For Quick Alerts
  ALLOW NOTIFICATIONS  
  For Daily Alerts

  ಈ ಐವರಲ್ಲಿ ಯಾರ 'ಬಿಗ್ ಬಾಸ್' ಜರ್ನಿ ಅಂತ್ಯವಾಗಲಿದೆ.?

  |

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ನಿನ್ನೆ-ಮೊನ್ನೆ ಶುರುವಾದ ಹಾಗಿದೆ. ಆದ್ರೆ, ಅದಾಗಲೇ ಗ್ರ್ಯಾಂಡ್ ಫಿನಾಲೆ ಹತ್ತಿರಕ್ಕೆ ಬಂದೇ ಬಿಟ್ಟಿದೆ. ಇನ್ನೂ ಮೂರ್ನಾಲ್ಕು ವಾರಗಳಲ್ಲಿ 'ಬಿಗ್ ಬಾಸ್ ಕನ್ನಡ-6' ಶೋಗೆ ತೆರೆ ಬೀಳಲಿದೆ.

  ಸದ್ಯ 'ಬಿಗ್ ಬಾಸ್' ಮನೆಯಲ್ಲಿ ಉಳಿದಿರುವವರು ಎಂಟು ಮಂದಿ ಮಾತ್ರ. ಈ ಎಂಟು ಮಂದಿ ಪೈಕಿ ಐವರು ಈ ವಾರ ನಾಮಿನೇಟ್ ಆಗಿದ್ದಾರೆ. ಈ ಐವರಲ್ಲಿ ಯಾರ 'ಬಿಗ್ ಬಾಸ್' ಜರ್ನಿ ಈ ವಾರ ಅಂತ್ಯವಾಗಲಿದೆ ಅನ್ನೋದು ಸದ್ಯಕ್ಕೆ ಕುತೂಹಲ.

  ಅಸಲಿಗೆ, ನಾಮಿನೇಟ್ ಆಗಿರುವ ಐವರು ಯಾರು.? ಹನ್ನೆರಡನೇ ವಾರ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು ಹೇಗೆ.? ಎಂಬುದರ ಸಂಪೂರ್ಣ ವಿವರ ಇಲ್ಲಿದೆ, ಓದಿರಿ...

  ಕ್ಯಾಪ್ಟನ್ ನವೀನ್

  ಕ್ಯಾಪ್ಟನ್ ನವೀನ್

  'ಬಿಗ್ ಬಾಸ್' ಮನೆಯ ಹನ್ನೆರಡನೇ ವಾರದ ಕ್ಯಾಪ್ಟನ್ ಆಗಿ ನವೀನ್ ಆಯ್ಕೆ ಆಗಿದ್ದಾರೆ. ಹೀಗಾಗಿ, ನಾಮಿನೇಷನ್ ಪ್ರಕ್ರಿಯೆಯಿಂದ ನವೀನ್ ಫುಲ್ ಸೇಫ್ ಆಗಿದ್ದರು.

  ಮೂವರ ಮುಖವಾಡ ಕಳಚುವ ಸವಾಲು ಸ್ವೀಕರಿಸಿದ ಆಂಡ್ರ್ಯೂ.!

  ಟಾರ್ಗೆಟ್ ಆದ ಆಂಡಿ

  ಟಾರ್ಗೆಟ್ ಆದ ಆಂಡಿ

  'ಸೂಪರ್ ವಿಲನ್ಸ್ ವರ್ಸಸ್ ಸೂಪರ್ ಹೀರೋಸ್' ಟಾಸ್ಕ್ ನಲ್ಲಿ ಕಿರುಕುಳ ಕೊಟ್ಟಿದ್ದ ಆಂಡಿ ಈ ವಾರ ಟಾರ್ಗೆಟ್ ಆದರು. ಆಂಡಿ ವಿರುದ್ಧ ನಾಲ್ವರು ಅಂದ್ರೆ ರಶ್ಮಿ, ರಾಕೇಶ್, ಕವಿತಾ ಮತ್ತು ಧನರಾಜ್ ಮತ ಹಾಕಿದರು. ಹೀಗಾಗಿ, ಡೇಂಜರ್ ಝೋನ್ ನಲ್ಲಿದ್ದಾರೆ ಆಂಡಿ.

  ಎಂ.ಜೆ.ರಾಕೇಶ್ ಜೊತೆ ಸೇರಿ ಅಕ್ಷತಾ ಪಾಂಡವಪುರ ಫೂಲ್ ಆಗುತ್ತಿದ್ದಾರೆ.!

  ರಾಕೇಶ್ ಗೇಮ್ ಪ್ಲಾನ್ ವರ್ಕ್ ಆಗ್ತಿಲ್ಲ.!

  ರಾಕೇಶ್ ಗೇಮ್ ಪ್ಲಾನ್ ವರ್ಕ್ ಆಗ್ತಿಲ್ಲ.!

  'ಗುಡ್ನೆಸ್' ಅಂತ ಹೇಳಿಕೊಂಡು ಎಲ್ಲರ ಬಳಿ ಚೆನ್ನಾಗಿರಲು ಪ್ರಯತ್ನ ಪಟ್ಟರೂ, ರಾಕೇಶ್ ಗೇಮ್ ಪ್ಲಾನ್ ವರ್ಕ್ ಆಗ್ತಿಲ್ಲ. 'ರಾಕೇಶ್ ಫೇಕ್' ಅಂತ ಭಾವಿಸಿ ಆಂಡಿ, ರಶ್ಮಿ, ಶಶಿ ನಾಮಿನೇಟ್ ಮಾಡಿದರು.

  ನವೀನ್ ಅಭಿನಯ ಕಂಡು ಖುಷಿ ಪಟ್ಟು ಚಪ್ಪಾಳೆ ತಟ್ಟಿದ ಸುದೀಪ್.!

  ಅಕ್ಷತಾ ಹೀಗ್ಯಾಕೆ.?

  ಅಕ್ಷತಾ ಹೀಗ್ಯಾಕೆ.?

  ರಾಕೇಶ್ ವಿಷಯದಲ್ಲಿ ಅಕ್ಷತಾ ನಡೆದುಕೊಳ್ಳುತ್ತಿರುವ ರೀತಿ ಇತರರಿಗೆ ಗೊಂದಲ ಉಂಟು ಮಾಡಿದೆ. ಹೀಗಾಗಿ, ಶಶಿ, ಕವಿತಾ ಮತ್ತು ಧನರಾಜ್... ಅಕ್ಷತಾ ರನ್ನ ನಾಮಿನೇಟ್ ಮಾಡಿದ್ದಾರೆ.

  ಡೇಂಜರ್ ಝೋನ್ ನಲ್ಲಿ ಶಶಿ

  ಡೇಂಜರ್ ಝೋನ್ ನಲ್ಲಿ ಶಶಿ

  ಒಂದು ಗುಂಪಿಗೆ ಮಾತ್ರ ಸೀಮಿತವಾಗಿರುವ ಶಶಿ ಇತರರೊಂದಿಗೆ ಬೆರೆಯುತ್ತಿಲ್ಲ. ಹೀಗಾಗಿ, ಶಶಿ ಸದ್ಯ ಡೇಂಜರ್ ಝೋನ್ ಗೆ ಬಂದಿದ್ದಾರೆ.

  ರಶ್ಮಿ ಮೇಲೆ ನವೀನ್ ಅವಕೃಪೆ

  ರಶ್ಮಿ ಮೇಲೆ ನವೀನ್ ಅವಕೃಪೆ

  ಕ್ಯಾಪ್ಟನ್ ಆಗಿರುವ ನವೀನ್ ಗೆ ರಶ್ಮಿ, ಕವಿತಾ ಮತ್ತು ಧನರಾಜ್ ಪೈಕಿ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡುವ ಅಧಿಕಾರ ಇತ್ತು. 'ಬಿಗ್ ಬಾಸ್' ಮನೆಯಲ್ಲಿ ಉಳಿಯಲು ತಾವು ಏಕೆ ಅರ್ಹರು ಎಂಬುದನ್ನ ನವೀನ್ ಗೆ ರಶ್ಮಿ ಸರಿಯಾಗಿ ಮನವರಿಕೆ ಮಾಡಿಕೊಡಲಿಲ್ಲ. ಹೀಗಾಗಿ, ರಶ್ಮಿ ರವರನ್ನ ನವೀನ್ ನಾಮಿನೇಟ್ ಮಾಡಿದರು.

  ನಿಮ್ಮ ಮತ ಯಾರಿಗೆ.?

  ನಿಮ್ಮ ಮತ ಯಾರಿಗೆ.?

  ಆಂಡಿ, ರಾಕೇಶ್, ಅಕ್ಷತಾ, ಶಶಿ, ರಶ್ಮಿ.. ಈ ಐವರ ಪೈಕಿ ನಿಮ್ಮ ಮತ ಯಾರಿಗೆ.? ಈ ವಾರ ಯಾರು ಔಟ್ ಆಗಬೇಕು.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ಸ್ ಮೂಲಕ.

  English summary
  Bigg Boss Kannada 6: Week 12: 5 Contestants are nominated for this week's elimination.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X