Don't Miss!
- Sports
ಗ್ಲೆನ್ ಮ್ಯಾಕ್ಸ್ವೆಲ್ ಕೈಯಿಂದ ಆರೆಂಜ್ ಕ್ಯಾಪ್ ಕಸಿದುಕೊಂಡ ಧವನ್
- News
ಉತ್ತರ ಪ್ರದೇಶ ಕೊರೊನಾ ದಾಖಲೆ; ಭಾನುವಾರ ಲಾಕ್ಡೌನ್!
- Finance
ಕೊರೊನಾವೈರಸ್ ಎರಡನೇ ಅಲೆ: ಆರ್ಥಿಕ ಅನಿಶ್ಚಿತತೆಗೆ ಕಾರಣವಾಗಬಹುದು!
- Automobiles
ಆಫ್ಟರ್ ಮಾರ್ಕೆಟ್ ಬಾಡಿ ಕಿಟ್ನೊಂದಿಗೆ ಅಡ್ವೆಂಚರ್ ಬೈಕಿನಂತೆ ಮಾಡಿಫೈಗೊಂಡ ಮಹೀಂದ್ರಾ ಮೊಜೊ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿಫಲ ಹೇಗಿದೆ?
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಗ್‌ಬಾಸ್ ಮನೆಯಲ್ಲಿ ಆಯ್ತು ಮಂಜನ ಮದುವೆ
ಬಿಗ್‌ಬಾಸ್ ಮನೆಯಲ್ಲಿ ನಿನ್ನೆ ಒಂದು ಲವ್ ಸ್ಟೋರಿ ಪ್ರಾರಂಭವಾಗುವ ಲಕ್ಷಣಗಳು ಗೋಚರಿಸಿತ್ತು, ಆದರೆ ಇಂದು ಮದುವೆಯೇ ನಡೆದು ಹೋಯ್ತು. ಆದರೆ ಈ ಮದುವೆ ಫೇಕ್ ಮದುವೆ.
ಬಿಗ್‌ಬಾಸ್ ಮನೆಯಲ್ಲಿ ತಮ್ಮ ಹಾಸ್ಯದಿಂದ ಗಮನ ಸೆಳೆಯುತ್ತಿರುವ ಲ್ಯಾಗ್ ಮಂಜು ಅಲಿಯಾಸ್ ಪಾವಗಡ ಮಂಜು ಅವರಿಗೂ ದಿವ್ಯಾ ಸುರೇಶ್ ಅವರಿಗೂ 'ಮದುವೆ' ಆಗಿದೆ.
ಮಂಜು ಹಾಗೂ ಚಂದ್ರಕಲಾ ಅವರು ನಿನ್ನೆಯಿಂದಲೂ ಹಳ್ಳಿಯ ಅತ್ತೆ-ಅಳಿಯನಂತೆ ಮಾತನಾಡುತ್ತಿದ್ದರು. ಇಂದು ಮಂಜು ಅವರ ಹಳೆಯ ಚಿತ್ರವೊಂದನ್ನು ಬಿಗ್‌ಬಾಸ್ ಪ್ರದರ್ಶಿಸಿದರು. ಆಗ ಮತ್ತೆ ಮಂಜು ಮತ್ತು ಚಂದ್ರಕಲಾ ಅವರು ಅತ್ತೆ-ಅಳಿಯನ ಮಾತು ಪ್ರಾರಂಭಿಸಿದರು.
ಇದೇ ಸಂದರ್ಭದಲ್ಲಿ ದಿವ್ಯಾ ಸುರೇಶ್ ಹಾಗೂ ಮಂಜು ಗಂಡ-ಹೆಂಡತಿಯಂತೆ ನಾಟಕವಾಡಲಿ ಎಂದರು ಎಲ್ಲರೂ. ಮಂಜು-ದಿವ್ಯಾ ಅವರು ನಟಿಸಲು ಒಪ್ಪಿದರು. ಈ ಸಮಯ ಮಂಜು, ತಮ್ಮ ಕೊರಳಿನಲ್ಲಿದ್ದ ಮೈಕ್ ಬ್ಯಾಗ್ ಅನ್ನು ದಿವ್ಯಾ ಅವರಿಗೆ ತಿಳಿಯದಂತೆ ಅವರ ಕೊರಳಿಗೆ ಹಾಕಿ, 'ನಮಗೆ ಮದುವೆ ಆಯ್ತು' ಎಂದು ಘೋಷಿಸಿದರು.
ಆ ನಂತರ ದಿವ್ಯಾ ಅವರು ತಮ್ಮ ಕೊರಳಲ್ಲಲ್ಲಿದ್ದ ಮಂಜು ಅವರ ಮೈಕ್ ಬ್ಯಾಗ್ ಅನ್ನು ಮರಳಿ ಮಂಜು ಅವರಿಗೆ ಹಾಕಿದರು. ಇಬ್ಬರ ಮದುವೆ ಆಯಿತು ಎಂದು ಬಿಗ್‌ಬಾಸ್ ಸ್ಪರ್ಧಿಗಳು ಚಪ್ಪಾಳೆ ತಟ್ಟಿದರು.
ಆ ನಂತರ ಮಂಜು ಅವರು ದಿವ್ಯಾ ಅವರನ್ನು ತಮ್ಮ ಪತ್ನಿ ಎಂದು ಊಹಿಸಿಕೊಂಡು ತಮಾಷೆಯ ಮಾತನ್ನಾಡಿದರು. ಆದರೆ ಇದು ದಿವ್ಯಾ ಅವರಿಗೆ ಇಷ್ಟವಾಗಲಿಲ್ಲ. ಅವರು ಮನೆಯ ಕ್ಯಾಮೆರಾ ಬಳಿ ಬಂದು. 'ಕೆಲವೊಂದು ಮಾತುಗಳು ನನಗೆ ಹರ್ಟ್ ಆಗುತ್ತಿವೆ' ಎಂದು ಹೇಳಿ ಕಣ್ಣೀರು ಹಾಕಿದರು. ಮಂಜು ಅವರ ತಮಾಷೆಯ ಮಾತುಗಳು ದಿವ್ಯಾ ಸುರೇಶ್ ಅವರಿಗೆ ಹರ್ಟ್ ಆಗುತ್ತಿವೆ ಎಂಬುದು ಸ್ಪಷ್ಟವಾಗಿ ಅವರ ವರ್ತನೆಯಿಂದಲೇ ಗೊತ್ತಾಗುತ್ತಿತ್ತು.
ನಂತರ ದಿವ್ಯಾ ಸುರೇಶ್ ಹಾಗೂ ನಿರ್ಮಲಾ ಅವರು ಮಾತನಾಡುತ್ತಿರಬೇಕಾದರೆ, ದಿವ್ಯಾ ಸುರೇಶ್ ಅವರು, ಪ್ರಶಾಂತ್ ಸಂಬರ್ಗಿ ಕುರಿತು ದೂರು ಹೇಳಿದರು. ''ನೀನು ಸಖತ್ ಸ್ಕೋಪ್ ಹೊಡಿತೀಯಾ ಅಲ್ವಾ'' ಎಂದು ಪ್ರಶಾಂತ್ ಸಂಬರ್ಗಿ ಹೇಳಿದರು, ''ಏನು ಸ್ಕೋಪ್ ತಗೋತಿದ್ದೀನಿ ಹೇಳಿ?'' ಎಂದು ನಾನು ಕೇಳಿದೆ, ಅವರೇನು ಹೇಳಲಿಲ್ಲ, ಹಾಗೆಯೇ ಹೊರಟುಹೋದರು' ಎಂದರು ದಿವ್ಯಾ ಸುರೇಶ್. ಆಗ ಅಲ್ಲಿಯೇ ಇದ್ದ ಪಾವಗಡ ಮಂಜು, ದಿವ್ಯಾ ಅವರಿಗೆ ಬೆಂಬಲಿಸಿ ಮಾತನಾಡಿದರು.