For Quick Alerts
  ALLOW NOTIFICATIONS  
  For Daily Alerts

  ಚೈತ್ರ ಕೋಟೂರು ಅಂದು 'ಆ' ನಿರ್ಧಾರ ಮಾಡಿದ್ರೆ, ಇಂದು ಈ ರೀತಿ ಇರ್ತಿರ್ಲಿಲ್ಲ.!

  |

  'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಮೊದಲೆರಡು ವಾರ ಚೈತ್ರ ಕೋಟೂರು ಸಿಕ್ಕಾಪಟ್ಟೆ ಸೌಂಡ್ ಮಾಡಿದರು. ಆದ್ರೆ ಈಗೀಗ ಅವರು ಬಹುತೇಕ ಸೈಲೆಂಟ್ ಆಗಿದ್ದಾರೆ. 'ಬಿಗ್ ಬಾಸ್' ಮನೆಯೊಳಗೆ ಸದ್ಯ ಅವರಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂಥ ಪರಿಸ್ಥಿತಿ.

  'ಬಿಗ್ ಬಾಸ್' ಮನೆಯಲ್ಲಿರುವ ಯಾವ ಗುಂಪಿಗೂ ಸೇರದ ಚೈತ್ರ ಕೋಟೂರು ಬಹುತೇಕ ಒಂಟಿಯಾಗಿದ್ದಾರೆ. ಎಲ್ಲರೊಂದಿಗೆ ಬೆರೆಯುವ ಪ್ರಯತ್ನ ಪಟ್ಟರೂ, ಕೆಲವರು ಆಕೆಯನ್ನು ಅವಾಯ್ಡ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ''ನಾವೇನು ಅಸ್ಪೃಶ್ಯರೇ.?'' ಎಂಬ ಪ್ರಶ್ನೆ ಎತ್ತಿದ್ದಾರೆ ಚೈತ್ರ ಕೋಟೂರು.

  ''ಚಂದನಾ, ದೀಪಿಕಾ ದಾಸ್, ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿ ಜೊತೆಗೆ ಎಲ್ಲರೂ ಚೆನ್ನಾಗಿ ಮಾತನಾಡುತ್ತಾರೆ. ಆದರೆ ನನ್ನ ಬಳಿ ಯಾರೂ ಸರಿಯಾಗಿ ಮಾತನಾಡುವುದಿಲ್ಲ. ನಮಗೇನು ಮೇಕಪ್, ಕಾಸ್ಟ್ಯೂಮ್ ಹಾಕಿಕೊಳ್ಳಲು ಬರಲ್ವಾ.?'' ಎಂಬುದು ಚೈತ್ರ ಕೋಟೂರು ಕೊರಗು.

  ಚೈತ್ರಾ ಕೋಟೂರ್ 'ಬಿಗ್ ಬಾಸ್' ಬರೋಕೆ ಆ 'ವಿವಾದ' ಕಾರಣವಾಯ್ತಾ?ಚೈತ್ರಾ ಕೋಟೂರ್ 'ಬಿಗ್ ಬಾಸ್' ಬರೋಕೆ ಆ 'ವಿವಾದ' ಕಾರಣವಾಯ್ತಾ?

  ಹಾಗ್ನೋಡಿದ್ರೆ, ಚೈತ್ರ ಕೋಟೂರು ಕೂಡ ನಟಿಯೇ. 'ಸೂಜಿದಾರ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದಲ್ಲದೇ, ಕೆಲ ಧಾರಾವಾಹಿಗಳಲ್ಲೂ ಚೈತ್ರ ಕೋಟೂರು ಅಭಿನಯಿಸಿದ್ದಾರೆ. ಆದರೆ ಅವರಿಗೆ ಜನಪ್ರಿಯತೆ ಸಿಕ್ಕಿಲ್ಲ ಅಷ್ಟೇ.

  ''ನನಗೂ ಎಷ್ಟೊಂದು ಸೀರಿಯಲ್ ನಲ್ಲಿ ಮೇನ್ ರೋಲ್ ಆಫರ್ಸ್ ಬಂದಿತ್ತು ಗೊತ್ತಾ.? ಸಿನಿಮಾ ಬರವಣಿಗೆ ಬಗ್ಗೆ ಆಸಕ್ತಿ ಇದ್ದಿದ್ರಿಂದ ನಾನು ಒಪ್ಪಿಕೊಳ್ಳಲಿಲ್ಲ. ನನ್ನ ಒಳಗೆ ಒಳ್ಳೆಯ ನಟಿ ಇದ್ದಾಳೆ'' ಎಂದು 'ಬಿಗ್ ಬಾಸ್' ಮನೆಯೊಳಗೆ ಚೈತ್ರ ಕೋಟೂರು ಹೇಳಿಕೊಂಡಿದ್ದಾರೆ.

  ಸುದೀಪ್ ಅರಿವಿಗೆ ಬಂತು ಚೈತ್ರ ಕೋಟೂರು ಗೇಮ್ ಪ್ಲಾನ್.!ಸುದೀಪ್ ಅರಿವಿಗೆ ಬಂತು ಚೈತ್ರ ಕೋಟೂರು ಗೇಮ್ ಪ್ಲಾನ್.!

  ಉತ್ತಮ ಬರಹಗಾರ್ತಿಯೂ ಆಗಿರುವ ಚೈತ್ರ ಕೋಟೂರು ನಿರ್ದೇಶಕ ಯೋಗರಾಜ್ ಭಟ್ ಬಳಿ ಸಹಾಯಕ ನಿರ್ದೇಶಕಿ ಆಗಿ ಕೆಲಸ ಮಾಡಿದ್ದಾರೆ.

  ಸಹಾಯಕ ನಿರ್ದೇಶಕಿಯಾಗಿ ಪರದೆ ಹಿಂದೆ ಸರಿಯದೆ, ಅಂದು ಸೀರಿಯಲ್ ಆಫರ್ ಬಂದಾಗ ಒಪ್ಪಿಕೊಂಡಿರುತ್ತಿದ್ದರೆ, ಇಂದು ಚೈತ್ರ ಕೋಟೂರು ಈ ರೀತಿ ಕೊರಗುತ್ತಾ ಇರ್ತಿಲಿಲ್ವೇನೋ.!

  English summary
  Bigg Boss Kannada 7: Day 22: Chaitra Kotur revealed that she had got many lead role offers in TV Serials.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X