For Quick Alerts
  ALLOW NOTIFICATIONS  
  For Daily Alerts

  ಕದ್ದು ತಿಂದ ಭೂಮಿ ಶೆಟ್ಟಿಗೆ 'ಬಿಗ್ ಬಾಸ್' ಬುದ್ಧಿ ಕಲಿಸಿದ್ದು ಹೇಗೆ.?

  |

  ಚಾಕಲೇಟ್, ಕೇಕ್, ಸಿಹಿ ತಿನಿಸುಗಳು... ಇವೆಲ್ಲವೂ 'ಬಿಗ್ ಬಾಸ್' ಮನೆಯಲ್ಲಿ ಲಕ್ಷುರಿ ಬಜೆಟ್. ಚಟುವಟಿಕೆಯಲ್ಲಿ ಗೆದ್ದವರಿಗೆ ಮಾತ್ರ ಲಕ್ಷುರಿ ಬಜೆಟ್ ಮೇಲೆ ಹಕ್ಕು ಇರುವುದರಿಂದ ಉಳಿದವರು ಲಕ್ಷುರಿ ಬಜೆಟ್ ಪದಾರ್ಥಗಳನ್ನು ಕದ್ದು ತಿನ್ನುವುದು 'ಬಿಗ್ ಬಾಸ್' ಮನೆಯಲ್ಲಿ ಪರಿಪಾಠವಾಗಿದೆ.

  ಕದ್ದು ತಿಂದ ಸ್ಪರ್ಧಿಗಳಿಗೆ ಕೆಲವು ಬಾರಿ 'ಬಿಗ್ ಬಾಸ್' ಶಿಕ್ಷೆ ನೀಡಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ಪ್ರತಿಯೊಂದನ್ನೂ ಕ್ಯಾಮರಾಗಳು ಸೆರೆ ಹಿಡಿಯುತ್ತವೆ ಎಂಬ ಕನಿಷ್ಠ ಜ್ಞಾನವೂ ಇಲ್ಲದೆ ಒಂದಲ್ಲಾ ಒಂದು ಸೀಸನ್ ನಲ್ಲಿ ಒಬ್ಬರಲ್ಲ ಒಬ್ಬರು ಕದ್ದು ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ.

  ಈ ಆವೃತ್ತಿ.. ಅಂದ್ರೆ 'ಬಿಗ್ ಬಾಸ್ ಕನ್ನಡ-7'ನಲ್ಲೂ ಭೂಮಿ ಶೆಟ್ಟಿ ಚಾಕಲೇಜ್ ಕದ್ದು ತಿಂದಿದ್ದಾರೆ. ಭೂಮಿ ಶೆಟ್ಟಿ ಪದೇ ಪದೇ ಚಾಕಲೇಟ್ ನ ಕದ್ದು ತಿಂದ ಪರಿಣಾಮ ಲಕ್ಷುರಿ ಬಜೆಟ್ ನಲ್ಲಿ ಭಾರಿ ಮೊತ್ತದ ಪಾಯಿಂಟ್ ಗಳನ್ನು ಕಡಿತಗೊಳಿಸಲಾಗಿದೆ.

  ಜಡೆ ಜಗಳ ಶುರು: ಪ್ರಿಯಾಂಕಾ ಕಂಡ್ರೆ ಭೂಮಿ ಶೆಟ್ಟಿಗೆ ಯಾಕೆ ಹೊಟ್ಟೆ ಉರಿ.?ಜಡೆ ಜಗಳ ಶುರು: ಪ್ರಿಯಾಂಕಾ ಕಂಡ್ರೆ ಭೂಮಿ ಶೆಟ್ಟಿಗೆ ಯಾಕೆ ಹೊಟ್ಟೆ ಉರಿ.?

  ಕಳೆದ ವಾರ ಒಟ್ಟಾರೆ 22,050 ಲಕ್ಷುರಿ ಬಜೆಟ್ ಪಾಯಿಂಟ್ ಗಳನ್ನ ಎಲ್ಲಾ ಸ್ಪರ್ಧಿಗಳು ಗಳಿಸಿದ್ದರು. ಅದರಲ್ಲಿ ಭೂಮಿ ಶೆಟ್ಟಿ ಕದ್ದು ತಿಂದಿದ್ದಕ್ಕೆ 5,175 ಪಾಯಿಂಟ್ ಗಳನ್ನು 'ಬಿಗ್ ಬಾಸ್' ಕಟ್ ಮಾಡಿದ್ದಾರೆ.

  ''ಚಾಕಲೇಟ್ ನ ಕದ್ದು ತಿಂದಿದ್ದಕ್ಕೆ ಮೂರು ಪಟ್ಟು ಹೆಚ್ಚು ಪಾಯಿಂಟ್ ಹೋಗಲೇ ಬೇಕು. ಯಾಕಂದ್ರೆ, ಅದು ತಪ್ಪು. ಮೂರು ಬಾರಿ ಕದ್ದು ತಿನ್ನುವುದು ಸರಿ ಅಲ್ಲ. ಕದ್ದು ತಿನ್ನುವುದು ಜೋಕ್ ಆದ್ಮೇಲೆ ಅಭ್ಯಾಸ ಆಗೋಗಿದೆ'' ಎಂದಿದ್ದಾರೆ ಕಿಚ್ಚ ಸುದೀಪ್.

  ಓಹ್.. ವಾಸುಕಿ ವೈಭವ್ ಮದುವೆ ಆಗುವ ಹುಡುಗಿ ಭೂಮಿ ಶೆಟ್ಟಿ ತರಹ ಇರ್ಬೇಕು.!ಓಹ್.. ವಾಸುಕಿ ವೈಭವ್ ಮದುವೆ ಆಗುವ ಹುಡುಗಿ ಭೂಮಿ ಶೆಟ್ಟಿ ತರಹ ಇರ್ಬೇಕು.!

  ಭೂಮಿ ಶೆಟ್ಟಿ ಒಬ್ಬರಿಂದಲೇ 5,175 ಪಾಯಿಂಟ್ ಗಳು ಕಟ್ ಆಗಿದ್ದರಿಂದ ಅವರಿಗೆ ಈ ವಾರ 'ಕಳಪೆ' ಬೋರ್ಡ್ ಹಾಕಿ ಜೈಲಿಗೆ ತಳ್ಳಲಾಗಿತ್ತು. ಇನ್ಮೇಲಾದರೂ, ಕದ್ದು ತಿನ್ನುವವರಿಗೆ ಬುದ್ಧಿ ಬರಬಹುದಾ.? ನೋಡೋಣ.

  English summary
  Bigg Boss Kannada 7: Day 20: Sudeep upset with Bhoomi Shetty for stealing Chocolate.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X