Don't Miss!
- Sports
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ವಿಕೆಟ್ ಕೀಪರ್ ಆಗಿ ಈತನೇ ಸೂಕ್ತ ಎಂದ ಆಕಾಶ್ ಚೋಪ್ರ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಿಗ್ ಬಾಸ್ ಸಂಭಾವನೆ ಬಗ್ಗೆ ಕೇಳಿದ್ದಕ್ಕೆ ಸುದೀಪ್ ಏನಂದ್ರು?
Recommended Video
ಬಿಗ್ ಬಾಸ್ ಕನ್ನಡ 7ನೇ ಆವೃತ್ತಿಯಲ್ಲಿ ಯಾರೆಲ್ಲಾ ಭಾಗವಹಿಸಲಿದ್ದಾರೆ ಎನ್ನುವುದರ ಜೊತೆಗೆ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡಲು ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವುದು ದೊಡ್ಡ ಪ್ರಶ್ನೆಯಾಗಿತ್ತು.
ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದೀಪ್ ಮತ್ತು ಬಿಗ್ ಬಾಸ್ ಡೈರೆಕ್ಟರ್ ಪರಮೇಶ್ವರ್ ಗುಂಡ್ಕಲ್ ಸುದ್ದಿಗೋಷ್ಠಿ ಮಾಡಿದರು. ಈ ವೇಳೆ ಸುದೀಪ್ ಸಂಭಾವನೆ ಕುರಿತು ಪ್ರಶ್ನಿಸಲಾಯಿತು. ಇದಕ್ಕೆ ಸುದೀಪ್ ಕೂಡ ಉತ್ತರಿಸಿದರು.
ಕಿಚ್ಚ ಸುದೀಪ್ ಅವರು ಐದು ವರ್ಷಕ್ಕೆ 20 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸುದೀಪ್ ಪ್ರತಿಕ್ರಿಯಿಸಿದ್ದು, ''ಸಂಭಾವನೆ ವಿಚಾರವಾಗಿ ನನಗೂ ಮತ್ತು ಆಯೋಜಕರ ನಡುವೆ ಒಳ್ಳೆಯ ಸಂಬಂಧವಿದೆ. ಅವರಿಗೂ ನಾನು ಕಷ್ಟ ಕೊಟ್ಟಿಲ್ಲ, ನನಗೂ ಅವರ ನಿರಾಸೆ ಮಾಡಿಲ್ಲ. ಒಳ್ಳೆಯ ಸಂಭಾವನೆ ಸಿಕ್ಕಿದೆ'' ಎಂದರು.
Bigg
Boss
Kannada
7:
ದೊಡ್ಮನೆ
ಟಿಕೆಟ್
ಪಡೆದ
ಸ್ಪರ್ಧಿಗಳ
ಸಂಭಾವ್ಯ
ಪಟ್ಟಿ
ಇಲ್ಲಿದೆ
ಮಾತು ಮುಂದುವರಿಸಿದ ಸುದೀಪ್ ''ಬಿಗ್ ಬಾಸ್ ಗಿಂತ ನನ್ನ ದುಡಿಮೆ ಇರೋದು ಸಿನಿಮಾಗಳಲ್ಲಿ. ಅಲ್ಲಿ ನಿರ್ಮಾಪಕರಿಗೂ ನಷ್ಟವಾಗದಂತೆ ಎಲ್ಲವೂ ಚೆನ್ನಾಗಿ ಹೋಗುತ್ತೆ. ಕೆಲವು ಕಡೆ ನಾನೇ ಸಂಭಾವನೆ ಬಿಟ್ಟಿರುವ ಉದಾಹರಣೆಯೂ ಇದೆ. ಸರಿಯಾದ ಅಂಕಿ ಅಂಶ ನಾನು ಹೇಳಬೇಕಿರುವುದು ನನ್ನ ಪತ್ನಿಗೆ ಮಾತ್ರ. ಅದು ಅವರಿಗೆ ಗೊತ್ತಿದೆ ಸಾಕು ಬಿಡಿ. ನೀವು ತಿಳಿದುಕೊಂಡು ಏನು ಮಾಡ್ತೀರಾ. ನಿಮಗೇನೂ ನಾನು ಕೊಡಲ್ಲ ಅಲ್ವಾ'' ಎಂದು ಕಾಲೆಳೆದರು.
ಬಿಗ್
ಬಾಸ್
ಮನೆಗೆ
'ಈ
ವ್ಯಕ್ತಿ'
ಹೋಗಲೇಬೇಕು
ಅಂತಿದ್ದಾರೆ
ವೀಕ್ಷಕರು!
2015ನೇ ಆವೃತ್ತಿಯಲ್ಲಿ ಸುದೀಪ್ ಮತ್ತು ಬಿಗ್ ಬಾಸ್ ಆಯೋಜಕರ ನಡುವೆ ಒಪ್ಪಂದ ಆಗಿದ್ದು, 2020ಕ್ಕೆ ಮುಗಿಯಲಿದೆ. ಆ ಬಳಿಕ ಸುದೀಪ್ ಸಂಭಾವನೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನುಳಿದಂತೆ ಅಕ್ಟೋಬರ್ 13 ರಂದು ಬಿಗ್ ಬಾಸ್ ಕನ್ನಡ 7ನೇ ಸೀಸನ್ ಅಧಿಕೃತವಾಗಿ ಆರಂಭವಾಗಲಿದ್ದು, ಒಟ್ಟು 17 ಸ್ಪರ್ಧಿಗಳು ದೊಡ್ಮನೆ ಪ್ರವೇಶ ಮಾಡಲಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರತಿ ದಿನ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.