For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಸಾಮ್ರಾಜ್ಯದಲ್ಲಿ 'ರಾಜ' ಜೈಜಗದೀಶ್ ದರ್ಬಾರ್.!

  |

  'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಮೂರನೇ ವಾರ ಕ್ಯಾಪ್ಟನ್ ಆಯ್ಕೆ ನಡೆದಿಲ್ಲ. ಕ್ಯಾಪ್ಟನ್ ಬದಲಾಗಿ 'ಬಿಗ್ ಬಾಸ್' ಮನೆಯಲ್ಲಿ ರಾಜನಾಗಿ ಜೈಜಗದೀಶ್ ದರ್ಬಾರ್ ನಡೆಸುತ್ತಿದ್ದಾರೆ.

  ಈ ವಾರ 'ಬಿಗ್ ಬಾಸ್' ಕೊಟ್ಟಿರುವ ವಿಶೇಷ ಚಟುವಟಿಕೆ ಅನ್ವಯ ಪ್ರತಿದಿನ ಒಂದೊಂದು ಯುದ್ಧ ಘೋಷಣೆ ಆಗಲಿದೆ. ಗೆದ್ದ ಸದಸ್ಯ ಮುಂದಿನ ಯುದ್ಧ ಘೋಷಣೆ ಆಗುವವರೆಗೂ ರಾಜ ಅಥವಾ ರಾಣಿಯಾಗಿ ದರ್ಬಾರ್ ಮಾಡಬೇಕು.

  ಅಂದು ವಿಜಯಲಕ್ಷ್ಮಿ ಸಿಂಗ್ ರನ್ನ ಮದುವೆ ಆಗುವುದು ಜೈಜಗದೀಶ್ ಗೆ ಗೊತ್ತೇ ಇರಲಿಲ್ಲ.!ಅಂದು ವಿಜಯಲಕ್ಷ್ಮಿ ಸಿಂಗ್ ರನ್ನ ಮದುವೆ ಆಗುವುದು ಜೈಜಗದೀಶ್ ಗೆ ಗೊತ್ತೇ ಇರಲಿಲ್ಲ.!

  ಅದರಂತೆ ನಡೆದ ಮೊದಲ ಯುದ್ಧದಲ್ಲಿ ಜೈಜಗದೀಶ್ ವಿಜೇತರಾದರು. ಗುರಿ ನಿಖರತೆ ಮತ್ತು ಏಕಾಗ್ರತೆ ಪರೀಕ್ಷೆಯಲ್ಲಿ ಜೈಜಗದೀಶ್ ಪಾಸ್ ಆದರು. ಹೀಗಾಗಿ, ಸದ್ಯ ಇಡೀ 'ಬಿಗ್ ಬಾಸ್' ಸಾಮ್ರಾಜ್ಯ ಜೈಜಗದೀಶ್ ಕೈಯಲ್ಲಿದೆ.

  ಜೈಜಗದೀಶ್ 'ರಾಜ'ನಾಗಿ ಇರುವುದರಿಂದ ಇತರೆ ಸ್ಪರ್ಧಿಗಳ ಜೊತೆಗೆ 'ಬಿಗ್ ಬಾಸ್' ಮಾತನಾಡುತ್ತಿಲ್ಲ. ಜೈಜಗದೀಶ್ ಇಚ್ಛೆ ಅನುಸಾರ 'ಬಿಗ್ ಬಾಸ್' ಮನೆಯಲ್ಲಿ ಅಡುಗೆ ಮಾಡಬೇಕು. ರಾಜ ಜೈಜಗದೀಶ್ ಗೆ ಚಿನ್ನದ ಬಟ್ಟಲಿನಲ್ಲಿ ಸ್ಪರ್ಧಿಗಳು ಊಟ ಮಾಡಿಸಬೇಕು.

  ಕನ್ನಡದ ಆ 'ಸೂಪರ್ ಸ್ಟಾರ್' ನೆರವಿನಿಂದ ಜೈಜಗದೀಶ್ ಮೊದಲ ಮದುವೆ ಆಗಿತ್ತು.!ಕನ್ನಡದ ಆ 'ಸೂಪರ್ ಸ್ಟಾರ್' ನೆರವಿನಿಂದ ಜೈಜಗದೀಶ್ ಮೊದಲ ಮದುವೆ ಆಗಿತ್ತು.!

  ಕುರಿ ಪ್ರತಾಪ್ ರನ್ನ ಮಂತ್ರಿಯಾಗಿ ಜೈಜಗದೀಶ್ ಆಯ್ಕೆ ಮಾಡಿಕೊಂಡಿದ್ದಾರೆ. ಅಂಗರಕ್ಷಕರಾಗಿ ಶೈನ್ ಶೆಟ್ಟಿ ಮತ್ತು ಕಿಶನ್ ಇದ್ದಾರೆ. ಸದ್ಯಕ್ಕೆ 'ಬಿಗ್ ಬಾಸ್' ಮನೆಯಲ್ಲಿ ಜೈಜಗದೀಶ್ ದರ್ಬಾರ್ ನಡೆಯುತ್ತಿದೆ. ಮತ್ತೆ ಯುದ್ಧ ಘೋಷಣೆ ಆಗುವವರೆಗೂ ರಾಜನ ಸ್ಥಾನದಲ್ಲಿ ಜೈಜಗದೀಶ್ ಖಾಯಂ.

  English summary
  Bigg Boss Kannada 7: Day 16: Jai Jagadeesh crowned as the King.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X