For Quick Alerts
  ALLOW NOTIFICATIONS  
  For Daily Alerts

  ಕವಿತಾ ಕಣ್ಣೀರಿಟ್ಟು ರಂಪಾಟ ಮಾಡಲು ಕಾರಣ ಆಂಡ್ರ್ಯೂ ಅಲ್ಲ, ಮತ್ಯಾರು.?

  |

  ಕಳೆದ ವಾರ 'ಬಿಗ್ ಬಾಸ್' ಮನೆಯಲ್ಲಿ ದೊಡ್ಡ ರಂಪಾಟವೇ ನಡೆದು ಹೋಯ್ತು. 'ನ್ಯಾಯ ಇಲ್ಲಿದೆ' ಚಟುವಟಿಕೆ ವೇಳೆ ಆಂಡ್ರ್ಯೂ ವಿರುದ್ಧ ಕವಿತಾ ಮಾಡಿದ ಆರೋಪ ನಿಮಗೆಲ್ಲಾ ಗೊತ್ತೇ ಇದೆ.

  ಬಳಿಕ 'ಕಾಫಿ ವಿತ್ ಕ್ಯಾಪ್ಟನ್' ಚಾಟ್ ನಡೆದ ಮೇಲೆ ಕವಿತಾ ಕಣ್ಣೀರಧಾರೆ ಸುರಿಸಿದರು. ಇದೇ ವೇಳೆ ಜಯಶ್ರೀ ಮತ್ತು ಶಶಿ ಕೂಡ ರೊಚ್ಚಿಗೆದ್ದರು. ಆಂಡ್ರ್ಯೂ ಜೊತೆಗೆ ಶಶಿ ವಾಗ್ವಾದಕ್ಕೆ ಇಳಿದರು.

  ಇಷ್ಟೆಲ್ಲಾ ರಂಪಾಟ ಆಗುತ್ತಿದ್ದರೂ, ಕವಿತಾ ಮಾತ್ರ ಅಳುವುದನ್ನು ನಿಲ್ಲಿಸಲಿಲ್ಲ. ಕೊನೆಗೆ ಕೈಮೂಳೆಯನ್ನು ಶಶಿ ಮುರಿದುಕೊಂಡು ಬಂದ್ಮೇಲೆ, ''ನನಗೆ ಸಿಟ್ಟು ಬರಲು ಕಾರಣ ನವೀನ್'' ಅಂತ ಹೊಸ ಬಾಂಬ್ ಸಿಡಿಸಿದರು 'ಚಿನ್ನು' ಕವಿತಾ.

  ಇಷ್ಟೇ ಇಲ್ಲ.. 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ನವೀನ್ ರನ್ನ 'ಫೇಕ್' ಅಂತ ಕವಿತಾ ಕರೆದರು. ಅಷ್ಟಕ್ಕೂ, ಏನಾಯ್ತು ಅಂತೀರಾ.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...

  ಹಾಡನ್ನ ಡೆಡಿಕೇಟ್ ಮಾಡಿದ್ದ ನವೀನ್

  ಹಾಡನ್ನ ಡೆಡಿಕೇಟ್ ಮಾಡಿದ್ದ ನವೀನ್

  'ಕಾಫಿ ವಿತ್ ಕ್ಯಾಪ್ಟನ್' ಚಾಟ್ ಶೋ ವೇಳೆ ಗಾಯಕ ನವೀನ್ ಸಜ್ಜು 'ಹುಡುಗೀರಂದ್ರೆ ಡೇಂಜರಪ್ಪೋ...' ಹಾಡನ್ನ ಕವಿತಾಗಾಗಿ ಡೆಡಿಕೇಟ್ ಮಾಡಿದ್ದರು. ಇದು ಕವಿತಾ ಮನಸ್ಸಿಗೆ ಬೇಸರ ತಂತು.

  'ಬಿಗ್ ಬಾಸ್' ಮನೆಯಲ್ಲಿ ಗುಂಪುಗಾರಿಕೆ: ತ್ರಿಮೂರ್ತಿಗಳ ಮೇಲೆ ಎಲ್ಲರ ಕಣ್ಣು.!

  ಕವಿತಾ ಹೇಳಿದ್ದೇನು.?

  ಕವಿತಾ ಹೇಳಿದ್ದೇನು.?

  ''ನನಗೆ ಜಾಸ್ತಿ ಸಿಟ್ಟು ಬಂದಿದ್ದು ನವೀನ್ ಮೇಲೆ. ನನಗೆ 'ಹುಡುಗೀರಂದ್ರೆ ಡೇಂಜರಪ್ಪೋ..' ಹಾಡನ್ನ ಡೆಡಿಕೇಟ್ ಮಾಡ್ತಾನೆ'' ಅಂತ ಜಯಶ್ರೀ ಮತ್ತು ಶಶಿ ಬಳಿ ಕವಿತಾ ಹೇಳಿಕೊಂಡಿದ್ದಾರೆ.

  ಕವಿತಾ ಗೊಳೋ ಎನ್ನಲು ಕಾರಣವಾದ ಆ ಚಾಟ್ ಶೋನಲ್ಲಿ ನಡೆದಿದ್ದೇನು.?

  ಫೇಕ್ ಅಂತ ಕರೆದ ಕವಿತಾ

  ಫೇಕ್ ಅಂತ ಕರೆದ ಕವಿತಾ

  ''ಆಂಡ್ರ್ಯೂ ಮತ್ತು ನವೀನ್ ಫೇಕ್ ಅಂತ ನನಗೆ ಅನಿಸುತ್ತೆ. ಯಾಕಂದ್ರೆ, ಆಂಡ್ರ್ಯೂ ನಕ್ಕಿದ್ರೂ, ನನಗೆ ಫೇಕ್ ಅಂತ ಅನಿಸುತ್ತೆ. ನಗುವಿನ ಹಿಂದೆ ಅವರ ತಲೆಯಲ್ಲಿ ಹಲವು ಲೆಕ್ಕಾಚಾರ ಇರುತ್ತೆ'' ಅಂತ ಸುದೀಪ್ ಮುಂದೆ ಕವಿತಾ ಹೇಳಿದರು.

  ಕಣ್ಣೀರಿಟ್ಟು ಕೂಗಾಡಿದ ಕವಿತಾ, ಅತ್ತ ಆಂಡ್ರ್ಯೂ, ರೊಚ್ಚಿಗೆದ್ದ ಶಶಿ ಕೈಗೆ ಪೆಟ್ಟು.!

  ನವೀನ್ ಕೂಡ ಫೇಕ್

  ನವೀನ್ ಕೂಡ ಫೇಕ್

  ''ನವೀನ್ ಒಳ್ಳೆ ಫ್ರೆಂಡ್ ಆಗಬಹುದು ಅಂದುಕೊಂಡಿದ್ದೆ. ಆದ್ರೆ, ಅವರೇ ನನ್ನ ಬಗ್ಗೆ

  'ಹುಡುಗೀರಂದ್ರೆ ಡೇಂಜರಪ್ಪೋ..' ಅಂತ ಹಾಡೊಂದನ್ನು ಡೆಡಿಕೇಟ್ ಮಾಡಿದರು. ಸೋನು ಗೌರವ ಬಗ್ಗೆ ಅಷ್ಟು ಚೆನ್ನಾಗಿ ಮಾತನಾಡಿದವರು, ಹುಡುಗೀರೇ ಡೇಂಜರ್ ಅಂತ ಮಾತನಾಡುವುದು ಸರಿ ಅಲ್ಲ'' ಎಂದರು ಕವಿತಾ.

  ಕವಿತಾ-ಆಂಡ್ರ್ಯೂ ಜಗಳಕ್ಕೆ ಶಶಿ ಸೀಮೆಎಣ್ಣೆಯಾದ್ರೆ, ಜಯಶ್ರೀ ಬೆಂಕಿಪಟ್ಟಣ.!

  ಬಕ್ರಾ ಆದ ಶಶಿ

  ಬಕ್ರಾ ಆದ ಶಶಿ

  ಕವಿತಾ ಕಣ್ಣೀರಿಡಲು ಕಾರಣ ಆಂಡ್ರ್ಯೂ ಎಂದು ಭಾವಿಸಿ ಆಂಡ್ರ್ಯೂ ವಿರುದ್ಧ ಜಯಶ್ರೀ ಮತ್ತು ಶಶಿ ಗರಂ ಆಗಿದ್ದರು. ಆಂಡ್ರ್ಯೂ ಜೊತೆಗೆ ನಡೆದ ವಾಗ್ವಾದದ ಪರಿಣಾಮ ಶಶಿ ಕೈಮೂಳೆ ಮುರಿದುಕೊಂಡಿದ್ದಾರೆ.

  English summary
  Bigg Boss Kannada 6: Week 5: Kavitha Gowda calls Naveen as Fake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X