಿ ಅಕ್ಷತಾ ರನ್ನ 'ಬಿಗ್ ಬಾಸ್' ಮನೆಯೊಳಗೆ ಇರಿಸಿಕೊಳ್ಳಲಾಗಿದ್ಯಾ.? ನಮಗೂ ಗೊತ್ತಿಲ್ಲ. ಇದು ವೀಕ್ಷಕರ ಪ್ರಶ್ನೆ ಅಷ್ಟೇ.

  'ಬಿಗ್ ಬಾಸ್': ಈ ವಾರ ಅಕ್ಷತಾಗೆ ನೀವೆಲ್ಲ ವೋಟ್ ಹಾಕ್ತೀರಾ.?

  ಕೂಡಲೆ ಬಹಿರಂಗ ಪಡಿಸಿ...

  ಕೂಡಲೆ ಬಹಿರಂಗ ಪಡಿಸಿ...

  ''ಅಕ್ಷತಾ ಪರವಾಗಿ ಎಷ್ಟು ಮತಗಳು ಬಂದಿದೆ ಎನ್ನುವುದನ್ನು ಬಹಿರಂಗ ಪಡಿಸಿ. ಇಲ್ಲದಿದ್ದರೆ, ನೀವು ಅಕ್ಷತಾ ಅವರಿಗೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದೀರಿ ಎಂದು ನಾವೆಲ್ಲರೂ ನಂಬಬೇಕಾಗುತ್ತದೆ'' ಎನ್ನುತ್ತಿದ್ದಾರೆ ವೀಕ್ಷಕರು.

  ಬುದ್ಧಿ ಇಲ್ಲ.!

  ಬುದ್ಧಿ ಇಲ್ಲ.!

  ''ವೋಟ್ ಗಳ ಆಧಾರದ ಮೇಲೆ ಸ್ಪರ್ಧಿಗಳನ್ನು ತೆಗೆಯಲ್ಲ. ಇಷ್ಟು ದಿನ ನೋಡಿದ ನಮಗೆ ಬುದ್ಧಿ ಇಲ್ಲ'' ಅಂತ ತಲೆ ಚಚ್ಚಿಕೊಳ್ತಿದ್ದಾರೆ ವೀಕ್ಷಕರು.

  English summary
  Bigg Boss Kannada 6: Viewers have taken Colors Super official Facebook page to express their anger for eliminating Sonu Patil.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X