For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಕನ್ನಡ 8: ಗೆದ್ದು ಬೀಗಿದ ಕ್ಷಣವನ್ನು ನೆನೆದು ಕಣ್ಣೀರಿಟ್ಟ ಬಿಗ್ ಮನೆಯ ಸ್ಪರ್ಧಿಗಳು

  |

  ಬಿಗ್ ಬಾಸ್ ಕನ್ನಡ ಸೀಸನ್ 8ರ ಅಸಲಿ ಆಟ ಪ್ರಾರಂಭವಾಗಿದೆ. ಈಗಾಗಲೇ ಸ್ಪರ್ಧಿಗಳು 2ನೇ ದಿನದ ಆಟವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಪ್ರಾರಂಭದಲ್ಲಿ ಸಖತ್ ಜೋಶ್ ನಲ್ಲಿ ಇರುವ ಬಿಗ್ ಬಾಸ್ ಸ್ಪರ್ಧಿಗಳು ಟಾಸ್ಕ್ ಗಳನ್ನು ಅಷ್ಟೆ ಹುರುಪಿನಿಂದ ಮಾಡುತ್ತಿದ್ದಾರೆ.

  ಮೊದಲ ದಿನ ಮನೆಯ ಕ್ಯಾಪ್ಟನ್ ನಡೆದಿದ್ದು, ಈ ಬಾರಿ ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆಗಿ ಬ್ರೋ ಗೌಡ ಆಯ್ಕೆಯಾಗಿದ್ದಾರೆ. ಜೊತೆಗೆ ನಾಮಿನೇಷನ್ ಪ್ರಕ್ರಿಯೆ ಸಹ ಪ್ರಾರಂಭವಾಗಿದ್ದು, ಸ್ಪರ್ಧಿಗಳು ನೇರ ನೇರ ಸಹ ಸ್ಪರ್ಧಿಗಳನ್ನು ನಾಮಿನೇಟ್ ಮಾಡುವ ಮೂಲಕ ಕೆಲವರ ಕೋಪಕ್ಕೆ ಕಾರಣರಾಗಿದ್ದಾರೆ.

  ಬಿಗ್‌ಬಾಸ್ ಮನೆಯಲ್ಲಿ ಪ್ರೇಮಕತೆ ಆರಂಭ: ಯಾರು 'ಬ್ರೋ ಗೌಡ'ನ ಪ್ರೇಯಸಿ?

  ಸದ್ಯ ಬಿಗ್ ಬಾಸ್ ನಿಂದ ಮತ್ತೊಂದು ಪ್ರೋಮೋ ರಿಲೀಸ್ ಆಗಿದೆ. ಬಿಗ್ ಮನೆಯ ಸ್ಪರ್ಧಿಗಳು ಕೈಯಲ್ಲಿ ತಾವು ಗೆದ್ದು ಬೀಗಿದ ಪ್ರಶಸ್ತಿಯನ್ನು ಹಿಡಿದು ಭಾವುಕರಾಗಿದ್ದಾರೆ. ಹಳೆಯ ನೆನಪು, ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

  ನಟಿ ಶುಭಾ ಪೂಂಜಾ ಮೊಗ್ಗಿನ ಮನಸ್ಸು ಸಿನಿಮಾದ ಅತ್ಯುತ್ತಮ ನಟನೆಗೆ ಗೆದ್ದ ಪ್ರಶಸ್ತಿಯನ್ನು ಹಿಡಿದು ಆ ಕ್ಷಣವನ್ನು ಹಂಚಿಕೊಂಡಿದ್ದಾರೆ. 'ಈ ಪ್ರಶಸ್ತಿ ಬಳಿಕ ಒಂದು ಸಿಕ್ಕಿಲ್ಲ, ಬಳಿಕ ಎಲ್ಲಾ ಡಬ್ಬಾ ಆಕ್ಟಿಂಗ್ ಮಾಡಿರುತ್ತೇನೆ' ಎಂದು ಅವರನ್ನು ಅವರೇ ಗೇಲಿ ಮಾಡಿಕೊಂಡು ನಕ್ಕಿದ್ದಾರೆ.

  ಇನ್ನು ನಟಿ ಚಂದ್ರಕಲಾ ಮೋಹನ್ ತಾನು ಗೆದ್ದ ಅವಾರ್ಡ್ ಹಿಡಿದು 'ಈ ಪ್ರಶಸ್ತಿ ಬಂದಾಗ ತನ್ನ ಕೊರಳಲ್ಲಿ ಮಾಂಗಲ್ಯ ಇರಲಿಲ್ಲ' ಎಂದು ಭಾವುಕರಾಗಿದ್ದಾರೆ. ಆ ಸಮಯದಲ್ಲಿ ಏನಾಗಿತ್ತು ಚಂದ್ರಕಲಾ ಅವರ ಕಣ್ಣೀರ ಕಥೆ ಏನು ಎನ್ನುವುದು ತಿಳಿಯಬೇಕೆಂದರೆ ಇವತ್ತಿನ ಎಪಿಸೋಡ್ ನೋಡಬೇಕು.

  ನಟಿ ಗೀತಾ ಕೂಡ ತಾನು ಗೆದ್ದಿರುವ ಮೊದಲ ಅವಾರ್ಡ್ ಹಿಡಿದು ಭಾವುಕರಾಗಿದ್ದಾರೆ. ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ಕೇವಲ ಮೂರು ಸ್ಪರ್ಧಿಗಳು ಪ್ರಶಸ್ತಿ ಗೆದ್ದ ಸಂಭ್ರಮ ಮತ್ತು ಭಾವುಕರಾದ ದೃಶ್ಯವನ್ನು ಮಾತ್ರ ರಿವೀಲ್ ಮಾಡಲಾಗಿದೆ. ಉಳಿದ ಸ್ಪರ್ಧಿಗಳು ಪ್ರಶಸ್ತಿ ಗೆದ್ದು ಬೀಗಿದ ನೆನಪನ್ನು ಹಂಚಿಕೊಳ್ಳುವುದನ್ನು ನೋಡಬೇಕೆಂದರೆ ಸಂಜೆವರೆಗು ಕಾಯಬೇಕು.

  English summary
  Bigg Boss Kannada 8: Contestants got Emotional after remembering Award Winning Moment

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X