For Quick Alerts
  ALLOW NOTIFICATIONS  
  For Daily Alerts

  ಆಪಲ್ ಆಯ್ತು.. ಈಗ ಲಾಟೀನ್ ಗಾಗಿ ಗೊಂದಲ, ಗದ್ದಲ, ಗುಸುಗುಸು.!

  |

  'ಬಿಗ್ ಬಾಸ್' ಮನೆಯೊಳಗೆ ಕಳೆದ ವಾರವಷ್ಟೇ ಒಂದು ಆಪಲ್ ಗಾಗಿ ದೊಡ್ಡ ಗಲಾಟೆ ನಡೆದಿತ್ತು. ಇದೀಗ ಈ ವಾರ ಲಾಟೀನ್ ಗಾಗಿ ಗೊಂದಲ, ಗದ್ದಲ ಶುರುವಾಗಿದೆ.

  ಸ್ಪರ್ಧಿಗಳಿಗೆ 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದ್ದರು. ಅದರ ಅನುಸಾರ, ಯಾರಾದರೂ ಒಬ್ಬರು ಲಾಟೀನ್ ನನ್ನು ಹಿಡಿದಿರಬೇಕು. ಲಾಟೀನ್ ಹಿಡಿದುಕೊಂಡವರು ಕೂರುವಂತಿಲ್ಲ. ಹಾಗೇ, ಲಾಟೀನ್ ನ ಕೆಳಗೆ ಇಡುವಂತಿಲ್ಲ. ಹಗಲು-ರಾತ್ರಿ ಈ ಟಾಸ್ಕ್ ಚಾಲ್ತಿಯಲ್ಲಿದ್ದು, ಒಬ್ಬರಿಂದೊಬ್ಬರಿಗೆ ಲಾಟೀನ್ ಹಸ್ತಾಂತರವಾಗಬೇಕು.

  ಈ ಚಟುವಟಿಕೆ ಚಾಲ್ತಿ ಆಗುತ್ತಿದ್ದಂತೆ.. ಮೊದಲು ಕಿಶನ್, ನಂತರ ಚಂದನಾ, ಮೂರನೇಯವರಾಗಿ ಪ್ರಿಯಾಂಕಾ, ನಾಲ್ಕನೇಯವರಾಗಿ ವಾಸುಕಿ ವೈಭವ್ ಲಾಟೀನ್ ಹಿಡಿಯುವುದು ನಿರ್ಧಾರ ಆಗಿತ್ತು.

  ಆದ್ರೆ, ಚಂದನಾಗೆ ಡ್ಯಾನ್ಸ್ ಪರ್ಫಾಮೆನ್ಸ್ ಇದ್ದ ಕಾರಣ ಆಕೆಯ ಜಾಗಕ್ಕೆ ವಾಸುಕಿ ವೈಭವ್ ಬಂದು ಲಾಟೀನ್ ಹಿಡಿದರು. ಕ್ರಮಾನುಸಾರ ಮೂರನೇಯವರಾಗಿದ್ದ ಪ್ರಿಯಾಂಕಾಗೆ ಲಾಟೀನ್ ಹೋಗಬೇಕಿತ್ತು. ಇಲ್ಲೇ ವಾಸುಕಿ ವೈಭವ್ ಇಕ್ಕಟ್ಟಿಗೆ ಸಿಲುಕಿದ್ದು. ಮುಂದೆ ಓದಿರಿ...

  ಚಂದನಾಗೆ ಮಾತು ಕೊಟ್ಟಿದ್ದ ವಾಸುಕಿ ವೈಭವ್

  ಚಂದನಾಗೆ ಮಾತು ಕೊಟ್ಟಿದ್ದ ವಾಸುಕಿ ವೈಭವ್

  ಚಂದನಾಗೆ ಡ್ಯಾನ್ಸ್ ಪರ್ಫಾಮೆನ್ಸ್ ಇತ್ತು. ಅದಕ್ಕಾಗಿ ಪ್ರ್ಯಾಕ್ಟೀಸ್ ಮಾಡಬೇಕಿದ್ದ ಕಾರಣ, ಚಂದನಾ ಬದಲು ವಾಸುಕಿ ವೈಭವ್ ಲಾಟೀನ್ ಹಿಡಿದರು. ತಮಗೆ ಸುಸ್ತಾದ ಬಳಿಕ ಚಂದನಾಗೆ ಲಾಟೀನ್ ಕೊಡುವುದಾಗಿ ವಾಸುಕಿ ವೈಭವ್ ಮಾತು ಕೊಟ್ಟಿದ್ದರು. ವಾಸುಕಿ ವೈಭವ್ ಮಾತು ಕೊಟ್ಟಿದ್ದ ಕಾರಣ ತಮಗೆ ಲಾಟೀನ್ ಕೊಡುವಂತೆ ಚಂದನಾ ಒತ್ತಾಯಿಸುತ್ತಿದ್ದರು.

  'ಬಿಗ್ ಬಾಸ್' ಸ್ಪರ್ಧಿ ಚೈತ್ರ ಕೋಟೂರು ಬಗ್ಗೆ ಹರಿಪ್ರಿಯಾ ಹೀಗ್ಯಾಕೆ ಹೇಳಿದ್ರು.?'ಬಿಗ್ ಬಾಸ್' ಸ್ಪರ್ಧಿ ಚೈತ್ರ ಕೋಟೂರು ಬಗ್ಗೆ ಹರಿಪ್ರಿಯಾ ಹೀಗ್ಯಾಕೆ ಹೇಳಿದ್ರು.?

  ಕಿರಿಕ್ ಮಾಡಿದ ಪ್ರಿಯಾಂಕಾ

  ಕಿರಿಕ್ ಮಾಡಿದ ಪ್ರಿಯಾಂಕಾ

  ಲಾಟೀನ್ ಹಿಡಿಯುವ ಕ್ರಮದಲ್ಲಿ ಮೂರನೇಯವರಾಗಿ ಪ್ರಿಯಾಂಕಾ ಇದ್ದರು. ಹೀಗಿರುವಾಗ, ಪ್ರಿಯಾಂಕಾಗೆ ವಾಸುಕಿ ವೈಭವ್ ಲಾಟೀನ್ ಕೊಡಬೇಕು. ಆದರೆ, ಅವರು ಚಂದನಾಗೆ ಕೊಡುವೆ ಎಂದಿದ್ದು ಪ್ರಿಯಾಂಕಾರನ್ನ ಕೆರಳಿಸಿತು. ಇದೇ ಕಾರಣಕ್ಕೆ 'ಬಿಗ್ ಬಾಸ್' ಮನೆಯಲ್ಲಿ ಗದ್ದಲ ಶುರುವಾಯಿತು.

  'ಬಿಗ್ ಬಾಸ್': ಅಚ್ಚರಿ ತಂದ ಈ ವಾರದ ನಾಮಿನೇಷನ್'ಬಿಗ್ ಬಾಸ್': ಅಚ್ಚರಿ ತಂದ ಈ ವಾರದ ನಾಮಿನೇಷನ್

  ಕೆರಳಿದ ಪ್ರಿಯಾಂಕಾ

  ಕೆರಳಿದ ಪ್ರಿಯಾಂಕಾ

  ''ಲಾಟೀನ್ ನ ನನಗೆ ಕೊಡದೆ ಬೇರೆ ಕಡೆ ಹೋದರೆ, ನಾನು ಮನುಷ್ಯಳಾಗಿ ಇರುವುದಿಲ್ಲ. ಮೊದಲೇ ನಂಬರ್ ಡಿಸೈಡ್ ಆಗಿತ್ತು. ಅದರ ಪ್ರಕಾರ ಟಾಸ್ಕ್ ಮಾಡಿ. ಇಲ್ಲಾಂದ್ರೆ ನೀವೇ ಟಾಸ್ಕ್ ಆಡಿ. ನಾನು ಆಡಲ್ಲ'' ಅಂತ ವಾಸುಕಿ ವೈಭವ್ ಮೇಲೆ ಪ್ರಿಯಾಂಕಾ ಕೆರಳಿದರು.

  'ಬಿಗ್ ಬಾಸ್': ಇಡೀ ಸಂಚಿಕೆಯನ್ನು ಕೊಂದ ಒಂದು ಆಪಲ್.!'ಬಿಗ್ ಬಾಸ್': ಇಡೀ ಸಂಚಿಕೆಯನ್ನು ಕೊಂದ ಒಂದು ಆಪಲ್.!

  ಕೊನೆಗೂ ಲಾಟೀನ್ ಹಿಡಿದ ಪ್ರಿಯಾಂಕಾ

  ಕೊನೆಗೂ ಲಾಟೀನ್ ಹಿಡಿದ ಪ್ರಿಯಾಂಕಾ

  ಕೆಲ ಹೊತ್ತು ಗೊಂದಲ ಉಂಟಾದ ನಂತರ ಕೊನೆಗೂ ವಾಸುಕಿ ವೈಭವ್ ಕೈಯಿಂದ ಲಾಟೀನ್ ಪ್ರಿಯಾಂಕಾಗೆ ಹಸ್ತಾಂತರವಾಯಿತು. ಪ್ರಿಯಾಂಕಾ ನಂತರ ಚಂದನಾ ಕೈಗೆ ಲಾಟೀನ್ ಬಂತು. ರಾತ್ರಿ ಕಳೆದು ಬೆಳಗಾಗಿದ್ದರೂ, ಲಾಟೀನ್ ವಿಚಾರವಾಗಿ ಗುಸುಗುಸು ಕಮ್ಮಿ ಆಗಿರಲಿಲ್ಲ.

  ಇದು ಹೊಸ ಸ್ಟ್ರಾಟೆಜಿ

  ಇದು ಹೊಸ ಸ್ಟ್ರಾಟೆಜಿ

  ಇಡೀ ರಾತ್ರಿ ಏಕಾಂಗಿಯಾಗಿ ಟಾಸ್ಕ್ ನಲ್ಲಿ ಪರ್ಫಾರ್ಮ್ ಮಾಡಿದರೆ ಜನ ಗುರುತಿಸುತ್ತಾರೆ ಎಂಬ ಸ್ಟ್ರಾಟೆಜಿ ಕೆಲ ಸ್ಪರ್ಧಿಗಳಲ್ಲಿದೆ. ಹೀಗಾಗಿ, ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳಲು ಕೆಲವರು ಸರ್ಕಸ್ ಮಾಡುತ್ತಿದ್ದಾರೆ. ಇದಕ್ಕೆ ಈ ಚಟುವಟಿಕೆಯೇ ಉತ್ತಮ ಉದಾಹರಣೆ.

  English summary
  Bigg Boss Kannada 7: Day 16: Argument between Vasuki Vaibhav and Priyanka over lantern.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X