For Quick Alerts
  ALLOW NOTIFICATIONS  
  For Daily Alerts

  ಮೂವರ ಮುಖವಾಡ ಕಳಚುವ ಸವಾಲು ಸ್ವೀಕರಿಸಿದ ಆಂಡ್ರ್ಯೂ.!

  |

  ಎಲ್ಲಾ ಸ್ಪರ್ಧಿಗಳಿಗೂ ಆಂಡಿ ಕಿರಿಕಿರಿ ಕೊಟ್ಟಿದ್ದಾರೆ ನಿಜ. ಕೆಲ ಚಟುವಟಿಕೆಗಳಲ್ಲಿ ಆಂಡ್ರ್ಯೂ ಎಲ್ಲೆ ಮೀರಿ ವರ್ತಿಸಿದ್ದಾರೆ ಅನ್ನೋದು ಕೂಡ ಸತ್ಯ. ಆದ್ರೆ, ಇದ್ದಿದ್ದನ್ನ ಇದ್ದ ಹಾಗೆ ಹೇಳುವುದರಲ್ಲಿ ಆಂಡಿ ನಂಬರ್ ಒನ್.

  ''ನಾನು ನೇರ-ಖಾರ'' ಅಂತ ರಶ್ಮಿ ಹೇಳಿಕೊಳ್ಳಬಹುದು. ಆದ್ರೆ, ಕೆಲವು ವಾರಗಳಿಂದ ನೇರವಾಗಿ ಮಾತನಾಡುವುದನ್ನೇ ರಶ್ಮಿ ನಿಲ್ಲಿಸಿ ಬಿಟ್ಟಿದ್ದಾರೆ. ಆಂಡ್ರ್ಯೂ ಮಾತ್ರ ಹಾಗಿಲ್ಲ. ಯಾರು ಏನೇ ಹೇಳಿದರೂ, ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಅನಿಸಿದ್ದನ್ನ ಫಿಲ್ಟರ್ ಇಲ್ಲದೆ ಹೊರ ಕಕ್ಕುವುದರಲ್ಲಿ ಆಂಡಿ ಎಕ್ಸ್ ಪರ್ಟ್.

  ಶಶಿಯ 'ರೈತ' ಕವಚ, ಸೋನು ಪಾಟೀಲ್ ರವರ 'ಉತ್ತರ ಕರ್ನಾಟಕ'ದ ಸ್ಟ್ರಾಟೆಜಿ ಸೇರಿದಂತೆ 'ಬಿಗ್ ಬಾಸ್' ಮನೆಯ ಕೆಲ ಸ್ಪರ್ಧಿಗಳ ಗೇಮ್ ಪ್ಲಾನ್ ಬಯಲು ಮಾಡಿದ ಆಂಡಿ ಇದೀಗ ಹೊಸ ಸವಾಲು ಸ್ವೀಕರಿಸಿದ್ದಾರೆ. ಅದೇನು ಅಂತ ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ಆಂಡಿ ಸ್ವೀಕರಿಸಿದ ಹೊಸ ಸವಾಲು ಏನು.?

  ಆಂಡಿ ಸ್ವೀಕರಿಸಿದ ಹೊಸ ಸವಾಲು ಏನು.?

  ''ಈ ಮನೆಯಲ್ಲಿ ಫೇಕ್ ಮುಖವಾಡ ಹಾಕಿಕೊಂಡು, ಇಲ್ಲದೇ ಇರುವುದನ್ನು ಪ್ರೊಜೆಕ್ಟ್ ಮಾಡಿಕೊಂಡು ಸುತ್ತಾಡುವವರನ್ನು ನಾನು ಬಿಡಲ್ಲ. ಅವರ ಹಿಂದೆ ಸುತ್ತಿ ಆ ಮುಖವಾಡ ಕಿತ್ತು ಹಾಕುವೆ'' ಅಂತ ಸುದೀಪ್ ಮುಂದೆ ಆಂಡಿ ಹೇಳಿದ್ದಾರೆ.

  ಅಕ್ಷತಾ ವಿಚಾರದಲ್ಲಿ ರಾಕೇಶ್ ಮುಖವಾಡ ಕಳಚಿದ ಸುದೀಪ್.!

  ಯಾರು ಮುಖವಾಡ ಹಾಕಿಕೊಂಡಿದ್ದಾರೆ.?

  ಯಾರು ಮುಖವಾಡ ಹಾಕಿಕೊಂಡಿದ್ದಾರೆ.?

  ಆಂಡಿ ಪ್ರಕಾರ ಮುಖವಾಡ ಹಾಕಿಕೊಂಡಿರುವವರು ಯಾರಪ್ಪಾ ಅಂದ್ರೆ, ರಾಕೇಶ್, ರಶ್ಮಿ ಮತ್ತು ನವೀನ್. ಎಲ್ಲರಿಗೂ ಗೊತ್ತಿರುವ ಹಾಗೆ ನವೀನ್ ಸೇಫ್ ಗೇಮ್ ಆಡುತ್ತಿದ್ದಾರೆ. ಇನ್ನೂ ರಶ್ಮಿ ಕೂಡ ಬಹುತೇಕ ಸೈಲೆಂಟ್ ಆಗಿದ್ದಾರೆ. ಪದೇ ಪದೇ ಅಕ್ಷತಾ ಜೊತೆಗೆ ಕ್ಯಾತೆ ತೆಗೆದು ರಾಕೇಶ್ 'ಗುಡ್ನೆಸ್' ಗೇಮ್ ಆಡುತ್ತಿದ್ದಾರೆ. ಇವರೆಲ್ಲರ ಬಂಡವಾಳವನ್ನು ಆಂಡಿ ಹೇಗೆ ಬಯಲು ಮಾಡುತ್ತಾರೋ, ನೋಡಬೇಕು.

  'ಗುಡ್ನೆಸ್' ಹೆಸರಲ್ಲಿ ರಾಕೇಶ್ ಆಡುತ್ತಿರುವ ಡಬಲ್ ಗೇಮ್ ಬಯಲು ಮಾಡಿದ ಆಂಡಿ.!

  ಒಂದು ವೇಳೆ ಮಾಡಲಿಲ್ಲ ಅಂದ್ರೆ...

  ಒಂದು ವೇಳೆ ಮಾಡಲಿಲ್ಲ ಅಂದ್ರೆ...

  ''ಈ ವಾರ ನಾವು ನೋಡ್ತೀವಿ, ನಿಮ್ಮ ಮಾತನ್ನ ಉಳಿಸಿಕೊಳ್ತೀರಾ ಇಲ್ವಾ ಅಂತ'' ಎಂದು ಸುದೀಪ್ ಹೇಳಿದಾಗ, ''ಒಂದು ವೇಳೆ ಮುಖವಾಡ ಬಯಲು ಮಾಡಲು ಆಗಲಿಲ್ಲ ಅಂದ್ರೆ, ಒಂದು ವಾರ ಲಕ್ಷುರಿ ಬಜೆಟ್ ಬಿಡುವೆ'' ಅಂತ ಹೇಳಿ ಆಂಡಿ ಸವಾಲು ಸ್ವೀಕರಿಸಿದ್ದಾರೆ.

  ಮಾಡೋದೆಲ್ಲಾ ಮಾಡಿ ಕಣ್ಣೀರು ಹಾಕಿದ ರಾಕೇಶ್: ಹಿಂದಿದೆ ಹೊಸ ಸ್ಟ್ರಾಟೆಜಿ.!

  ಟಾರ್ಗೆಟ್ ರಾಕೇಶ್

  ಟಾರ್ಗೆಟ್ ರಾಕೇಶ್

  ಅಕ್ಷತಾ ಬಗ್ಗೆ ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲುತ್ತಿರುವ ರಾಕೇಶ್ ಸ್ಟ್ರಾಟೆಜಿ ಆಂಡಿಗೆ ಅರ್ಥ ಆಗಿದೆ. ಈಗಾಗಲೇ, ರಾಕೇಶ್ ಬಂಡವಾಳ ಬಯಲು ಮಾಡಲು ಆಂಡಿ ರೆಡಿ ಆಗಿದ್ದಾರೆ. ಈ ವಾರ ಪೂರ್ತಿ ಆಂಡಿ ಕಣ್ಣಿಗೆ ರಾಕೇಶ್ ಟಾರ್ಗೆಟ್ ಆದರೂ ಅಚ್ಚರಿ ಇಲ್ಲ.

  English summary
  Bigg Boss Kannada 6: Week 11: Andrew to unmask 3 contestants.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X