For Quick Alerts
  ALLOW NOTIFICATIONS  
  For Daily Alerts

  ಚಂದನ್ ಆಚಾರ್ ಗೆ ಡೀಸೆನ್ಸಿ ಪಾಠ ಮಾಡಿದ 'ಪೈಲ್ವಾನ್' ಸುದೀಪ್

  |
  Chandan Achar apologized to Chaitra Kotoor.

  ''ಎಷ್ಟೇ ದೊಡ್ಡ ಬರಹಗಾರ್ತಿ ಆಗಿರಬಹುದು.. ಎಷ್ಟೇ ದೊಡ್ಡ ಕಲಾವಿದೆ ಆಗಿರಬಹುದು.. ಡೀಸೆನ್ಸಿ ಇಲ್ಲ ಅಂದ್ರೆ ಮುಂದೆ ಬರಲು ಸಾಧ್ಯವಿಲ್ಲ'' - ಹೀಗಂತ ನಟ ಚಂದನ್ ಆಚಾರ್ ಪದೇ ಪದೇ ಚೈತ್ರ ಕೋಟೂರುಗೆ ಹೇಳುತ್ತಿದ್ದರು. ಅದು ಆಕೆ ಕಣ್ಣೀರು ಹಾಕುತ್ತಿದ್ದಾಗ..

  ಒಂದು ಆಪಲ್ ತಿಂದ ವಿಚಾರಕ್ಕೆ ಚೈತ್ರ ಕೋಟೂರು ಮೇಲೆ ಸುಜಾತ ಕೂಗಾಡುತ್ತಿದ್ದಾಗ ಮಧ್ಯೆ ಮೂಗು ತೂರಿಸಿ, ಚೈತ್ರಗೆ ಚಂದನ್ ಆಚಾರ್ 'ಡೀಸೆನ್ಸಿ'ಯ ಪಾಠ ಮಾಡುತ್ತಿದ್ದರು.

  ಭಾವೋದ್ವೇಗಕ್ಕೆ ಒಳಗಾಗಿದ್ದ ಚೈತ್ರಗೆ ಸ್ವಲ್ಪ ಸಮಯವನ್ನೂ ಕೊಡದೆ ಹೋಗಿ ಬಂದು.. ಪದೇ ಪದೇ.. 'ಡೀಸೆನ್ಸಿ' ಎನ್ನುತ್ತ ಚಂದನ್ ಆಚಾರ್ ಕಿರಿಕಿರಿ ಮಾಡುತ್ತಿದ್ದರು. ಇದನ್ನ ಸೂಕ್ಷ್ಮವಾಗಿ ಗಮನಿಸಿದ ಕಿಚ್ಚ ಸುದೀಪ್, ಚಂದನ್ ಆಚಾರ್ ಗೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕ್ಲಾಸ್ ತೆಗೆದುಕೊಂಡರು. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ಜಗಳಕ್ಕೆ ತುಪ್ಪ ಸುರಿದಿದ್ದು ಚಂದನ್ ಆಚಾರ್

  ಜಗಳಕ್ಕೆ ತುಪ್ಪ ಸುರಿದಿದ್ದು ಚಂದನ್ ಆಚಾರ್

  ಒಂದು ಆಪಲ್ ವಿಚಾರವಾಗಿ ಸುಜಾತ ಮತ್ತು ಚೈತ್ರ ಕೋಟೂರು ನಡುವೆ ಹೊತ್ತಿಕೊಂಡ ಬೆಂಕಿಗೆ ತುಪ್ಪ ಸುರಿದವರು ಚಂದನ್ ಆಚಾರ್ ಅಂತ ಸುದೀಪ್ ಮುಂದೆ ವಾಸುಕಿ ವೈಭವ್ ನೇರವಾಗಿ ಹೇಳಿದರು.

  ತಪ್ಪಿನ ಅರಿವಾದ ಮೇಲೆ ಸುದೀಪ್ ಮುಂದೆ ಚೈತ್ರಗೆ ಕ್ಷಮೆ ಕೇಳಿದ ಸುಜಾತ.!ತಪ್ಪಿನ ಅರಿವಾದ ಮೇಲೆ ಸುದೀಪ್ ಮುಂದೆ ಚೈತ್ರಗೆ ಕ್ಷಮೆ ಕೇಳಿದ ಸುಜಾತ.!

  ಡೀಸೆನ್ಸಿ ಎಂದರೆ ಏನು.?

  ಡೀಸೆನ್ಸಿ ಎಂದರೆ ಏನು.?

  ಪದೇ ಪದೇ 'ಡೀಸೆನ್ಸಿ' ಎಂಬ ಪದ ಪ್ರಯೋಗಿಸಿದ ಚಂದನ್ ಆಚಾರ್ ಗೆ, ''ಡೀಸೆನ್ಸಿ.. ಯಾರ ಫೇವರಿಟ್ ಪದ ಇದು.? ನಿಮ್ಮ ಪ್ರಕಾರ ಡೀಸೆನ್ಸಿ ಎಂದರೆ ಏನು.?'' ಎಂದು ಪ್ರಶ್ನಿಸಿದರು.

  'ಬಿಗ್ ಬಾಸ್ ಕನ್ನಡ-7': ಟಾರ್ಗೆಟ್ ಆದ 'ಅನ್ನಪೂರ್ಣೇಶ್ವರಿ' ಸುಜಾತ'ಬಿಗ್ ಬಾಸ್ ಕನ್ನಡ-7': ಟಾರ್ಗೆಟ್ ಆದ 'ಅನ್ನಪೂರ್ಣೇಶ್ವರಿ' ಸುಜಾತ

  ಚಂದನ್ ಆಚಾರ್ ಹೇಳಿದ್ದೇನು.?

  ಚಂದನ್ ಆಚಾರ್ ಹೇಳಿದ್ದೇನು.?

  ''ಆಪಲ್ ವಿಷಯ ಬಂದಾಗ ''ಚಂದನ್, ರಾಜು ತಾಳಿಕೋಟೆ, ಕುರಿ ಪ್ರತಾಪ್ ಕೂಡ ತಿಂದರು'' ಅಂತ ಚೈತ್ರ ಹೇಳಿದರು. ಇದು ನನಗೆ ತುಂಬಾ ಟ್ರಿಗರ್ ಆಯ್ತು. ಅವರು ಆಪಲ್ ತಿಂದು ನಮ್ಮ ಮೇಲೆ ಹಾಕಿದ ಹಾಕಿದರು. ಇದರಿಂದ ನನಗೆ ಬೇಸರ ಆಯ್ತು. ಇದು ನನಗೆ ಡೀಸೆನ್ಸಿ ಅಂತ ಅನಿಸಲಿಲ್ಲ'' ಎಂದರು ಚಂದನ್ ಆಚಾರ್.

  ಎರಡು ವಾರ: 'ಬಿಗ್ ಬಾಸ್' ಮನೆಯೊಳಗೆ ಏನ್ ನಡೀತಿದೆ.? ವೀಕ್ಷಕರಿಗೆ ಅರ್ಥ ಆಗ್ತಿಲ್ಲ.!ಎರಡು ವಾರ: 'ಬಿಗ್ ಬಾಸ್' ಮನೆಯೊಳಗೆ ಏನ್ ನಡೀತಿದೆ.? ವೀಕ್ಷಕರಿಗೆ ಅರ್ಥ ಆಗ್ತಿಲ್ಲ.!

  ಚೈತ್ರ ಕೊಟ್ಟ ಸ್ಪಷ್ಟನೆ

  ಚೈತ್ರ ಕೊಟ್ಟ ಸ್ಪಷ್ಟನೆ

  ''ಚೈತ್ರ ಎಷ್ಟೇ ದೊಡ್ಡ ಬರಹಗಾರ್ತಿ ಆಗಿರಬಹುದು. ಆದ್ರೆ ಈ ಸಣ್ಣ ವಿಷಯವನ್ನು ಹುಷಾರಾಗಿ ನಿಭಾಯಿಸಲು ಬರಲಿಲ್ಲ'' ಎಂದು ಚಂದನ್ ಆಚಾರ್ ಹೇಳಿದಾಗ, ''ಇನ್ನೊಬ್ಬರ ಮೇಲೆ ತಪ್ಪು ಹಾಕುವ ಸಲುವಾಗಿ ನಾನು ಹಾಗೆ ಹೇಳಲಿಲ್ಲ'' ಎಂದು ಚೈತ್ರ ಕೋಟೂರು ಸ್ಪಷ್ಟ ಪಡಿಸಿದರು.

  ಇದು ಡೀಸೆನ್ಸಿನಾ.?

  ಇದು ಡೀಸೆನ್ಸಿನಾ.?

  ''ಚೈತ್ರ ಅಳುವಾಗ ಸಮಯ ಕೊಡದೆ ಪದೇ ಪದೇ ಕಿರಿಕಿರಿ ಮಾಡಿದ್ದು ಡೀಸೆನ್ಸಿನಾ, ಅಲ್ವಾ.? ವಾಕ್ಸಮರ ನಡೆಯುವಾಗ ಒಬ್ಬರನ್ನು ಹಿಡಿದು ಎಳೆದು ದಬಾಯಿಸಿ ಮಾತನಾಡುವುದು ಡೀಸೆನ್ಸಿನಾ, ಅಲ್ವಾ.? ಯಾವ ಒಂದು ಪದಕ್ಕಾಗಿ, ಕುರ್ಚಿಗಾಗಿ ನಾವು ಅರ್ಹರಲ್ಲವೋ, ಅದರ ಬಗ್ಗೆ ಮಾತನಾಡಿ ಇನ್ನೊಬ್ಬರಿಗೆ ಪಾಠ ಹೇಳುವುದು ಡೀಸೆನ್ಸಿ ಅಲ್ಲ'' ಎನ್ನುತ್ತ ಚಂದನ್ ಆಚಾರ್ ಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು. ಆಗ ಚಂದನ್ ಆಚಾರ್ ಕ್ಷಮೆಯಾಚಿಸಿದರು.

  English summary
  Bigg Boss Kannada 7: Day 13: Chandan Achar apologized Chaitra Kotur and Sudeep.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X