For Quick Alerts
ALLOW NOTIFICATIONS  
For Daily Alerts

ಬಿಗ್ ಬಾಸ್ ಕನ್ನಡ 7 'ಗೃಹ ಪ್ರವೇಶ' ದಿಂದ ದೂರಾದ ಸೆಲೆಬ್ರಿಟಿಗಳು

|
Bigg Boss Kannada 7 Spoof | FILMIBEAT KANNADA

ಕನ್ನಡ ಕಿರುತೆರೆ ಲೋಕದ ಅತ್ಯಂತ ಜನಪ್ರಿಯ ಹಾಗೂ ವಿವಾದಾತ್ಮಕ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ' 7ನೇ ಆವೃತ್ತಿಗೆ ಇಂದು ಸಂಜೆ ಕಿಚ್ಚ ಸುದೀಪರ ನಿರೂಪಣೆಯಲ್ಲಿ ಚಾಲನೆ ಸಿಕ್ಕಿದೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರೆ ಸಾಕು ಲಕ್ ತಿರುಗಿ ಬಿಡುತ್ತೆ ಎಂಬ ಜನಜನಿತ ಘೋಷಣೆಯೊಂದಿಗೆ ಸ್ಪರ್ಧಿಗಳಾಗಿ ಒಂದು ವಾರ ಮನೆಯೊಳಗಿದ್ದರೂ ಸಾಕು ಎನ್ನುವವರು ಹೆಚ್ಚಾಗಿದ್ದಾರೆ.

ಪ್ರತಿ ಬಾರಿಯಂತೆ ಈ ಬಾರಿಯೂ ಅನೇಕ ಸೆಲೆಬ್ರಿಟಿಗಳ ಹೆಸರುಗಳು ಸಂಭಾವ್ಯ ಪಟ್ಟಿಯಲ್ಲಿ ಕೇಳಿ ಬಂದಿತ್ತು. ಕ್ರೀಡಾ ಕ್ಷೇತ್ರ, ಪತ್ರಿಕೋದ್ಯಮ, ಕಲೆಗಾರರನ್ನು ಆಯ್ಕೆ ಮಾಡುವುದಿಲ್ಲ ಎಂಬ ಕೊರಗನ್ನು ನೀಗಿಸುವುದು ಕಲರ್ಸ್ ವಾಹಿನಿಯ ಪರಮೇಶ್ವರ್ ಗುಂಡ್ಕಲ್ ಹಾಗೂ ತಂಡಕ್ಕೆ ದೊಡ್ಡ ಸವಾಲಿನ ಕೆಲಸವೇ ಆಗಿತ್ತು.

ಬಿಗ್ ಬಾಸ್ ಕನ್ನಡ: 9ನೇ ಸ್ಪರ್ಧಿ 'ಕಿನ್ನರಿ' ಖ್ಯಾತಿಯ ಭೂಮಿ ಶೆಟ್ಟಿ ಹಾಗೂ ಹೀಗೂ ಅಳೆದು ತೂಗಿ ಸ್ಪರ್ಧಿಗಳ ಪಟ್ಟಿ ತಯಾರಿಸಿದರೂ ಸಾಮಾಜಿಕ ಜಾಲ ತಾಣಗಳಲ್ಲಿ ಸೋರಿಕೆಯಾಗುವುದು ಮಾಮೂಲಿಯಾಗುತ್ತಿತ್ತು. ಆದರೆ ಈ ಬಾರಿ ಒಂದಿಬ್ಬರು ಸ್ಪರ್ಧಿಗಳ ಬಗ್ಗೆ ಕಲರ್ಸ್ ವಾಹಿನಿಯೇ ಲೀಕ್ ಮಾಡಿ ಅಚ್ಚರಿ ಮೂಡಿಸಿತ್ತು. ಈ ನಡುವೆ ಸುಮಾರು 105 ದಿನಗಳ ಕಾಲ ಈ ಐಷಾರಾಮಿ ಮನೆಯಲ್ಲಿದ್ದು 2020ರ ಜನವರಿ 26ರಂದು ಫಿನಾಲೆಯಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ.

ಬಿಗ್ ಬಾಸ್ ಮನೆಗೆ ಪ್ರವೇಶಿಸುವವರು

ಬಿಗ್ ಬಾಸ್ ಮನೆಗೆ ಪ್ರವೇಶಿಸುವವರು

ಮಜಾ ಟಾಕೀಸ್ ಖ್ಯಾತಿಯ ಕುರಿ ಪ್ರತಾಪ್ ಮೊದಲನೇ ಸ್ಪರ್ಧಿಯಾಗಿ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಅಗ್ನಿ ಸಾಕ್ಷಿ ಖ್ಯಾತಿ ಪ್ರಿಯಾಂಕಾ ಎರಡನೇ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ್ದಾರೆ. ಮಿಕ್ಕಂತೆ ನಟ ಜೈ ಜಗದೀಶ್, ಹಿರಿಯ ಪತ್ರಕರ್ತ ರವಿ ಬೆಳಗೆರೆ, ನಟಿ ದುನಿಯಾ ರಶ್ಮಿ, ಟಿವಿ ನಟಿ ಸುಜಾತಾ, ಹಾವೇರಿಯ ಅಗಡಿ ಅಕ್ಕಿ ಮಠದ ಗುರುಲಿಂಗ ಸ್ವಾಮೀಜಿ, ಕಿನ್ನಾರಿ ಧಾರಾವಾಹಿ ಖ್ಯಾತಿಯ ಭೂಮಿ ಶೆಟ್ಟಿ, ನಾಗಿನಿ ಖ್ಯಾತಿಯ ದೀಪಿಕಾ ದಾಸ್, ಸಂಗೀತ ನಿರ್ದೇಶಕ ವಾಸುಕಿ ವೈಭವ್, ನಟ ಶೈನ್ ಶೆಟ್ಟಿ, ವಿಜೆ ಚೈತ್ರಾ ವಾಸುದೇವನ್, ನಟಿ, ಬರಹಗಾರ್ತಿ ಚೈತ್ರಾ ಕೋಟೂರು, ನಟ ರಾಜು ತಾಳಿಕೋಟೆ, ಡ್ಯಾನ್ಸರ್ ಕಿಶನ್, ನಟಿ ಚಂದನಾ, ಕಿರಿಕ್ ಪಾರ್ಟಿ ಖ್ಯಾತಿಯ ಚಂದನ್ ಆಚಾರ್, ಕೊನೆಯದಾಗಿ ಜಂಪಿಂಗ್ ಸ್ಟಾರ್ ಹರೀಶ್ ರಾಜ್.

ಸಂಭಾವ್ಯ ಪಟ್ಟಿಯಲ್ಲಿದ್ದು, ಮನೆ ಪ್ರವೇಶ ಪಡೆಯದವರು

ಸಂಭಾವ್ಯ ಪಟ್ಟಿಯಲ್ಲಿದ್ದು, ಮನೆ ಪ್ರವೇಶ ಪಡೆಯದವರು

ಸಂಭಾವ್ಯ ಪಟ್ಟಿಯಲ್ಲಿದ್ದು, ಮನೆ ಪ್ರವೇಶ ಪಡೆಯದವರ ಪಟ್ಟಿಯಲ್ಲಿ ಕುರಿಗಾಹಿ ಗಾಯಕ, ಡ್ಯಾನ್ಸರ್ ಹನುಮಂತ, ಮನೆ ದೇವ್ರು ಖ್ಯಾತಿಯ ಜಾಯ್ ಡಿಸೋಜಾ, ಜನಪ್ರಿಯ ನಟಿ ರಾಗಿಣಿ ದ್ವಿವೇದಿ, ಆಲ್ ಓಕೆ ಖ್ಯಾತಿಯ ಅಲೋಕ್ ಬಾಬು, ನಟಿ ಶರ್ಮಿಳಾ ಮಾಂಡ್ರೆ, ರಾಧಾ ರಮಣ ಖ್ಯಾತಿಯ ಶ್ವೇತಾ ರಾಮ್ ಪ್ರಸಾದ್ ಹೆಸರು ಇದೆ. ನಟ ಪಂಕಜ್ ನಾರಾಯಣ್ ಹೆಸರು ಬಲವಾಗಿ ಕೇಳಿ ಬಂದಿತ್ತು. ಆದರೆ, ಪಂಕಜ್ ಎಂಟ್ರಿಯಾಗಿಲ್ಲ.

'ಬಿಗ್ ಬಾಸ್' ಮೊದಲ ಸ್ಪರ್ಧಿ ಹೆಸರನ್ನು ಬಹಿರಂಗ ಪಡಿಸಿದ ಕಲರ್ಸ್ ವಾಹಿನಿ

2013ರಲ್ಲಿ ಆರಂಭವಾದ ಬಿಗ್ ಬಾಸ್ ಕನ್ನಡ ಆವೃತ್ತಿ

2013ರಲ್ಲಿ ಆರಂಭವಾದ ಬಿಗ್ ಬಾಸ್ ಕನ್ನಡ ಆವೃತ್ತಿ

ಎಂಡೆಮೋಲ್ ಹಕ್ಕು ಸ್ವಾಮ್ಯತೆ ಹೊಂದಿರುವ ವಿಶ್ವದೆಲ್ಲೆಡೆ ಬಿಗ್ ಬ್ರದರ್, ಬಿಗ್ ಬಾಸ್ ಎಂದು ಭಾರತದಲ್ಲಿ ಹಿಂದಿ, ಕನ್ನಡ, ಮರಾಠಿ, ಮಲಯಾಳಂ, ತೆಲುಗು, ತಮಿಳು, ಬೆಂಗಾಲಿ ಮುಂತಾದ ಭಾಷೆಗಳಲ್ಲಿ ಈ ರಿಯಾಲಿಟಿ ಶೋ ಯಶಸ್ವಿ ಪ್ರದರ್ಶನ ಕಂಡಿದೆ. ಮೊದಲ ಸೀಸನ್ ನಿಂದಲೂ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬಂದಿರುವ ಶೋ ಜನಪ್ರಿಯತೆಯನ್ನು ಇಂದಿಗೂ ಉಳಿಸಿಕೊಂಡಿದೆ. ಮೊದಲಿಗೆ ಈ ಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು. ನಂತರ ಸುವರ್ಣವಾಹಿನಿಯಲ್ಲಿ ಆನಂತರ ಮತ್ತೆ ವಯಾಕಾಂ 18ಗೆ ಮರಳಿತು ಈ ಟಿವಿ ಕನ್ನಡ ಕಲರ್ಸ್ ಕನ್ನಡ ಎಂದು ಮರು ನಾಮಕರಣವಾಯಿತು. ಕಳೆದ ಬಾರಿ ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗಿತ್ತು. ಈ ಬಾರಿ ಅಕ್ಟೋಬರ್ 13ರಿಂದ ಶುರುವಾಗಿ ಪ್ರತಿ ದಿನ 9 ರಿಂದ 10.30ಕ್ಕೆ ಪ್ರಸಾರವಾಗಲಿದೆ.

ಬಿಗ್ ಬಾಸ್ ಕಿರೀಟ ಗೆದ್ದವರು

ಬಿಗ್ ಬಾಸ್ ಕಿರೀಟ ಗೆದ್ದವರು

ಮೊದಲ ಸೀಸನ್ ವಿಜೇತ: ವಿಜಯ್ ರಾಘವೇಂದ್ರ, ಅರುಣ್ ಸಾಗರ್(ರನ್ನರ್ ಅಪ್)

ಎರಡನೇ ಸೀಸನ್ : ಅಕುಲ್ ಬಾಲಾಜಿ(ವಿಜೇತ), ಸೃಜನ್ ಲೋಕೇಶ್ (ರನ್ನರ್ ಅಪ್)

ಮೂರನೇ ಸೀಸನ್: ಶ್ರುತಿ(ವಿಜೇತ), ಚಂದನ್ ಕುಮಾರ್(ರನ್ನರ್ ಅಪ್)

ನಾಲ್ಕನೆ ಸೀಸನ್: ಪ್ರಥಮ್ (ವಿಜೇತ), ಕಿರಿಕ್ ಕೀರ್ತಿ(ರನ್ನರ್ ಅಪ್)

ಐದನೇ ಸೀಸನ್: ಚಂದನ್ ಶೆಟ್ಟಿ(ವಿಜೇತ), ದಿವಾಕರ್ (ರನ್ನರ್ ಅಪ್)

ಆರನೇ ಸೀಸನ್: ಶಶಿಕುಮಾರ್ (ವಿಜೇತ), ನವೀನ್ ಸಜ್ಜು(ರನ್ನರ್ ಅಪ್)

ಈ ಪೈಕಿ ಎರಡು ಮೂರು ಸೀಸನ್ ನಲ್ಲಿ ವಿಜೇತರ ಆಯ್ಕೆ ಬಗ್ಗೆ ಅಪಸ್ವರ ಕೇಳಿ ಬಂದಿದ್ದು ಸುಳ್ಳಲ್ಲ.

English summary
Bigg Boss Kannada 7: Folk singer Hanumantha, Jay De'Souza of Mane Devru fame, actress Ragini Dwivedi, musician Alok Babu and actress Sharmila Mandre and other rumoured to part of Kiccha Sudeep-hosted show but not part of it.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more