For Quick Alerts
  ALLOW NOTIFICATIONS  
  For Daily Alerts

  ಸೆಲೆಬ್ರಿಟಿ ಸ್ಪರ್ಧಿಗಳಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಾವುದು ಅಂತ್ಲೇ ಗೊತ್ತಿಲ್ಲ.!

  |
  Bigg Boss Kannada 7 contestants lack in General knowledge | FILMIBEAT KANNADA

  ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಾವುದು ಅಂತ ಕೇಳಿದ್ರೆ ಯಾರು ಬೇಕಾದ್ರೂ ಹೇಳ್ತಾರೆ 'ಭಾರತ ರತ್ನ' ಅಂತ. ಆದರೆ, 'ಬಿಗ್ ಬಾಸ್' ಮನೆಯೊಳಗೆ ಎಂಟ್ರಿಕೊಟ್ಟಿರುವ ಕೆಲ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಈ ವಿಚಾರ ಗೊತ್ತೇ ಇಲ್ಲ.!

  ನಂಬಿದ್ರೆ ನಂಬಿ.. ಬಿಟ್ಟರೆ ಬಿಡಿ... ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಾವುದು ಎಂಬ ಸಾಮಾನ್ಯ ಜ್ಞಾನದ ಪ್ರಶ್ನೆಗೆ ಪ್ರಿಯಾಂಕಾ, ದುನಿಯಾ ರಶ್ಮಿ, ಕುರಿ ಪ್ರತಾಪ್ ಮತ್ತು ಶೈನ್ ಶೆಟ್ಟಿ ತಪ್ಪು ಉತ್ತರ ಕೊಟ್ಟಿದ್ದಾರೆ.

  ಬೇಕು ಅಂತ ಜಗಳ ಮಾಡಿಸಿದ 'ಬಿಗ್ ಬಾಸ್' ಬುದ್ಧಿವಂತಿಕೆ ಮೆಚ್ಚಬೇಕು.!ಬೇಕು ಅಂತ ಜಗಳ ಮಾಡಿಸಿದ 'ಬಿಗ್ ಬಾಸ್' ಬುದ್ಧಿವಂತಿಕೆ ಮೆಚ್ಚಬೇಕು.!

  'ಬಿಗ್ ಬಾಸ್ ದರ್ಬಾರ್' ಟಾಸ್ಕ್ ನಲ್ಲಿ ರಾಜನ ಆಯ್ಕೆಗಾಗಿ ಸಾಮಾನ್ಯ ಜ್ಞಾನದ ಪರೀಕ್ಷೆ ನಡೆಸಲಾಯಿತು. ಇದರಲ್ಲಿ ಕೇಳಿದ ಇಪ್ಪತ್ತು ಸಿಂಪಲ್ ಪ್ರಶ್ನೆಗಳಿಗೆ ಹಲವರು ತಪ್ಪು ಉತ್ತರ ನೀಡಿದ್ದಾರೆ. ಅದರಲ್ಲೂ 'ಸರ್ಕಾರಿ ಕೆಲಸ ದೇವರ ಕೆಲಸ ಎಂಬ ವಾಕ್ಯವನ್ನು ಬೆಂಗಳೂರಿನ ಯಾವ ಸರ್ಕಾರಿ ಕಟ್ಟಡದ ಮೇಲ್ಭಾಗದಲ್ಲಿ ಬರೆಯಲಾಗಿದೆ' ಎಂಬ ಪ್ರಶ್ನೆಗೆ ಉತ್ತರ 'ವಿಧಾನ ಸೌಧ' ಅನ್ನೋದು 'ಅಗ್ನಿಸಾಕ್ಷಿ' ಚಂದ್ರಿಕಾ ಖ್ಯಾತಿಯ ಪ್ರಿಯಾಂಕಾಗೆ ತಿಳಿದಿಲ್ಲ.

  ಓಹ್.. ವಾಸುಕಿ ವೈಭವ್ ಮದುವೆ ಆಗುವ ಹುಡುಗಿ ಭೂಮಿ ಶೆಟ್ಟಿ ತರಹ ಇರ್ಬೇಕು.!ಓಹ್.. ವಾಸುಕಿ ವೈಭವ್ ಮದುವೆ ಆಗುವ ಹುಡುಗಿ ಭೂಮಿ ಶೆಟ್ಟಿ ತರಹ ಇರ್ಬೇಕು.!

  ಇನ್ನೂ ಇಂತಹ ಇಪ್ಪತ್ತು ಪ್ರಶ್ನೆಗಳಿಗೆ ತುಂಬಾ ಕನ್ಫ್ಯೂಸ್ ಮಾಡಿಕೊಂಡು ಹೆಚ್ಚು ತಪ್ಪು ಉತ್ತರಗಳನ್ನು ಬರೆದಿದ್ದ ದುನಿಯಾ ರಶ್ಮಿ ಕಣ್ಣೀರಿಟ್ಟರು.

  ಇದೇ ಚಟುವಟಿಕೆಯಲ್ಲಿ ಎಲ್ಲರಿಗಿಂತ ಹೆಚ್ಚು ಸರಿ ಉತ್ತರಗಳನ್ನು ನೀಡಿದ ವಾಸುಕಿ ವೈಭವ್ 'ರಾಜ'ನ ಪಟ್ಟಕ್ಕೆ ಏರಿದರು. ರಾಜ ವಾಸುಕಿ ವೈಭವ್ ದರ್ಬಾರ್ ನಲ್ಲಿ ಶೈನ್ ಶೆಟ್ಟಿ ಮಂತ್ರಿಯಾಗಿದ್ದರೆ, ಭೂಮಿ ಶೆಟ್ಟಿ ಮತ್ತು ಹರೀಶ್ ರಾಜ್ ಸೈನಿಕರಾದರು.

  ಇಡೀ ರಾತ್ರಿ ಲಾಟೀನ್ ಕೈಬಿಡದ ಹರೀಶ್ ರಾಜ್ ಗೆ ಭೇಷ್ ಎನ್ನಲೇಬೇಕು.!ಇಡೀ ರಾತ್ರಿ ಲಾಟೀನ್ ಕೈಬಿಡದ ಹರೀಶ್ ರಾಜ್ ಗೆ ಭೇಷ್ ಎನ್ನಲೇಬೇಕು.!

  ಸದ್ಯಕ್ಕೆ 'ಬಿಗ್ ಬಾಸ್' ಮನೆಯಲ್ಲಿ ರಾಜ ವಾಸುಕಿ ವೈಭವ್ ದರ್ಬಾರ್ ನಡೆಯುತ್ತಿದೆ.

  English summary
  Bigg Boss Kannada 7: Day 17: Vasuki Vaibhav crowned as the King.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X