For Quick Alerts
  ALLOW NOTIFICATIONS  
  For Daily Alerts

  ಶೈನ್ ಶೆಟ್ಟಿ ಜೊತೆ ಚಂದನ್ ಆಚಾರ್ ಬೇಳೆ 'ಕಿರಿಕ್'.!

  |

  Recommended Video

  Bigg Boss Kannada 7 : Chandan Achar , the Kirik Party | FILMIBEAT KANNADA

  'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಮಿಂಚಿದ್ದ ಚಂದನ್ ಆಚಾರ್ ಅದ್ಯಾಕೋ 'ಬಿಗ್ ಬಾಸ್' ಮನೆಯೊಳಗೂ ಕಿರಿಕ್ ಮೇಲೆ ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ಚೈತ್ರ ಕೋಟೂರು ಮತ್ತು ಸುಜಾತ ನಡುವೆ ಒಂದು ಆಪಲ್ ವಿಷಯಕ್ಕೆ ದೊಡ್ಡ ಗಲಾಟೆ ಆಗಲು ನೇರ ಕಾರಣ ಚಂದನ್ ಆಚಾರ್.

  ಇನ್ನೂ ಅಡುಗೆ ಮನೆ ವಿಚಾರಕ್ಕೆ ಹರೀಶ್ ರಾಜ್ ಮತ್ತು ಸುಜಾತ ನಡುವೆ ವಾಕ್ಸಮರ ನಡೆಯುತ್ತಿದ್ದಾಗ, ಚಂದನ್ ಆಚಾರ್ ಹೊಸ ಕ್ಯಾತೆ ತೆಗೆದಿದ್ದರು. ಕಾಲು ಕೆರೆದುಕೊಂಡು ಶೈನ್ ಶೆಟ್ಟಿ ಜೊತೆಗೆ ಬೇಳೆ ವಿಚಾರಕ್ಕೆ ಚಂದನ್ ಕಿರಿಕ್ ಮಾಡಿದರು.

  ಹರೀಶ್ ರಾಜ್ ಮತ್ತು ಸುಜಾತ ಕಿತ್ತಾಟದ ನಡುವೆ, ''ಮಧ್ಯಾಹ್ನ ಸಾರಿನಲ್ಲಿ ಕೆಳಗೆ ಬೇಳೆ ಇತ್ತು. ಅದನ್ನ ನಮಗೆ ಹಾಕಲಿಲ್ಲ ಅಂತ ಶೈನ್ ಶೆಟ್ಟಿ ಹೇಳಿದರು'' ಅಂತ ಚಂದನ್ ಆಚಾರ್ ಹೊಸ ಬಾಣ ಎಸೆದರು.

  ಬೇಕು ಅಂತ ಜಗಳ ಮಾಡಿಸಿದ 'ಬಿಗ್ ಬಾಸ್' ಬುದ್ಧಿವಂತಿಕೆ ಮೆಚ್ಚಬೇಕು.!ಬೇಕು ಅಂತ ಜಗಳ ಮಾಡಿಸಿದ 'ಬಿಗ್ ಬಾಸ್' ಬುದ್ಧಿವಂತಿಕೆ ಮೆಚ್ಚಬೇಕು.!

  ಅಲ್ಲಿಯವರೆಗೂ ಸೈಲೆಂಟ್ ಆಗಿದ್ದ ಶೈನ್ ಶೆಟ್ಟಿ, ''ಬೇಳೆ ಹಾಕಲಿಲ್ಲ ಅಂತ ನಾನು ಹೇಳಲಿಲ್ಲ. ನಮಗೆ ಬೇಳೆ ಬಂತು ಅಂತ ಹೇಳಿದ್ದು. ಏನೇನೋ ಹೇಳಬೇಡಿ.. ಇರುವುದನ್ನ ಹೇಳಿ...'' ಎನ್ನುತ್ತ ಟೆಂಪರ್ ರೈಸ್ ಮಾಡಿಕೊಂಡರು.

  ''ಬೇಳೆ ಇಟ್ಟುಕೊಂಡು ಏನು ಮಾಡ್ತಾರೆ ಅಂತ ನೀವು ಹೇಳಲಿಲ್ವಾ.?'' ಎಂದು ಚಂದನ್ ಆಚಾರ್ ಪ್ರಶ್ನಿಸಿದರು. ಅದಕ್ಕೆ ''ಹಿಂದೆ ಒಂದು ಮುಂದೆ ಒಂದು ಮಾತನಾಡಲು ನನಗೆ ಬರಲ್ಲ. ನಮಗೆ ಹಾಕುವಾಗ ನೀವು ಕೆಳಗಿನಿಂದ ಹಾಕಿದ್ರಿ. ನನಗೆ ಪ್ರಾಬ್ಲಂ ಆಗಿದ್ದರೆ ನಾನೇ ಮಾತನಾಡುತ್ತೇನೆ. ನೀವು ಮಾತನಾಡುವುದು ಬೇಡ'' ಎಂದು ಶೈನ್ ಶೆಟ್ಟಿ ಸಿಡುಕಿದರು.

  ಚಂದನ್ ಆಚಾರ್ ಗೆ ಡೀಸೆನ್ಸಿ ಪಾಠ ಮಾಡಿದ 'ಪೈಲ್ವಾನ್' ಸುದೀಪ್ಚಂದನ್ ಆಚಾರ್ ಗೆ ಡೀಸೆನ್ಸಿ ಪಾಠ ಮಾಡಿದ 'ಪೈಲ್ವಾನ್' ಸುದೀಪ್

  ಅದಕ್ಕೆ, ''ಬೆಂಕಿ ಹಚ್ಚಬೇಕು ಎಂಬ ಉದ್ದೇಶ ನಮಗಿಲ್ಲ. ಶೈನ್ ನ ಸಿಲುಕಿಸಿ, ಮಜಾ ತೆಗೆದುಕೊಳ್ಳಬೇಕು ಅಂತೇನಿಲ್ಲ'' ಎಂದು ಚಂದನ್ ಆಚಾರ್ ಸ್ಪಷ್ಟ ಪಡಿಸಿದರು.

  ಈ ನಡುವೆ, ''ಚಂದನ್ ಛತ್ರಿ.. ಏನೋ ಫಿಟ್ಟಿಂಗ್ ಇಟ್ಟಿರುತ್ತಾನೆ'' ಅಂತ ಜೈಜಗದೀಶ್ ಹೇಳಿದರು. ಒಟ್ನಲ್ಲಿ, ಚಂದನ್ ಆಚಾರ್ ಬಗ್ಗೆ 'ಬಿಗ್ ಬಾಸ್' ಸ್ಪರ್ಧಿಗಳಲ್ಲಿ ಒಳ್ಳೆ ಅಭಿಪ್ರಾಯವಂತೂ ಇಲ್ಲ.

  English summary
  Bigg Boss Kannada 7: Day 17: Verbal spat between Chandan Achar and Shine Shetty.
  Thursday, October 31, 2019, 15:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X