Don't Miss!
- Sports
IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತಪ್ಪಿನ ಅರಿವಾದ ಮೇಲೆ ಸುದೀಪ್ ಮುಂದೆ ಚೈತ್ರಗೆ ಕ್ಷಮೆ ಕೇಳಿದ ಸುಜಾತ.!
Recommended Video
'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಎರಡನೇ ವಾರ ದೊಡ್ಡ ಗಲಾಟೆ ಆಗಿದ್ದು ಒಂದು ಆಪಲ್ ವಿಚಾರಕ್ಕೆ. ರಾತ್ರೋರಾತ್ರಿ ಹೊಟ್ಟೆ ಹಸಿವಾದಾಗ, ಚೈತ್ರ ಕೋಟೂರು ಒಂದು ಆಪಲ್ ತಿಂದಿದ್ದರು. ಅದು ಅಡುಗೆ ಮನೆಯ ತಂಡದಲ್ಲಿದ್ದ ಚಂದನ್ ಆಚಾರ್ ಗೆ ತಿಳಿಸಿ ಒಂದು ಆಪಲ್ ತೆಗೆದುಕೊಂಡಿದ್ದರು ಚೈತ್ರ. ಅಲ್ಲದೇ, ಚಂದನ್ ಆಚಾರ್, ರಾಜು ತಾಳಿಕೋಟೆ ಮತ್ತು ಕುರಿ ಪ್ರತಾಪ್ ಜೊತೆಗೂ ಚೈತ್ರ ಕೋಟೂರು ಒಂದು ಆಪಲ್ ನ ಹಂಚಿಕೊಂಡಿದ್ದರು.
ಈ ವಿಚಾರ ಸುಜಾತ ಕಿವಿಗೆ ಬಿದ್ದ ಮೇಲೆ ದೊಡ್ಡ ರಂಪ ಆಗಿತ್ತು. ''ಕಾಮನ್ ಸೆನ್ಸ್ ಇಲ್ಲ.. ಕದ್ದು ತಿನ್ನುತ್ತಾರೆ'' ಅಂತೆಲ್ಲಾ ಚೈತ್ರ ಕೋಟೂರು ಮೇಲೆ ಸುಜಾತ ಕೂಗಾಡಿದ್ದರು.
ಇದೇ ಟಾಪಿಕ್ ಕುರಿತಾಗಿ ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಪಂಚಾಯಿತಿ ನಡೆಸಿದರು. ಸುದೀಪ್ ಆಡಿದ ಮಾತುಗಳಿಂದ ತಮ್ಮ ತಪ್ಪು ಅರಿತ ಸುಜಾತ, ಚೈತ್ರ ಕೋಟೂರುಗೆ ಕ್ಷಮೆ ಕೇಳಿದರು. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...

ಸುಜಾತಗೆ ಬಂತು ವೂಟ್ ಪ್ರಶ್ನೆ
ಕೊಡಚಾದ್ರಿ ಮೂಲದ ಪ್ರವೀಣಾ ಎಂಬುವರು ಜರ್ಮನಿಯಿಂದ ಕಳುಹಿಸಿರುವ ವಿಡಿಯೋದಲ್ಲಿ, ''ಒಂದು ಸೇಬಿಗೆ ಅಷ್ಟೊಂದು ದೊಡ್ಡ ಗಲಾಟೆ ಮಾಡುವ ಅವಶ್ಯಕತೆ ಇತ್ತಾ.? ನಿಮಗೆ ಆಪ್ತವಾಗಿರುವವರು ತಿಂದಿದ್ದರೆ, ಇಷ್ಟು ದೊಡ್ಡದಾಗಿ ಜಗಳ ಮಾಡುತ್ತಿದ್ರಾ.?'' ಎಂದು ಸುಜಾತಗೆ ಪ್ರಶ್ನೆ ಕೇಳಿದರು.
ಎರಡು
ವಾರ:
'ಬಿಗ್
ಬಾಸ್'
ಮನೆಯೊಳಗೆ
ಏನ್
ನಡೀತಿದೆ.?
ವೀಕ್ಷಕರಿಗೆ
ಅರ್ಥ
ಆಗ್ತಿಲ್ಲ.!

ಸುಜಾತಾ ಕೊಟ್ಟ ಉತ್ತರ ಏನು.?
''ಯಾರೇ ಆಗಿದ್ದರೂ ಖಂಡಿತ ಹೀಗೆ ಮಾಡುತ್ತಿದ್ದೆ. ಕೊಟ್ಟಿರುವ ಹಣ್ಣು ಎಲ್ಲರಿಗೂ ಸಮನಾಗಿ ಭಾಗ ಮಾಡಬೇಕು ಅನ್ನೋದು ನನ್ನ ಅನಿಸಿಕೆ'' ಎಂದರು ಸುಜಾತ.
'ಬಿಗ್
ಬಾಸ್':
ಇಡೀ
ಸಂಚಿಕೆಯನ್ನು
ಕೊಂದ
ಒಂದು
ಆಪಲ್.!

ಚೈತ್ರ ಹೇಳಿದ್ದೇನು.?
''ನನಗೆ ಹುಷಾರಿರಲಿಲ್ಲ. ವೈಯುಕ್ತಿಕ ಸಮಸ್ಯೆ ಇತ್ತು. ಹೊಟ್ಟೆ ನೋವಿದ್ದ ಕಾರಣ ಆಪಲ್ ತಿಂದೆ. ನಾನು ಕದ್ದು ತಿನ್ನಲಿಲ್ಲ. ಚಂದನ್ ಇರುವುದು ಕಿಚನ್ ಡಿಪಾರ್ಟ್ಮೆಂಟ್ ನಲ್ಲಿ. ಹೀಗಾಗಿ ಅವರಿಗೆ ಹೇಳಿ ಆಪಲ್ ತೆಗೆದುಕೊಂಡೆ'' ಎಂದರು ಚೈತ್ರ ಕೋಟೂರು
'ಬಿಗ್
ಬಾಸ್
ಕನ್ನಡ-7':
ಟಾರ್ಗೆಟ್
ಆದ
'ಅನ್ನಪೂರ್ಣೇಶ್ವರಿ'
ಸುಜಾತ

ಸುದೀಪ್ ಏನಂದರು.?
''ಆಪಲ್ ಯಾವಾಗ ತಿನ್ನಬೇಕು, ಯಾವಾಗ ತಿನ್ನಬಾರದು ಎಂಬ ರೂಲ್ ಯಾರದ್ದು.? ಸೇಬಿನ ಮೇಲೆ ಎಲ್ಲರಿಗೂ ಸಮನಾಗಿ ಹಕ್ಕಿದೆ. ಯಾರಿಗೆ ಯಾವಾಗ ತಿನ್ನಬೇಕು ಅನ್ಸುತ್ತೋ, ಆಗ ತಿನ್ನುತ್ತಾರೆ. ನಗುಮುಖದಲ್ಲೇ ಚೈತ್ರಗೆ 'ನಿಮ್ಮ ಲೆಕ್ಕದಲ್ಲಿ ಒಂದು ಆಪಲ್ ಕಮ್ಮಿ ಆಗಿದೆ' ಎಂದು ಹೇಳಿದ್ದರೆ ಇಷ್ಟೊಂದು ದೊಡ್ಡ ಗಲಾಟೆ ಆಗುತ್ತಿರಲಿಲ್ಲ'' ಎನ್ನುತ್ತ ಸುಜಾತಗೆ ಸುದೀಪ್ ಬಿಸಿ ಮುಟ್ಟಿಸಿದರು.

ಕ್ಷಮೆ ಕೇಳಿದ ಸುಜಾತ
ಸುದೀಪ್ ಆಡಿದ ಮಾತುಗಳನ್ನು ಕೇಳಿ, ''ಹೌದು.. ಈ ತರಹ ಮಾಡಬಹುದಿತ್ತು. ಐ ಆಮ್ ಸಾರಿ ಚೈತ್ರ.. ನಾನು ತಪ್ಪು ಮಾಡಿದೆ'' ಎಂದು ಚೈತ್ರ ಬಳಿ ಸುಜಾತ ಕ್ಷಮೆ ಕೇಳಿದರು.

ಟಾರ್ಗೆಟ್ ಆದ ಸುಜಾತ
''ಹೆಚ್ಚು ಕಿರುಚಾಡುತ್ತಾರೆ'' ಅಂತ ಸುಜಾತ ಕಡೆ ಶೈನ್ ಶೆಟ್ಟಿ, ಚಂದನಾ, ಕಿಶನ್ ಬೆಟ್ಟು ಮಾಡಿ ತೋರಿಸಿದ ಮೇಲೆ ''ನನ್ನ ವಾಯ್ಸ್ ತುಂಬಾ ಜೋರು. ಇನ್ಮೇಲೆ ಮೆಲ್ಲಗೆ ಮಾತನಾಡಲು ಪ್ರಯತ್ನ ಪಡುವೆ'' ಎಂದರು ಸುಜಾತ. ಆಡಿದ ಮಾತಿನಂತೆ ಇನ್ಮುಂದೆ ಸುಜಾತ ಬದಲಾಗುತ್ತಾರಾ, ನೋಡೋಣ.